ಪ್ರಚಲಿತ

ಪೊಲೀಸರ ಜಾತಿ ಕೇಳಿದ ಸಿದ್ದರಾಮಯ್ಯ! ಮತ್ತೆ ಒಡೆದು ಆಳುವ ನೀತಿ ಮುಂದುವರೆಸಿದ ರಾಜ್ಯ ಸರಕಾರ!

ಜಾತಿ ಜಾತಿ ಜಾತಿ.! ಜಾತಿ ಭೇದ ಮಾಡದೇ, ಯಾವುದೇ ತಾರತಮ್ಯ ಮಾಡದೇ ರಾಜ್ಯದ ಜನತೆಯನ್ನು ಒಂದೇ ದೃಷ್ಟಿಯಿಂದ ನೋಡಬೇಕಾಗಿದ್ದ ಸರಕಾರವೇ ಜನರನ್ನು ಧರ್ಮ ಜಾತಿಯ ಆಧಾರದಲ್ಲಿ ಅಳೆಯುತ್ತಿದ್ದು, ತನ್ನ ರಾಜಕೀಯ ಲಾಭಕ್ಕಾಗಿ ಇಡೀ ರಾಜ್ಯವನ್ನೇ ನರಕ ಮಾಡಲು ಹೊರಟಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ.! ಈವರೆಗೆ ಕರ್ನಾಟಕ ಎಂದೂ ನೋಡಿರದ ಆಡಳಿತವನ್ನು ಇದೀಗ ಸಿದ್ದರಾಮಯ್ಯ ಸರಕಾರದಿಂದ ನೋಡಬೇಕಾಗಿ ಬಂತು. ಅಧಿಕಾರ ತಮ್ಮ ಕೈಯಲ್ಲಿ ಇದೆ ಎಂಬ ಕಾರಣಕ್ಕಾಗಿ ತಮಗೆ ಬೇಕಾದ ರೀತಿಯಲ್ಲಿ ನಿರ್ಧಾರ ಕೈಗೊಂಡು ಸರ್ವಾಧಿಕಾರದ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯನವರಿಗೆ ಸಿದ್ದರಾಮಯ್ಯನವರೇ ಸಾಟಿ..!

ರಾಜ್ಯದ ಜನತೆಯ ರಕ್ಷಣೆ ಮಾಡಬೇಕಾಗಿದ್ದ ಪೊಲೀಸರಿಗೆ ಇಂದು ಕರ್ನಾಟಕದಲ್ಲಿ ರಕ್ಷಣೆ ಇಲ್ಲ ಎಂದರೆ ನಮ್ಮ ರಾಜ್ಯದ ಆಡಳಿತ ಯಾವ ದಿಕ್ಕಿನಲ್ಲಿ
ಸಾಗುತ್ತಿದೆ ಎಂದು ಅರಿವಾಗುತ್ತದೆ. ಯಾಕೆಂದರೆ ತಮ್ಮ ರಾಜಕೀಯ ಲಾಭವನ್ನು ಮಾತ್ರ ತಲೆಯಲ್ಲಿ ಇಟ್ಟುಕೊಂಡಿರುವ ಸಿದ್ದರಾಮಯ್ಯನವರು ಇದೀಗ ಕಣ್ಣಿಟ್ಟಿರುವುದು ಪೊಲೀಸ್ ವ್ಯವಸ್ಥೆಯ ಮೇಲೆ.

ಪೊಲೀಸರಿಗೆ ಜಾತಿ ಕಂಟಕ..!

ಕರ್ನಾಟಕ ಪೊಲೀಸ್ ಎಂದರೆ ಸಾಕು ರಾಷ್ಟ್ರೀಯ ಮಟ್ಟದಲ್ಲಿ ಅಪರಾಧಿಗಳು ಬೆಚ್ಚಿ ಬೀಳುವಂತೆ ಮಾಡಿದ ಒಂದು ಕಾಲವಿತ್ತು. ಆದರೆ ಅವೆಲ್ಲವನ್ನೂ ಎಳ್ಳು ನೀರು ಬಿಟ್ಟು ಹಾಳು ಮಾಡಿದ ಕೀರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲಬೇಕು. ಯಾಕೆಂದರೆ ಪೊಲೀಸ್ ಅಧಿಕಾರಿಗಳಿಗೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಲು ಬಿಡದ ರಾಜ್ಯ ಸರಕಾರ ಪ್ರತಿಯೊಂದು ವಿಚಾರದಲ್ಲೂ ಪೊಲೀಸರ ಮೇಲೆ ಒತ್ತಡ ಹೇರಿ , ಪೊಲೀಸ್ ವ್ಯವಸ್ಥೆಯನ್ನೇ ದುರ್ಬಲಗೊಳಿಸುತ್ತಿದೆ. ಈಗಾಗಲೇ ಲಿಂಗಾಯತ ಮತ್ತು ವೀರಶೈವ ಧರ್ಮವನ್ನು ವಿಭಜಿಸಿ ಇಡೀ ಕರ್ನಾಟಕ ಹೊತ್ತಿ ಉರಿಯುವಂತೆ ಮಾಡಿದ ಸಿದ್ದರಾಮಯ್ಯನವರು ಇದೀಗ ಪೊಲೀಸರ ಜಾತಿ ವಿಚಾರಣೆ ಮಾಡುತ್ತಿರುವ ವಿಚಾರ ಬಹಿರಂಗಗೊಂಡಿದೆ.!

