ಪ್ರಚಲಿತ

ಕೇಂದ್ರದ ಮೋದಿ ಕೇರ್ ಯೋಜನೆಗೆ ಪ್ರತಿಯಾಗಿ ಸಿದ್ದು ಮಾಡಿದ ಪ್ಲಾನಿಂಗ್ ಏನು ಗೊತ್ತಾ?! ಮತ್ತೆ ಕಾಪಿ ಮಾಡಿದ ಕಾಂಗ್ರೆಸ್!!

ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಬಜೆಟ್ ನಲ್ಲಿ ಘೋಷಿಸಿರುವ ನೂತನ ಆರೋಗ್ಯ ವಿಮೆ ಯೋಜನೆ(ಮೋದಿ ಕೇರ್)ಯಿಂದ 10 ಕೋಟಿ ಬಡ ಕುಟುಂಬಗಳ 50 ಕೋಟಿ ಜನರಿಗೆ ಆರೋಗ್ಯ ಸುರಕ್ಷತೆ ಲಭ್ಯವಾಗಲಿದೆ ಎನ್ನುವ ವಿಚಾರ ಹೊರಬಿದ್ದಂತೆಯೇ ಇತ್ತ ನರೇಂದ್ರ ಮೋದಿಯವರನ್ನು ಕ್ವಾಪಿ ಮಾಡಲು ಸಜ್ಜಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರ್ನಾಟಕದ ಜನತೆಗೂ ಸಿದ್ದುಕೇರ್ ಜಾರಿಗೊಳಿಸಲು ಸಿದ್ಧತೆಗಳನ್ನು ನಡೆಸುತ್ತಿದ್ದಾರೆ.

ಈಗಾಗಲೇ ಹಗರಣಗಳ ಮೇಲೆ ಹಗರಣಗಳನ್ನು ಮಾಡುತ್ತಲೇ ಬರುತ್ತಿರುವ ಸಿದ್ದರಾಮಯ್ಯ ಸರ್ಕಾರ ಭಾಗ್ಯಗಳ ಮೇಲೆ ಭಾಗ್ಯಗಳನ್ನು ನೀಡಿದ್ದಾಯಿತು. ಕೇಂದ್ರ ಸರ್ಕಾರದಿಂದ ಬಡ ಕುಟುಂಬಗಳಿಗೆ ಬರುತ್ತಿದ್ದ ಅಕ್ಕಿಯನ್ನು ಸಿದ್ದರಾಮಯ್ಯ ಸರ್ಕಾರ ತಮ್ಮದೇ ಹೊಸ ಯೋಜನೆಯೆಂದು ಅದಕ್ಕೆ ಹಸಿವು ಮುಕ್ತ ಕರ್ನಾಟಕಕ್ಕಾಗಿ ಅನ್ನಭಾಗ್ಯವನ್ನು ಜಾರಿಗೊಳಿಸಿದ್ದರು. ಆದರೆ ಅದೇ ಅನ್ನಭಾಗ್ಯದ ಅಕ್ಕಿಯಲ್ಲಿಯೇ ಕಾಂಗ್ರೆಸ್ಸಿಗರು ತಮ್ಮ ಪ್ರಯೋಜನಕ್ಕೆ ಬಳಸಿಕೊಂಡು ಹಣ ಮಾಡಿದವರೇ ಹೆಚ್ಚು!!

