ಪ್ರಚಲಿತ

ಹುಷಾರ್..!! ಪಾಕ್ ನ ಒಂದು ಗುಂಡು ಭಾರತದ ಗಡಿ ದಾಟಿದರೆ ಪಾಕ್‍ ನಿರ್ನಾಮ!! ಪಾಕ್ ಗೆ ಖಡಕ್ ಎಚ್ಚರಿಕೆ ನೀಡಿದ ರಾಜನಾಥ್ ಸಿಂಗ್!!

ಸದ್ಯದ ಪರಿಸ್ಥಿತಿಯಲ್ಲಿ ಭಾರತದ ಮುಕುಟವೆಂದು ಕರೆಯಲಾಗುತ್ತಿರುವ ಕಾಶ್ಮೀರ ಉಗ್ರ ಅಟ್ಟಹಾಸಕ್ಕೆ ಬಲಿಯಾಗುತ್ತಿದ್ದು, ಕಾಶ್ಮೀರ ಗಡಿಯಾದ್ಯಂತ ನೆಲೆಸಿರುವ ಉಗ್ರರ ನಿರ್ಮೂಲನೆಗಾಗಿ ಮತ್ತೆ ನಿರ್ದಿಷ್ಟ ದಾಳಿ ನಡೆಸಬೇಕಾಗಬಹುದು ಎಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಪಾಕಿಸ್ತಾನದ ಜತೆ ಭಾರತ ಶಾಂತಿಯುತ ಸಂಬಂಧ ಬಯಸುತ್ತದೆ ಎಂದು ಹೇಳುವ ಜೊತೆಗೆ ಪಾಕಿಸ್ತಾನಕ್ಕೆ ಖಡಕ್ ಉತ್ತರ ನೀಡಿದ್ದಾರೆ.

ಹೌದು…. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾಗಿದ್ದು, ಇದು ಕಂಡು ಬಂದರೆ ಮತ್ತೆ ಸರ್ಜಿಕಲ್ ಸ್ಟ್ರೈಕ್ ನಡೆಸುತ್ತೇವೆ. ಪಾಕಿಸ್ತಾನಕ್ಕೆ ಸರ್ಜಿಕಲ್ ಸ್ಟ್ರೈಕ್ ಒಂದು ಸಂದೇಶವಷ್ಟೇ. ಅಗತ್ಯ ಬಿದ್ದರೆ ಭಾರತ ದೊಡ್ಡ ಪ್ರಮಾಣದ ದಾಳಿಯನ್ನೇ ನಡೆಸಲು ಸಿದ್ದವಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದರು. ಇದರ ಬೆನ್ನಲ್ಲೆ ಪಾಕಿಸ್ತಾನದ ಜತೆ ಭಾರತ ಶಾಂತಿಯುತ ಸಂಬಂಧ ಬಯಸುತ್ತದೆ. ಆದರೆ, ಪಾಕ್‍ನಿಂದ ಒಂದೇ ಒಂದು ಬುಲೆಟ್ ದೇಶದ ಗಡಿ ಪ್ರವೇಶಿಸಿದರೂ, ಅಸಂಖ್ಯಾತ ಬುಲೆಟ್‍ನಿಂದ ಉತ್ತರ ನೀಡಿ ಎಂದು ಸೇನೆಗೆ ಸೂಚಿಸಿರುವುದಾಗಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ಈಗಾಗಲೇ ಪಾಕಿಸ್ತಾನದ ಯಾವುದೇ ಪ್ರಚೋದನೆಗೂ ಸೂಕ್ತ ಉತ್ತರ ನೀಡುತ್ತೇವೆ ಎಂದು ಹೇಳಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಶತ್ರು ರಾಷ್ಟ್ರಗಳೊಂದಿಗಿನ ಸಾಮರ್ಥ್ಯ ಸೆಣಸಾಟಕ್ಕಾಗಿ ಮೊದಲು ನಾವು ನಮ್ಮ ದೇಶೀಯ ರಕ್ಷಣಾ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ಹೇಳಿದ್ದರು. ಅಂತೆಯೇ ಸ್ವದೇಶಿ ರಕ್ಷಣಾ ವ್ಯವಸ್ಥೆಯನ್ನು ಬಲಿಷ್ಠಗೊಳಿಸಲೇಬೇಕು ಎಂದು ಪ್ರತಿಪಾದಿಸಿರುವ ಬಿಪಿನ್ ರಾವತ್ ಅವರು, ದೇಶದ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಬೇಕಿದ್ದು, ಇದಕ್ಕಾಗಿ ಶಸ್ತ್ರಾಸ್ತ್ರಗಳ ಆಮದು ಪ್ರಮಾಣ ಕಡಿತವಾಗಿ ದೇಶೀಯ ನಿರ್ಮಾಣ ಪ್ರಮಾಣ ದ್ವಿಗುಣಗೊಳ್ಳಬೇಕು ಎಂದು ಹೇಳಿದ್ದರು!!

