ಪ್ರಚಲಿತ

‘ರಾಮ ಮಂದಿರ ವಿರೋಧಿಸುವವರಿಗೆ ರಾಮನ ಹೆಸರು ಹೇಳುವ ಹಕ್ಕಿಲ್ಲ’

ಕೆಲವು ದೇಶ ವಿರೋಧಿ, ಪ್ರಧಾನಿ ಮೋದಿ ವಿರೋಧಿ, ಬಿಜೆಪಿ, ಆರ್‌ಎಸ್‌ಎಸ್ ವಿರೋಧಿ ನಾಲಾಯಕರು ಅಯೋಧ್ಯೆಯ ಶ್ರೀರಾಮನ ಹೆಸರಲ್ಲಿ, ಭವ್ಯ ಮಂದಿರದ ಹೆಸರಿನಲ್ಲಿ ವಿನಾ ಕಾರಣ ಇಲ್ಲಸಲ್ಲದ ರಾಜಕೀಯ ಮಾಡಿ, ತಮ್ಮ ಬೇಳೆ ಬೇಯಿಸಿಕೊಳ್ಳುವ ಕಾರ್ಯ ಮಾಡುತ್ತಿದ್ದಾರೆ.

ಕೆಲವು ಕಾಂಗ್ರೆಸ್ ನಾಯಕರಿಗೆ ರಾಷ್ಟ್ರ ಮಂದಿರ ಉದ್ಘಾಟನೆಯ ಪುಣ್ಯ ಕಾರ್ಯದಲ್ಲಿ ಭಾಗವಹಿಸುವ ಆಸೆ ಮೂಗಿನ ತುದಿಯಲ್ಲಿ ಇದ್ದರೂ, ತಮ್ಮ ನಾಯಕರ ಆಜ್ಞೆ ಮೀರಲಾಗದೆ ಆಹ್ವಾನ ತಿರಸ್ಕರಿಸುವ ಕಾರ್ಯ ಮಾಡಿದ್ದಾರೆ. ಮಂದಿರಕ್ಕೂ, ಬಿಜೆಪಿಗೂ ಯಾವುದೇ ಸಂಬಂಧ ಇರದ ಹೊರತಾಗಿಯೂ ಇದನ್ನು ಬಿಜೆಪಿ ರಾಜಕೀಯಕ್ಕೆ ಬಳಸುತ್ತಿದೆ ಎನ್ನುವ ಮೂಲಕ ತಮ್ಮ ಮೇಲೆ ಜನರಿಗೆ ಸಿಂಪತಿ ಬರುವಂತೆ ಕಾಂಗ್ರೆಸ್ ಮತ್ತು ಇತರ ವಿರೋಧಿಗಳು ವರ್ತಿಸುತ್ತಿರುವುದು ಹಾಸ್ಯಾಸ್ಪದ.

ರಾಮ ಮಂದಿರ ವಿರೋಧಿಗಳಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮುಟ್ಟಿ ನೋಡಿಕೊಳ್ಳುವ ಹಾಗೆ ಉತ್ತರಿಸಿದ್ದಾರೆ. ರಾಮ ಮಂದಿರ ವಿರೋಧಿಗಳಿಗೆ ಪ್ರಭು ಶ್ರೀರಾಮನ ಹೆಸರನ್ನು ಉಚ್ಚರಿಸುವ ಅರ್ಹತೆ ಇಲ್ಲ ಎಂದ ಅವರು ತಿಳಿಸಿದ್ದಾರೆ.

ಅಯೋಧ್ಯೆಯ ರಾಷ್ಟ್ರ ಮಂದಿರದ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಮತ್ತು ಶಿವಸೇನೆ (ಯು ಬಿ ಟಿ) ಬಣದ ನಡುವಿನ ವಾಕ್ಸಮರ ಜೋರಾಗಿದ್ದು, ಈ ಹಿನ್ನೆಲೆ ಶಿಂಧೆ ಈ ಹೇಳಿಕೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಬಾಳ ಠಾಕ್ರೆ ಸೇರಿದಂತೆ ಕೋಟ್ಯಾಂತರ ಶ್ರೀರಾಮ ಭಕ್ತರ ಕನಸನ್ನು ನನಸು ಮಾಡಿದ್ದಾರೆ. ಇದಕ್ಕೆ ಅಯೋಧ್ಯೆಯಲ್ಲಿ ಬಾಲ ರಾಮನ ವಿಗ್ರಹ ಪ್ರತಿಷ್ಠೆಯೇ ಸಾಕ್ಷಿ. ಜನವರಿ 22 ಐತಿಹಾಸ ಸೃಷ್ಟಿ ಮಾಡಿದೆ ಎಂದು ಅವರು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಶಿವಸೇನಾ ನಾಯಕರ ವಿರುದ್ದ ಅವರು ಕಿಡಿ ಕಾರಿದ್ದು, ‘ರಾಮನಿಗಾಗಿ ಇಲ್ಲದವರು ಯಾವ ಕೆಲಸಕ್ಕೂ ಸಲ್ಲರು’ ಎಂದು ಕುಹಕವಾಡಿದ್ದಾರೆ.

ಶಿವಸೇನಾ ನಾಯಕ ಸಂಜಯ್ ರಾವುತ್ ಸಮಾವೇಶವೊಂದರಲ್ಲಿ, ಶಿವಸೇನೆ ಇರದೇ ಇದ್ದಿದ್ದರೆ ಬಾಲ ರಾಮನ ಪ್ರತಿಷ್ಠಾಪನೆ ಸಾಧ್ಯ ಇರಲಿಲ್ಲ ಎಂದಿದ್ದರು. ಇದಕ್ಕೆ ಶಿಂಧೆ ತಿರುಗೇಟು ನೀಡಿರುವುದಾಗಿದೆ.

Tags

Related Articles

Close