ಆದರೆ ಇದೀಗ ವಿಶ್ವದ ಅತಿ ದೊಡ್ಡ ಸರ್ಕಾರಿ ಆರೋಗ್ಯ ವಿಮಾ ಯೋಜನೆ ಎನ್ನಿಸಿಕೊಂಡಿರುವ “ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ” (ಮೋದಿ ಕೇರ್)ಯನ್ನು ಮುಂದಿನ ವಿತ್ತೀಯ ವರ್ಷದಿಂದ (18-19) ಜಾರಿಗೆ ತರುವುದಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದರೆ, ಇತ್ತ ನಮ್ಮ ಸಿದ್ದರಾಮಯ್ಯ ಸರ್ಕಾರ ಕೇಂದ್ರ ಸರ್ಕಾರದ ಯೋಜನೆಯಲ್ಲಿ ತಮ್ಮ ಪಾಲನ್ನು ಪ್ರದರ್ಶಿಸಿಕೊಳ್ಳಲು ‘ಸಿದ್ದು ಕೇರ್’ ಜಾರಿ ಮಾಡಲು ಅಣಿಯಾಗಿದ್ದಾರೆ.

ಹೌದು… ರಾಜ್ಯದ ಪ್ರತಿಯೊಬ್ಬರಿಗೂ ಸರ್ಕಾರಿ ಆಸ್ಪತ್ರೆಯಲ್ಲಿ ಗುಣಮಟ್ಟದ ಉಚಿತ ಆರೋಗ್ಯ ಸೇವೆ ನೀಡುವ “ಯುನಿವರ್ಸಲ್ ಹೆಲ್ತ್ ಸ್ಕೀಮ್” ಯೋಜನೆ ಈ ತಿಂಗಳ ಮೂರನೇ ವಾರದಿಂದ ರಾಜ್ಯಾದ್ಯಂತ ಜಾರಿಗೆ ಬರಲಿದೆ. ಯೋಜನೆ 2-3 ಹಂತದಲ್ಲಿ ಜಾರಿ ಆಗಲಿದ್ದು, 2 ತಿಂಗಳಲ್ಲಿ ಸಂಪೂರ್ಣ ಅನುಷ್ಠಾನ ಆಗಲಿದೆ ಎಂದು ಆರೋಗ್ಯ ಸಚಿವ ರಮೇಶಕುಮಾರ್ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ, ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಆರೋಗ್ಯ ಸೇವೆಗೆ ಸಂಬಂಧಿಸಿದಂತೆ ಈವರೆಗೆ ಇದ್ದ ವಿವಿಧ ಯೋಜನೆಗಳ ಬದಲಾಗಿ ಒಂದೇ ಯೋಜನೆಯಡಿ ಜಾರಿಗೆ ತರಲಾಗುವುದು. ಯೋಜನೆಗೆ ಸುಮಾರು 1200 ಕೋಟಿ ರು. ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ ಎಂದು ಹೇಳಿದ್ದಾರೆ!!

ಆಧಾರ್ ಕಾರ್ಡ್ ಆಧಾರದ ಮೇಲೆ ಸರ್ಕಾರಿ ಆಸ್ಪತ್ರೆಗಳಲ್ಲಿ ನೋಂದಾಯಿಸಿಕೊಂಡರೆ ಅವರಿಗೆ ಯೋಜನೆಯ ಕಾರ್ಡ್ ನೀಡಿ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ಒಂದು ವೇಳೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸಾ ಸೌಲಭ್ಯ ಇಲ್ಲದಿದ್ದಲ್ಲಿ ಮಾತ್ರ ಸರ್ಕಾರಿ ಆಸ್ಪತ್ರೆಯ ವೈದ್ಯರ ಶಿಫಾರಸಿನ ಮೇರೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುವುದು. ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಯಾವುದೇ ಕಾರಣಕ್ಕೂ ಚಿಕಿತ್ಸಾ ವೆಚ್ಚದ ಮರುಪಾವತಿಗೆ ಅವಕಾಶ ಇರುವುದಿಲ್ಲ ಎಂದು ವಿವರಿಸಿದ್ದಾರೆ.

