ಪ್ರಚಲಿತ

ದೆಹಲಿಯ ತುಘಲಕ್ ಕಾಲದ ಸಮಾಧಿಯಾಯ್ತು ಮಂದಿರ! ಸೈಂಟ್ ಸ್ಟೀಫನ್ ಕಾಲೇಜಿನ ಬಾಗಿಲಲ್ಲಿ ಬರೆದರು ‘ಮಂದಿರ್ ಯಹಿಂ ಬನೆಗಾ’ ಅಕ್ಷರ!! ಮುಸ್ಲಿಮರು ಮಸೀದಿಯೊಳಗಡೆಯೆ ನಮಾಜ್ ಮಾಡಿ ಎಂದಿತು ಕಟ್ಟರ್ ಸರಕಾರ!!!

ಹೌದು, ಹಿಂದೂಗಳು ಎಚ್ಚೆತ್ತುಕೊಂಡಿದ್ದಾರೆ. ಹಿಂದೂ ರಾಷ್ಟ್ರವಾದದ ಶಂಖನಾದ ಮೊಳಗಿದೆ. ಮತಾಂತರಿ-ಜಿಹಾದಿಗಳ ಬೆನ್ನು ಮೂಳೆ ಮುರಿಯಲು ಹಿಂದೂ ರಾಷ್ಟ್ರವಾದಕ್ಕಿದು ಸಕಾಲ. ಬರೋಬ್ಬರಿ ಏಳು ನೂರು ವರ್ಷಗಳಿಂದ ಒಗ್ಗಟ್ಟಿನ ಕೊರತೆಯಿಂದ ನರಳುತ್ತಿದ್ದ ಹಿಂದೂಗಳಲ್ಲಿ ಕೇವಲ ನಾಲ್ಕೇ ವರ್ಷಗಳಲ್ಲಿ ಈ ಪರಿಯ ಒಗ್ಗಟ್ಟು ಮೂಡಿದ್ದಾದರೂ ಹೇಗೆ? ಅಂದು ಶಂಕರ, ಮಧ್ವ, ರಾಮಾನುಜ, ಗೋರಖ, ಗುರುನಾನಕರ ಅವತಾರ ತಾಳಿ ಸನಾತನ ಧರ್ಮ ರಕ್ಷಣೆ ಮಾಡಲು ಧರೆಗಿಳಿದ ಭಗವಂತ ಇಂದು ಮೋದಿಯ ರೂಪದಲ್ಲಿ ಮತ್ತೆ ಧರೆಗಿಳಿದು ಬಂದರೆ? ಶತಮಾನಗಳಿಂದಲೂ ತಮ್ಮ-ತಮ್ಮಲ್ಲೇ ಜಗಳವಾಡಿಕೊಂಡಿದ್ದ ಹಿಂದೂಗಳ ಈ ಕೊರತೆಯನ್ನು ತಮ್ಮ ಸ್ವಾರ್ಥ ಸಾಧನೆಗೆ ಉಪಯೋಗಿಸಿಕೊಂಡು ಹಿಂದೂಗಳನ್ನು ತುಳಿದ ಮುಗಲ, ಬ್ರಿಟಿಷ ಮತ್ತು ಕಾಂಗ್ರೆಸ್-ಕಮ್ಯೂನಿಷ್ಟಿನ ಕಪಟ ತಂತ್ರ ಮುರಿದದ್ದಾದರೂ ಹೇಗೆ?

