ದೇಶಪ್ರಚಲಿತ

ಆಲ್ಬರ್ಟ್ ಐನ್ಸ್ಟೈನ್ ನನ್ನು ಅನುಸರಿಸಲು ಹೋಗಿ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮರ್ಯಾದೆ ಕಳೆದುಕೊಂಡಿದ್ದು ಹೀಗೆ!!

ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷರಾಗಿ ಸಿಂಹಾಸನವೇರಿದ ಮೇಲೆ, ಬಹುಷಃ ರಾಹುಲ್ ಗಾಂಧಿ ತಮ್ಮ ತಲೆಯನ್ನು ಯಾವುದೋ ಅತ್ಯದ್ಭುತ ರಾಸಾಯನಿಕ ಹಾಕಿ ತೊಳೆದು ಸ್ವಚ್ಛಗೊಳಿಸಿದ್ದಾರೆನ್ನಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಬಿಡಿ! ಮೊನ್ನೆ, ಇದ್ಧಕ್ಕಿದ್ದ ಹಾಗೆ ತಮ್ಮ ಟ್ವಿಟ್ಟರ್ ನಲ್ಲಿ ತಾವು ಕಂಡು ಹಿಡಿದ ಹೊಸದಾದ ಫಾರ್ಮುಲಾವನ್ನು ಬಹಿರಂಗಗೊಳಿಸಿದ್ದೇ ಇಡೀ ಭಾರತ ಅಚ್ಚರಿಗೊಳಗಾಗಿದ್ದಲ್ಲದೆ, ಈ ಫಾರ್ಮುಲಾ ಸಾಮಾನ್ಯದ್ದಲ್ಲ!! ಬದಲಿಗೆ, ದೇಶವನ್ನು ಲೂಟಿ ಹೊಡೆದು ಹೊರ ದೇಶಕ್ಕೆ ಓಡಿ ಹೋಗುವವರಿಗೋಸ್ಕರ ಇರುವಂತಹ ಫಾರ್ಮುಲಾ!!

ಇದು ರಾಹುಲ್ ಗಾಂಧಿ ಕಂಡುಹಿಡಿದಿರುವ ಫಾರ್ಮುಲಾ!!

The scamster’s escape formula :

ಲಾ (ಮೋ) + ನೀ (ಮೋ) – ನ (ಮೋ) -> ಭಾ (ಗೋ)

ವ್ಹಾ!! ನೋಡೋದಿಕ್ಕೆ ರಾಹುಲ್ ಗಾಂಧಿಯ ಫಾರ್ಮುಲಾ ಅಧ್ಭುತ ಎನ್ನಿಸಿದರೂ ಸಹ, ಅಷ್ಟೇ ಅದ್ಭುತವಾಗಿ ತೋಪೆದ್ದಿದೆ!! ರಾಹುಲ್ ಗಾಂಧಿಯ ಪ್ರಕಾರ, ಲಲಿತ್ ಮೋದಿ ಮತ್ತು ನೀರವ್ ಮೋದಿ ಇಬ್ಬರೂ ಸೇರಿ ದೇಶವನ್ನು ಲೂಟಿ ಹೊಡೆದಿದ್ದಾರೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಸಹಾಯದಿಂದ ದೇಶ ಬಿಟ್ಟು ಹೊರ ಹೋಗುವಲ್ಲಿ ಯಶಸ್ವಿಯಾಗಿದ್ದಾರೆ ಎಂಬುದು ರಾಹುಲ್ ರ ಫಾರ್ಮುಲಾ ದ ಅರ್ಥ!! ಓಹ್! ಥ್ಯಾಂಕ್ ಗಾಡ್!! ಪ್ರಧಾನಿ ನರೇಂದ್ರ ಮೋದಿಯವರ ಕುಟುಂಬದವರು ಎನ್ನಲಿಲ್ಲ ರಾಹುಲ್ ಗಾಂಧಿ!! ಕೊನೆಗೆ ಮೋದಿ ಎನ್ನುವ ಸರ್ ನೇಮ್ ಇದೆಯಲ್ಲವೇ?! ಮೊದಲೇ ಐನ್ಸ್ ಸ್ಟೈನ್ ತಲೆ!! ವಿಚಾರ ಬರುವುದು ಸಹಜವೇ!!