“ಅಮೆರಿಕದಲ್ಲಿ ಜಾರಿಯಲ್ಲಿರುವ ಒಬಾಮಕೇರ್ ಯಶಸ್ಸು ಕಂಡಿದೆಯೋ ಇಲ್ಲವೋ ಆದರೆ ಮೋದಿಕೇರ್ ಯಶಸ್ಸು ಗಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ”-ಬಜೆಟ್ ಮಂಡನೆ ಬಳಿಕ ವಿತ್ತ ಸಚಿವ ಅರುಣ್ ಜೇಟ್ಲಿ ನೀಡಿರುವ ಸ್ಪಷ್ಟೋಕ್ತಿ ಇದು. ವಿಶ್ವದ ಬೃಹತ್ ಆರೋಗ್ಯ ವಿಮೆ ಯೋಜನೆ ಎಂದೇ ಹೇಳಲಾಗುತ್ತಿರುವ ಮೋದಿಕೇರ್ ಅಥವಾ ರಾಷ್ಟ್ರೀಯ ಆರೋಗ್ಯ ಸುರಕ್ಷಾ ಯೋಜನೆಯನ್ನು ಜಾರಿಗೆ ತರಲು ವರ್ಷಕ್ಕೆ ಅಂದಾಜು 11,000 ಕೋಟಿ ರೂ. ವೆಚ್ಚವಾಗಲಿದೆ.

ಈ ಯೋಜನೆ ಮೂಲಕ 10 ಕೋಟಿ ಕುಟುಂಬಗಳ 50 ಕೋಟಿ ಜನರಿಗೆ ವಾರ್ಷಿಕ 5 ಲಕ್ಷ ರೂಪಾಯಿಗಳ ಆರೋಗ್ಯ ವಿಮೆ ನೀಡುವುದು ಸರ್ಕಾರದ ಗುರಿ. ಇದಕ್ಕಾಗಿ ಸರ್ಕಾರ 2018-19ರಲ್ಲಿ 2000 ಕೋಟಿ ರೂಪಾಯಿ ಮೀಸಲಿರಿಸಿದೆ. ಈಗಾಗಲೇ ಕೆಲ ರಾಜ್ಯ ಸರ್ಕಾರಗಳು ಆರೋಗ್ಯ ವಿಮೆಯನ್ನು ಒದಗಿಸುತ್ತಿವೆಯಾದರೂ, ಅದರ ಮೊತ್ತ ಸಣ್ಣದು ಮತ್ತು ವ್ಯವಸ್ಥಿತ ರೀತಿಯಲ್ಲಿ ಕಾರ್ಯರೂಪಕ್ಕೆ ಬಂದಿಲ್ಲ. ನೂತನ ಯೋಜನೆಯಡಿ ಕುಟುಂಬವೊಂದಕ್ಕೆ ಆರೋಗ್ಯ ವಿಮೆ ಮಾಡಿಸಲು ಅಂದಾಜು 1,100 ರೂ. ತಗುಲಲಿದೆ ಎಂದು ಹೇಳಲಾಗಿದೆ.

