ಪ್ರಚಲಿತ

ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ಲೇಡಿ ಫೈರ್ ಬ್ರಾಂಡ್! ದಕ್ಷ ಅಧಿಕಾರಿಯ ಎಚ್ಚರಕ್ಕೆ ಛಿದ್ರವಾಗುತ್ತಾ ಕಾಂಗ್ರೆಸ್ ಕೋಟೆ..!?

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಧಿಕಾರಿಗಳು, ಸಾಮಜಿಕ ಹೋರಾಟಗರರು,ಸಿನಿ ತಾರೆಯರು ಸಹಿತ ಸಮಾಜದ ಇತರ ಸಂಗದವರು ಸಿಡಿದೇಳುವುದು ಸಾಮಾನ್ಯವಾಗಿದೆ ಬಿಡಿ. ಆದರೆ ಇದೀಗ ಓರ್ವ ಮಹಿಳಾ ಜಿಲ್ಲಾಧಿಕಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ನೇರ್ತತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದರೆ. ತನಗಾದ ಅನ್ಯಯದ ಕುರಿತಾಗಿ ನ್ಯಾಯದ ಮೊರೆ ಹೋಗಲು ನಿರ್ಧರಿಸಿದ್ದಾರೆ.

ಸಿಡಿದೆದ್ದ ಲೇಡಿ ಫೈರ್ ಬ್ರಾಂಡ್..!

ರೋಹಿನಿ ಸಿಂಧೂರಿ. ದಕ್ಷ ಜಿಲ್ಲಾಧಿಕಾರಿ. ಲೇಡಿ ಫೈರ್ ಬ್ರಾಂಡ್ ಎಂದೇ ಖ್ಯಾತಿಯನ್ನು ಪಡೆದಿರುವ ಜಿಲ್ಲಾಧಿಕಾರಿ ರೋಹಿನಿ ಸಿಂಧೂರಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಕಿರುಕುಳವನ್ನು ಅನುಭವಿಸುತ್ತಲೇ ಬಂದವರು. ಹಾಸನ ಜಿಲ್ಲಾಧಿಕಾರಿಯಾಗಿರುವ ರೋಹಿನಿ ಸಿಂಧೂರಿಯವರು ಆರಂಭದಿಂದಲೂ ಕಾಂಗ್ರೆಸ್ ಸರ್ಕಾರದಿಂದ ಒಂದಲ್ಲಾ ಒಂದು ಕಿರಿ ಕಿರಿಯನ್ನು ಅನುಭವಿಸುತ್ತಲೇ ಬಂದವರಾಗಿದ್ದಾರೆ. ದರೆ ದಕ್ಷ ಜಿಲ್ಲಾಧಿಕಾರಿಯಾಗಿದ್ದ ರೋಹಿನಿ ಸಿಂಧೂರಿಯವರು ಸರ್ಕಾರದ ವಿರುದ್ಧವೇ ಸದಾ ತೊಡೆ ತಟ್ಟಿ ಜಿದ್ದಿಗೆ ಬಿದ್ದು ಕೆಲಸ ಮಾಡುತ್ತಿದ್ದುದು ಸರ್ಕಾರಕ್ಕೆ ಭಾರೀ ಸವಾಲಾಗಿ ಪರಿಣಮಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ನಡೆಸುತ್ತಿದ್ದ ಕುತಂತ್ರಕ್ಕೆ ಪ್ರತಿಯಾಗಿ ತನ್ನದೇ ಶೈಲಿಯಲ್ಲಿ ಆಡಳಿತವನ್ನು ನಡೆಸುತ್ತಿದ್ದರು ಹಾಸನ ಜಿಲ್ಲಾಧಿಕಾರಿ ರೋಹಿನಿ ಸಿಂಧೂರಿ.

ಅವಧಿಗೂ ಮುನ್ನ ವರ್ಗಾವಣೆಗೆ ಸಿಂಧೂರಿ ಗರಂ..!

ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನನ್ನು ಅವಧಿಗೂ ಮುನ್ನ ವರ್ಗಾವಣೆ ಮಾಡಿದ್ದಾಗಿ ಹಾಗೂ ಇದನ್ನು ಪ್ರಶ್ನಿಸಿ ಜಿಲ್ಲಾಧಿಕಾರಿ ರೋಹಿನಿ ಸಿಂಧೂರಿ ನ್ಯಾಯದ ಮೊರೆ ಹೋಗಿದ್ದರು. ದಕ್ಷ ಜಿಲ್ಲಾಧಿಕಾರಿ ಎಂಬ ಹಣೆಪಟ್ಟಿಯನ್ನು ಹೊತ್ತುಕೊಂಡಿದ್ದ ರೋಹಿನಿ ಸಿಂಧೂರಿ ಸಿಎಂ ಸಿದ್ದರಾಮಯ್ಯ ವಿರುದ್ಧವೇ ಕಾನೂನು ಸಮರವನ್ನು ಮುಂದುವರೆಸುತ್ತಾರೆ. ಈ ಬಗ್ಗೆ ಸಿಎಟಿ ಬಳಿ ನ್ಯಾಯವನ್ನು ಕೇಳಿದ್ದು ಸಿಎಟಿ ರೋಹಿನಿ ಸಿಂಧೂರಿಯವರ ವರ್ಗಾವಣೆಯನ್ನು ತಡೆ ಹಿಡಿದಿತ್ತು.

