ಪ್ರಚಲಿತ

ರಾಷ್ಟ್ರಪತಿ ಅಬ್ದುಲ್ ಕಲಾಂ ರ ಮಾತನ್ನು ಅಕ್ಷರಶಃ ಪಾಲಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ರು ದೇಶದ ಲಕ್ಷಾಂತರ ರೂಪಾಯಿಗಳನ್ನು ಉಳಿಸುತ್ತಿದ್ದಾರೆ!

ಸರಳತೆಯೇ ಮೂರ್ತಿವೆತ್ತಂತಿದ್ದರು ನಮ್ಮೆಲ್ಲರ ನೆಚ್ಚಿನ ರಾಷ್ಟ್ರಪತಿ ಅಬ್ದುಲ್ ಕಲಾಂ. ವಿಜ್ಞಾನಿಯಾಗಿ, ದೇಶದ ರಾಷ್ಟ್ರಪತಿಯಾಗಿ ಅವರು ದೇಶಕ್ಕೆ ಕೊಟ್ಟ ಕೊಡುಗೆಗಳನ್ನು ಪದಗಳಲ್ಲಿ ಬಣ್ಣಿಸಲು ಅಸಾಧ್ಯ. ಜನತೆಯ ರಾಷ್ಟ್ರಪತಿ ಕಲಾಮರ ಜಾಗವನ್ನು ಮತ್ತೆ ಯಾರೂ ತುಂಬುವುದು ಸಾಧ್ಯವೇ ಇಲ್ಲವಾದರೂ ನಮ್ಮ ಈಗಿನ ರಾಷ್ಟ್ರಪತಿ ರಾಮನಾಥ್ ಕೋವಿಂದರು ಕಲಾಮರಂತೆಯೇ ತಾವೂ ಸರಳ ಜೀವನವನ್ನು ಪಾಲಿಸುವೆನೆಂಬ ಕುರುಹನ್ನು ಕೊಟ್ಟಿದ್ದಾರೆ. ಮೂಲತಃ ಸರಳ ಸಜ್ಜನ ವ್ಯಕ್ತಿತ್ವದ ರಾಮನಾಥ್ ಕೋವಿಂದರೂ ಕೂಡಾ ಕಲಾಮರಂತೆಯೇ ರಾಷ್ಟ್ರಪತಿ ಭವನದ ಖರ್ಚು ವೆಚ್ಚಗಳನ್ನು ಇಳಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದರೆ.

ರಾಷ್ಟ್ರಪತಿ ಭವನವೆಂದರೆ ಸಾಕು ಒಂದು ಅರಮನೆಯ ಚಿತ್ರಣ ನಮ್ಮ ಕಣ್ಣ ಮುಂದೆ ಬರುತ್ತದೆ. ಭವನದ ದಿನದ ಖರ್ಚು ವೆಚ್ಚಗಳೇ ಸಾವಿರಾರು ರುಪಾಯಿಗಳಾಗುತ್ತವೆ. ರಾಮನಾಥ್ ಕೋವಿಂದರು ರಾಷ್ಟ್ರಪತಿಯಾಗಿ ಎಂಟು ತಿಂಗಳಷ್ಟೇ ಕಳೆದಿವೆ ಆದರೆ ಈಗಾಗಲೇ ಸರಕಾರದ ಕೋಟ್ಯಂತರ ರುಪಾಯಿಗಳನ್ನು ಉಳಿಸಿದ್ದಾರೆಂದರೆ ಅವರ ಸಾಮಾಜಿಕ ಕಳಕಳಿಗೆ ನಾವೆಲ್ಲರೂ ಶಿರಬಾಗಬೇಕು. ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸುತ್ತಲೇ ಅವರು ಮೊತ್ತ ಮೊದಲು ಮಾಡಿದ ಕೆಲಸವೆಂದರೆ ಭವನದಲ್ಲಾಗುವ ಅನಗತ್ಯ ಖರ್ಚು-ವೆಚ್ಚಗಳನ್ನು ಕಡಿತಗೊಳಿಸಿದ್ದು.