ಕಾಶ್ಮೀರ ಗಡಿಯಾದ್ಯಂತ ನೆಲೆಸಿರುವ ಉಗ್ರರ ನಿರ್ಮೂಲನೆಗಾಗಿ ಮತ್ತೆ ನಿರ್ದಿಷ್ಟ ದಾಳಿ ನಡೆಸಬೇಕಾಗಬಹುದು. ನುಸುಳುಕೋರರನ್ನು ಸಮಾಧಿಗೆ ಕಳುಹಿಸಲು ನಮ್ಮ ಯೋಧರು ಸಿದ್ಧರಾಗಿದ್ದಾರೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಎಚ್ಚರಿಕೆ ನೀಡಿದ್ದರು. ಅಲ್ಲದೇ, “ಪಾಕ್ ಅಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ ದಾಳಿ ಪಾಕಿಸ್ತಾನಕ್ಕೆ ಒಂದು ಸಂದೇಶ ಮಾತ್ರ ಆಗಿದೆ. ಆದರೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮತ್ತೆ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾದರೆ ಮತ್ತೆ ಅಂತಹ ದಾಳಿಗಳನ್ನು ನಡೆಸಲು ಭಾರತ ಹಿಂದೇಟು ಹಾಕುವುದಿಲ್ಲ. ಅಗತ್ಯ ಬಿದ್ದರೆ ಭಾರತೀಯ ಸೇನೆ ನಿಯಂತ್ರಣ ರೇಖೆಯಾಚೆ ಮತ್ತೆ ಸರ್ಜಿಕಲ್ ದಾಳಿಗಳನ್ನು ನಡೆಸಲು ಸಿದ್ದವಿದೆ. ಹಾಗಾಗಿ ಒಳನುಸುಳುಕೋರರಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದರೆ ತಪ್ಪಾಗಲಾರದು ಎಂದು ಹೇಳಿದ್ದರು.

ಇದೀಗ ಪಾಕಿಸ್ತಾನದ ಜತೆ ಭಾರತ ಶಾಂತಿಯುತ ಸಂಬಂಧ ಬಯಸುತ್ತದೆ. ಆದರೆ, ಪಾಕ್‍ನಿಂದ ಒಂದೇ ಒಂದು ಬುಲೆಟ್ ದೇಶದ ಗಡಿ ಪ್ರವೇಶಿಸಿದರೂ, ಅಸಂಖ್ಯಾತ ಬುಲೆಟ್‍ನಿಂದ ಉತ್ತರ ನೀಡಿ ಎಂದು ಸೇನೆಗೆ ಸೂಚಿಸಿರುವುದಾಗಿ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ, ತ್ರಿಪುರದ ರಾಜಧಾನಿ ಅಗರ್ತಾಲದ ಹೊರವಲಯದಲ್ಲಿರುವ ಬಾರ್ಜಾಲಾದಲ್ಲಿ ನಡೆದ ಚುನಾವಣಾ ಪ್ರಚಾರದ ರ್ಯಾಲಿಯಲ್ಲಿ ಅವರು ಮಾತನಾಡಿದ ಅವರು ‘ಪಾಕ್‍ನ ಒಂದು ಬುಲೆಟ್‍ಗೆ ಅಸಂಖ್ಯಾತ ಬುಲೆಟ್‍ನಿಂದ ಪ್ರತ್ಯುತ್ತರ ನೀಡಿ ಎಂದು ಭಾರತೀಯ ಸೇನೆಗೆ ಆದೇಶ ನೀಡಿದ್ದೇನೆ’ ಎಂದರು.

