ಪ್ರಚಲಿತ

25-06-2018 ರೊಳಗೆ ಅರ್ಜಿ ಸಲ್ಲಿಸಿ, ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿಯಲ್ಲಿ ಸ್ವಂತ ಮನೆ ನಿಮ್ಮದಾಗಿಸಿ!!

ದೇಶದಲ್ಲಿರುವ ಸಾವಿರಾರು ಕುಟುಂಬಗಳು ಸ್ವಂತ ಮನೆಯಿಲ್ಲದೆ ಬೀದಿಯಲ್ಲಿದ್ದು, ತಮಗೂ ಸ್ವಂತ ಮನೆಯನ್ನು ಹೊಂದಬೇಕು ಎನ್ನುವ ಕನಸು ಅದೆಷ್ಟೋ ಮಂದಿಗೆ ಅದು ಕನಸಾಗಿಯೇ ಉಳಿದು ಹೋಗಿದೆಯೋ ನಾ ಕಾಣೆ!! ಆದರೆ ಮನೆ ಎನ್ನುವುದು ಮಾನವನ ಮೂಲಭೂತ ಅಗತ್ಯವಾಗಿದ್ದು, ದೇಶದ ಪ್ರತಿಯೊಬ್ಬರಿಗೂ 2022ರ ಹೊತ್ತಿಗೆ ಮನೆ ಸಿಗಬೇಕು ಎನ್ನುವುದು ಪ್ರಧಾನಿ ಮೋದಿಯವರ ಆಶಯ. ಈ ಆಶಯಕ್ಕಾಗಿ ಕೇಂದ್ರ ಸರಕಾರ “ಪ್ರಧಾನ ಮಂತ್ರಿ ಅವಾಸ್ ಯೋಜನೆ” ಪ್ರಾರಂಭಿಸಿರುವ ವಿಚಾರ ಗೊತ್ತೇ ಇದೆ. ಹೀಗಾಗಿ ಇದೀಗ ಗ್ರಾಮ ಪಂಚಾಯತ್ ಕಾರ್ಯಲಯವು ಪ್ರಧಾನ ಮಂತ್ರಿ ಆವಾಜ್ ಯೋಜನೆಯಡಿಯಲ್ಲಿ ನಿವೇಶನಗಳು ಹಾಗೂ ಮನೆಗಳು ಮಂಜೂರಿಯಾಗಿದೆ.

ಹೌದು… 2022ರ ವೇಳೆಗೆ ಪ್ರತಿಯೊಬ್ಬರಿಗೂ ಮನೆ ಸಿಗುವಂತಾಗಬೇಕು ಎನ್ನುವುದು ಕೇಂದ್ರ ಸರ್ಕಾರದ ಉದ್ದೇಶದಿಂದ ಕೊಳಗೇರಿ ವಾಸಿಗಳು, ನಗರ, ಅರೆನಗರ ಸೇರಿದಂತೆ ಗ್ರಾಮೀಣ ಪ್ರದೇಶದ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ವಸತಿ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಹಾಗಾಗಿ ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ (ಪಿಎಂಎವೈ) ಮನೆ ನಿರ್ಮಾಣಕ್ಕೆ ಹಣಕಾಸಿನ ಸಹಾಯ ಮಾಡಲಾಗುತ್ತಿದ್ದು, ಇದರ ಉಪಯೋಗವನ್ನು ಪಡೆದುಕೊಳ್ಳಲು ಜೂನ್ 25ರ ಒಳಗೆ ಅರ್ಜಿ ಸಲ್ಲಿಸಬೇಕಾಗಿರುವುದು ಅತೀ ಮುಖ್ಯ.

