ಪ್ರಚಲಿತ

ಶ್ರೀರಾಮ‌ ಪ್ರಾಣ ಪ್ರತಿಷ್ಠೆ ಲೋಕಾರ್ಪಣೆಗೆ ಸಿಖ್ಖರ ಸಂಭ್ರಮ ಹೇಗಿರಲಿದೆ ಗೊತ್ತಾ?

ಅಯೋಧ್ಯೆಯ ಶ್ರೀರಾಮ ಮಂದಿರ ಲೋಕಾರ್ಪಣೆ, ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠೆ ಕೇವಲ ಹಿಂದೂಗಳಿಗೆ ಮಾತ್ರವೇ ಸಂಭ್ರಮವಲ್ಲ. ದೇಶದಲ್ಲಿರುವ ಇತರ ಧರ್ಮಗಳ ಜನರೂ ಈ ಐತಿಹಾಸಿಕ ಕ್ಷಣವನ್ನು ಸಂಭ್ರಮಿಸಲು ಸಜ್ಜಾಗಿದ್ದಾರೆ ಎನ್ನುವುದು ಭಾರತದಲ್ಲಿನ ಏಕತೆ, ಭಾವೈಕ್ಯತೆಗೆ ಹಿಡಿದ ಕೈಗನ್ನಡಿ.

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆಯ ದಿನದಂದು, ಅಯೋಧ್ಯೆಯ ಗುರುದ್ವಾರ್‌ನ ಬ್ರಹ್ಮಕುಂಡದಲ್ಲಿರುವ ‌ಸಿಖ್ ಸಮುದಾಯದ ಜನರು ಅಖಂಡ ಪಥವನ್ನು ಆಯೋಜನೆ ಮಾಡಲು ಸಜ್ಜಾಗಿದ್ದಾರೆ.

19 – 21 ರ ವರೆಗೆ ರಾಮ ಮಂದಿರದ ಲೋಕಾರ್ಪಣೆಯ ಹಿನ್ನೆಲೆಯಲ್ಲಿ ಮೂರು ದಿನಗಳ ‘ಅಖಂಡ ಪಥ್’ ವನ್ನು ಆಯೋಜನೆ ಮಾಡಲು ಸಿದ್ಧತೆ ಮಾಡಿದ್ದಾರೆ. ಭಾರತದ ವಿವಿಧ ಭಾಗಗಳಲ್ಲಿ ಹಂಚಿ ಹೋಗಿರುವ ಸಿಖ್ಖರು ಈ ಅಖಂಡ ಪಥದಲ್ಲಿ ಭಾಗವಹಿಸಲಿರುವುದಾಗಿ ಮೂಲಗಳು ಮಾಹಿತಿ ನೀಡಿವೆ.

ಈ ಬಗ್ಗೆ ಬಿಜೆಪಿಯ ರಾಷ್ಟ್ರೀಯ ವಕ್ತಾರ ಆರ್. ಪಿ. ಸಿಂಗ್ ಮಾಹಿತಿ ನೀಡಿದ್ದು, ಇದು ಅಯೋಧ್ಯೆಯ ರಾಷ್ಟ್ರ ಮಂದಿರದಲ್ಲಿ ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠೆಯ ಅಂಗವಾಗಿ ಆಯೋಜನೆ ಮಾಡಿರುವುದಾಗಿ ತಿಳಿಸಿದ್ದಾರೆ. ಭಗವಾನ್ ಶ್ರೀರಾಮ, ಅಯೋಧ್ಯೆ ಮತ್ತು ಸಿಖ್ಖರ ನಡುವಿನ ಸಂಬಂಧಕ್ಕೆ ದೊಡ್ಡ ಐಹಿತ್ಯ ಇದೆ. 1510 ರಲ್ಲಿ ಸಿಖ್ಖರ ಗುರುನಾನಕ್ ದೇವ್ ಜಿ ಅವರು ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿದ್ದರು. ಸುಪ್ರೀಂ ಕೋರ್ಟ್ ಇದನ್ನು ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಿದೆ. ನಿಹಾಂಗ್ಸ್ ಅವರು 1858 ರಲ್ಲಿ ರಾಮ ಮಂದಿರದೊಳಗೆ ಹೋದರು. ಅಲ್ಲಿನ ಗೋಡೆಯ ಮೇಲೆ ರಾಮ ಎಂದು ಬರೆದರು ಎಂದು ಅವರು ತಿಳಿಸಿದ್ದಾರೆ.

ಸಿಖ್ಖ್ ಧರ್ಮದಲ್ಲಿ ಅಖಂಡ ಪಥವು ಮೂಲಭೂತ ಆಚರಣೆಯಾಗಿದೆ. ಮಹತ್ವದ ಆಧ್ಯಾತ್ಮಿಕ ಆಚರಣೆಯೂ ಇದಾಗಿದೆ. ಇದರಲ್ಲಿ ಸಿಖ್ಖರ ಪವಿತ್ರ ಗ್ರಂಥ ಗುರು ಗ್ರಂಥ ಸಾಹೇಬವನ್ನು ನಿರಂತರವಾಗಿ ಪಠಣ ಮಾಡಲಾಗುತ್ತದೆ. ಇದು ನಲವತ್ತೆಂಟು ಗಂಟೆಗಳ ಕಾಲ ಮುಂದುವರೆಯಲಿದೆ ಎಂದು ಅವರು ಹೇಳಿದ್ದಾರೆ.

Tags

Related Articles

Close