ಆದರೆ ರಾಜ್ಯ ಸರ್ಕಾರದ “ಯುನಿವರ್ಸಲ್ ಹೆಲ್ತ್ ಸ್ಕೀಮ್” ಯೋಜನೆ” (ಸಿದ್ದು ಕೇರ್) ಯು ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಫೆಬ್ರವರಿ ಅಂತ್ಯಕ್ಕೆ ಎಲ್ಲ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಸೌಲಭ್ಯ ಸಿಗಲಿದೆ. ಜೊತೆಗೆ ಐಸಿಯು, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ಅತ್ಯಾಧುನಿಕವಾದ ಡಿಜಿಟಲ್ ಎಕ್ಸ್‍ರೆ ಸೌಲಭ್ಯ ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಎಂಆರ್‍ಐ ಮತ್ತು ಸಿಟಿ ಸ್ಕ್ಯಾನ್ ಸೌಲಭ್ಯ ಮಾರ್ಚ್ ವೇಳೆಗೆ ಕಲ್ಪಿಸಲಾಗುವುದು. ಜೊತೆಗೆ ಬೆಂಗಳೂರಿನ ಸಂಜಯ ಗಾಂಧಿ ಆಸ್ಪತ್ರೆಯ ಉಸ್ತುವಾರಿಯಲ್ಲಿ ಹಂತ ಹಂತವಾಗಿ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಸಂಪೂರ್ಣ ಮಂಡಿ ಚಿಪ್ಪು ಬದಲಾವಣೆ ಚಿಕಿತ್ಸಾ ಸೌಲಭ್ಯ ಸಿಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಅಷ್ಟೇ ಅಲ್ಲದೇ, ಹೃದ್ರೋಗ, ಕ್ಯಾನ್ಸರ್, ಲಿವರ್, ಕಿಡ್ನಿ ಮುಂತಾದ ಆರೋಗ್ಯ ಸಮಸ್ಯೆಗಳಿಗೆ ಅತ್ಯಾಧುನಿಕವಾದ ಚಿಕಿತ್ಸೆ ನೀಡುವ ಸಾಮರ್ಥ್ಯ ಸರ್ಕಾರಕ್ಕೆ ಶೇ.30ರಷ್ಟು ಮಾತ್ರ ಇದೆ. ಉಳಿದ ಶೇ.70ರಷ್ಟು ಸೇವೆಯನ್ನು ಖಾಸಗಿ ವಲಯಗಳು ನೀಡಿವೆ. ಈ ವಲಯಗಳಲ್ಲೂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯುವಂತೆ ಮಾಡುವ ಜವಾಬ್ದಾರಿ ಇದೆ. ಹಾಗೆಯೇ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶೇ. 100 ರಷ್ಟು ಸೇವೆ ಸಿಗುತ್ತಿದೆ. ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ.70 ರಷ್ಟು ಸೇವೆ ಸಿಗುತ್ತಿವೆ, ಉಳಿದ ಶೇ.30ರಷ್ಟು ಖಾಸಗಿ ವಲಯಗಳು ನೀಡುತ್ತಿವೆ ಎಂದು ವಿವರಿಸಿದ್ದಾರೆ.

ಆದರೆ ಜನರಿಗೆ ಉತ್ತಮ ಆರೋಗ್ಯ ಚಿಕಿತ್ಸೆ ನೀಡಬೇಕೆಂಬುದು ಸರ್ಕಾರದ ಮೂಲತತ್ವ, ಈ ತತ್ವ ಒಪ್ಪಿಕೊಂಡು ಮುಂದೆ ಬರುವ ಖಾಸಗಿಯವರ ಜೊತೆ ಸರ್ಕಾರ ಕೈ ಜೋಡಿಸಿ ಆರೋಗ್ಯ ಸೇವೆಯನ್ನು ನೀಡಲಿದೆ. ಉಡುಪಿ ಹಾಗೂ ಕೋಲಾರದಲ್ಲಿ ಅನಿವಾಸಿ ಉದ್ಯಮಿ ಬಿ.ಆರ್. ಶೆಟ್ಟಿ ಅವರು ಈ ತತ್ವದ ಅಡಿ ಹಣ ಹೂಡಿದ್ದಾರೆ ಎಂದು ಇದೇ ವೇಳೆ ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ಅಂತೂ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಯೋಜನೆಯನ್ನು ಕಾಪಿ ಹೊಡೆಯಲು ಯತ್ನಿಸುತ್ತಿರುವುದಲ್ಲದೇ, ಅನ್ನಭಾಗ್ಯ ಯೋಜನೆಯ ಹಾಗೆಯೇ ಸಿದ್ದರಾಮಯ್ಯ ಸರ್ಕಾರ ಕೇಂದ್ರ ಸರ್ಕಾರದ ಮೋದಿ ಕೇರ್ ಯೋಜನೆಯಿಂದ ಲಾಭ ಪಡೆಯುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಕೃಪೆ: ಸುವರ್ಣ ನ್ಯೂಸ್

– ಅಲೋಖಾ

Tags

Related Articles

Close