ಪ್ರಚಲಿತ

ನೀತಿ ಸಂಹಿತೆಯನ್ನು ಲೆಕ್ಕಿಸಬೇಡಿ ಎಂದು ಬಹಿರಂಗ ಕರೆ ಕೊಟ್ಟ ಸಿದ್ಧರಾಮಯ್ಯ! ಸಿಎಂ, ಲೇಡಿ ಡಿಸಿ ಗೆ ಹೇಳಿದ್ದೇನು ಗೊತ್ತೇ?!

ಅಧಿಕಾರ ಕೈಗೆ ಸಿಕ್ಕರೆ ಮನುಷ್ಯ ಅದ್ಯಾವ ರೀತಿಯಲ್ಲಿ ಬದಲಾಗುತ್ತಾನೆ ಎಂಬುದು ಸಿದ್ದರಾಮಯ್ಯನವರನ್ನು ನೋಡಿ ತಿಳಿಯಬಹುದು. ಯಾಕೆಂದರೆ ಕಳೆದ ಐದು ವರ್ಷಗಳಲ್ಲಿ ಮುಖ್ಯಮಂತ್ರಿ ಪಟ್ಟ ಅಲಂಕರಿಸಿಕೊಂಡು ಅಹಂಕಾರದಿಂದ ವರ್ತಿಸುತ್ತಿರುವ ಸಿದ್ದರಾಮಯ್ಯನವರು, ತಮ್ಮ ಪಕ್ಷದ ಹಿರಿಯರ ಮಾತಿಗೇ ಬೆಲೆ ಕೊಡುತ್ತಿಲ್ಲ, ಇನ್ನು ಕಾನೂನಿಗೆ ಬೆಲೆ ಕೊಡುತ್ತಾರೆಯೇ.? ಇಂತಹ ಮಾತು ಮೂಡುವುದು ಸಹಜ, ಯಾಕೆಂದರೆ ಸಿದ್ದರಾಮಯ್ಯನವರ ಸರ್ವಾಧಿಕಾರದ ಆಡಳಿತಕ್ಕೆ ಯಾವ ಅಧಿಕಾರಿಗಳನ್ನೂ ಕ್ಯಾರೇ ಅನ್ನುತ್ತಿಲ್ಲ ಎಂಬುದೇ ವಿಪರ್ಯಾಸ.!

ರಾಜ್ಯ ವಿಧಾನಸಭಾ ಚುನಾವಣೆಯ ದಿನಾಂಕ ಪ್ರಕಟವಾಗಿದೆ. ಇಂದಿನಿಂದಲೇ ರಾಜ್ಯಾದ್ಯಂತ ನೀತಿ ಸಂಹಿತೆ ಜಾರಿಯಾಗಿದೆ. ಪ್ರತಿಯೊಂದು ಪಕ್ಷಕ್ಕೂ , ಪ್ರತಿಯೊಬ್ಬ ವ್ಯಕ್ತಿಗೂ ಈ ನೀತಿ ನಿಯಮ ಅನ್ವಯವಾಗುತ್ತದೆ. ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ ಶಿಕ್ಷೆಯೂ ಅನುಭವಿಸಬೇಕಾಗುತ್ತದೆ. ಆದರೆ ಇಂದು ಸಿದ್ದರಾಮಯ್ಯನವರು ಮಾತ್ರ ಇದ್ಯಾವುದಕ್ಕೂ ಕ್ಯಾರೇ ಅನ್ನದೆ ದರ್ಪ ಮೆರೆದಿದ್ದಾರೆ.!

ಮಹಿಳಾ ಡಿಸಿ ಕಿವಿಯಲ್ಲಿ ಸಿಎಂ ಗುಟ್ಟು..!