ಮತ್ತೆ ಸಮರ ಸಾರಿದ ರೋಹಿನಿ ಸಿಂಧೂರಿ..!

ಸಿಎಟಿ ಮೊರೆ ಹೋಗಿದ್ದ ರೋಹಿನಿ ಸಿಂಧೂರಿಯವರು ಪ್ರಕರಣವನ್ನು ಮತ್ತೆ ಮೇಲ್ಮನವಿ ಸಲ್ಲಿಸಿದ್ದಾರೆ. ಸಿಎಟಿಯಲ್ಲಿ ಪೂರಕವಾದ ನ್ಯಾಯ ಸಿಗದೆ ಅಸಮಧಾನಗೊಂಡ ಜಿಲ್ಲಾಧಿಕಾರಿ ರೋಹಿನಿ ಸಿಂಧೂರಿ ಇದೀಗ ಹೈಕೋರ್ಟ್ ಮೊರೆ ಹೋಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮತ್ತೆ ತನ್ನನ್ನು ಅವಧಿಪೂರ್ವ ವರ್ಗಾವಣೆಗೆ ಒತ್ತಡ ಹೇರುತ್ತಿದೆ ಎಂದು ಹೈಕೋರ್ಟ್ ಮೊರೆ ಹೋಗಿದ್ದಾರೆ.

ಹೈಕೋರ್ಟ್ ಗೆ ನೀಡಿದ್ದ ಅರ್ಜಿಯಲ್ಲೇನಿದೆ…?

ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ ಅರ್ಜಿಯಲ್ಲಿ ಜಿಲ್ಲಾಧಿಕಾರಿ ರೋಹಿನಿ ಸಿಂಧೂರಿಯವರು ಸರ್ಕಾರದ ನೀತಿಗಳನ್ನು ಖಂಡಿಸಿದೂದಾರೆ. ”ಓರ್ವ ಜಿಲ್ಲಾಧಿಕಾರಿಗೆ ಕನಿಷ್ಠ ಎರಡು ವರ್ಷ ಒಂದೇ ಕಡೆಯಲ್ಲಿ ಕಾರ್ಯನಿರೂವಹಿಸುವುದು ಕಾನೂನು ಪ್ರಕಾರದ್ದಾಗಿದೆ. ಆದರೆ ಕರ್ನಾಟಕ ಸರಕಾರ ಮತ್ರ ತನ್ನನ್ನು ಅವಧಿಪೂರ್ವವಾಗಿಯೇ ವರ್ಗಾವಣೆಯನ್ನು ಮಾಡುತ್ತಿದೆ. ತಾನು ಹಾಸನದಲ್ಲಿ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ ಒಂದು ವರ್ಷ ಆಗಿದೆಯಷ್ಟೇ. ಆದರೆ ಅವಧಿಗಿಂತಲೂ ಮುನ್ನವೇ ಸರ್ಕಾರ ತನ್ನನ್ನು ವರ್ಗಾವಣೆಯನ್ನು ಮಾಡುತ್ತಿದೆ. ಸರ್ಕಾರ ಯಾವುದೇ ಕಾನೂನು ಪಾಲನೆ ಮಾಡುತ್ತಿಲ್ಲ. ಈ ಬಗ್ಗೆ ಸರ್ಕಾರ ತಾರತಮ್ಯ ವ್ಯಕ್ತಪಡಿಸುತ್ತಿದೆ. ಇದಕ್ಕೆ ತಾನು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿರುವುದೂ ಕಾರಣವಾಗಿದೆ. ಇದೀಗ ಅವಧಿಪೂರ್ವ ವರ್ಗಾವಣೆಗೆ ಆದೇಶಗಳು ಬರುತ್ತಿದ್ದು, ಇದಕ್ಕೆ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರ ಒತ್ತಡವೇ ಕಾರಣ” ಎಂದು ಹೈಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದ್ದಾರೆ. ಈ ಮೂಲಕ ಈ ಬಾರಿ ಸಲ್ಲಿಸಿದ್ದ ಅರ್ಜಿಯಲ್ಲಿ ನೇರವಾಗಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಮಂತ್ರಿಗಳನ್ನೇ ಸಿಂಧೂರಿ ಟಾರ್ಗೇಟ್ ಮಾಡಿದ್ದಾರೆ.

