ಪ್ರಚಲಿತ

ಬಿಗ್ ಬ್ರೇಕಿಂಗ್! ಪ್ರಧಾನಿ ಮೋದಿ ಹತ್ಯೆಗೆ ಸ್ಕೆಚ್! ದೇಶಾದ್ಯಂತ ಹೈಅಲರ್ಟ್ ಘೋಷಿಸಿದ ಎಸ್‌ಪಿಜಿ ಮತ್ತು ಗೃಹ ಇಲಾಖೆ.!

ಉಗ್ರರ ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿ ಮೊದಲ ಹೆಸರು ಕಾಣಸಿಗುವುದೇ ಅದು ಭಾರತದ ಪ್ರಧಾನಿ ನರೇಂದ್ರ ಮೋದಿ. ಯಾಕೆಂದರೆ ನರೇಂದ್ರ ಮೋದಿಯವರು ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೇ ಉಗ್ರರ ವಿರುದ್ಧ ಘರ್ಜಿಸುತ್ತಿದ್ದರು. ಪ್ರಧಾನಿಯಾದ ಬಳಿಕ ತಾನು ಭೇಟಿ ನೀಡಿದ ರಾಷ್ಟ್ರಗಳಲ್ಲಿ ಉಗ್ರರ ವಿರುದ್ಧ ಧ್ವನಿ ಎತ್ತಿ ಜಗತ್ತಿನ ಎಲ್ಲಾ ರಾಷ್ಟ್ರಗಳು ಒಗ್ಗಟ್ಟಾಗಿ ಭಯೋತ್ಪಾದನೆಯ ವಿರುದ್ಧ ಹೋರಾಡಬೇಕು ಎಂದು ಕರೆ ಕೊಟ್ಟಿದ್ದರು. ಇದು ಉಗ್ರ ಸಂಘಟನೆಗಳ ಕೆಂಗಣ್ಣಿಗೆ ಕಾರಣವಾಗಿತ್ತು. ಅದಕ್ಕಾಗಿಯೇ ಭಾರತ ಪಾಕಿಸ್ತಾನ ಗಡಿಯಲ್ಲಿ ಪದೇ ಪದೇ ಉಪಟಳ ನೀಡುತ್ತಿದ್ದಾರೆ. ಆದರೆ ನಮ್ಮ ಸೈನಿಕರೂ ಕೂಡ ಇದಕ್ಕೆ ತಕ್ಕ ಉತ್ತರ ನೀಡಿ ಪಾಠ ಕಲಿಸುತ್ತಿದ್ದಾರೆ. ಆದ್ದರಿಂದಲೇ ಮೈಪರಚಿಕೊಳ್ಳುತ್ತಿರುವ ಉಗ್ರರು ಇದೀಗ ನೇರವಾಗಿ ಪ್ರಧಾನಿ ಮೋದಿ ಹತ್ಯೆಗೆ ಸ್ಕೆಚ್ ಹಾಕಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ. ಪಾಕಿಸ್ತಾನದ ಉಗ್ರರಿಂದ ಈ ಹಿಂದಿನಿಂದಲೂ ಮೋದಿಗೆ ಬೆದರಿಕೆಗಳು ಬರುತ್ತಿದಗದರೂ ನಮ್ಮ ಪ್ರಧಾನಿ ಅದ್ಯಾವುದನ್ನೂ ಲೆಕ್ಕಿಸದೆ ನಮ್ಮ ಸೈನಿಕರ ಮತ್ತು ತಮ್ಮ ಬೆಂಗಾವಲು ಪಡೆಯ ಮೇಲೆ ನಂಬಿಕೆ ಇಟ್ಟು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಆದರೆ ಇದೀಗ ದೇಶದ ಒಳಗಿಂದಲೇ ಮೋದಿ ಹತ್ಯೆ ನಡೆಯುವ ಬೆದರಿಕೆಗಳು ಬಂದಿದ್ದು, ಪ್ರಧಾನಿ ಬೆಂಗಾವಲು ಪಡೆಯಾದ ಎಸ್‌ಪಿಜಿ ಕಮಾಂಡೋ ಮತ್ತು ಕೇಂದ್ರ ಗೃಹ ಇಲಾಖೆಯಿಂದ ಎಚ್ಚರಿಕೆ ವಹಿಸಬೇಕೆಂಬ ಸಂದೇಶ ರವಾನೆಯಾಗಿದೆ.!

ಯಾವುದೇ ರೋಡ್ ಶೋ ನಡೆಸದಂತೆ ಎಚ್ಚರಿಕೆ..!