ಈ ಮೊದಲು ರಾಷ್ಟ್ರಪತಿ ಭವನದಲ್ಲಿ ಸುಖಾ ಸುಮ್ಮನೆ ತರಹೇವಾರಿ ತಿಂಡಿಗಳನ್ನು ತಯಾರಿಸಿ ಪೋಲು ಮಾಡಲಾಗುತ್ತಿತ್ತು. ಆದರೆ ಕೋವಿಂದರು ಈ ಪದ್ದತಿಗೆ ಅಲ್ಪ ವಿರಾಮ ಹಾಕಿದ್ದಾರೆ. ಭವನಕ್ಕೆ ಬರುವ ಅತಿಥಿ ಮತ್ತು ಅಧಿಕಾರಿಗಳಿಗಾಗಿ ದಿನದಲ್ಲಿ ಐದು ಬಗೆಯ ತಿಂಡಿ-ತಿನಿಸು ತಯಾರಿಸಲಾಗುತ್ತಿತ್ತು. ಇದರಲ್ಲಿ ಹಲವು ಪಾಲು ತಿನ್ನದೇ ವ್ಯರ್ಥವಾಗುತ್ತಿತ್ತು. ಆದರೆ ಈಗ ಹಾಗಾಗುತ್ತಿಲ್ಲ. ಈಗ ಕೇವಲ ಎರಡೇ ಬಗೆಯ ತಿಂಡಿ ಅದೂ ಅವಶ್ಯಕತೆ ಇದ್ದಷ್ಟೇ ತಯಾರಿಸಲಾಗುತ್ತದೆ.

Related image

ಇಡಿಯ ರಾಷ್ಟ್ರಪತಿ ಭವನದ ಅಲಂಕಾರಕ್ಕೆ ಸಾವಿರಾರು ರೂಪಾಯಿಗಳ ಹೂವುಗಳನ್ನು ತರಿಸಲಾಗುತ್ತಿತ್ತು. ಆದರೀಗ ಅನಗತ್ಯ ಅಲಂಕಾರಿಕ ಪುಷ್ಪಗಳನ್ನು ತರಿಸುವ ಪದ್ದತಿಗೆ ಪೂರ್ಣ ವಿರಾಮ ಹಾಕಲಾಗಿದೆ. ಅಲ್ಲದೆ ಭವನದಲ್ಲಿ ರಾಜತಾಂತ್ರಿಕರಿಗಾಗಿ ಹತ್ತು ಹಲವು ಪಾರ್ಟಿ ಕೊಡಲಾಗುತ್ತಿತ್ತು. ಇಂತಹ ಆಂಡಬರದ ಅನಗತ್ಯ ಪಾರ್ಟಿಗಳಿಗೆ ಕಡಿವಾಣ ಹಾಕಲಾಗಿದೆ.

ಹಿಂದೆಲ್ಲಾ ಭವನದೊಳಗೆ ಹಬ್ಬ ಹರಿದಿನಗಳನ್ನು ಭವ್ಯವಾಗಿ ಆಚರಿಸಲಾಗುತ್ತಿತ್ತು. ಅದರೆ ಈಗ ಯಾವುದೇ ಹಬ್ಬ ಹರಿದಿನಗಳನ್ನು ಆಚರಿಸಲಾಗುವುದಿಲ್ಲ. ಕಳೆದ ಬಾರಿ ದೀಪಾವಳಿ ಹಬ್ಬವನ್ನೂ ಆಚರಿಸಲಾಗಿಲ್ಲ. ಕೇವಲ ಭವನವನ್ನು ಬೆಳಗಲು ಎಲ್.ಇ.ಡಿ ಬಲ್ಬುಗಳ ಉಪಯೋಗ ಮಾಡಲಾಗಿತ್ತು. ಕ್ರಿಸ್ಮಸ್ ಗೆ ಕೆರೋಲ್ ಗಾಯನವನ್ನೂ ಅಯೋಜಿಸಲಾಗಿರಲಿಲ್ಲ. ಈ ಬಾರಿ ಇಫ್ತಾರ್ ಆಯೋಜನೆಯೂ ಇಲ್ಲವೆನ್ನಲಾಗುತ್ತದೆ.