ಮಹಾ ಮಜ್ಜನವೇ ಕಾರಣವಾಯ್ತಾ..?

ಹೌದು!!

ಜಿಲ್ಲಾಧಿಕಾರಿ ರೋಹಿನಿ ಸಿಂಧೂರಿ ಹಾಗೂ ಕಾಂಗ್ರೆಸ್ ಸರ್ಕಾರದ ನಡುವೆ ತೆರೆ ಮರೆಯಲ್ಲಿ ಸರ್ಕಸ್ ನಡೆಯುತ್ತಿದ್ದ ಗುದ್ದಾಟ ಭುಗಿಲೆದ್ದಿದ್ದೇ ಹಾಸನದಲ್ಲಿ ನಡೆದಿದ್ದ ಮಹಾಮಜ್ಜನ ಕಾರ್ಯಕ್ರಮದಲ್ಲಿ. ಆವರೆಗೂ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಮಹಾ ಮಜ್ಜನ ಕಾರ್ಯಕ್ರಮಕ್ಕೂ ಮುನ್ನ ಸ್ಪೋಟಕೊಂಡಿತ್ತು. ಹಾಸನ ಜಿಲ್ಲೆಯ ಉಸ್ತುವಾರಿ ಸಚಿವ ಎ.ಮಂಜು ಮಹಾಮಜ್ಜನ ಕಾರ್ಯಕ್ರಮಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬಂದಿದ್ದ ಅನುದಾನದಲ್ಲಿ ಕಮಿಷನ್ ಕೇಳಿದ್ದರು ಎನ್ನಲಾಗಿದೆ. ಬರೋಬ್ಬರಿ 300ಕೋಟಿಗೂ ಅಧಿಕ ಅನುದಾನಗಳಿಂದ ಕಮಿಷನ್ ಕೇಳಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ವಿರುದ್ಧ ದಕ್ಷ ಜಿಲ್ಲಾಧಿಕಾರಿ ರೋಹಿನಿ ಸಿಂಧೂರಿ ಸಿಡಿದೆದ್ದಿದ್ದರು. ಯಾವುದೇ ಕಾರಣಕ್ಕೂ ಕಮಿಷನ್ ವ್ಯವಹಾರ ನಡೆಸಲು ತಾನು ಬಿಡೋದಿಲ್ಲ ಎಂಬ ಹಠವನ್ನು ಜಿಲ್ಲಾಧಿಕಾರಿ ರೋಹಿನಿ ಸಿಂಧೂರಿ ತಳೆದಿದ್ದರು. ಈ ಕಾರಣಕ್ಕಾಗಿಯೇ ಎ ಮಂಜು ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಒತ್ತಡ ಹೇರಿದ್ದರು. ಈ ಒತ್ತಡದ ಅನುಸಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ರೋಹಿನಿ ಸಿಂಧೂರಿಯವರನ್ನು ಎರಡೆರಡು ಬಾರಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದರು. ಆದರೆ ಸರ್ಕಾರ ಹೇಳಿದ ಮಾತ್ರಕ್ಕೆ ಓಡಿ ಹೋಗಲು ತಾನು ಉಳಿದ ಜಿಲ್ಲಾಧಿಕಾರಿಗಳ ಹಾಗೆ ಅಲ್ಲ ಎಂಬ ಸಂದೇಶವನ್ನೂ ರೋಹಿನಿ ಸಿಂಧೂರಿಯವರು ನೀಡಿದ್ದಾರೆ.

ಒಟ್ಟಾರೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಇದೀಗ ಬಹಿರಂಗವಾಗಿಯೇ ತೊಡೆ ತಟ್ಟಿದ್ದ ರೋಹಿನಿ ಸಿಂಧೂರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಎ ಮಂಜು ವಿರುದ್ಧ ಸಮರ ಸಾರಿದ್ದಾರೆ. ಈ ಮೂಲಕ ಮುಂದಿನ ವಿಧಾನ ಸಭಾ ಚುನಾವಣೆಗೆ ತಾನು ಬಿಡುಗಡೆಗೊಳಿಸಿದ್ದ ಅನುದಾನದಲ್ಲಿ ಕಮಿಷನ್ ಹೊಡೆದು ಖರ್ಚು ಮಾಡುವ ಉದ್ಧೇಶವನ್ನು ಹೊಂದಿದ್ದಕ್ಕೆ ತಡೆ ನೀಡಿದ್ದ ರೋಹಿನಿ ಸಿಂಧೂರಿಯವರನ್ನು ವರ್ಗಾವಣೆ ಮಾಡಲು ಹೊರಟಿದ್ದ ಸರ್ಕಾರಕ್ಕೆ ಸಿಂಧೂರಿ ಕಪಾಳ ಮೋಕ್ಷ ಮಾಡಿದ್ದಾರೆ.

-ಸುನಿಲ್ ಪಣಪಿಲ

Tags

Related Articles

Close