ಪ್ರಚಲಿತ

ಬಯಲಾಯಿತು ಕಾಂಗ್ರೆಸ್‍ನ ಅಕ್ರಮ ಸಂಬಂಧ!! ಅಮೇರಿಕಾದಲ್ಲಿ ಪತ್ತೆಯಾಯಿತು ಕಾಂಗ್ರೆಸ್ ಕುರುಹು!!

ಭಾರತ ಅಥವಾ ವಿದೇಶದಲ್ಲಿ ನಡೆಯುವ ಯಾವುದೇ ಹಗರಣದಲ್ಲೂ ಅದರಲ್ಲಿ ಕಾಣುವ ಕೈ ಕಾಂಗ್ರೆಸ್ಸಿಗರದ್ದು!! ತಪ್ಪು ಕೆಲಸಗಳನ್ನು ಮಾಡುವುದರಲ್ಲಿ ಕಾಂಗ್ರೆಸ್ಸಿಗರದ್ದು ಎತ್ತಿದ ಕೈ!! ಆದರೆ ತಪ್ಪು ಮಾಡಿ ಸಿಕ್ಕಿಬಿದ್ದ ನಂತರವೂ ನಾವು ಯಾವುದೇ ತಪ್ಪು ಮಾಡಿಲ್ಲ ಅಂತಾ ಸಾಭೀತು ಪಡಿಸಲು ಮುಂದಾಗುತ್ತಾರೆ!! ಆದರೆ ಇದೀಗ ಅನಾಲಿಟಿಕಾ ಜತೆ ಸಂಪರ್ಕವಿದೆ ಎಂಬುವುದಕ್ಕೆ ತಕ್ಕ ಸಾಕ್ಷಿ ದೊರಕ್ಕಿದ್ದು ಕಾಂಗ್ರೆಸ್‍ಗೆ ಸೆಡ್ಡು ಹೊಡೆಯುವ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ!!

ವಿಶ್ವಾದ್ಯಂತ ಅನೇಕ ರಾಷ್ಟ್ರಗಳ ಚುನಾವಣೆಗಳ ಮೇಲೆ ಪ್ರಭಾವ ಬೀರುತ್ತಿರುವ ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆಯ ಕೈಚಳಕ ಈಗಾಗಲೇ ಬೆಳಕಿಗೆ ಬಂದಿದ್ದು, ಫೇಸ್ ಬುಕ್ ಮೂಲಕ ಜನರ ಸೂಕ್ಷ್ಮ ಮಾಹಿತಿಯನ್ನು ಹೊರತೆಗೆದು, ಚುನಾವಣೆಗೆ ಬಳಕೆ ಮಾಡುತ್ತಿದ್ದ ವಿಚಾರ ತಿಳಿದೇ ಇದೆ. ಆದರೆ ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆಯ ಜತೆ ಕಾಂಗ್ರೆಸ್ ನಂಟು ಹೊಂದಿದೆ ಎನ್ನುವ ಸುದ್ದಿಗೆ ಇದೀಗ ಮತ್ತೊಂದು ಬಲವಾದ ಸಾಕ್ಷಿ ಸಿಕ್ಕಿದೆ.

ಕೇಂಬ್ರಿಡ್ಜ್ ಅನಾಲಿಟಿಕಾ ಜತೆ ಯಾವುದೇ ಸಂಪರ್ಕ ಇಲ್ಲ ಎಂದು ಕಾಂಗ್ರೆಸ್ ಪ್ರತಿಪಾದಿಸುತ್ತಾ ಬಂದಿದೆ. ಆದರೆ ಇದೀಗ ಬಹಿರಂಗವಾದ ಹೊಸ ಮಾಹಿತಿಯಂತೆ ಕೇಂಬ್ರಿಡ್ಜ್ ಅನಾಲಿಟಿಕಾದ ಸಿಇಒ ಆಗಿದ್ದ ಅಲೆಕ್ಸಾಂಡರ್ ನಿಕ್ಸನ್ ಕಚೇರಿಯಲ್ಲಿ ಕಾಂಗ್ರೆಸ್‍ನ ಚಿಹ್ನೆ ಇರುವ ಫೆÇೀಟೋ ಬಹಿರಂಗವಾಗಿದೆ. ಮಾತ್ರವಲ್ಲ ಅದರಲ್ಲಿ ಕಾಂಗ್ರೆಸ್ ಎಂದು ಇಂಗ್ಲಿಷ್‍ನಲ್ಲಿ ದೊಡ್ಡ ಅಕ್ಷರದಲ್ಲಿ ಬರೆಯಲಾಗಿದೆ. ಇದುವರೆಗೆ ಅಮೆರಿಕ ಅಧ್ಯಕ್ಷ ಟ್ರಂಪ್‍ರ ಚುನಾವಣೆಯಲ್ಲಿ ಮಾತ್ರ ಭಾಗಿ ಎಂದು ಹೇಳಿಕೊಂಡಿದ್ದ ಸಂಸ್ಥೆಯ ದ್ವಂದ್ವತೆಯೂ ಬಯಲಾಗಿದೆ.