ಆದರೆ, ತಾನು ಸಂಶೋಧಿಸಿದ ಫಾರ್ಮುಲಾವೊಂದು ತನಗೇ ಬಂದು ಬಡಿದಿದೆ ಎಂದು ಅರ್ಥವಾಗುವ ಹೊತ್ತಿಗೆ, ಟ್ವೀಟ್ ಮಾತ್ರ ಸಿಕ್ಕಾಪಟ್ಟೆ ವೈರಲ್ ಆಗಿದೆ!! ವಾಸ್ತವವಾಗಿ, ಲಲಿತ್ ಮೋದಿ ಮತ್ತು ನೀರವ್ ಮೋದಿ ಸೇರಿ ದೋಚಿದ್ದು “+” ಎಂಬುದಾದರೆ, ಪ್ರಧಾನಿ ನರೇಂದ್ರ ಮೋದಿ ಅವರಿಬ್ಬರನ್ನೂ ಯಶಸ್ವಿಯಾಗಿ ಹಿಡಿದಿದ್ದಾರೆ! ಅಂದರೆ, ಹಗರಣಕ್ಕೆ ಸಹಕಾರ ಕೊಡದ ಮೋದಿ “-” ಎಂಬ ಅರ್ಥ ಬರುತ್ತದೆ!! ಸೋ, ಒಟ್ಟಾರೆಯಾಗಿ ಲೂಟಿಕೋರರು ಓಡುವಂತಾಗಿದೆ!! ಅಂದರೆ, ಕಾಂಗಿಗಳೇ!!

ಪಾಪ!! ರಾಹುಲ್ ಗಾಂಧಿಯ ಫಾರ್ಮುಲಾಕ್ಕೆ ಸ್ವತಃ ಕಾಂಗ್ರೆಸ್ ಪಕ್ಷದ ನಾಯಕರೇ ಮುಖ ಮುಚ್ಚಿಕೊಳ್ಳುವಂತಾಗಿದೆ!!

೨೦೧೧ ರಿಂದ ನಡೆಯುತ್ತ ಬಂದ ಹಗರಣಕ್ಕೆ ಸಹಕಾರ ಕೊಟ್ಟ ಕಾಂಗ್ರೆಸ್ ನ ಹಣಬರಹವೊಂದು ಈಗ ಮೋದಿ ಸರಕಾರದ ಅಧಿಕಾರಾವಧಿಯಲ್ಲಿ ಬಯಲಾಗಿದೆ!!

ಬಹುಷಃ ಅದೆಷ್ಟೋ ಶತಮಾನಗಳಿಂದ ಕಾಂಗ್ರೆಸ್ ಇದೇ ಫಾರ್ಮುಲಾ ನನ್ನು ಅನುಸರಿಸಿ ಬಂದಿದೆ ಎನ್ನಿಸುತ್ತಿದೆ!

ಇಷ್ಟು ವರ್ಷಗಳೂ ಕೂಡ, ಮಾಡಿದ ಹಗರಣಗಳಿಗೆ, ಭ್ರಷ್ಟಾಚಾರಕ್ಕೆ, ಮೋಸಗಳಿಗೆ ಕಾಂಗ್ರೆಸ್ ಪಕ್ಷವೊಂದು ಬಹುಷಃ ಫಾರ್ಮುಲಾವನ್ನು ಅನುಸರಿಸಿಯೇ ಬಂದಿತ್ತು ಕಾಣುತ್ತೆ!!

https://twitter.com/RoflRajanikant/status/964424548744482816

ರಾಹುಲ್ ಗಾಂಧಿಯವರು ಇದಕ್ಕೆಲ್ಲ ಟೆನ್ಷನ್ ತೆಗೆದುಕೊಳ್ಳಬಾರದು! ಪಾಪ! ಅಂದಿನ ಹಣಕಾಸು ಸಚಿವ ಚಿದಂಬರಮ್ ಜೊತೆಗೂಡಿ ಮಾಡಿದ ಹಗರಣಗಳಿಗೆ ಕೊನೆಯಿಲ್ಲವೆಂದು ಗೊತ್ತಿದ್ದರೂ, ಕಾಂಗಿಗಳಿಗೆ ಅದೇ ಹಗರಣವಾದರೂ ಪ್ರಧಾನಿ ಮೋದಿಯವರ ಮೇಲೆ ಆರೋಪ ಮಾಡುವುದು ಎಷ್ಟು ಸರಿ ಹೇಳಿ?! ೨೦೧೩ ರಲ್ಲಿ ದಿನೇಶ್ ದುಬೆ ಸರಕಾರಕ್ಕೆ ಅರಿಕೆ ಮಾಡಿದ್ದರೂ ಕೂಡ ದಿವ್ಯಮೌನ ವಹಿಸಿದ್ದು ಭಾರತಕ್ಕೇ ಗೊತ್ತಿದೆ ಬಿಡಿ!!

