ಪ್ರಚಲಿತ

ಕಾಂಗ್ರೆಸ್ ನಾಯಕರ ವಿವಾದಾತ್ಮಕ ಹೇಳಿಕೆಗಳಿಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿರುಗೇಟು

ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣ, ಲೋಕಾರ್ಪಣೆಗೆ ಸಂಬಂಧಿಸಿದ ಹಾಗೆ ಕಾಂಗ್ರೆಸ್ ನಾಯಕರು ರಾಜಕೀಯದ ಬಣ್ಣ ಬಳಿದು ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ, ಆರ್ ಎಸ್‌ ಎಸ್ ಮೇಲೆ ಒಂದಿಲ್ಲೊಂದು ಆರೋಪಗಳನ್ನು ಮಾಡುತ್ತಲೇ ಬಂದಿದ್ದಾರೆ. ಕಾಂಗ್ರೆಸ್‌ನ ಇಂತಹ ಹುರುಳಿಲ್ಲದ ಆರೋಪಗಳಿಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಉತ್ತರಿಸಿದೆ.

ಪ್ರಸ್ತುತ ಭವ್ಯ ಶ್ರೀರಾಮ ಮಂದಿರದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತಿವೆ. ದೇಶಕ್ಕೆ ದೇಶವೇ ಈ ಸಂತಸದ ಕ್ಷಣವನ್ನು ಆಸ್ವಾದಿಸುವ ಕೆಲಸದಲ್ಲಿದ್ದರೆ, ಕಾಂಗ್ರೆಸ್ ಮಾತ್ರ ಈ ವಿಷಯವನ್ನಿಟ್ಟುಕೊಂಡು ರಾಜಕೀಯ ಮಾಡುತ್ತಿದೆ. ಈ ಮಂಗಳ ಕಾರ್ಯವನ್ನು ಬಿಜೆಪಿ, ಆರ್ ಎಸ್ ಎಸ್ ತಮ್ಮ ಲಾಭಕ್ಕಾಗಿ ಮಾಡುತ್ತಿವೆ ಎಂದೆಲ್ಲಾ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯಾದಿಯಾಗಿ ಕಾಂಗಿಗಳು ಎಲ್ಲರೂ ಮಾಡುತ್ತಿದ್ದಾರೆ. ಆ ಮೂಲಕ ದೇಶದ ಜನರ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ‌.

ಇದಕ್ಕೆ ಈಗ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಉತ್ತರಿಸಿದೆ. ಈ ಪುಣ್ಯ ಕಾರ್ಯ ಸುಮಾರು 500 ವರ್ಷಗಳಿಂದ ಕಾಯುತ್ತಿದ್ದ ಕಾರ್ಯಕ್ರಮ. ತ್ಯಾಗ, ಹೋರಾಟದ ಫಲವಾಗಿ ಈ ಮಂದಿರ ನಿರ್ಮಾಣ ನಡೆಯುತ್ತಿದೆ. ಲೋಕಾರ್ಪಣೆಗೆ ಸಜ್ಜಾಗಿದೆ. ಈ ಹೋರಾಟದಲ್ಲಿ ಬಿಜೆಪಿ ಸಹ ಭಾಗವಹಿಸಿತ್ತು. ಆದರೆ ಕಾಂಗ್ರೆಸ್ ಪಕ್ಷಕ್ಕೆ ತನ್ನ ಅಧಿಕಾರಾವಧಿಯಲ್ಲಿ ಈ ಮಂದಿರ ನಿರ್ಮಾಣ ಮಾಡುವ ಅವಕಾಶ ಹೆಚ್ಚಿತ್ತು. ಮಂದಿರವನ್ನು ನಿರ್ಮಾಣ ಮಾಡಿ ಅದರ ಸಂಪೂರ್ಣ ಕ್ರೆಡಿಟ್ ಅನ್ನು ಕಾಂಗ್ರೆಸ್ ತೆಗೆದುಕೊಳ್ಳಬಹುದಿತ್ತು. ಆದರೆ ಕಾಂಗ್ರೆಸ್ ಗೆ ಈ ದೇಶದ ಆತ್ಮದ ಅರಿವೇ ಆಗಿಲ್ಲ ಎಂದು ಹೇಳಿದೆ.