ಪ್ರತಿಯೊಂದರಲ್ಲೂ ಜಾತಿ ಆಧಾರಿತ ರಾಜಕೀಯ ಮಾಡುತ್ತಿರುವ ಸಿದ್ದರಾಮಯ್ಯನವರು ಪೊಲೀಸ್ ಅಧಿಕಾರಿಗಳ ಜಾತಿಯನ್ನೂ ಇದೀಗ ವಿಚಾರಣೆ ಮಾಡುತ್ತಿದ್ದು , ಚುನಾವಣಾ ಹೊಸ್ತಿಲಲ್ಲೇ ಮತ್ತೊಂದು ವಿವಾದಾತ್ಮಕ ನಿರ್ಧಾರ ಕೈಗೊಳ್ಳಲು ಸಜ್ಜಾಗಿದ್ದಾರೆ.!

ಸೆಕ್ಯಲರ್ ಸರ್ಕಾರದಿಂದ ಮತ್ತೊಂದು ವಿವಾಧ..!

ಅಧಿಕಾರ ವಹಿಸಿಕೊಂಡ ದಿನದಿಂದಲೇ ಜಾತಿ ರಾಜಕೀಯ ನಡೆಸುತ್ತಿರುವ ಸಿದ್ದರಾಮಯ್ಯನವರು ಇದೀಗ ಕಾನೂನು ಕಾಯುವ ಪೊಲೀಸರ ವಿಚಾರದಲ್ಲೂ ಜಾತಿ ಗಣತಿ ಮಾಡುತ್ತಿದ್ದು ಸಿಎಂ ರ ಈ ನಡೆ ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಹಿಂದೂಗಳನ್ನು ಕಂಡರೆ ಉರಿದು ಬೀಳುವ ಸಿದ್ದರಾಮಯ್ಯನವರು ತಮ್ಮ ರಾಜಕೀಯ ಲಾಭಕ್ಕಾಗಿ ಈಗಾಗಲೇ ಹಿಂದೂ ಧರ್ಮವನ್ನು ಒಡೆಯುವ ಕೆಲಸ ಮಾಡಿದ್ದು, ಲಿಂಗಾಯತ ಹಾಗೂ ವೀರಶೈವ ಧರ್ಮವನ್ನು ವಿಭಜನೆ ಮಾಡುವ ಮೂಲಕ ಇಡೀ ಹಿಂದೂಗಳ ಕೆಂಗಣ್ಣಿಗೆ ಗುರಿಯಾದರು. ಈ ಘಟನೆಯ ಕಿಚ್ಚು ಇನ್ನೂ ರಾಜ್ಯದಲ್ಲಿ ಹೊತ್ತಿ ಉರಿಯುತ್ತಿದ್ದು , ಇದೀಗ ಮತ್ತೊಂದು ನಿರ್ಧಾರದಿಂದ ಕರ್ನಾಟಕ ಪೊಲೀಸ್ ವ್ಯವಸ್ಥೆಯನ್ನೂ ಸಂಪೂರ್ಣವಾಗಿ ಬಲಹೀನ ಮಾಡಲು ತಯಾರಿ ನಡೆಸಿದ್ದಾರೆ.

ಒಂದೇ ದಿನದಲ್ಲಿ ಮಾಹಿತಿ ಸಂಗ್ರಹ..!

ಮಾರ್ಚ್ ೧೪ರಂದು ಡಿಜಿಪಿ ಕಛೇರಿಯಿಂದ ಮುಖ್ಯಸ್ಥರಿಗೆ ಸಂದೇಶ ಕಳುಹಿಸಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ದಾಖಲಾತಿ ಹಾಗೂ ಸರ್ಕಾರದ ಪತ್ರಗಳಲ್ಲಿ ಇರುವಂತೆ ೨೦೧೪ ರ ಫೆಬ್ರವರಿ ವರೆಗೆ ಆಯಾ ವ್ಯಾಪ್ತಿಯ ಠಾಣೆ, ವೃತ್ತ ಕಛೇರಿ, ಉಪ ವಿಭಾಗ ಹಾಗೂ ಘಟಕಗಳಲ್ಲಿ ಸೇವೆ ಸಲ್ಲಿಸುತ್ತಿರುವ ಏ,ಬಿ,ಸಿ ಮತ್ತು ಡಿ ವರ್ಗಗಳ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಜಾತಿವಾರು ಮಾಹಿತಿಯನ್ನು ನಿಗದಿತ ನಮೂನೆಗಳನ್ನು ಭರ್ತಿ ಮಾಡಿ ಕೂಡಲೇ ಸರಕಾರಕ್ಕೆ ಸಲ್ಲಿಸಬೇಕೆಂದು ಸೂಚಿಸಲಾಗಿದೆ.