ಭಾರತವೀಗ ಹಿಂದೂ ರಾಷ್ಟ್ರವಾದದತ್ತ ವಾಲುತ್ತಿದೆ. ಗಾಂಧಿ, ಪಟೇಲ್, ಲಾಲ ಲಜಪತ್, ವೀರ ಸಾವರ್ಕರ್, ವಿವೇಕಾನಂದರ ಅಖಂಡ ಹಿಂದೂ ರಾಷ್ಟ್ರದ ಕನಸು ನನಸಾಗುತ್ತಲಿದೆ. ಈ ಕನಸನ್ನು ನನಸಾಗಿಸಲು ಪೂರಕವಾಗುವಂತಹ ಘಟನೆಗಳು ನಡೆಯುತ್ತಿರುವುದೆ ಇದಕ್ಕೆ ಕಾರಣ. ಇಲ್ಲಿಯವರೆಗೆ ನಾವು ಅರಬ್ಬಿನ ಮತಾಂಧರು ಈ ದೇಶದ ಮಂದಿರಗಳನ್ನು ಕೆಡವಿ ಅಲ್ಲಿ ಮಸೀದಿ-ಸಮಾಧಿ ಕಟ್ಟಿಸಿದ್ದನ್ನು ಕೇಳುತ್ತಿದೆವು ಆದರೆ ಮೊತ್ತ ಮೊದಲ ಬಾರಿಗೆ ತುಘಲಕನ ಕಾಲದ ಸಮಾಧಿಯೊಂದು ಮಂದಿರವಾಗಿ ಪರಿವರ್ತಿತವಾಗಿತುವುದನ್ನು ನೋಡುತ್ತಿದ್ದೇವೆ!! ಒಬ್ಬ ನೈಜ ಹಿಂದೂವಿಗೆ ಇದು ಎದೆ ತುಂಬಿ ಬರುವ ವಿಚಾರ.

ದಕ್ಷಿಣ ದೆಹಲಿಯ ಸಫ಼್ದರ್ ಜಂಗಿನ ಹುಮಾಯೂನ್ ಪುರದಲ್ಲಿ 15 ಶತಮಾನದಲ್ಲಿ ಕಟ್ಟಿದ್ದೆನ್ನಲಾದ ಸಮಾಧಿಯೊಂದು ಈಗ ಎರಡು ತಿಂಗಳ ಹಿಂದಷ್ಟೆ ಮಂದಿರವಾಗಿ ಬದಲಾಗಿದೆ. ಮಂದಿರಕ್ಕೆ ಕೇಸರಿ ಮತ್ತು ಬಿಳಿ ಬಣ್ಣ ಬಳಿಯಲಾಗಿದ್ದರೆ ಮಂದಿರದೊಳಗಡೆ ಹಿಂದೂ ದೇವರ ಮೂರ್ತಿಗಳಿವೆ. ಸ್ಮಾರಕದ ವಾಸ್ತುಕಲೆಯಿಂದ ಇದು ತುಘಲಕ್ ಕಾಲದ ಸಮಾಧಿಯೆಂದು ಹೇಳಲಾಗಿದೆ. ಮತಾಂಧರಿಗೆ ಸಂಬಂಧ ಪಟ್ಟ ಸಮಾಧಿಯೊಂದು ಮಂದಿರವಾದ ಸುದ್ದಿ ಕೇಳಿ ದೆಹಲಿ ಸರಕಾರ ಬೆಚ್ಚಿ ಬಿದ್ದಿದೆ. ದೆಹಲಿಯ ಉಪಮುಖ್ಯ ಮಂತ್ರಿ ಮನೀಷ್ ಸಿಸೋದಿಯಾ ಇದು ಸಮಾಜದ ಸಾಮರಸ್ಯ ಕೆಡಹುವ ವಿಚಾರ ಇಂಥದ್ದಕ್ಕೆಲ್ಲ ಪ್ರೋತ್ಸಾಹ ಕೊಡುವುದಿಲ್ಲ ಎಂದು ಕಿಡಿಕಾರಿದ್ದಾರೆ. ಒಂದು ಸರಿ ಹಿಂದೂಗಳು ಜಾಗೃತರಾದರೆಂದರೆ ಜಾತ್ಯಾತೀತ ಧೂಳೀಪಟವಾಗುತ್ತದೆನ್ನುವುದನ್ನು ಸಿಸೋದಿಯಾ ಅವರು ಮರೆತಿದ್ದಾರೆ.