1949 ರಲ್ಲಿ ಶ್ರೀರಾಮ ಜನ್ಮಭೂಮಿಯಲ್ಲಿ ಶ್ರೀರಾಮನ ಮೂರ್ತಿಯನ್ನು ಇರಿಸಿ ಪೂಜೆ ಮಾಡಲಾಗಿತ್ತು. ಆದರೆ ಕಾಂಗ್ರೆಸ್ ‌ನ ಜವಾಹರಲಾಲ್ ನೆಹರೂ ಅವರು ಅಲ್ಲಿಂದ ಮೂರ್ತಿ ತೆಗೆಸಿ ಮುಸಲ್ಮಾನರ ನಮಾಜ್‌ಗೆ ಅವಕಾಶ ಮಾಡಿಕೊಟ್ಟಿದ್ದರು. ಈ ಸಂದರ್ಭದಲ್ಲಿ ನೆಹರೂ ವಿರುದ್ಧ ಯಾವೊಬ್ಬ ಕಾಂಗ್ರೆಸಿಗ ಸಹ ತುಟಿಪಿಟಿಕ್ ಎನ್ನಲಿಲ್ಲ. 1947 – 2013 ರ ತನಕ ಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಸಾಕಷ್ಟು ಅವಕಾಶಗಳಿದ್ದವು. ಆದರೆ ಕಾಂಗ್ರೆಸ್ ರಾಮ ಮಂದಿರ ವಿಚಾರದ ಕುರಿತು ಒಂದೇ ಒಂದು ಮಾತನ್ನು ಸಹ ಆಡಿಲ್ಲ ಎಂದೂ ಟ್ರಸ್ಟ್ ತಿರುಗೇಟು ನೀಡಿದೆ.

ಕಾಂಗ್ರೆಸ್ ಪಕ್ಷಕ್ಕೆ ಈ ದೇಶದ ಆತ್ಮದ ಅರಿವೇ ಆಗಿಲ್ಲ. ಇನ್ನು ಈ ದೇಶದ ಸಂಸ್ಕೃತಿ, ಪರಂಪರೆ ಅರಿವಾಗುವುದು ಹೇಗೆ ಎಂದು ಟ್ರಸ್ಟ್ ಪ್ರಶ್ನಿಸಿದೆ. ಶ್ರೀ ರಾಮ, ಶ್ರೀ ಕೃಷ್ಣ, ಕಾಶಿ ವಿಶ್ವನಾಥ ಈ ದೇಶದ ಆತ್ಮ. ಹಿಂದೂಗಳ ಆತ್ಮವೇ ಈ ದೇಗುಲಗಳಲ್ಲಿ ಇದೆ. ಇದೇ ಈ ದೇಶದ ಅಸ್ಮಿತೆಯ ಮೂಲ. ಮಂದಿರ ಕಟ್ಟುವಲ್ಲಿ ವಿಫಲವಾದ ಕಾಂಗ್ರೆಸ್, ಆ ಕುರಿತು ವಿವಾದವನ್ನು ಹೆಚ್ಚಿಸಲು ಮಾತ್ರ ಸದಾ ಮುಂದಿತ್ತು ಎಂದು ಟ್ರಸ್ಟ್ ಕಿಡಿ ಕಾರಿದೆ.

ಹಾಗೆಯೇ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠೆ, ಆಹ್ವಾನ, ಆಯೋಜನೆ, ಕಾರ್ಯಕ್ರಮ, ಪೂಜೆ ಎಲ್ಲವೂ ಟ್ರಸ್ಟ್‌‌ನ ನಿರ್ಧಾರ. ಈ ಮಂದಿರ ನಿರ್ಮಾಣದಲ್ಲಿ ಬಿಜೆಪಿಯ ಕೊಡುಗೆ ಅಪಾರ. ಹಾಗೆಂದು ಇದು ಬಿಜೆಪಿಯ ಕಾರ್ಯಕ್ರಮ ಅಲ್ಲ. ಈ ದೇಶದ ಜನರ ಕನಸು ನವ ಸಾಗುವ ಕಾರ್ಯಕ್ರಮ ಎಂದೂ ಟ್ರಸ್ಟ್ ತಿಳಿಸಿದೆ.

Tags

Related Articles

Close