ಅಮೆರಿಕ ಚುನಾವಣೆ ಗಳಲ್ಲಿ ಅವ್ಯವಹಾರ ನಡೆಸಿದ ಆರೋಪ ಹೊಂದಿರುವ ಕೇಂಬ್ರಿಡ್ಜ್ ಅನಾಲಿಟಿಕಾಗೆ ಭಾರತದಲ್ಲಿ ಕಾಂಗ್ರೆಸ್ ಗ್ರಾಹಕನಾಗಿತ್ತು ಎಂಬುದು ಮಂಗಳವಾರ ಬಹಿರಂಗ ಗೊಂಡಿರುವ ಬೆನ್ನಲ್ಲೇ, ಇದೀಗ ಭಾರತದಲ್ಲಿ ಸಂಸ್ಥೆ ಕೆಲಸ ಮಾಡಿರುವ ಚುನಾವಣೆಗಳ ಬಗ್ಗೆ ಸಮಗ್ರ ವಿವರಗಳನ್ನು ಸಂಸ್ಥೆಯ ಮಾಜಿ ಕೆಲಸಗಾರ ಕ್ರಿಸ್ಟೋಫರ್ ವೈಲೀ ಹೇಳಿದ್ದಾರೆ. ಸಂಸ್ಥೆ ಕೆಲಸ ಮಾಡಿದ ಎಲ್ಲ ಚುನಾವಣೆಗಳ ವಿವರವನ್ನು ಟ್ವಿಟರ್‍ನಲ್ಲಿ ಬಹಿರಂಗ ಗೊಳಿಸಿರುವ ವೈಲೀ, ಭಾರತದಲ್ಲಿ ಎಸ್‍ಸಿಎಲ್ ಸಂಸ್ಥೆಯ ಸಹಭಾಗಿತ್ವದಲ್ಲಿ ಕೆಲಸ ಮಾಡುತ್ತಿದೆ ಎಂದಿದ್ದಾರೆ.

ಎಸ್‍ಸಿಎಲ್ ಇಂಡಿಯಾ ಸಂಸ್ಥೆಯ ಬಳಿ 600 ಜಿಲ್ಲೆಗಳ, 7ಲಕ್ಷ ಹಳ್ಳಿಗಳ ದತ್ತಾಂಶವಿದೆ. ಇದನ್ನು ನಿರಂತರವಾಗಿ ಅಪ್‍ಡೇಟ್ ಮಾಡಲಾಗುತ್ತಿದೆ. ಕುಟುಂಬ, ಜಾತಿ ಸೇರಿದಂತೆ ಹಲವು ಮಾಹಿತಿಗಳನ್ನು ಕಲೆಹಾಕಲಾಗಿದೆ. 2012ರಲ್ಲಿ ಒಂದು ಪಕ್ಷದ ಪರವಾಗಿ ಜಾತಿ ಆಧರಿತ ಸಮೀಕ್ಷೆಯನ್ನು ನಡೆಸಲಾಗಿತ್ತು. ಈ ಮೂಲಕ ಪಕ್ಷಕ್ಕೆ ನಿಷ್ಠವಾಗಿರುವ ಜಾತಿಯ ಮತದಾರರನ್ನು ಗುರುತಿಸಲು ಸಹಾಯ ಮಾಡಲಾಗಿತ್ತು. 2011ರಲ್ಲೂ ರಾಜ್ಯಾದ್ಯಂತ ಜಾತಿ ಸಮೀಕ್ಷೆ ಮಾಡಲಾಗಿತ್ತು. ನಂತರ ಈ ಬೂತ್ ಮಟ್ಟದ ವಿವರವನ್ನು ವಿಶ್ಲೇಷಿಸಿ, ಅನಿಶ್ಚಿತ ಮತದಾರ ರನ್ನು ಮನವೊಲಿಸಲಾಗುತ್ತಿತ್ತು.

