ಪ್ರಚಲಿತ

ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ರೆಬಲ್!! ಈ ಬಾರಿ ಕೈ ತಪ್ಪುತ್ತಾ ಮಂಡ್ಯ ಟಿಕೆಟ್!!

ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಈ ಕಾಂಗ್ರೆಸ್‍ನ ಒಳಜಗಳಗಳು ಒಂದೊಂದೇ ಹೊರಬರುವಂತೆ ಕಾಣುತ್ತಿದೆ!! ಈ ಬಾರಿ ಕಾಂಗ್ರೆಸ್‍ನ ಗ್ರಹಚಾರವೇ ಸರಿ ಇಲ್ಲ ಅಂತ ಅನಿಸುತ್ತದೆ!! ಕರ್ನಾಟಕದಲ್ಲಿ ರಾಜಕೀಯ ಜಂಜಾಟ ಯಾವ ರೀತಿಯಲ್ಲಿ ರಂಗೇರುತ್ತಿದೆ ಎಂದರೆ ಇಡೀ ದೇಶವೇ ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಹಳ ಕುತೂಹಲದಿಂದ ಕಾಯುತ್ತಿದೆ. ಪಕ್ಷದ ಟಿಕೆಟ್ ಗಾಗಿ ಭಾರೀ ಪೈಪೆÇೀಟಿ ನಡೆಸುತ್ತಿರುವ ಕಾಂಗ್ರೆಸ್ ನಾಯಕರು ಇದೀಗ ಸ್ವತಃ ತಮ್ಮ ಪಕ್ಷದ ವಿರುದ್ಧವೇ ಸಿಡಿದೆದ್ದು ಕಾಂಗ್ರೆಸ್ ಗೆ ಛೀಮಾರಿ ಹಾಕಲು ಸಜ್ಜಾಗಿದ್ದಾರೆ. ಪಕ್ಷದ ನಾಯಕರ ವಿರುದ್ಧ ಅಸಮಧಾನಗೊಂಡು ಸಾಲು ಸಾಲು ಕಾರ್ಯಕರ್ತರು ಕಾಂಗ್ರೆಸ್ ತೊರೆದು ಇತರ ಪಕ್ಷಗಳ ಕಡೆ ಒಲವು ತೋರಿಸುವ ಪರಿಸ್ಥಿತಿ ಎದುರಾಗಿದೆ!!

ರೆಬಲ್ ಸ್ಟಾರ್ ಅಂಬರೀಶ್ ಕಾಂಗ್ರೆಸ್‍ನ ಹಿರಿಯ ಮುಖಂಡ!! ಈಗಾಗಲೇ ಕಾಂಗ್ರೆಸ್ಸಿಗರಿಗೆ ಅಂಬರೀಶ್ ವಿರುದ್ಧ ಅಸಮಾಧವಿರುವುದು ಎಲ್ಲರಿಗೂ ತಿಳಿದಿರುವ ವಿಷಯ!! ಅದೇ ರೀತಿ ಅಂಬರೀಶ್‍ಗೆ ಮಂಡ್ಯದ ಟಿಕೆಟ್ ಬೇಕೆಂಬ ಹಟ ಹಿಡಿದಿರುವುದರ ಹಿಂದೆ, ಮಂಡ್ಯದ ಜನತೆ ತನ್ನ ಕೈ ಬಿಡಲ್ಲ ಎನ್ನುವ ವಿಶ್ವಾಸ!! ಆದರೆ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಸೇರಿಕೊಂಡು ಮಂಡ್ಯದ ಟಿಕೆಟ್ ನೀಡುವಲ್ಲಿ ಅಸಮಾಧ ಹೊಂದಿದ್ದಾರೆ!! ಅದಲ್ಲದೆ ಇತ್ತೀಚೆಗೆ ರಮ್ಯಾಳ ತಾಯಿ ಅಂಬರೀಶ್ ವಿರುದ್ಧವೇ ತೊಡೆತಟ್ಟಿ ನಾನು ಮಂಡ್ಯದಲ್ಲೇ ಪಕ್ಷೇತರಳಾಗಿಯೇ ಸ್ಪರ್ಧಿಸುತ್ತೇನೆ ಎಂಬ ಮಾತುಗಳು ಈಗ ರೆಬಲ್ ಸ್ಟಾರ್ ಅಂಬರೀಶ್‍ಗೆ ತಲೆನೋವಾಗಿ ಪರಿಣಮಿಸಿದೆ!! ಮಂಡ್ಯದ ಟಿಕೆಟ್ ಸಿಗುತ್ತೋ ಅಥವಾ ಸಿಗಲ್ಲವೋ ಎಂಬ ಸಂಕಷ್ಟದಲ್ಲಿರುವ ರೆಬೆಲ್ ಸ್ಟಾರ್ ಕಾಂಗ್ರೆಸ್ ನಾಯಕರ ವಿರುದ್ಧವೇ ಮುನಿಸಿಕೊಂಡಿದ್ದಾರೆ. ಮಂಡ್ಯ ಜಿಲ್ಲೆಯ ನಾಯಕತ್ವದ ಜೊತೆಗೆ ಟಿಕೆಟ್ ಹಂಚಿಕೆಯಲ್ಲಿ ತಮ್ಮನ್ನು ಪರಿಗಣಿಸಿಲ್ಲ ಎಂಬುದೇ ಅಂಬರೀಶ್ ಸಿಟ್ಟಿಗೆ ಕಾರಣ ಎನ್ನಲಾಗುತ್ತಿದೆ.