ಇನ್ನು ಹಿಂದುತ್ವಕ್ಕೆ ಹೆಚ್ಚು ಒತ್ತು ಕೊಡುವ ಹರಿಯಾಣದ ಮನೋಹರ್ ಲಾಲ್ ಕಟ್ಟರ್ ಸರಕಾರ ಮುಸ್ಲಿಮರಿಗೆ ತಮ್ಮ ನಮಾಜನ್ನು ಮಸೀದಿ ಇಲ್ಲವೇ ಈದ್ಗಾದೊಳಗಡೆ ಮಾಡಬೇಕೆಂದು ಹೇಳಿದೆ. ಇತ್ತೀಚಿನ ದಿನಗಳಲ್ಲಿ ಮುಸ್ಲಿಮರು ಸಾರ್ವಜನಿಕ ಜಾಗಗಳಲ್ಲಿ ನಮಾಜು ಮಾಡುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ, ಇದರಿಂದ ರಾಜ್ಯದಲ್ಲಿ ಕಾನೂನು ಸುವ್ಯಸ್ಥೆಗೆ ಧಕ್ಕೆ ಆಗುತ್ತಿದೆ. ರಾಜ್ಯದ ಕಾನೂನು ಸುವ್ಯವಸ್ಥಿತವಾಗಿಡುವುದು ಸರಕಾರದ ಕರ್ತವ್ಯ ಆದ್ದರಿಂದ ಮುಸಲ್ಮಾನರು ಸಾರ್ವಜನಿಕ ಜಾಗಗಳಲ್ಲಿ ನಮಾಜು ಮಾಡದೆ ಮಸೀದೆಯೊಳಗಡೆ ಸಲ್ಲಿಸಬೇಕು ಎಂದು ಕಟ್ಟರ್ ಹೇಳಿದ್ದಾರೆ. ಗುರ್ಗಾಂವ್ ನಲ್ಲಿ ಮುಸ್ಲಿಮರು ನಮಾಜು ಸಲ್ಲಿಸುತ್ತಿದ್ದ ವೇಳೆ ಹಿಂದೂ ಸಂಘಟೆನೆಯೊಂದು ಘೋಷಣೆ ಕೂಗಿದ ಘಟನೆಯ ಬಳಿಕ ಖಟ್ಟರ್ ಈ ಹೇಳಿಕೆ ನೀಡಿದ್ದಾರೆ.

ಉತ್ತರ ಪ್ರದೇಶವಂತೂ ಸಂಪೂರ್ಣವಾಗಿ ಕೇಸರಿಮಯವಾಗುತ್ತಿದೆ. ಮುಖ್ಯಮಂತ್ರಿ ಯೋಗಿಯ ಕುರ್ಚಿಯಿಂದ ಹಿಡಿದು ಹಜ್ ಯಾತ್ರೆಗೆ ಹೋಗುವವರು ಹೆಸರು ನೋಂದಾಯಿಸಿಕೊಳ್ಳುವ ಹಜ್ ಕಟ್ಟಡದ ಗೋಡೆಯೂ ಭಗವಾ ಬಣ್ಣದಿಂದ ರಾರಾಜಿಸುತ್ತಿದೆ. ವಿಶ್ವವೆ ದಂಗಾಗಿ ನೋಡುವಂತೆ ಅಯೋಧ್ಯೆಯಲ್ಲಿ ದೀಪಾವಳಿ ಮತ್ತು ಮಥುರಾದಲ್ಲಿ ಹೋಳಿ ಹಬ್ಬ ಆಚರಿಸಲಾಗಿದೆ. ಯಾವ ಉತ್ತರಪ್ರದೇಶದಲ್ಲಿ “ಕಾಂವಡ” ಜಾತ್ರೆಯ ಸಮಯದಲ್ಲಿ ಹಿಂದೂ ಮೆರವಣಿಗೆಯ ಮೇಲೆ ಕಲ್ಲು ತೂರಲಾಗುತ್ತಿತ್ತೊ ಅಲ್ಲಿ ಇಂದು ಹೋಳಿ ಹಬ್ಬ ಆಚರಿಸಲು ನಮಾಜಿನ ಸಮಯದಲ್ಲೆ ವ್ಯತ್ಯಾಸ ಮಾಡಲಾಗುತ್ತಿದೆ!! ಇದು ಹಿಂದುತ್ವದ ಶಕ್ತಿ, ಇದು ಸನಾತನದ ಮಹಿಮೆ!!