ರಾಹುಲ್ ಗಾಂಧಿಯ ಕುಟುಂಬದ ಸರಕಾರ ಬ್ಯಾಂಕಿನ ಎನ್ ಪಿ ಎ ಜಾಸ್ತಿ ಮಾಡಿದ್ದು ಹೇಗೆ ಗೊತ್ತಾ?!

ಯುಪಿಎ ಸರಕಾರ ಆಗಸ್ಟ್ ೨೦೧೨ ರಲ್ಲಿ ದಿನೇಶ್ ದುಬೆಯವರನ್ನು ಅಲಹಾಬಾದ್ ಬ್ಯಾಂಕ್ ಬೋರ್ಡ್ ನ ಡೈರೆಕ್ಟರ್ ಆಗಿ ನೇಮಿಸಲಾಯಿತು!! ಪಾಪ!! ಎಲ್ಲಿ, ಇಷ್ಟು ಸಾವಿರಗಟ್ಟಲೇ ಕೋಟಿ ಯನ್ನು ಸಾಲ ಕೊಡುವ ಬದಲಾಗಿ, ವಿರೋಧಿಸಿದ್ದೇ ಹೆಚ್ಚಾಗಿ ಹೋಯಿತು!! ಕೊನೆ ಕೊನೆಗೆ, ದುಬೆಯನ್ನು ರಾಜೀನಾಮೆ ನೀಡುವಂತೆ ಮಾಡಲಾಯಿತು!! ನೀರವ್ ಮೋದಿ ಮತ್ತು ಚೋಕ್ಸಿಗೆ ಹಣ ಕೊಡಬೇಡಿ ಎಂದರೂ ಸಹ ಕೊಟ್ಟ ತಪ್ಪಿಗೆ ಬ್ಯಾಂಕು ದಿವಾಳಿ ಎದ್ದು ಹೋಯಿತು!!

“ವಿತ್ತ ಸಚಿವಾಲಯದ ಉನ್ನತ ಅಧಿಕಾರಿಗಳಿಗೆ ಮತ್ತು ಅಲಹಾಬಾದ್ ಬೋರ್ಡ್ ಗೆ ನಾನು ರಾಜೀನಾಮೆ ನೀಡಬೇಕಿತ್ತು! ನನ್ನನ್ನು ಬಾಯಿ ಮುಚ್ಚುವಂತೆ ಹೇಳಿದರು! ಸರಕಾರ ನನ್ನನ್ನು, ಬ್ಯಾಂಕ್ ನ ವ್ಯವಹಾರಗಳ ಬಗ್ಗೆ ಕಣ್ಣಿಡಲು ಮತ್ತು ಎಲ್ಲಿಯೂ ತಪ್ಪಾಗದಂತೆ ನೋಡಿಕೊಳ್ಳಲು ನೇಮಿಸಿದೆ! ನನ್ನ ಕೆಲಸವನ್ನು ನನಗಿಲ್ಲಿ ಮಾಡಲಿಕ್ಕಾಗುತ್ತಿಲ್ಲವೆಂದರೆ, ನಾನು ರಾಜೀನಾಮೇ ನೀಡುವುದು ಉತ್ತಮ ಎಂದೆ! ಆದರೆ, ರಾಜೀನಾಮೆಯಲ್ಲಿ ಆರೋಗ್ಯ ಸರಿ ಇಲ್ಕವೆಂದೇ ಹೇಳಿ ರಾಜೀನಾಮೆ ನೀಡಬೇಕೆಂದು ಒತ್ತಡ ತಂದಿದ್ದರಿಂದ, ಅವರು ಹೇಳಿದಂತೆಯೇ ಫೆಬ್ರುವರಿ 2014 ರಲ್ಲಿ ರಾಜೀನಾಮೆ ನೀಡಿ ಹೊರಬಂದೆ!”

