ಪ್ರಚಲಿತ

ಸಿದ್ದರಾಮಯ್ಯ ರಾಜೀನಾಮೆ..! ರಾಜಕೀಯ ಆಟ ಮುಗಿಸಿದ ಸಿದ್ದು..! ಕೊನೆಗೂ ಅಂತ್ಯವಾಯಿತು ಅಹಂಕಾರದ ಸರಕಾರ..!

ರಾಜ್ಯದಲ್ಲಿ ಕಳೆದ 5 ವರ್ಷಗಳಿಂದ ಅಹಂಕಾರದ ಮದದಿಂದ ತೇಲುತ್ತಾ ಅಧಿಕರ ನಡೆಸುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯರ ಆಡಳಿತ ಇಂದಿಗೆ ಮುಕ್ತಾಯವಾಗಿದೆ. ಶತಾಯಗತಾಯ ಈ ಬಾರಿ ಕರ್ನಾಟಕವನ್ನು ಗೆಲ್ಲಲೇಬೇಕು ಎನ್ನುವ ಹಠದಲ್ಲಿದ್ದ ಕಾಂಗ್ರೆಸ್ ನಾಯಕರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ಸ್ವಶಕ್ತಿಯ ಮೇಲೆ ಅಧಿಕಾರಕ್ಕೆ ಬರಲು ಸಾಧ್ಯವಾಗದೆ ಹಿಂಬಾಗಿಲ ಮೂಲಕ ರಾಜಕೀಯ ನಡೆಸುತ್ತಿದೆ.

ಮೊದಮೊದಲು ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲಿ ಸೋಲು ಖಚಿತ ಎಂಬ ಸ್ಪಷ್ಟ ಸಂದೇಶ ರವಾನೆಯಾದ ಕೂಡಲೇ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರವಮನ್ನು ಬಿಟ್ಟು ಬಾದಾಮಿ ವಿಧಾನ ಸಭಾ ಕ್ಷೇತ್ರಕ್ಕೆ ಪಲಾಯನವಾದ ನಡೆಸಿದ್ದರು. ಆದರೆ ಅಲ್ಲಿ ಶ್ರೀ ರಾಮುಲು ಎದುರಾಳಿಯಾಗಿದ್ದರು. ಆದರೂ ಕೊನೇ ಘಳಿಗೆಯಲ್ಲಿ ಹಣಗಳನ್ನು ಹಂಚುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರವನ್ನು ಕೇವಲ 1600 ಮತಗಳ ಅಂತರದಿಂದ ಗೆದ್ದುಬಿಟ್ಟು ಕೇವಲ ಶಾಸಕ ಸ್ಥಾನಕ್ಕೆ ಸೀಮಿತರಾದರು.

ಇದೀಗ ಕಾಂಗ್ರೆಸ್ ತನ್ನ ಅಧಿಕಾರವನ್ನು ಅಧಿಕೃತವಾಗಿ ಕಳೆದುಕೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದಾರೆ. ರಾಜಭವನಕ್ಕೆ ತೆರಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಪಾಲರಿಗೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಈವರೆಗೂ ನಡೆಸುತ್ತಿದ್ದ ಅಂಧ ದರ್ಬಾರ್‍ಗೆ ಪೂರ್ಣ ವಿರಾಮವನ್ನು ಇಟ್ಟಿದ್ದಾರೆ.

Related image

ಕಳೆದ 5 ವರ್ಷಗಳಿಂದ ಹಿಂದೂ ಕಾರ್ಯಕರ್ತರ ಹತ್ಯೆ ಹಾಗೂ ರೈತರ ಆತ್ಮಹತ್ಯೆಗಳನ್ನು ನೋಡುತ್ತಲೇ ಏನೂ ಆಗಿಲ್ಲವೆಂಬಂತೆ ಅಧಿಕಾರ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯರ ತುಘಲಕ್ ಸರ್ಕಾರ ಇಂದಿಗೆ ಅಂತ್ಯವಾಗಿದೆ. ಅದೆಷ್ಟೋ ಮಾತೆಯರ ಶಾಪ ಹಾಗೂ ಯುವಕರ ಕೂಗು ಮತ್ತು ಆಸ್ತಿಕರ ಪ್ರತಿಭಟನೆಯ ಕಿಚ್ಚೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರಿಗೆ ಸರ್ಕಾರ ಅಂತ್ಯ ಹಾಡಲು ಪರಿಣಾಮಕಾರಿಯಾಗಿದೆ.

ಆದರೆ ಈ ಮಧ್ಯೆ 77 ಸ್ಥಾನಗಳನ್ನು ಪಡೆದುಕೊಂಡು ಹೀನಾಯ ಸೋಲನ್ನು ಅನುಭವಿಸಿಕೊಂಡಿರುವ ಕಾಂಗ್ರೆಸ್ ಪಕ್ಷ 39 ಸ್ಥಾನಗಳನ್ನು ಪಡೆದುಕೊಂಡ ಜನತಾ ದಳವನ್ನು ಅಪ್ಪಿಕೊಳ್ಳಲು ಮುಂದಾಗಿದೆ. ಈಗಾಗಲೇ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಜನತಾ ದಳದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರಿಗೆ ಕರೆ ಮಾಡಿ ನಾವು ನಿಮ್ಮೊಂದಿಗೆ ಕೈ ಜೋಡಿಸುತ್ತೇವೆ ಎಂದು ಹೇಳಿದ್ದಾರೆ.

ಇದಿಷ್ಟು ಮಾತ್ರವಲ್ಲದೆ ಕಾಂಗ್ರೆಸ್ ನ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಅನೇಕ ಕಾಂಗ್ರೆಸ್ ನಾಯಕರು ಜನತಾ ದಳಕ್ಕೆ ಬಹಿರಂಗವಾಗಿಯೇ ಬೇಷರತ್ ಬೆಂಬಲ ನೀಡಿದ್ದಾರೆ.

ಭಾರತೀಯ ಜನತಾ ಪಕ್ಷಕ್ಕೆ ಅಧಿಕೃತ ಸ್ಥಾನ ಸಿಗಲಿಲ್ಲ ಎಂಬ ಕೊರಗು ಕಾರ್ಯಕರ್ತರಿಗೆ ಇದ್ದರೂ ಕಾಂಗ್ರೆಸ್ ದುರಾಡಳಿತ ಅಂತ್ಯವಾಯಿತು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯರ ಅಂಧ ದರ್ಭಾರ್ ಕೊನೆಗೊಂಡಿತು ಎಂಬ ಸಂತಸ ಕಾರ್ಯಕರ್ತರಲ್ಲಿ ಮನೆ ಮಾಡಿದೆ.

-ಸುನಿಲ್ ಪಣಪಿಲ

Tags

Related Articles

Close