ವಾರ್ಷಿಕವಾಗಿ 3 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದ್ದು, ಆರ್ಥಿಕವಾಗಿ ತೀರಾ ಹಿಂದುಳಿದ ವರ್ಗದ ಅಡಿಯಲ್ಲಿ ಬರುವ ಹಾಗೂ ವಾರ್ಷಿಕವಾಗಿ 6 ಲಕ್ಷಕ್ಕಿಂತ ಕಡಿಮೆ ಆದಾಯ ಇರುವ ಗುಂಪಿನಲ್ಲಿ ಬರುವವರು ಪ್ರಧಾನ ಮಂತ್ರಿ ಅವಾಸ್ ಯೋಜನೆಯ ಸೌಲಭ್ಯವನ್ನು ಪಡೆಯಬಹುದು. ಈ ವರ್ಗದ ಅಡಿಯಲ್ಲಿ ದೇಶದ ಲಕ್ಷಾಂತರ ಜನರು ಬರುವುದರಿಂದ ತುಂಬಾ ಕುಟುಂಬಗಳಿಗೆ ಸೂರು ಸೌಲಭ್ಯ ಸಿಗಲಿದ್ದು, ಇದೀಗ ಗ್ರಾಮ ಪಂಚಾಯತ್ ಕಾರ್ಯಲಯವು ಪ್ರಧಾನ ಮಂತ್ರಿ ಆವಾಜ್ ಯೋಜನೆಯಡಿಯಲ್ಲಿ ನಿವೇಶನಗಳು ಹಾಗೂ ಮನೆಗಳು ಮಂಜೂರಿ ಮಾಡಿದೆಯಲ್ಲದೇ ಸ್ವಂತ ಮನೆಯನ್ನು ಕಟ್ಟುವ ಕನಸು ಈ ಮೂಲಕ ನನಸಾಗಿಸಬಹುದಾಗಿದೆ.

ಅಷ್ಟಕ್ಕೂ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು ಏನು ಗೊತ್ತೇ??

1) ಜಾತಿ ಪ್ರಮಾಣ ಪತ್ರ

2) ಆಧಾರ್ ಕಾರ್ಡ್

3) ಚುಣಾವಣೆ ಚೀಟಿ

4) ರೇಷನ್ ಕಾರ್ಡ್

5) ಬ್ಯಾಂಕ್ ಪುಸ್ತಕ

6) ಒಂದು ಭಾವ ಚಿತ್ರ

ಪ್ರಧಾನಮಂತ್ರಿ ಅವಾಸ್ ಯೋಜನೆಯ ಪಲಾನುಭವಿಗಳು ನೀವಾಗಬೇಕೇ?? ಹಾಗಾದರೆ, ಅದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ!!

* ಪ್ರಧಾನಮಂತ್ರಿ ಅವಾಸ್ ಯೋಜನೆಯ ಅಧಿಕೃತ ವೆಬ್ಸೈಟ್ pmaymis.gov.in  ಗೆ ಭೇಟಿ ನೀಡಿ. ‘ಸಿಟಿಜನ್ ಅಸೆಸ್ಮೆಂಟ್’ ಮೆನು ಮೂಲಕ ಪ್ರಧಾನ ಮಂತ್ರಿ ಅವಾಸ ಯೋಜನೆ ಅರ್ಜಿ ಆಪ್ಸನ್ ಆಯ್ಕೆ ಮಾಡಿ. ಅಲ್ಲಿ, ನೀವು ಎರಡು ಆಯ್ಕೆಗಳನ್ನು ನೋಡಬಹುದು: 1. ಸ್ಲಂ ನಿವಾಸಿಗಳು  (Slum Dwellers) 2. ಇತರ ಮೂರು ಘಟಕಗಳ ಪ್ರಯೋಜನಗಳು (rural, urban or semi-urban ) ನೀವು ಕೊಳಗೇರಿ ನಿವಾಸಿಗಳಾಗಿದ್ದರೆ  Slum Dwellers ಆಯ್ಕೆ ಮಾಡಿ. ಗ್ರಾಮೀಣ ಭಾಗದವರಾದರೆ rural  ಆಪ್ಷನ್ ಆಯ್ಕೆ ಮಾಡಿ. ನಂತರ ಹೊಸ ಪುಟ ತೆರೆದುಕೊಳ್ಳುತ್ತದೆ.

* ಹೊಸ ಪುಟದಲ್ಲಿ ನಿಮ್ಮ ವಿವರಗಳನ್ನು ಸರಿಯಾಗಿ ತುಂಬಬೇಕು. ಇದರಲ್ಲಿ ವೈಯಕ್ತಿಕ ವಿವರ, ಸಂಪರ್ಕ ವಿವರ, ಪ್ರಸ್ತುತ ವಸತಿ ವಿಳಾಸ, ಆಧಾರ್ ನಂಬರ್, ಬ್ಯಾಂಕ್ ಖಾತೆ ವಿವರ, ಮನೆ ವಿವರ, ಮೊಬೈಲ್ ನಂಬರ್ ಮತ್ತು ಆದಾಯ ವಿವರಗಳನ್ನು ಒಳಗೊಂಡಿದ್ದು, ಯಾವುದೇ ತಪ್ಪುಗಳಾಗದಂತೆ ಅರ್ಜಿಯಲ್ಲಿ ತುಂಬಬೇಕು. ಅರ್ಜಿ ತುಂಬಿದ ನಂತರ ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ. ಇದು “I am aware that any claims regarding my inclusions/exclusions shall remain with State govt/urban local body and MoHUPA is just facilitating the process” ಎಂದು ತೋರಿಸುತ್ತದೆ.

