ಪ್ರಚಲಿತ

ಮೊದಲ ದಿನವೇ ನೀತಿ ಸಂಹಿತೆ ಉಲ್ಲಂಘಿಸಿದ ಸಿದ್ದರಾಮಯ್ಯ: ಮಾಜಿ ಮುಖ್ಯಮಂತ್ರಿಗೆ ಕಾನೂನಿನ ಅರಿವೇ ಇಲ್ಲವಾ?

ಕರ್ನಾಟಕದಲ್ಲಿ ಚುನಾವಣಾ ದಿನಾಂಕ ಘೋಷಣೆಯಾಗಿದೆ. ಮೇ ತಿಂಗಳ ೧೦ ರಂದು ಚುನಾವಣೆ ಮತ್ತು ೧೩ ರಂದು ಫಲಿತಾಂಶ ಘೋಷಿಸುವುದಾಗಿ ಚುನಾವಣಾ ಆಯೋಗ ತಿಳಿಸಿದೆ. ಈ ಆದೇಶದ ಜೊತೆಗೆಯೇ ಚುನಾವಣಾ ನೀತಿಸಂಹಿತೆಯೂ ಜಾರಿಯಾಗುವ ವಿಚಾರ ಎಲ್ಲರಿಗೂ ತಿಳಿದ ಸಂಗತಿ.

ಹೀಗಿದ್ದರೂ, ಚುನಾವಣಾ ಘೋಷಣೆಯ ಬಳಿಕ, ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸಹ ಕಾಂಗ್ರೆಸ್ ನೀತಿ ಸಂಹಿತೆ ಉಲ್ಲಂಘಿಸಿ ವಿವಾದ ಸೃಷ್ಟಿ ಮಾಡಿಕೊಂಡಿದೆ. ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ, ಅದನ್ನು ಉಲ್ಲಂಘನೆ ಮಾಡುವ ಮೂಲಕ ಸದ್ಯ ಸುದ್ದಿಯಾಗಿದ್ದಾರೆ.

ಚುನಾವಣಾ ನೀತಿಸಂಹಿತೆ ಜಾರಿಯಲ್ಲಿದ್ದಾಗ ಯಾವುದೇ ಪಕ್ಷವೂ ಮತದಾರರಿಗೆ ಆಮಿಷ ಒಡ್ಡುವಂತಿಲ್ಲ. ಹೀಗಿದ್ದರೂ ಸಿದ್ದಣ್ಣ ಮಾತ್ರ ತಮಗೂ ಚುನಾವಣಾ ನೀತಿ ಸಂಹಿತೆಗೂ ಯಾವುದೇ ಸಂಬಂಧ ಇಲ್ಲ ಎನ್ನುವ ಹಾಗೆ ರೋಡ್ ಶೋ ವೇಳೆ ತಮಟೆ ಬಡಿಯುವವರಿಗೆ ಹಣ ನೀಡಿ, ನಿಯಮ ಉಲ್ಲಂಘನೆ ಮಾಡಿದ್ದಾರೆ. ವರುಣ ಕ್ಷೇತ್ರದ ಬಿಳುಗುಳಿ ಗ್ರಾಮದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಪ್ರತಿಮೆ ಅನಾವರಣ, ಕಪಿಲಾ ನದಿಗೆ ನಿರ್ಮಾಣ ಮಾಡಲಾದ ಸೇತುವೆ ಉದ್ಘಾಟನೆ ವೇಳೆ ರೋಡ್ ಶೋ ದಲ್ಲಿ ಭಾಗಿಯಾದ ಸಿದ್ದರಾಮಯ್ಯ ತಮಟೆ ಬಾರಿಸುವವರಿಗೆ ಹಣ ನೀಡಿ ಸದ್ಯ ಇಕ್ಕಟ್ಟಿಗೆ ಸಿಲುಕಿದ್ದಾರೆ.

ತಮ್ಮ ಜೀವನದಲ್ಲಿ ಹಲವಾರು ಚುನಾವಣೆಗಳನ್ನು ಎದುರಿಸಿರುವ ಸಿದ್ದು ಅವರಿಗೆ ಚುನಾವಣೆ ಘೋಷಣೆಯಾದ ಬಳಿಕ ನೀತಿ ಸಂಹಿತೆ ಜಾರಿಯಲ್ಲಿರುವುದು ತಿಳಿಯದೇ ಇದ್ದದ್ದು ಅಥವಾ ತಿಳಿದೂ ತಿಳಿದೂ ನೀತಿ ಸಂಹಿತೆ ಉಲ್ಲಂಘಿಸಿರುವುದು ಅವರ ಅಹಂಕಾರಕ್ಕೆ ಹಿಡಿದ ‘ಕೈ’ಗನ್ನಡಿ.

Tags

Related Articles

Close