ಪ್ರಚಲಿತ

ಶಾಂಘಾಯಿ ಡ್ರಾಗನ್ ಎದುರು ಮತ್ತೊಮ್ಮೆ ಘರ್ಜಿಸಿದ ದೆಹಲಿ ಸಿಂಹ! ಚೀನಾದ BRI ಯೋಜನೆಗೆ ತನ್ನ ಬೆಂಬಲವಿಲ್ಲ ಎಂದು ಸ್ಪಷ್ಟಪಡಿಸಿದ ಭಾರತದ ಪ್ರಧಾನ ಸೇವಕನಿಗೆ ನಮೋ ನಮೋ…..

 

ತನ್ನ ದೇಶದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆ ಬಗ್ಗೆ ಅತಿ ಹೆಚ್ಚು ಪ್ರಾಮುಖ್ಯತೆ ಕೊಡುವ ಪ್ರಧಾನ ಸೇವಕ ನಮೋ ಅವರು ಚೀನಾದ Belt and Road Initiative (BRI) ಯೋಜನೆಗೆ ಕೆಂಪು ಬಾವುಟ ತೋರಿಸಿದ್ದಾರೆ. ಎಲ್ಲಕ್ಕಿಂತಲೂ ದೇಶ ಮೊದಲು ಎನ್ನುವ ಇಂತಹ ನಾಯಕನ್ನು ಪಡೆದ ಭಾರತೀಯರೆ ಧನ್ಯರು. ಈ ಯೋಜನಯನ್ನು ಸತತ ಎರಡನೆ ಬಾರಿಗೆ ವಿರೋಧಿಸುವ ಮೂಲಕ ದೆಹಲಿ ಸಿಂಹ, ಮತ್ತೊಂದು ಬಾರಿಗೆ ಶಾಂಘಾಯಿ ಡ್ರಾಗನ್ ಎದುರು ಘರ್ಜಿಸಿದೆ!! ಈ ಯೋಜನೆಯನ್ನು SCO ನ ಎಲ್ಲಾ ಸದಸ್ಯ ರಾಷ್ಟ್ರಗಳು ಬೆಂಬಲಿಸಿವೆ ಆದರೆ ಈ ಯೋಜನೆಯನ್ನು ವಿರೋಧಿಸುವ ಏಕೈಕ ದೇಶ ಭಾರತ ಎನ್ನುವುದು ನಿಮಗೆ ತಿಳಿದಿರಲಿ. 56″ ಎದೆಯ ಸಿಂಹ ಘರ್ಜನೆಯ ಮುಂದೆ ಡ್ರಾಗನ್ ಪಿಳಿ ಪಿಳಿ ಕಣ್ಣು ಬಿಡುತ್ತಿದೆ ಎಂದರೆ ನಮ್ಮ ನಾಯಕತ್ವದ ಬಗ್ಗೆ ನಮಗೆ ಹೆಮ್ಮೆ ಎನಿಸುತ್ತದೆ.

ಕಿಂಗ್ಡಾವ್ನ 18 ನೇ ಶಾಂಘಾಯ್ ಸಹಕಾರ ಸಂಸ್ಥೆ (SCO) ಶೃಂಗಸಭೆಯ ಕೊನೆಯಲ್ಲಿ ರಶಿಯಾ, ಪಾಕಿಸ್ತಾನ, ಕಝಾಕಿಸ್ತಾನ್, ಕಿರ್ಗಿಸ್ತಾನ್, ಉಜ್ಬೆಕಿಸ್ತಾನ್, ತಜಾಕಿಸ್ತಾನ್ ಮತ್ತು ಸ್ವತಃ ಚೀನಾ ಈ ಯೋಜನೆಯನ್ನು ಬೆಂಬಲಿಸಿತ್ತು. ತನ್ನ ಕೆಂಗಣ್ಣಿಗೆ ಭಾರತವು ಮಣಿದು ಯೋಜನೆಗೆ ಅಸ್ತು ಎನ್ನಬಹುದು ಎಂದು ಚೀನಾ ಅಂದುಕೊಂಡಿತ್ತು ಆದರೆ ಭಾರತದ ಸ್ಪಷ್ಟ ನಿರ್ಧಾರದಿಂದಾಗಿ ಚೀನಾ ಈಗ ಇಂಗು ತಿಂದ ಮಂಗನಾಗಿದ್ದಾನೆ. 17 ಪುಟಗಳ ಕ್ವಿಂಗ್ಡಾವ್ ಘೋಷಣೆಯೊಂದರಲ್ಲಿ ಇದು ಬಹಿರಂಗವಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಘೋಷಣೆಯಲ್ಲಿ ಭಾರತವೊಂದನ್ನು ಹೊರತು ಪಡಿಸಿ , ಉಳಿದ ಎಲ್ಲಾ ಸದಸ್ಯ ರಾಷ್ಟ್ರಗಳು ಬೆಂಬಲ ನೀಡಿವೆ ಎಂದು ಬರೆದಿದೆ ಎನ್ನಲಾಗಿದೆ.