“ನಾನು ಹೇಳಿದ್ದೆ! ಚೋಕ್ಸಿಯ ವ್ಯವಹಾರ ಒಂದು ದಿನ ದೊಡ್ಡ ಹಗರಣಕ್ಕೆ ತಿರುಗಲಿದೆ ಎಂದು! ಅಕಸ್ಮಾತ್, ಅವತ್ತೇ ಯೋಚಿಸಿದ್ದರೆ, ಇದನ್ನು ತಡೆಯಬಹುದಿತ್ತು! ಇವತ್ತಿನ ಪಿಎನ್ ಬಿಯ ಮ್ಯಾನೇಜಿಂಗ್ ಡೈರೆಕ್ಟರ್ ಆಗ ಜನರಲ್ ಮ್ಯಾನೇಜರ್ ಆಗಿದ್ದರು! ನನಗೆ ಗೊತ್ತಿತ್ತು! ಒಳಗಡೆ ಮುಚ್ಚಿದ ಬಾಗಿಲುಗಳ ಹಿಂದೆ ಏನೋ ನಡೆಯುತ್ತಿದೆ ಎಂದು!”

ಆದರೆ, ಕಾಂಗಿಗಳ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡಿದ ದಿನೇಶ್ ದುಬೆ ಸುಮ್ಮನಾಗದೇ ದಾರಿಯೇ ಇರಲಿಲ್ಲ!

“On Friday, 22 November, 2013, a meeting of MCBOD and other four committees and also a board meeting was held at Kolkata at the Grand Oberai Hotel. In the board meeting, there was an agenda regarding Geetanjali Jewellers. This agenda had already appeared in past board meetings more than four times, and every time I had expressed my dissent. But, this agenda was again brought in this meeting for approval. The CMD told me to give my consent to pass it, but I refused and again expressed my dissent note.”

“I have never seen in my forty years’ journalism career such type of below dignity work, misuse of office for corruption. I would like to request you for some changes in guidelines. When the management has powers to approve the loan upto Rs 400 crores, then why such cases are brought to board meetings? It is very clear that just to save them from inquiry and legal actions, in name of rectification and deviation, they bring such cases for board approval.. When the board approve this, they are free from any legal inquiry or administrative action on behalf of the board.”

ಇವತ್ತೂ ದುಬೆ ಹೇಳಿದ್ದು ಅದನ್ನೇ! ಅವತ್ತೇ ಗೊತ್ತಿತ್ತು ಅಲಹಾಬಾದ್ ಬ್ಯಾಂಕಿನಲ್ಲಿ ಹಗರಣ ನಡೆಯುತ್ತಿದೆ ಎಂದು! ಯಾರೂ ಕೆಳಹಂತದ ಸಿಬ್ಬಂದಿಯಿಂದ ಇಷ್ಟು ದೊಡ್ಡ ಮೊತ್ತದ ಸಾಲವನ್ನು ನೀಡಲು ಸಾಧ್ಯವೇ ಇಲ್ಲ! ಅದಾಗುವುದು . , ಕೇವಲ ಉನ್ನತ ಅಧಿಕಾರಿಗಳು, ವಿತ್ಯ ಸಚಿವಾಲಯ ಮತ್ತು ಸರಕಾರದ ಪ್ರಭಾವದಿಂದ ಮಾತ್ರ ಸಾಧ್ಯ! ಇವತ್ತಿನ ಮ್ಯಾನೇಜಿಂಗ್ ಡೈರೆಕ್ಟರ್ ಗೆ ಪ್ರತಿಯೊಂದೂ ಗೊತ್ತಿದೆಯಾದರೂ, ಹಲವು ಕಾರಣಗಳಿಂದ ಸುಮ್ಮನಿರಬಹುದು! ಅವತ್ತಿನ ವಿತ್ತ ಸಚಿವಾಲಯಕ್ಕೂ ಈ ಮಾಹಿತಿ ಇದೆ ಎಂದೇ ದುಬೆ ಹೇಳಿಕೆ ನೀಡಿದ್ದಾರೆ!
ಇದು ದಿನೇಶ್ ದುಬೆಯವರ ಮಾತುಗಳು!!ಸೋ, ಬಹುಷಃ ರಾಹುಲ್ ಗಾಂಧಿಯವರ ಫಾರ್ಮುಲಾ ೧೦೦% ಸತ್ಯ ಬಿಡಿ!!

– ಪೃಥು ಅಗ್ನಿಹೋತ್ರಿ

Tags

Related Articles

Close