ಲಿಂಗಾಯತ ಮತ್ತು ವೀರಶೈವ ಧರ್ಮದ ವಿಭಜನೆಗೆ ಕೇಂದ್ರ ಶಿಫಾರಸು ಮಾಡಿದರೆವ ಚುನಾವಣೆ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಲ್ಲಿ ಇರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಾವ ರೀತಿ ಪ್ರತಿಕ್ರಯಿಸಬಹುದು? ಮತ್ತು ಅಧಿಕಾರಿಗಳ ಈ ನಡೆಯಿಂದ ಚುನಾವಣೆಗೆ ಏನಾದರು ಪ್ರಭಾವ ಬೀಳಬಹುದೇ? ಎಂಬ ಲೆಕ್ಕಾಚಾರ ಇಟ್ಟುಕೊಂಡಿರುವ ಸಿದ್ದರಾಮಯ್ಯನವರು ಈ ರೀತಿ ಪೊಲೀಸರ ಜಾತಿ ಗಣತಿ ಮಾಡುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.!

ಸಿದ್ದರಾಮಯ್ಯನವರಿಂದ ಚುನಾವಣಾ ಗಿಮಿಕ್..!

ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವುದರಿಂದ ಮತದಾರರ ಮೇಲೆ ಕಣ್ಣಿಟ್ಟಿರುವ ಸಿದ್ದರಾಮಯ್ಯನವರು ಇದೀಗ ಜಾತಿ ಆದಾರದಲ್ಲಿ ಜನರನ್ನು ವಿಂಗಡಿಸಲು ಪ್ರಯತ್ನಿಸುತ್ತಿದ್ದಾರೆ. ಅದೇ ಕಾರಣಕ್ಕಾಗಿ ಪೊಲೀಸರ ಜಾತಿ ಗಣತಿ ಮಾಡುತ್ತಿದ್ದು , ಆಯಾ ವರ್ಗದ ಜನರ ಮೇಲೆ ಪೊಲೀಸ್ ರನ್ನು ನೇಮಕ ಮಾಡಿ ಆಯಾ ಭಾಗದ ಜನರನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಲಿಂಗಾಯತ ಮತ್ತು ವೀರಶೈವ ಧರ್ಮದ ವಿಭಜನೆಯ ಕುರಿತು ಅಭಿಪ್ರಾಯ ಸಂಗ್ರಹಿಸಲು ಈ ರೀತಿ ಜಾತಿ ಕೇಳುತ್ತಿದ್ದಾರೆ ಎಂಬ ಅನುಮಾನವೂ ಹೆಚ್ಚಾಗಿದ್ದು , ಸ್ವತಃ ಪೊಲೀಸ್ ಅಧಿಕಾರಿಗಳೇ ಗೊಂದಲಕ್ಕೀಡಾಗಿದ್ದಾರೆ. ಸಿದ್ದರಾಮಯ್ಯನವರ ನಿರ್ಧಾರಗಳಿಂದ ಪೊಲೀಸ್ ಅಧಿಕಾರಿಗಳು ಇದೀಗ ತಮ್ಮ ಜಾತಿ ವಿಚಾರವಾಗಿ
ಪ್ರಶ್ನಿಸುತ್ತಿರುವ ಸರಕಾರದ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ.!

ಒಟ್ಟಾರೆಯಾಗಿ ಸಿದ್ದರಾಮಯ್ಯನವರ ಅರ್ಥವಿಲ್ಲದ ನಿರ್ಧಾರದಿಂದ ರಾಜ್ಯದ ಜನತೆಯ ಜೊತೆಗೆ ಜನರ ರಕ್ಷಕರಾದ ಪೊಲೀಸರಿಗೂ ಇದೀಗ ತಲೆನೋವಾಗಿದ್ದು , ಜಾತಿ ಕೇಳುವ ಕಾಂಗ್ರೆಸ್ ಸರಕಾರದ ವಿರುದ್ಧ ಛೀಮಾರಿ ಹಾಕಿದ್ದಾರೆ. ಕೇವಲ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಹೊಸ ಹೊಸ ನಿರ್ಧಾರ ಕೈಗೊಳ್ಳುವ ಸಿದ್ದರಾಮಯ್ಯನವರ ಈ ಆಡಳಿತ ದೇಶದ ಯಾವ ರಾಜ್ಯದಲ್ಲೂ ಕಾಣಲು ಸಿಗುವುದಿಲ್ಲ. ಚುನಾವಣೆಗೆ ಮತದಾರರನ್ನು ಸೆಳೆಯುವ ಸಿದ್ದರಾಮಯ್ಯನವರ ಈ ನಿರ್ಧಾರ ಕಾಂಗ್ರೆಸ್ ಗೆ ಉರುಳಾಗಿ ಪರಿಣಮಿಸುವುದು ಖಂಡಿತ..!

–ಅರ್ಜುನ್

Tags

Related Articles

Close