ಪ್ರಚಲಿತ

ಕಾಂಗ್ರೆಸ್ ಬಳಿ ಭ್ರಷ್ಟಾಚಾರದ ಮೂಲಕ ಪಡೆದ ಅಪಾರ ಹಣವಿದೆ: ಪ್ರಲ್ಹಾದ ಜೋಶಿ ಟಾಂಗ್

ಕಾಂಗ್ರೆಸ್ ನಾಯಕರು ಬಿಜೆಪಿ, ಬಿಜೆಪಿಯ ನಾಯಕರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುವುದು ಹೊಸತೇನಲ್ಲ. ಸದಾ ಒಂದಿಲ್ಲೊಂದು ವಿವಾದಗಳನ್ನು ಸೃಷ್ಟಿಸಿ ಜನರನ್ನು ಸೆಳೆಯಲು ಪ್ರಯತ್ನ ನಡೆಸುವ ಕಾಂಗ್ರೆಸ್ ನಾಯಕರು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಸಂಬಂಧಿಸಿದ ಹಾಗೆಯೂ ವಿವಾದ ಸೃಷ್ಟಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಪ್ರಲ್ಹಾದ‌ ಜೋಶಿ ಅವರ ಬಗ್ಗೆ ಸುಳ್ಳು ಆರೋಪ ಮಾಡಿದ್ದು, ಜೋಶಿ ಹುಬ್ಬಳ್ಳಿಯ ರೈಲ್ವೆ ಜಾಗವನ್ನು ಕಬಳಿಸಲು ಪ್ರಯತ್ನ. ನಡೆಸುತ್ತಿದ್ದಾರೆ ಎಂದವರು ಆರೋಪಿಸಿದ್ದಾರೆ.

ಈ ಬಾಲಿಷ ‌ಹೇಳಿಕೆಯ ವಿರುದ್ಧ ಜೋಶಿ ಮಾತನಾಡಿದ್ದು, ಕಳೆದ ಮೂವತ್ತು ವರ್ಷಗಳಿಂದ ಶುದ್ಧ ರಾಜಕಾರಣ ಮಾಡುತ್ತಾ ಬಂದಿರುವುದಾಗಿ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಸುರ್ಜೇವಾಲ ಅವರಿ ತಮ್ಮ ಬಗ್ಗೆ ಬಾಲಿಶ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಇಂತಹ ಚಿಲ್ಲರೆ ಗೊಂದಲಗಳನ್ನು ಮಾಡುವುದಕ್ಕೂ ಒಂದು ಮಿತಿ ಬೇಕು. ಇಂತಹ ಆರೋಪಗಳಿಗೆ ‌ಕಾಂಗ್ರೆಸ್ ಸಾಕ್ಷಿ ನೀಡಬೇಕು ಎಂದು ಹೇಳಿದ್ದಾರೆ.

ಸುರ್ಜೇವಾಲ ಮಾಡಿದ ಆರೋಪಕ್ಕೆ ದಾಖಲೆ ನೀಡದೇ ಹೋದಲ್ಲಿ , ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ನೀಡಿದ್ದಾರೆ.

ರೈಲ್ವೆ ಜಾಗಕ್ಕೆ ಇಲ್ಲಿಯವರೆಗೂ ಐದು ಬಾರಿ ಟೆಂಡರ್ ಕರೆಯಲಾಗಿದೆ. ಆದರೆ ಇದರಲ್ಲಿ ಯಾರೂ ಭಾಗವಹಿಸಿಲ್ಲ. ಈಗ ಮತ್ತೆ ಟೆಂಡರ್ ಕರೆಯಲಾಗಿದೆ. ನೀವೂ ಸಹ ಈ ಟೆಂಡರ್‌ನಲ್ಲಿ ಭಾಗವಹಿಸಬಹುದು. ಕಾಂಗ್ರೆಸ್ ಬಳಿ ಭ್ರಷ್ಟಾಚಾರದ ಮೂಲಕ ಗಳಿಸಿದ ಅಪಾರ ಹಣ ಇದೆ. ಅದರ ಮೂಲಕ ನೀವು ಟೆಂಡರ್‌ನಲ್ಲಿ ಭಾಗವಹಿಸಿ ಎಂದು ತಿರುಗೇಟು ನೀಡಿದ್ದಾರೆ. ನಾವು ಕಾಂಗ್ರೆಸ್ ರೀತಿ ಕಲ್ಲಿದ್ದಲಿನಲ್ಲಿ ಚೀಟಿ ಬರೆದು ಟೆಂಡರ್ ಕರೆದಿಲ್ಲ. ಆನ್‌ಲೈನ್ ಮೂಲಕವೇ ಟೆಂಡರ್ ಕರೆಯಲಾಗಿದೆ. ಇದರಲ್ಲಿ ನಯಾ ಪೈಸೆ ಭ್ರಷ್ಟಾಚಾರ ಅಸಾಧ್ಯ ಎಂದು ಜೋಶಿ ಹೇಳಿದ್ದಾರೆ.

ಹಾಗೆಯೇ ಬಿಜೆಪಿ ಸರ್ಕಾರ ಭ್ರಷ್ಟಾಚಾರ ಮಾಡುವುದಿಲ್ಲ. ಸುರ್ಜೇವಾಲಾ ಮೊದಲು ಹರ್ಯಾಣದ ಪರಿಸ್ಥಿತಿ ನಿಭಾಯಿಸಲಿ ಎಂದು ಟಾಂಗ್ ನೀಡಿದ್ದಾರೆ.

Tags

Related Articles

Close