ಈ ಹಿಂದೆ ಭವನಕ್ಕೆ ಬರುವ ಅತಿಥಿಗಳ ಪಟ್ಟಿಯಲ್ಲಿ2000 ಜನರ ಹೆಸರಿರುತ್ತಿತ್ತು. ಆದರೀಗ ಈ ಹೆಸರುಗಳನ್ನು ಕಡಿತಗೊಳಿಸಿ 700ಕ್ಕೆ ಇಳಿಸಲಾಗಿದೆ. ಈ ವರ್ಷದ ಗಣತಂತ್ರ ದಿವಸದಂದು ಕೊಡಲಾಗುವ “ಎಟ್ ಹೋಮ್” ಕಾರ್ಯಕ್ರಮದಲ್ಲಿ ಸ್ವತಃ ಅವರ ಪರಿವಾರದ ಜನರನ್ನೇ ಕರೆಯಲಾಗಿರಲಿಲ್ಲವೆಂದರೆ ಅವರ ಸರಳತೆ ಯಾವ ರೀತಿಯದ್ದಾಗಿರಬಹುದು.

Related image

ಆಮಂತ್ರಣ ಪತ್ರಿಕೆಯಲ್ಲೂ ಅಷ್ಟೆ, ಸಂವಿಧಾನಿಕವಾಗಿ ಉನ್ನತ ಪದಗಳಲ್ಲಿರುವ ಸಂಸದರ, ರಕ್ಷಾ ಪ್ರಮುಖರ, ರಾಜದೂತರ, ಕಮಿಷನರ್ ಹುದ್ದೆಯಲ್ಲಿರುವವರ ಮತ್ತು ನಿವೃತ್ತ ನ್ಯಾಯಾಧೀಶರ ಹೆಸರಷ್ಟೇ ಇತ್ತು. 2007ರಲ್ಲಿ ಸರಿ ಸುಮಾರು ನೂರು ಕೋಟಿ ರುಪಾಯಿಗಳನ್ನು ಭವನಕ್ಕಾಗಿ ವ್ಯಯಿಸಲಾಗಿತ್ತೆಂದರೆ ಒಟ್ಟು ಖರ್ಚಿನ ಅಂದಾಜು ಲೆಕ್ಕವನ್ನು ಊಹಿಸಿ. ಇವೆಲ್ಲವೂ ದೇಶದ ತೆರಿಗೆದಾತರ ಹಣ. ರಾಮನಾಥ್ ಕೋವಿಂದರು ಈ ಎಲ್ಲಾ ಅನವಶ್ಯಕ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕುವ ಮೂಲಕ ತೆರಿಗೆದಾತರ ಕೋಟ್ಯಂತರ ರುಪಾಯಿಯನ್ನು ಉಳಿಸುತ್ತಿದ್ದಾರೆ.

ಬಹುಕಾಲದ ಬಳಿಕ ದೇಶಕ್ಕೆ ಒಬ್ಬ ಅತ್ಯುತ್ತಮ ಪ್ರಧಾನಮಂತ್ರಿ ಮತ್ತು ಒಬ್ಬ ಸರಳ ಸಜ್ಜನಿಕೆಯ ರಾಷ್ಟ್ರಪತಿ ದೊರಕಿದ್ದಾರೆ. ಇಬ್ಬರೂ ಸಾದಾ ಸರಳ ಜೀವನವನ್ನು ಕಳೆಯುತ್ತಾ ದೇಶದ ತೆರಿಗೆದಾತರ ಹಣವನ್ನು ಉಳಿಸಿ ಅಭಿವೃದ್ದಿಗೆ ವೇಗ ನೀಡುತ್ತಿದ್ದಾರೆ. ತನಗಿಂತ ಮೊದಲು ದೇಶದ ಬಗ್ಗೆ ಯೋಚಿಸುವ ಇಂಥ ಪ್ರಧಾನಮಂತ್ರಿ ಮತ್ತು ರಾಷ್ಟ್ರಪತಿ ದೊರೆತಿರುವುದು ನಮ್ಮ ಪುಣ್ಯ.

source:http://news.rediff.com/commentary/2018/mar/27/president-ram-nath-kovind-cutting-costs-at-rashtrapati-bhavan/30aafda33c600db420d4fb2dd49782fb

sharvari

Tags

Related Articles

Close