ಪ್ರಚಲಿತ

ಪ್ರಧಾನಿ ಮೋದಿ ಅವರ ಧ್ಯೇಯ ಏನು ಗೊತ್ತಾ?

ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ಇಪ್ಪತೈದು ವರ್ಷಗಳ ದೇಶದ ಅಭಿವೃದ್ಧಿಯ ಸಿದ್ಧತೆಗಳ ಕುರಿತಾಗಿ ಖಾಸಗಿ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಈ ಬಾರಿಯ ಲೋಕಸಭಾ ಚುನಾವಣೆ ಗಿಂತ 2047 ರ ಲೋಕಸಭಾ ಚುನಾವಣೆ ಸಂಪೂರ್ಣ ಭಿನ್ನವಾಗಿರಲಿದೆ. 2047 ರಲ್ಲಿ ಭಾರತವು ಸ್ವಾತಂತ್ರ್ಯದ ಶತಮಾನವನ್ನು ಆಚರಣೆ ಮಾಡಲಿದ್ದು, ಈ ಸಂದರ್ಭದಲ್ಲಿ ಅಭಿವೃದ್ಧಿ ವಿಚಾರಗಳಿಗೆ ಸಂಬಂಧಿಸಿದ ಹಾಗೆ ದೇಶ ಹೇಗಿರಬೇಕು ಎನ್ನುವ ಬಗ್ಗೆ ಮಾತನಾಡುತ್ತಾ ಅವರು ಇದಕ್ಕಾಗಿ ನಡೆಯಬೇಕಾದ ‌ಸಿದ್ಧತೆಗಳ ಬಗ್ಗೆ ತಿಳಿಸಿದ್ದಾರೆ.

ಈ ವರೆಗೆ ದೇಶದಲ್ಲಿ ಆಡಳಿತ ನಡೆಸಿದ ಎಲ್ಲಾ ಪಕ್ಷಗಳು ನಾವು ಎಲ್ಲವನ್ನೂ ಮಾಡಿದ್ದೇವೆ ಎಂದು ಹೇಳುತ್ತಾರೆ. ಆದರೆ ನಾವು ಹಾಗೆ ಹೇಳುವುದಿಲ್ಲ. ನಾವು ಹಾಗೆ ಯೋಚಿಸುವುದೂ ಇಲ್ಲ. ದೇಶಕ್ಕಾಗಿ ಮಾಡಬೇಕಾಗಿರುವುದು ‌ಇನ್ನೂ ಸಾಕಷ್ಟಿದೆ. ದೇಶದ ಕುಟುಂಬದ ಜನರ ಸಾಕಷ್ಟು ಕನಸುಗಳು ಇನ್ನೂ ನನಸಾಗಬೇಕಿದೆ ಎಂದು ಅವರು ನುಡಿದಿದ್ದಾರೆ.

ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಚುನಾವಣಾ ವಿಚಾರ ಚರ್ಚೆಯಾಗಿತ್ತು. ಚುನಾವಣಾ ಕರ್ತವ್ಯಕ್ಕಾಗಿ ಹಿರಿಯ ಅಧಿಕಾರಿಗಳು ಬೇರೆ ರಾಜ್ಯಕ್ಕೆ ಹೋಗುತ್ತಿದ್ದರು. ಇದು ನನ್ನ ಕೆಲಸ ಕಾರ್ಯಗಳ ಮೇಲೆ ಪರಿಣಾಮ ಬೀರಿತು. ಆ ಬಳಿಕ ಚುನಾವಣೆಗಾಗಿ ನೂರು ದಿನಗಳ ಹಿಂದಿನಿಂದಲೇ ಸಿದ್ಧತೆಗಳನ್ನು ಮಾಡಿಕೊಳ್ಳಲು ಆರಂಭಿಸುತ್ತಿದ್ದೆ ಎಂದು ಅವರು ಹೇಳಿದ್ದಾರೆ.

ಸದ್ಯ ನಾನು ಮುಂದಿನ ಇಪ್ಪತೈದು ವರ್ಷಗಳಲ್ಲಿ ದೇಶದಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಯಾರಿ ನಡೆಸುತ್ತಿದ್ದೇನೆ. ಈ ಹಿನ್ನಲೆಯಲ್ಲಿ ಪ್ರತಿ ಪ್ರದೇಶಕ್ಕೆ ನಾನು ನಿರ್ಧಿಷ್ಟ ತಂಡಗಳನ್ನು ಸಹ ಒಟ್ಟುಗೂಡಿಸಿದ್ದೇನೆ. ದೇಶವನ್ನು ಹೇಗೆಲ್ಲಾ ಬದಲಾವಣೆ ಮಾಡಬಹುದು ಎನ್ನುವ ಬಗ್ಗೆ ಜನರಿಂದ ಅಭಿಪ್ರಾಯ ಸಂಗ್ರಹ ಮಾಡಿದ್ದೇನೆ. ಸುಮಾರು ಎರಡು ಮಿಲಿಯನ್ ‌ಗಳಷ್ಟು ಜನರು ನಮಗೆ ಸಲಹೆ, ಸೂಚನೆಗಳನ್ನು ನೀಡಿದ್ದರು. ಅವೆಲ್ಲವನ್ನೂ ನಾವು ದಾಖಲಿಸಿಕೊಂಡಿದ್ದೇವೆ‌. ಚುನಾವಣಾ ನಂತರದಲ್ಲಿ ಈ ಕೆಲಸಗಳನ್ನು ಆರಂಭ ಮಾಡಲಿರುವುದಾಗಿ ಅವರು ತಿಳಿಸಿದ್ದಾರೆ.

ಮುಂದಿನ ಇಪ್ಪತೈದು ವರ್ಷಗಳಲ್ಲಿ ದೇಶ ತಲುಪಬೇಕಾದ ಎತ್ತರವನ್ನು ಏರಲು ಬಹಳಷ್ಟು ಕೆಲಸಗಳು ನಡೆಯಬೇಕಾಗಿದೆ. ಇದಕ್ಕಾಗಿ ಪ್ರತಿಯೊಂದು ರಾಜ್ಯಗಳಲ್ಲಿಯೂ ಕೆಲಸ ನಡೆಯಬೇಕು. ಈ ಬಾರಿಯ ಬಿಜೆಪಿ ಪ್ರಣಾಳಿಕೆ ಎನ್ನುವುದು ಮುಂದಿನ ಇಪ್ಪತೈದು ವರ್ಷಗಳ ಧ್ಯೇಯವಾಗಿದೆ. ಮುಂದಿನ ಐದು ವರ್ಷಗಳ ಕಾಲ ಇದಕ್ಕಾಗಿ ಪ್ರತ್ಯೇಕವಾಗಿ ಕೆಲಸ ಮಾಡುವುದಾಗಿಯೂ ಪ್ರಧಾನಿ ಮೋದಿ ತಿಳಿಸಿದ್ದಾರೆ.

Tags

Related Articles

Close