ಪ್ರಚಲಿತ

ಪ್ರಧಾನಿ ಮೋದಿ ಬಗ್ಗೆ ರಷ್ಯಾ ಅಧ್ಯಕ್ಷ ಪುಟಿನ್ ಹೀಗೆಂದರಾ?

ಭಾರತ ಮತ್ತು ವಿದೇಶಗಳ ಕೆಲ ಎಡಬಿಡಂಗಿಗಳಿಗೆ ಹೊರತು ಪಡಿಸಿದಂತೆ, ಭಾರತೀಯರು ಮತ್ತು ವಿದೇಶಿಯರಿಗೆ ತಮ್ಮ ನಡೆ, ನುಡಿ, ಕಾರ್ಯವೈಖರಿಯ ‌ಮೂಲಕವೇ ಆತ್ಮೀಯರಾಗುವ ವ್ಯಕ್ತಿತ್ವ ಪ್ರಧಾನಿ ನರೇಂದ್ರ ಮೋದಿ ಅವರದ್ದು.

ಅವರು ಭಾರತದ ಆಡಳಿತದ ಜವಾಬ್ದಾರಿ ವಹಿಸಿಕೊಂಡ ಬಳಿಕ ಭಾರತದ ಅಭಿವೃದ್ಧಿಯ ಜೊತೆಗೆ, ಭಾರತವನ್ನು ವಿಶ್ವ ಪ್ರಿಯ ರಾಷ್ಟ್ರವನ್ನಾಗಿ ‌ಮಾಡುವಲ್ಲಿಯೂ ಬಹುಮುಖ್ಯ ಪಾತ್ರ ವಹಿಸಿದ್ದಾರೆ ಎನ್ನುವುದು ಗಾಳಿಯಷ್ಟೇ ಸತ್ಯ. ಭಾರತ ಇಂದು ವಿಶ್ವಕ್ಕೆ ಬೇಕಾದ, ವಿಶ್ವದ ಹಲವು ರಾಷ್ಟ್ರಗಳಿಗೆ ಸಲಹೆಗಾರನಾಗಿ, ಹಲವು ರಾಷ್ಟ್ರಗಳಿಗೆ ಮಾರ್ಗದರ್ಶಕನಾಗಿ, ಜೊತೆಗೆ ಸ್ನೇಹಿತನಾಗಿ ಗುರುತಿಸಿಕೊಳ್ಳುವ ಹಾಗಾಗಿದೆ ಎಂದರೆ ಆ ಸಾಧನೆಗಳೆಲ್ಲದರ ಹಿಂದಿನ ವ್ಯಕ್ತಿ – ಶಕ್ತಿ ಪ್ರಧಾನಿ ಮೋದಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ರಧಾನಿ ಮೋದಿ ಅವರ ದೂರದರ್ಶಿತ್ವ, ಮುಂದಾಲೋಚನೆಯೇ ನಮ್ಮ ದೇಶವನ್ನಿಂದು ವಿಶ್ವ ಮಾನ್ಯ ರಾಷ್ಟೇರವನ್ನಾಗಿ ಮಾಡಿದೆ ಎನ್ನುವುದು ಸತ್ಯ.

ಇಂದು ಕೇವಲ ಭಾರತೀಯರಷ್ಟೇ ಅಲ್ಲ, ವಿದೇಶಿಗರು ಸಹ ಪ್ರಧಾನಿ ಮೋದಿ ಅವರ ವ್ಯಕ್ತಿತ್ವಕ್ಕೆ ಮಾರು ಹೋಗಿದ್ದಾರೆ. ರಷ್ಯಾದ ಅಧ್ಯಕ್ಷ‌ ವ್ಲಾಡಿಮಿರ್ ಪುಟಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದು, ಆ ಮೂಲಕ ಅವರಿಗೆ ಪ್ರಧಾನಿ ಮೋದಿ ಅವರ ಮೇಲಿರುವ ನಂಬಿಕೆ, ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ಪುಟಿನ್ ಅವರು, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಬುದ್ಧಿವಂತ ವ್ಯಕ್ತಿ ಎನ್ನುವ ಮೂಲಕ ಅವರಿಗೆ ನನ್ನ ದೇಶದ ಪ್ರಧಾನಿ ಮೇಲಿನ ನಂಬಿಕೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಭಾರತ ಮತ್ತು ರಷ್ಯಾ ನಡುವೆ ಒಂದು ಐತಿಹಾಸಿಕ ಸೌಹಾರ್ದವಿದೆ. ಪ್ರಸ್ತುತ ಭಾರತದ ಕಡೆಗೆ ಇಡೀ ಪ್ರಪಂಚವೇ ತಿರುಗಿ ನೋಡುವಂತಾಗಿದ್ದು, ಇದು ಭಾರತದ ಸಾಧನೆಯ ಪ್ರತಿಫಲವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ಭಾರತದ ಅಭಿವೃದ್ಧಿಯ ವೇಗ ಹೆಚ್ಚಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಹಾಗೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಜಾಣ್ಮೆಯಿಂದ ಭಾರತ ಮತ್ತಷ್ಟು ಪ್ರಗತಿಯ ಕಡೆಗೆ ಸಾಗುತ್ತಿದೆ. ಭಾರತದ ಜೊತೆಗೆ ರಷ್ಯಾ ಸಹ ಉತ್ತಮ ಬಾಂಧವ್ಯವನ್ನು ಇರಿಸಿಕೊಂಡಿದೆ. ಉಭಯ ದೇಶಗಳ ನಡುವೆ ಉತ್ತಮ ರಾಜಕೀಯ ಸಂಬಂಧ ಇದೆ. ಆರ್ಥಿಕ ಅರರಾಧ ಮತ್ತು ಸೈಬರ್ ಕ್ರೈಮ್ ಗಳಂತಹ ಅಪರಾಧಗಳ ವಿರುದ್ಧ ಭಾರತದ ಜೊತೆಗೆ ರಷ್ಯಾದ ಸಹಕಾರ ಚೆನ್ನಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೆನಡಾವು ಖಲೀಸ್ತಾನಿ ಭಯೋತ್ಪಾದಕರ ವಿಚಾರವನ್ನಿಟ್ಟುಕೊಂಡು ಭಾರತದ ಜೊತೆಗೆ ಸಂಬಂಧ ಕೆಡಿಸಿಕೊಂಡಿರುವ ಈ ಸಂದರ್ಭದಲ್ಲಿ, ರಷ್ಯಾ ನೀಡಿರುವ ಈ ಹೇಳಿಕೆ ಮಹತ್ವ ಪಡೆದಿದೆ. ಜೊತೆಗೆ ವಿಶ್ವದ ಹಲವು ರಾಷ್ಟ್ರಗಳಿಗೆ ಭಾರತದ ಸ್ನೇಹ ಮುಖ್ಯವಾಗಿದ್ದು, ನಮ್ಮೊಂದಿಗೆ ಉತ್ತಮ ಸಂಬಂಧ ಉಳಿಸಿಕೊಳ್ಳಲು ಪ್ರಯತ್ನ ನಡೆಸುತ್ತಿವೆ ಎನ್ನುವುದಕ್ಕೆ ಪ್ರಧಾನಿ ಮೋದಿ ಅವರೇ ಕಾರಣ ಎನ್ನುವುದು ನಿಸ್ಸಂಶಯ.

Tags

Related Articles

Close