ಕೇಂಬ್ರಿಜ್ ಅನಾಲಿಟಿಕಾ ಸಂಸ್ಥೆಯು ಫೇಸ್‍ಬುಕ್ ಬಳಕೆದಾರರ ದತ್ತಾಂಶವನ್ನು ಬಳಸಿದ್ದ ಆರೋಪದ ಹಿನ್ನೆಲೆಯಲ್ಲಿ ವಿವರಣೆ ನೀಡುವಂತೆ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸೂಚಿಸಿದೆ. ಏಪ್ರಿಲ್ 7ರ ಒಳಗೆ ಮಾಹಿತಿ ನೀಡುವಂತೆ ಸೂಚಿಸಿದ್ದು, ಈ ಸಂಬಂಧ ಫೇಸ್‍ಬುಕ್‍ಗೆ ಪ್ರಶ್ನೆಗಳನ್ನು ನೀಡಿದೆ. ಕೇಂಬ್ರಿಜ್ ಅನಾಲಿಟಿಕಾ ಸಂಸ್ಥೆಯು ಭಾರತೀಯ ಮತದಾರರ ವೈಯಕ್ತಿಕ ವಿವರಗಳು ಮತ್ತು ಫೇಸ್‍ಬುಕ್ ಬಳಕೆದಾರರ ವಿವರಗಳನ್ನು ಪಡೆದಿದೆಯೇ ಅಥವಾ ಫೇಸ್‍ಬುಕ್ ಸಹಭಾಗಿತ್ವದಲ್ಲಿ ಯಾವುದೇ ಇತರ ಸಂಸ್ಥೆಯು ಚುನಾವಣೆ ಅಕ್ರಮದಲ್ಲಿ ತೊಡಗಿಸಿಕೊಂಡಿದೆಯೇ ಎಂಬ ಪ್ರಶ್ನೆಯನ್ನು ಕೇಳಿದೆ.

ಏನಿದು ಕೇಂಬ್ರಿಡ್ಜ್ ಅನಾಲಿಟಿಕಾ ಕಂಪನಿ?

ಕೇಂಬ್ರಿಡ್ಜ್ ಅನಾಲಿಟಿಕಾ ಎಂಬುದು ರಾಜಕೀಯ ಪಕ್ಷಗಳಿಗಾಗಲಿ, ಮತ್ತಾವುದೇ ಸಂಸ್ಥೆಗಳಿಗಾಗಲಿ, ಫೇಸ್ಬುಕ್ ನಂಥ ಸಂಸ್ಥೆಗಳಿಂದ ಭಾರೀ ಪ್ರಮಾಣದಲ್ಲಿ ಜನರ/ಮತದಾರರ ದತ್ತಾಂಶ ಸಂಗ್ರಹಿಸಿ, ಅವರ ವರ್ತನೆಯನ್ನು ಅಧ್ಯಯನ ಮಾಡಿ, ಮತದಾರರನ್ನು ಸೆಳೆಯಲು ತಂತ್ರಗಾರಿಕೆ ರೂಪಿಸುವ ಸೇವೆ ಒದಗಿಸುವ ಸಂಸ್ಥೆ. ಇದು ತನ್ನದೇ ವೆಬ್ ಸೈಟಿನಲ್ಲಿ ಹೇಳಿಕೊಂಡಿರುವ ಪ್ರಕಾರ, ಭಾರತೀಯ ಜನತಾ ಪಕ್ಷ, ಕಾಂಗ್ರೆಸ್, ಜೆಡಿಯು ಮುಂತಾದ ಪಕ್ಷಗಳಿಗೆ ತನ್ನ ಸೇವೆಯನ್ನು ಒದಗಿಸಿದೆ.