* ಅರ್ಜಿಯ ಕೊನೆಯಲ್ಲಿ ಅಲ್ಲೇ ನೀಡಲಾಗಿರುವ ಕ್ಯಾಪ್ಚಾ ಕೋಡ್ ಅನ್ನು ಸರಿಯಾಗಿ ಭರ್ತಿ ಮಾಡಿ. ನಂತರ save ಆಯ್ಕೆಯನ್ನು ಕ್ಲಿಕ್ ಮೇಲೆ ಮಾಡಿ ನೀವು print ಮೇಲೆ ಕ್ಲಿಕ್ ಮಾಡಿ ಪ್ರಿಂಟ್ ಔಟ್ ಪಡೆಯಬಹುದು.

* ಅರ್ಜಿಯ ಕೊನೆಯಲ್ಲಿ ಕ್ಯಾಪ್ಚಾ ಕೋಡ್ ತುಂಬಿದ ನಂತರ ಸೇವ್ (save) ಬಟನ್ ಕ್ಲಿಕ್ ಮೇಲೆ ಮಾಡಿ. ತದ ನಂತರ ಸ್ಕ್ರೀನ್ ಮೇಲೆ ಒಂದು ನೋದಣೆ ಸಂಖ್ಯೆ ಕಾಣಿಸುತ್ತದೆ. ಇದು ಅಪ್ಲಿಕೇಶನ್ ಸಂಖ್ಯೆಯಾಗಿರುತ್ತದೆ. ಇದನ್ನು ಎಚ್ಚರಿಕೆಯಿಂದ ಬರೆದಿಟ್ಟುಕೊಳ್ಳಬೇಕು. ಮುಂದಿನ ಪ್ರಕ್ರಿಯೆಗಳಿಗೆ ಅಥವಾ ಅರ್ಜಿ ಎಡಿಟ್ ಮಾಡಲು, ಅಷ್ಟೇ ಅಲ್ಲದೇ ಈ ನೊಂದಣಿ ಸಂಖ್ಯೆಯನ್ನು ಬಳಸಿ ನಿಮ್ಮ ಅರ್ಜಿಯ ಸ್ಟೇಟಸ್ ಅನ್ನು ತಿಳಿದುಕೊಳ್ಳಬಹುದಾಗಿದೆ.

ಪ್ರಧಾನಿ ಮೋದಿಯವರ ಆಶಯದಂತೆ ಅವಾಸ್ ಯೋಜನೆ ಅಡಿಯಲ್ಲಿ 2022ರಲ್ಲಿ ಪ್ರತಿಯೊಬ್ಬರಿಗೂ ಮನೆ ಸಿಗುವಂತಾಗಬೇಕು. ಅಷ್ಟು ಮಾತ್ರವಲ್ಲದೇ, ಭಾರತ ಗುಡಿಸಲು ಮುಕ್ತ, ಟೆಂಟ್ ಮುಕ್ತ ದೇಶವಾಗಬೇಕು ಎಂಬ ಗುರಿ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಪ್ರಧಾನಮಂತ್ರಿ ಅವಾಸ್ ಯೋಜನೆಗೆ ತೀವ್ರವಾದ ವೇಗವನ್ನು ಕೊಟ್ಟು ಆದಾಯದ ಮಿತಿ ಮತ್ತು ಅವಧಿಯಲ್ಲಿ ಸಡಿಲಿಕೆ ಘೋಷಿಸಿದ್ದಾರೆ.

ಹಾಗಾಗಿ ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ 25-06-2018 ಆಗಿದ್ದು, ಇನ್ನು ಕೆಲವೇ ಕೆಲ ದಿನಗಳು ಬಾಕಿ ಇವೆ. ನಿಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಫಲಾನುಭವಿಗಳಿಗೂ ಈ ವಿಷಯ ತಲುಪಿಸಿ. ಅರ್ಹ ಫಲಾನುಭವಿಗಳು ಇದರಿಂದ ವಂಚಿತರಾಗಬಾರದು ಎನ್ನುವುದೇ ನಮ್ಮ ಆಶಯ!!

– ಅಲೋಖಾ

Tags

Related Articles

Close