ಕಾಶ್ಮೀರ ಭಾರತದ ಅವಿಭಾಜ್ಯ ಅಂಗ, ಪಾಕಿಸ್ತಾನ ಅನೈತಿಕವಾಗಿ ಅದರ ಮೇಲೆ ಹಕ್ಕು ಸ್ಥಾಪಿಸಿದೆ. ಭಾರತದ ಬೆಂಬಲವಿಲ್ಲದೆ ಈ ಕಾರಿಡಾರ್ ಅನ್ನು ಪೂರ್ಣಗೊಳಿಸುವುದು ಚೀನಾಕ್ಕೆ ಸಾಧ್ಯವಿಲ್ಲ. ಯಾವ ಘಳಿಗೆಯಲ್ಲಾದರೂ ಭಾರತ ಶ್ತ್ರು ದೇಶ ಪಾಕಿಸ್ತಾನದ ಮೇಲೆ ಯುದ್ದ ಹೂಡಿ ಕಾಶ್ಮೀರವನ್ನು ಮರಳಿ ಪಡೆಯಬಹುದು. ಒಂದು ವೇಳೆ ಹಾಗಾದರೆ ಚೀನಾದ ಕಾರಿಡಾರ್ ಯೋಜನೆ ಸ್ವಾಹಾಃ. ಅದಕ್ಕಾಗಿಯೆ ಭಾರತದ ಬೆಂಬಲ ಬಯಸುತ್ತಿದೆ ಚೀನಾ.

ಚೀನಾವು ತನ್ನ ಮೂಲಭೂತ ಸೌಕರ್ಯ ಯೋಜನೆಗಳನ್ನು ನಿರ್ವಹಿಸುವಲ್ಲಿ ಭಾರತದ “ಸಾರ್ವಭೌಮತ್ವವನ್ನು ಗೌರವಿಸುವ” ಅಗತ್ಯದ ಕುರಿತು ಶೃಂಗ ಸಭೆಯಲ್ಲಿ ಮೋದಿ ಅವರು ಸ್ಪಷ್ಟವಾಗಿ ಮಾತನಾಡಿದ್ದಾರೆ. ಮೋದಿ ಅವರ ಈ ಮಾತುಗಳು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೂಲಕ ಹಾದುಹೋಗುವ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಗೆ ಭಾರತವು ಆಕ್ಷೇಪ ವ್ಯಕ್ತಪಡಿಸಿರುವುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. “ಭಾರತವು ಅಂತರ್ಗತ, ಸಮರ್ಥನೀಯ, ಪಾರದರ್ಶಕ, ರಾಷ್ಟ್ರದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವ ಹೊಸ ಸಂಪರ್ಕ ಯೋಜನೆಗಳನ್ನು ಸ್ವಾಗತಿಸುತ್ತದೆ” ಎಂದು ಮೋದಿ ಹೇಳಿದ್ದಾರೆ.