ಮಿಶನರಿಗಳ ಅಡ್ಡಾ ಆದಂತಹ ದೆಹಲಿಯ ಸೈಂಟ್ ಸ್ಟೀಫನ್ ಕಾಲೇಜಿನ ಚಾಪೆಲಿನ ದ್ವಾರದಲ್ಲಿ “ಮಂದಿರ್ ಯಹಿಂ ಬನೇಗಾ”, “ಓಂ” ಎಂದು ಬರೆಯಲಾಗಿದೆ!! ಜಾತ್ಯಾತೀತ ಬ್ರಿಗೇಡ್ ನ ಎದೆಯಲ್ಲಿ ಅವಲಕ್ಕಿ ಕುಟ್ಟಿದಂತಹ ಅನುಭವವಾಗುತ್ತಿದೆ. ಲಿಬರಲ್ ಮಾಧ್ಯಮಗಳೆಲ್ಲ ಗೋಳೊ ಎಂದು ಅಳುತ್ತಿವೆ. ಹೌದು, ಅವರೆಲ್ಲ ಅಳಬೇಕು, ಕಳೆದ ಎಪ್ಪತ್ತು ವರ್ಷಗಳಿಂದ ಹಿಂದೂಗಳ ಕಣ್ಣೀರು ಹಾಕಿಸಿದವರೆಲ್ಲ ಎದೆ ಒಡೆದು ಕೊಂಡು ಅಳಬೇಕು. ಭಾರತದಲ್ಲಿ ಸೋಗಲಾಡಿ ಜಾತ್ಯಾತೀತರ ದಬ್ಬಾಳಿಕೆಯಿಂದ ನಲುಗಿ ಹೋಗಿದ್ದ ಹಿಂದೂಗಳಲ್ಲಿ ಇಂದು ಜೀವ ಸೆಲೆ ಒಸರುತ್ತಿದೆ. ಹಿಂದೂಗಳು ತಮ್ಮದೆ ದೇಶದಲ್ಲಿ ತಮ್ಮ ಅಸ್ತಿತ್ವಕ್ಕಾಗಿ ಹೆಣಗಾಡುತ್ತಿದ್ದಾರೆಂದರೆ ಎಂತಹ ದೌರ್ಭಾಗ್ಯದ ವಿಷಯವಿದು. ಮಿಶನರಿ ಮತ್ತು ಜಿಹಾದಿಗಳ ಮತಾಂತರ ದಂಧೆಯಿಂದ ತತ್ತರಿಸಿ ಹೋಗಿದ್ದ ಹಿಂದೂಗಳು ಇಂದು ಅವರ ವಿರುದ್ದ ಸೆಟೆದು ನಿಂತಿದ್ದಾರೆ. ಸರಕಾರಗಳಿಂದ ಸದಾ ತುಚ್ಚವಾಗಿ ಕಾಣಲ್ಪಟ್ಟು ಓಲೈಕೆ ರಾಜಕಾರಣ ನೋಡಿ-ನೋಡಿ ಹಿಂದೂಗಳು ಬೇಸತ್ತಿದ್ದಾರೆ. ತಮ್ಮನ್ನು ಒಡೆದು ಆಳುವವರ ವಿರುದ್ದ ತಿರುಗಿ ಬಿದ್ದಿದ್ದಾರೆ. ಹಿಂದೂಗಳ ರೌದ್ರ ರೂಪ ಕಂಡು “ಟೋಪಿ” ಹಾಕಿಕೊಂಡು ತಿರುಗಾಡುತ್ತಿದ್ದವರು “ಜನಿವಾರ ” ತೊಟ್ಟು “ನಾನು ಹಿಂದೂ” ಎಂದು ಕಪಟ ನಾಟಕವಾಡುತ್ತಿದ್ದಾರೆ.