ಪ್ರಧಾನಿ ನರೇಂದ್ರ ಮೋದಿ ಯಾವುದೇ ಬಹಿರಂಗ ಸಮಾವೇಶಗಳಲ್ಲಿ ಪಾಲ್ಗೊಂಡರೂ ಕೂಡ ಬುಲೆಟ್ ಪ್ರೂಫ್ ಗ್ಲಾಸ್‌ಗಳನ್ನು ಬಳಸದೆ ಭಾಷಣ ಮಾಡುತ್ತಿದ್ದರು. ಜನಸಾಮಾನ್ಯರ ಹತ್ತಿರದಲ್ಲೇ ರೋಡ್ ಶೋಗಳನ್ನು ನಡೆಸುತ್ತಿದ್ದ ಪ್ರಧಾನಿ ಮೋದಿಗೆ ಇದೀಗ ತಮ್ಮ ಬೆಂಗಾವಲು ಪಡೆಯ ಅಧಿಕಾರಿಗಳಿಂದ ಖಡಕ್ ಸೂಚನೆ ಬಂದಿದೆ. ಲೋಕಸಭಾ ಚುನಾವಣೆಯ ಸಮೀಪದಲ್ಲೇ ಇಂತಹ ಎಚ್ಚರಿಕೆ ಬಂದಿರುವುದು ಭಾರೀ ಕುತೂಹಲ ಕೆರಳುವಂತೆ ಮಾಡಿದೆ. ಯಾಕೆಂದರೆ ಮುಂಬರುವ ದಿನಗಳಲ್ಲಿ ಪ್ರಧಾನಿ ಮೋದಿ ಛತ್ತೀಸ್‌ಗಡ್, ಝಾರ್ಕಾಂಡ್, ಮಧ್ಯಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಪಂಜಾಬ್ ರಾಜ್ಯಗಳ ಪ್ರವಾಸ ಮಾಡಲಿದ್ದು, ಲೋಕಸಭಾ ಚುನಾವಣೆಗೆ ರಣಕಹಳೆ ಮೊಳಗಿಸಲು ಸಜ್ಜಾಗಿದ್ದಾರೆ. ಆದರೆ ಎಸ್‌ಪಿಜಿ ಮತ್ತು ಕೇಂದ್ರ ಗೃಹ ಇಲಾಖೆಯ ಎಚ್ಚರಿಕೆಯ ಪ್ರಕಾರ ಮೋದಿ ಯಾವುದೇ ರೋಡ್ ಶೋಗಳನ್ನು ನಡೆಸುವಂತಿಲ್ಲ. ಯಾವುದೇ ಜನಸಾಮನ್ಯರೂ ಕೂಡ ಪ್ರಧಾನಿ ಮೋದಿ ಹತ್ತಿರಕ್ಕೆ ಸುಳಿಯದಂತೆ ನೋಡಿಕೊಳ್ಳಲು ಬೆಂಗಾವಲು ಪಡೆಯ ಅಧಿಕಾರಿಗಳು ಈ ರೀತಿ ಎಚ್ಚರಿಕೆ ನೀಡಿದ್ದಾರೆ.!

ಎಲ್ಲಾ ರಾಜ್ಯಗಳಿಗೂ ಲಿಖಿತ ಸಂದೇಶ ರವಾನೆ..!

ಇನ್ನೇನು ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿರುವುದರಿಂದ ಪ್ರಧಾನಿ ಮೋದಿ ಎಲ್ಲಾ ರಾಜ್ಯಗಳಿಗೂ ಭೇಟಿ ನೀಡಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಆದರೆ ಇದೀಗ ಗೃಹ ಇಲಾಖೆ ಮತ್ತು ಪ್ರಧಾನಿ ಬೆಂಗಾವಲು ಪಡೆಯ ಅಧಿಕಾರಿಗಳ ಮುನ್ನೆಚ್ಚರಿಕೆಯ ಪ್ರಕಾರ ಯಾವುದೇ ಬಹಿರಂಗ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಅದಕ್ಕಾಗಿಯೇ ಈಗಾಗಲೇ ದೇಶದ ಎಲ್ಲಾ ರಾಜ್ಯಗಳಿಗೂ ಲಿಖಿತ ಸಂದೇಶ ರವಾನಿಸಿದ ಅಧಿಕಾರಿಗಳು, ಯಾರೇ ಪ್ರಧಾನಿ ಮೋದಿ ಭೇಟಿಗೆ ನಿಕಟ ಸಂಪರ್ಕ ಹೊಂದುವಂತಿಲ್ಲ. ಯಾವುದೇ ರಾಜ್ಯದ ಮುಖ್ಯಮಂತ್ರಿಗಳಾಗಲೀ, ಶಾಸಕರು, ಸಂಸದರು ಯಾರೇ ಪ್ರಧಾನಿ ಭೇಟಿಗೆ ಹೋದರೂ ಸಂಪೂರ್ಣ ಪರಿಶೀಲನೆಯ ನಂತರವಷ್ಟೇ ಭೇಟಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಈ ಆದೇಶ ಪ್ರತಿಯೊಂದು ರಾಜ್ಯಗಳಿಗೂ ಅನ್ವಯಿಸುತ್ತದೆ ಎಂದು ಹೇಳಿರುವ ಕೇಂದ್ರ ಗೃಹ ಇಲಾಖೆ, ಆದೇಶ ಪಾಲಿಸದೇ ಇದ್ದರೆ ಪ್ರಧಾನಿ ಭೇಟಿಗೆ ಅವಕಾಶ ಇಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ದೇಶದೊಳಗಿರುವ ನಕ್ಸಲರನ್ನೂ ಮುಲಾಜಿಲ್ಲದೆ ಕೊಂದು ಬಿಸಾಕಲು ಆದೇಶಿಸಿರುವ ಪ್ರಧಾನಿ ಮೋದಿಯವರು ನಕ್ಸಲರಿಂದಲೂ ಟಾರ್ಗೆಟ್ ಆಗಿದ್ದಾರೆ. ಆದ್ದರಿಂದಲೇ ಬಿಗಿ ಭದ್ರತೆ ನೀಡಿರುವ ಪ್ರಧಾನಿ ಮೋದಿಯ ಬೆಂಗಾವಲು ಪಡೆಯ ಅಧಿಕಾರಿಗಳು ಮತ್ತು ಕೇಂದ್ರ ಗೃಹ ಇಲಾಖೆಯ ಅಧಿಕಾರಿಗಳು ದೇಶಾದ್ಯಂತ ಹೈಅಲರ್ಟ್ ಘೋಷಿಸಿದ್ದಾರೆ.!

–ಅರ್ಜುನ್

Tags

Related Articles

Close