ಅಲ್ಲದೇ, ‘ನಮ್ಮ ನೆರೆಯ ದೇಶವಾದ ಪಾಕಿಸ್ತಾನದ ಮೇಲೆ ಆಕ್ರಮಣ ಮಾಡಲು ಬಯಸುವುದಿಲ್ಲ. ನೆರೆಹೊರೆಯ ರಾಷ್ಟ್ರಗಳೊಂದಿಗೆ ಶಾಂತಿ ಮತ್ತು ಸಾಮರಸ್ಯದಿಂದ ಬದುಕಲು ಇಚ್ಚಿಸುತ್ತೇವೆ. ಆದರೆ, ದುರಾದೃಷ್ಟವಶಾತ್ ಪಾಕಿಸ್ತಾನ ಸೇನೆ ಕಾಶ್ಮೀರವನ್ನು ಪಡೆಯಲು ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ’ ಎಂದು ಗುಡುಗಿದ್ದಾರೆ. ಎಡರಂಗದ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ಕಳೆದ 25 ವರ್ಷಗಳಿಂದ ತ್ರಿಪುರದಲ್ಲಿ ಆಡಳಿತ ನಡೆಸುತ್ತಿರುವ ಸರಕಾರ ಯಾವುದೇ ಅಭಿವೃದ್ಧಿ ಪರ ಕೆಲಸ ಮಾಡಿಲ್ಲ ಎಂದಿದ್ದಾರೆ.

ರಾಜ್ಯದಲ್ಲಿರುವ ಬಡತನ ಹಾಗೂ ನಿರುದ್ಯೋಗ ಸಮಸ್ಯೆಗೆ ಇಲ್ಲಿನ ಸರಕಾರ ಯಾವ ಕ್ರಮಗಳನ್ನು ಕೈಗೊಂಡಿದೆ ಎಂದು ಪ್ರಶ್ನಿಸಿದ ರಾಜನಾಥ್ ಸಿಂಗ್ ಅವರು, ತ್ರಿಪುರ ಸೇರಿದಂತೆ ಈಶಾನ್ಯ ರಾಜ್ಯಗಳ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ.

ನರೇಂದ್ರ ಮೋದಿ ಅವರು ಅಧಿಕಾರದ ಗದ್ದುಗೆಯನ್ನು ಏರಿದ ನಂತರ ದೇಶವು ನಾನಾ ರೀತಿಯಲ್ಲಿ ಅಭಿವೃದ್ಧಿಯ ಶಿಖರದತ್ತ ಮುನ್ನುಗ್ಗುತ್ತಿದೆಯಲ್ಲದೇ, ಭಾರತೀಯ ಸೇನೆ ವಿಶ್ವದಲ್ಲೇ ಪ್ರಬಲ ಸೇನೆಯಾಗಿ ಹೊರಹೊಮ್ಮಲು ದಾಪುಗಾಲು ಇಡುತ್ತಿದೆ ಕೂಡ!! ಅಷ್ಟೇ ಅಲ್ಲದೇ ಸೇನೆಗೆ ಸಂಪೂರ್ಣ ಸ್ವತಂತ್ರವನ್ನು ನೀಡಿರುವ ನರೇಂದ್ರ ಮೋದಿ ಸರ್ಕಾರದಲ್ಲಿ ಸೈನಿಕರು ತಮ್ಮ ವೈರಿಗಳು ದಾಳಿ ಮಾಡಿದರೆ ಪ್ರತಿದಾಳಿ ನಡೆಸಲು ಯಾವುದೇ ರೀತಿಯ ಅನುಮತಿಯನ್ನು ಕೇಳದೇ ಶತ್ರುಗಳನ್ನು ಹೊಡೆದೊಡಿಸಲು ಸಂಪೂರ್ಣ ಸ್ವತಂತ್ರವನ್ನು ನೀಡಿರುವ ಮೊದಲ ಸರ್ಕಾರವೇ ಮೋದಿ ಸರ್ಕಾರ!!

– ಅಲೋಖಾ

Tags

Related Articles

Close