ಆಂಧ್ರಪ್ರದೇಶದ ಕೆಸಲಿಂಗಯ್ಯಪಲ್ಲೆಯ ಜನರು ಮಿಶನರಿಗಳಿಂದ ತಮ್ಮ ಹಳ್ಳಿಯನ್ನು ರಕ್ಷಿಸಲು “ಇದು ಹಿಂದೂಗಳಿರುವ ಜಾಗ, ಇಲ್ಲಿ ಮತಾಂತರಿಗಳಿಗೆ ಪ್ರವೇಶವಿಲ್ಲ್” ಎಂದು ಬೋರ್ಡ್ ಬರೆಸಿದ್ದಾರೆ. ‘ರಾಮ ಹುಟ್ಟೇ ಇಲ್ಲ’ ಎಂದು ಅಂದು ಅಫಿಡವಿಟ್ ಸಲ್ಲಿಸಿದ್ದ ನಾಡಿನಲ್ಲಿ ಇಂದು ಹಿಂದೂಗಳು ಒಕ್ಕೊರಲಿನಿಂದ “ಜೈ ಶ್ರೀರಾಮ್” ಘೋಷ ವಾಕ್ಯ ಮೊಳಗುತ್ತಿದ್ದಾರೆ! ನ್ಯಾಯಯುತವಾಗಿ ತಮಗೆ ದೊರೆಯಬೇಕಾಗಿದ್ದ ಹಕ್ಕನ್ನು ಹಿಂದೂಗಳು ಇಂದು ಕೇಳಿ ಪಡೆಯುತ್ತಿದ್ದಾರೆ.

ಹಿಂದೂಗಳ ಹೃದಯದಲ್ಲಿ ಕಮರಿ ಹೋಗಿದ್ದ “ಹಿಂದುತ್ವ”ಕ್ಕೆ ನೀರೆರೆದು ಮತ್ತೆ ಚಿಗುರುವಂತೆ ಮಾಡಿದರು ಮೋದಿ. ತುಷ್ಟೀಕರಣ ರಾಜಕಾರಣಕ್ಕಾಗಿ “ಟೋಪಿ” ತೊಡುವುದನ್ನು ಸಾರಾಸಗಟಾಗಿ ನಿರಾಕರಿಸಿ ಹಣೆಗೆ ಕುಂಕುಮವಿಟ್ಟು, ಕೇಸರಿ ತೊಟ್ಟು ಮುಸ್ಲಿಂ ದೇಶಗಳಲ್ಲೂ ಮಂದಿರ ನಿರ್ಮಾಣ ಮಾಡಿಸಿದರು ಮೋದಿ!! ಮೋದಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವುದಿಲ್ಲ ಎನ್ನುವವರು ಕಿವಿ ಕೊಟ್ಟು ಕೇಳಿ, ಇಸ್ಲಾಂ ದೇಶದಲ್ಲೆ ಮಂದಿರ ನಿರ್ಮಾಣ ಮಾಡಿಸಿದ ಮೋದಿ, ರಾಮ ಜನ್ಮ ಭೂಮಿಯಲ್ಲಿ ಮಂದಿರ ನಿರ್ಮಿಸದಿರುತ್ತಾರೆಯೆ?

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಿಯೆ ತೀರುತ್ತಾರೆ ಮೋದಿ. ವಿಶ್ವದ ಕೋಟ್ಯಂತರ “ರಾಮ ಭಕ್ತರ” ಹಾರೈಕೆ ಅವರೊಂದಿಗಿದೆ. ಹಿಂದೂ ಪುನರುತ್ಥಾನದ ಪರ್ವ ಕಾಲದಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವುದನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ. ಐದು ನೂರು ವರ್ಷಗಳಿಂದ ಹಿಂದೂಗಳು ಕಾಣುತ್ತಿರುವ ಕನಸು ನನಸಾಗುವ ಶುಭ ಘಳಿಗೆ ಬಂದೆ ಬರಲಿದೆ….

“ಮಂದಿರ್ ವಹೀಂ ಬನೇಗಾ ಜಹಾಂ ರಾಮ್ ಕಾ ಜನ್ಮ್ ಹುವಾ ಹೈ”

ಜೈ ಶ್ರೀರಾಮ್…

-ಶಾರ್ವರಿ

Tags

Related Articles

Close