Image result for ambareesh

ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ರೆಬಲ್

ಕಳೆದ ಬಾರಿಯಂತೆ ಈ ಬಾರಿಯೂ ಮಂಡ್ಯ ಜಿಲ್ಲೆಯಲ್ಲಿ ತಾವು ಹೇಳಿದವರಿಗೆ ಟಿಕೆಟ್ ನೀಡಬೇಕು ಎಂಬ ವರಸೆ ಅಂಬರೀಶ್ ರದ್ದು. ಆದರೆ ಈ ಬಾರಿ ಅಂಬರೀಶ್ ಅವರಿಗೆ ಮಂಡ್ಯ ಕ್ಷೇತ್ರದ ಟಿಕೆಟ್ ಹೊರತುಪಡಿಸಿ ಮತ್ತೆಲ್ಲ ಟಿಕೆಟ್ ಹಂಚಿಕೆಯು ಕೆಪಿಸಿಸಿ ಸರ್ವೇ ಆಧರಿಸಿಯೇ ನೀಡಲಾಗುತ್ತೆ. ಇದರ ಸುಳಿವು ತಿಳಿದ ಅಂಬರೀಶ್ ಮಂಡ್ಯದಿಂದ ಟಿಕೆಟ್ ಬೇಕು ಎಂದು ಕೆಪಿಸಿಸಿಗೆ ಅರ್ಜಿಯನ್ನೇ ಸಲ್ಲಿಸಿಲ್ಲ. ಮಂಡ್ಯದ ಟಿಕೆಟ್ ನನಗಲ್ಲದೆ ಇನ್ಯಾರಿಗೆ ಕೊಡ್ತಾರೆ ಬಿಡ್ರೋ ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡು ತನ್ನ ಸಿಟ್ಟನ್ನು ತೋರಿಸಿಕೊಂಡು ಕಾಂಗ್ರೆಸ್ ಜೊತೆ ಮುನಿಸಿಕೊಂಡಿದ್ದಾರೆ!!

Image result for parameshwar

ಮುಖ್ಯಮಂತ್ರಿ ಸಿದ್ದರಾಮಯ್ಯ, ಪರಮೇಶ್ವರ್ ಸೇರಿದಂತೆ ರಾಜ್ಯದ ಯಾವ ನಾಯಕರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಮಂಡ್ಯ ಟಿಕೆಟ್ ಅಂಬರೀಶ್ ಗೆ ಅಂತಿಮಪಡಿಸಿ ಮಂಡ್ಯದ ಇತರೆ ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಹೈಕಮಾಂಡ್ ಗೆ ಕಳುಹಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ತಮ್ಮನ್ನು ಸಚಿವ ಸ್ಥಾನದಿಂದ ತೆಗೆದ ನಂತರ ರಾಜ್ಯ ನಾಯಕರೊಂದಿಗೆ ಒಂದು ಹಂತದ ಅಂತರ ಕಾಯ್ದುಕೊಂಡಿದ್ದ ಅಂಬರೀಶ್ ಈಗಲು ಅದೇ ವರಸೆ ಮುಂದುವರಿಸಿದ್ದಾರೆ. ಬೇಕಾದರೆ ಮಂಡ್ಯ ಟಿಕೆಟನ್ನ ನನ್ನ ಮನೆಗೆ ತಂದುಕೊಡಲಿ ಆಗ ಸ್ಪರ್ಧೆ ಮಾಡ್ತೀನಿ ಎಂಬಂತೆ ಮಾತನಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