ಲಂಡನ್ ನಲ್ಲಿ ಈ ಸಂಸ್ಥೆಯ ಮುಖ್ಯ ಕಚೇರಿ ಇದ್ದು, ಅಲೆಕ್ಸಾಂಡರ್ ನಿಕ್ಸ್ ಎಂಬುವವರು ಇದರ ಸಂಸ್ಥಾಪಕ. ಇದರ ಮೇಲಿರುವ ಆರೋಪನೇವೆಂದರೆ, ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಫೇಸ್ ಬುಕ್ ನಿಂದ ಕೋಟ್ಯಂತರ ಅಮೆರಿಕನ್ನರ ದತ್ತಾಂಶಗಳನ್ನು ಸಂಗ್ರಹಿಸಿ, ಅವರನ್ನು ಅಭ್ಯಸಿಸಿ, ಮತದಾರ ಭಾವನೆಗಳೊಂದಿಗೆ ಆಟವಾಡಿ ಅವರನ್ನು ಮರಳು ಮಾಡಿ, ಟ್ರಂಪ್ ಅವರಿಗೆ ಮತ ಹಾಕುವಂತೆ ಪುಸಲಾಯಿಸುವಲ್ಲಿ ಈ ಸಂಸ್ಥೆ ಯಶಸ್ವಿಯಾಗಿತ್ತು.

ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆ, ಯುಕೆಯ ಅಲೆಕ್ಸಾಂಡರ್ ಕೋಗನ್ ಎಂಬುವವನ ಜೊತೆ ಡೀಲ್ ಮಾಡಿಕೊಂಡು, ಆಪ್ ಸೃಷ್ಟಿಸಿ ಅಮೆರಿಕದ ಮತದಾರರ ಬಗ್ಗೆ ಸಾಕಷ್ಟು ವಿವರಗಳನ್ನು ಕಲೆಹಾಕಿತ್ತು. ಹಲವಾರು ಅಮೆರಿಕನ್ನರಿಗೆ ಹಣವನ್ನೂ ನೀಡಲಾಗಿತ್ತು. ಜೊತೆಗೆ ಅವರ ಫೇಸ್ ಬುಕ್ ಸ್ನೇಹಿತರಿಗೆ ಸಂಬಂಧಿಸಿದ ಬಹುಮುಖ್ಯವಾದ ದತ್ತಾಂಶಗಳನ್ನು ಅವರ ಅನುಮತಿ ಕೂಡ ಪಡೆಯಲಾಗಿತ್ತು. ಈ ಎಲ್ಲ ದತ್ತಾಂಶಗಳನ್ನು ಬಳಸಿಕೊಂಡು, ಮತ ಹಾಕುವಾಗ ಜನರ ಅಭಿಪ್ರಾಯಗಳನ್ನು ಹೇಗೆ ಬದಲಿಸಬೇಕು, ಅವರನ್ನು ಹೇಗೆ ಮರಳು ಮಾಡಬಹುದು ಎಂಬುದರ ವಿವರ ನೀಡುವಂಥ ಸಾಫ್ಟ್ ವೇರ್ ಒಂದನ್ನು ಅಭಿವೃದ್ಧಿಪಡಿಸಲಾಗಿತ್ತು. ಈ ಎಲ್ಲ ಬಂಡವಾಳವನ್ನು ಬಯಲು ಮಾಡಿದ್ದು ಯುಕೆಯ ಮತ್ತೊಬ್ಬ ವಿಸಲ್ ಬ್ಲೋವರ್ ಕ್ರಿಸ್ಟೋಫರ್ ವೇಲೀ ಎಂಬುವವರು. ಆದರೆ, ಈ ಎಲ್ಲ ಆರೋಪಗಳನ್ನು ನಿಕ್ಸ್ ಅವರು ಸಾರಾಸಗಟಾಗಿ ಅಲ್ಲಗಳೆದಿದ್ದಾರೆ. ಆದರೆ ಅದನ್ನು ಅಲ್ಲಗಳೆಯದ ರೀತಿಯಲ್ಲಿ ತಕ್ಕ ಸಾಕ್ಷಿ ದೊರಕ್ಕಿದ್ದು ಚುನಾವಣೆ ಹತ್ತಿರ ಬರುತ್ತಿದ್ದ ಸಮಯದಲ್ಲಿ ಮತ್ತೊಂದು ಕಂಟಕ ಕಾದಿದೆ ಕಾಂಗ್ರೆಸ್‍ಗೆ!!

Source: Economic Times

ಪವಿತ್ರ

Tags

Related Articles

Close