ಇಂದು ಚಿಕ್ಕಬಳ್ಳಾಪುರದ ನಂದಿ ಗ್ರಾಮದಲ್ಲಿ ನಿರ್ಮಾಣವಾದ ನೂತನ ಮೆಗಾಡೈರಿ ಉದ್ಘಾಟನೆ ಮಾಡಲು ಆಗಮಿಸಿದ ಸಿದ್ದರಾಮಯ್ಯನವರು , ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಕೇವಲ ಘಟಕವನ್ನು ವೀಕ್ಷಣೆ ಮಾಡಿ ಹೊರನಡೆದರು. ಈ ವೇಳೆ ಅಲ್ಲೇ ಇದ್ದ ಡಿಸಿ ಸಿದ್ದರಾಮಯ್ಯನವರಿಗೆ ನೀತಿ ಸಂಹಿತೆ ಜಾರಿಯಾದ ವಿಚಾರ ಗಮನಕ್ಕೆ ತಂದರು. ಆದರೆ ಅದ್ಯಾವುದಕ್ಕೂ ಗಮನ ಕೊಡದ ಸಿದ್ದರಾಮಯ್ಯನವರು, ‘ನೀತಿ ಸಂಹಿತೆ, ಯಾರಿಗಮ್ಮಾ ನೀತಿ ಸಂಹಿತೆ, ನಮಗೇನೂ ಆಗೋಲ್ಲಾ ಊಟ ಮಾಡಿ ಹೋಗುತ್ತೇನೆ’ ಎಂದು ಮಹಿಳಾ ಡಿಸಿಯ ತಲೆ ಸವರಿಕೊಂಡು ಹೇಳಿದರು. ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿ ಆಗಿದ್ದೂ ಕೂಡಾ ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದು ಅಹಂಕಾರದ ನಡೆಯನ್ನು ಎತ್ತಿ ತೋರಿಸುತ್ತದೆ.

ಸಿದ್ದರಾಮಯ್ಯನವರಿಂದ ಮೊದಲ ನೀತಿ ಸಂಹಿತೆ ಉಲ್ಲಂಘನೆ.!

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇಂದಿನಿಂದಲೇ ರಾಜ್ಯಾದ್ಯಂತ ನೀತಿ ಸಂಹಿತೆ ಜಾರಿಯಾಗಿದೆ. ಮೇ ತಿಂಗಳಲ್ಲಿ ನಡೆಯುವ ಚುನಾವಣೆಗೆ ಇಂದಿನಿಂದ ಎಲ್ಲಾ ನಿಯಮಗಳು ಅನ್ವಯಿಸುತ್ತವೆ. ಆದರೆ ಕಾಂಗ್ರೆಸ್ ಈ ನೀತಿ ನಿಯಮಗಳನ್ನು ಗಾಳಿಯಲ್ಲಿ ತೂರಿಬಿಡುತ್ತಿದೆ. ಇಂದು ಜೆಡಿಎಸ್ ನಿಂದ ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮಯ್ಯನವರ ಸಮ್ಮುಖದಲ್ಲೇ ಸೇರ್ಪಡೆಯಾದ ಕೆ ವಿ ನಾಗರಾಜ್ , ಇಂದು ಭರ್ಜರಿ ಕಾರ್ಯಕ್ರಮ ಏರ್ಪಡಿಸಿ ಪಕ್ಷದ ಕಾರ್ಯಕರ್ತರಿಗೆ ಬಾಡೂಟ ಏರ್ಪಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಸ್ವತಃ ಸಿದ್ದರಾಮಯ್ಯನವರೇ ಪಾಲ್ಗೊಂಡಿದ್ದು , ಯಾವುದೇ ನೀತಿಯನ್ನು ಅನುಸರಿಸಲಿಲ್ಲ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಈ ರೀತಿ ನಡೆದುಕೊಳ್ಳುತ್ತಿರುವುದು ಅವರ ವ್ಯಕ್ತಿತ್ವವನ್ನು ತೋರಿಸಯತ್ತದೆ.!

ನೀತಿ ಸಂಹಿತೆ ಜಾರಿಯಾದ ಮೊದಲ ದಿನವೇ ಸಿದ್ದರಾಮಯ್ಯನವರು ಸೇರಿದಂತೆ ಕಾಂಗ್ರೆಸ್ ಮುಖಂಡರು ಈ ರೀತಿ ಕಾನೂನು ಕೈಗೆತ್ತಿಕೊಂಡು ವರ್ತಿಸುತ್ತಿರುವುದು , ಕಾಂಗ್ರೆಸ್ ನ ಆಡಳಿತದ ವೈಖರಿಯನ್ನು ಪ್ರದರ್ಶಿಸುತ್ತದೆ. ಯಾಕೆಂದರೆ ಸಿದ್ದರಾಮಯ್ಯನವರು ಅಧಿಕಾರ ವಹಿಸಿಕೊಂಡ ದಿನದಿಂದಲೇ ದರ್ಪದಿಂದ ನಡೆದುಕೊಳ್ಳುತ್ತಾ ಬಂದವರು..! ದೀಪ ಆರೋ ಹೊತ್ತಿಗೆ ಜೋರಾಗಿ ಉರಿಯುತ್ತದೆ ಎಂಬ ಮಾತು ಸಿದ್ದರಾಮಯ್ಯನವರ ಸದ್ಯದ ವರ್ತನೆಗೆ ಹೇಳಿ ಮಾಡಿಸಿದಂತಿದೆ.!

source: public tv

–ಅರ್ಜುನ್

Tags

Related Articles

Close