ಆದರೆ ಚೀನಾ-ಪಾಕಿಸ್ತಾನ್ ಕಾರಿಡಾರ್ ಪಾರದರ್ಶಕವಾಗಿಲ್ಲ ಮತ್ತು ಭಾರತೀಯ ಸಾರ್ವಭೌಮತೆಯನ್ನು ಅದು ಗೌರವಿಸುತ್ತಿಲ್ಲ ಎಂದು ಪರೋಕ್ಷವಾಗಿ ಹೇಳಿ ಚೀನಾ-ಪಾಕಿಸ್ತಾನದ ಕಿವಿ ಹಿಂಡಿದ್ದಾರೆ. ಆಗ್ನೇಯ ಏಷ್ಯಾ, ಮಧ್ಯ ಏಷ್ಯಾ, ಗಲ್ಫ್ ಪ್ರದೇಶ, ಆಫ್ರಿಕಾ ಮತ್ತು ಯೂರೋಪ್ ಗಳನ್ನು ಭೂ ಮತ್ತು ಸಮುದ್ರ ಮಾರ್ಗಗಳ ಜಾಲವನ್ನು ಸಂಪರ್ಕಿಸುವ ಉದ್ದೇಶದಿಂದ ಚೀನಾ 2013 ರಲ್ಲಿ BRI ಯೋಜನೆಯನ್ನು ಅನಾವರಣಗೊಳಿಸಿತು. ಚೀನಾ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಆರ್ಥಿಕ ಕಾರಿಡಾರ್ ನಿರ್ಮಿಸಿ ಗ್ವಾದಾರ್ ಬಂದರಿನಲ್ಲಿ ತನ್ನ ಸೇನಾ ನೆಲೆಗಳನ್ನು ಸ್ಥಾಪಿಸಲು ಉದ್ದೇಶಿಸಿದೆ ಮತ್ತು ಭಾರತದ ವಿರುದ್ದ ಗುರುಗುಟ್ಟುವ ಏಕೈಕ ಉದ್ದೇಶದಿಂದ ಚೀನಾ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ ಎನ್ನುವುದು ವಿಶ್ವಕ್ಕೆ ಗೊತ್ತು. ವಿಪರ್ಯಾಸವೆಂದರೆ ಭಾರತವನ್ನು ಮಣಿಸುವ ಉದ್ದೇಶಕ್ಕೆ ಅದು ಭಾರತದಿಂದಲೆ ಬೆಂಬಲ ಬಯಸುತ್ತಿದೆ!! ಹಿಂದಿನ ರೋಬೋಟ್ “ಸಿಂಗ್” ಸರಕಾರ ಚೀನಾದ ಅನೈತಿಕ ಬೇಡಿಕೆಗೆ ಹೂಂ ಎಂದು ಬರುತ್ತಿತ್ತೋ ಏನೋ ಆದರೆ ಈಗಿರುವುದು ನಿಜ ಜೀವನದ “ಸಿಂಹ ಸರಕಾರ”, ಹಾಗೆಲ್ಲ ಮಣಿಯುವುದಿಲ್ಲ.

ದೇಶದ ನಾಯಕತ್ವ ಸಿಂಹ ಮುಷ್ಟಿಯಲ್ಲಿದೆ ಎನ್ನುವುದೆ ಸಮಾಧಾನದ ವಿಷಯ. ತನ್ನ ದೇಶದ ಸಾರ್ವಭೌಮತೆ ತನಗೆ ಎಲ್ಲಕ್ಕಿಂತಲೂ ಹೆಚ್ಚು ಪ್ರಿಯ ಎಂದು ಬಾರಿ ಬಾರಿ ಜಗತ್ತಿಗೆ ಸಾರುತ್ತಿರುವ ಮೋದಿ ನಾಯಕತ್ವಕ್ಕೆ ಮತ್ತೊಮ್ಮೆ ಜೈ ಎನ್ನೋಣ.. ಪ್ರಂಚಂಡ ಬಹುಮತದಿಂದ ಮೋದಿ ಗೆಲ್ಲಿಸಿ ವಿಶ್ವನಾಯಕನಿಗೆ ನಮೋ ಎನ್ನೋಣ

-ಶಾರ್ವರಿ

Tags

Related Articles

Close