Image result for siddaramaiah

ಸ್ಟಾರ್ ಕ್ಯಾಂಪೇನರ್ ಕೂಡ ಆಗಿರುವ ಅಂಬರೀಶ್ ವರಸೆ ಕಾಂಗ್ರೆಸ್ ನಾಯಕರಿಗೂ ತಲೇ ನೋವು ತಂದಿದ್ದು. ರಾಜ್ಯ ಕಾಂಗ್ರೆಸ್ ನಾಯಕರು ಸಹಾ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

ರೆಬಲ್ ಸ್ಟಾರ್ ಅಂಬರೀಶ್ ಈಗಾಗಲೇ ಹಲವಾರು ಬಾರಿ ಪಕ್ಷದ ಮುಖಂಡರ ಜೊತೆಗೆ ತನ್ನ ಮುನಿಸು ತೋರಿಸಿಕೊಂಡಿದ್ದಾರೆ!! ಇತ್ತೀಚೆಗೆ ಕೆಪಿಸಿಸಿ ಪ್ರಚಾರ ಸಮಿತಿಯ ಸಭೆಗೆ ಅಂಬರೀಶ್ ಹಾಜರಾಗರಿರಲಿಲ್ಲ!! ಅದಕ್ಕಾಗಿ ಮಾಧ್ಯಮದವರು ಈ ಬಗ್ಗೆ ಡಿ.ಕೆ ಶಿವಕುಮಾರ್ರನ್ನು ಅಂಬರೀಶ್ ಯಾತಕ್ಕಾಗಿ ಹಾಜರಾಗಿಲ್ಲ ಕೇಳಿದಾಗ ಅವರು ಆರೋಗ್ಯ ಸರಿ ಇಲ್ಲ ಎಂದು ಉತ್ತರಿಸಿದ್ದರು!! ಅದನ್ನು ಕೇಳಿದ ಅಂಬರಿಶ್ ರೆಬಲ್ ಆಗಿ ಬಿಡುತ್ತಾರೆ!!.. ನನ್ನ ಪರ್ಸನಲ್ ವಿಷಯಕ್ಕೆ ಬಂದರೆ ಹುಷರ್!! ನನ್ನ ಆರೋಗ್ಯ ಸರಿ ಇಲ್ಲ ಎಂದು ಹೇಳಿದವರು ಯಾರು? ನನ್ನ ಆರೋಗ್ಯದ ಬಗ್ಗೆ ನೀವು ಹೇಳುವ ಅಗತ್ಯವಿಲ್ಲ ಇಡೀ ಕನ್ನಡ ಜನತೆಗೆ, ಅಭಿಮಾನಿಗಳಿಗೆ ನನ್ನ ಆರೋಗ್ಯದ ಬಗ್ಗೆ ತಿಳಿದಿದೆ ಎಂದು ಡಿಕಿಶಿ ವಿರುದ್ಧ ಅಂಬರೀಶ್ ಕಿಡಿ ಕಾರಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ತಮ್ಮ ಪಕ್ಷದಲ್ಲಿಯೇ ಬಿರುಕು ಮೂಡಿರುವುದು ನಿಜವಾಗಿಯೂ ಆಶ್ಚರ್ಯಕರವಾಗಿದೆ…

ಹೀಗಾಗಿ ಟಿಕೆಟ್ ವಿಚಾರವಾಗಿ ತುಂಬಾನೇ ತಲೆಕೊಡಿಸಿಕೊಂಡಿದ್ದ ಅಂಬರೀಶ್ ಕಾಂಗ್ರೆಸ್ ಜೊತೆ ಕೋಪಿಸಿಕೊಂಡಿದ್ದಾರೆ!! ಮಂಡ್ಯದಲ್ಲಿ ಸ್ಪರ್ಧಿಸಿದರೆ ನಾನು ಪಕ್ಕಾ ವಿನ್!! ಮಂಡ್ಯ ಜನರು ಕೈ ಬಿಡಲ್ಲ ಅಂತ ವಿಶ್ವಾಸ ಹೊಂದಿದ್ದ ರೆಬಲ್‍ಗೆ ಟಿಕೆಟ್ ವಿಚಾರ ಈಗ ತಲೆ ಕೆಡಿಸಿದ್ದು ತಾನು ಕಂಡ ಕನಸು ಈಗ ನುಚ್ಚು ನೂರಾಗುತ್ತಾ ಎಂಬ ಭಯ ಕಾದಿರುವ ಹಾಗೆ ಕಾಣುತ್ತಿದೆ!!

source: public tv

ಪವಿತ್ರ

Tags

Related Articles

Close