ಪ್ರಚಲಿತ

ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆ ಬಗ್ಗೆ ಅಮಿತ್ ಶಾ ಏನಂದ್ರು ಗೊತ್ತಾ?

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಭಾರತದ ಅಭಿವೃದ್ಧಿಯ ವೇಗ ಹೆಚ್ಚಾಗಿದೆ. ಕಾನೂನಿನ ಮೇಲೆ ಮತ್ತಷ್ಟು ಗೌರವ ಹೆಚ್ಚುವಂತೆ ಕೇಂದ್ರ ಸರ್ಕಾರ ಮಾಡಿದೆ ಎಂದರೂ ಅತಿಶಯವಲ್ಲ.

ಕಳೆದ ಒಂಬತ್ತು ವರ್ಷಗಳ ಹಿಂದೆ ನಮ್ಮ ದೇಶವನ್ನು ಆಳಿದ ಪಕ್ಷ ನ್ಯಾಯವನ್ನು ಕಾಪಾಡುವಲ್ಲಿ ಹಿಂದೆ ಬಿದ್ದಿತ್ತು. ಬ್ರಿಟಿಷರ ಕಾಲದ ಕಾನೂನುಗಳ ಅಡಿಯಲ್ಲೇ ಕೆಲಸ ಮಾಡುತ್ತಿತ್ತು. ಆರೋಪ, ಅಪರಾಧ ಇನ್ನಿತರ ಕೃತ್ಯಗಳಿಗೂ ಬ್ರಿಟಿಷರು ಬರೆದಿಟ್ಟು, ಬರೆದು ಬಿಟ್ಟು ಹೋದ ಕಾನೂನುಗಳನ್ನೇ ಉಪಯೋಗಿಸಿ ಶಿಕ್ಷೆ ನೀಡುವ, ನ್ಯಾಯ ಒದಗಿಸುವ ಪ್ರಯತ್ನ ನಡೆಯುತ್ತಿತ್ತು. ಒಂದರ್ಥದಲ್ಲಿ ಬ್ರಿಟಿಷರು ಭಾರತ ಬಿಟ್ಟು ತೊಲಗಿದ್ದರೂ ಅವರ ನೆನಪಲ್ಲೇ ನಡೆಸುತ್ತಿದ್ದ ಆಡಳಿತ ನಾವು ಕಾಣುತ್ತಿದ್ದೆವು.

ಆದರೆ ಕೇಂದ್ರದಲ್ಲಿ ಎನ್.ಡಿ.ಎ. ಸರ್ಕಾರ ಆಡಳಿತಕ್ಕೆ ಬರುತ್ತಲೇ ಕಾನೂನಿಗೆ ಸಂಬಂಧಿಸಿದ ಹಾಗೆಯೂ ದೇಸೀಯತೆ ಬಂತು. ಕೇಂದ್ರದ ಮೋದಿ ಸರ್ಕಾರ ಈ ಬದಲಾವಣೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಕೆಲಸ ಮಾಡಿದ್ದು ಮಾತ್ರವಲ್ಲದೆ, ಅದನ್ನು ಯಶಸ್ವಿಯಾಗಿ ಜಾರಿಗೆ ತರುವಲ್ಲಿಯೂ ಸಫಲವಾಯಿತು ಎನ್ನುವುದು ಇತಿಹಾಸ. ಜೊತೆಗೆ ಪ್ರಧಾನಿ ಮೋದಿ ಸರ್ಕಾರದ ಇಚ್ಛಾಶಕ್ತಿಯ ತಾಕತ್ತು ಎನ್ನುವುದಕ್ಕೆ ಸ್ಪಷ್ಟ ನಿದರ್ಶನ.

ದೇಶದ ಕಾನೂನಿಗೆ ಸಂಬಂಧಿಸಿದ ಹಾಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾತನಾಡಿದ್ದು, ಮುಂದಿನ ಐದು ವರ್ಷಗಳಲ್ಲಿ ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆ ಪ್ರಪಂಚದಲ್ಲೇ ಅತ್ಯಂತ ಆಧುನಿಕವಾಗಿ ಇರಲಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ಕ್ರಿಮಿನಲ್ ಅಪರಾಧಗಳಿಗೆ ಸಂಬಂಧಿಸಿದ ಹಾಗೆ ಕೇಂದ್ರ ಸರ್ಕಾರ ಮೂರು ಪ್ರಮುಖ ಕಾನೂನುಗಳನ್ನು ಜಾರಿಗೆ ತಂದಿದ್ದು, ಇದರ ಮಹತ್ವವನ್ನು ಅವರು ಒತ್ತಿ ಹೇಳಿದರು. ನಮ್ಮ ದೇಶದ ಕ್ರಿಮಿನಲ್ ಕಾನೂನು ವ್ಯವಸ್ಥೆಯು ಹೊಸ ಯುಗವನ್ನು ಪ್ರವೇಶ ಮಾಡುತ್ತಿರುವುದಾಗಿಯೂ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಐಪಿಸಿ, ಸಿ ಆರ್ ಪಿ ಸಿ ಮತ್ತು ಸಾಕ್ಷ್ಯ ಕಾನೂನುಗಳನ್ನು ಪರಿಚಯಿಸಲಾಗಿದೆ. ಈ ಕಾನೂನುಗಳನ್ನು ಪ್ರಾಯೋಗಿಕವಾಗಿ ಬಳಕೆ ಮಾಡಲಾಗುತ್ತಿದೆ. ಹಾಗೆಯೇ ಏಳು ವರ್ಷ ಮತ್ತು ಅದಕ್ಕೂ ಹೆಚ್ಚಿನ ಶಿಕ್ಷೆಯ ಪ್ರಕರಣಗಳಿಗೆ ವಿಧಿ ವಿಜ್ಞಾನ ಅಧಿಕಾರಿಗಳ ಭೇಟಿ ಕಡ್ಡಾಯ ಗೊಳಿಸುವ ನಿರ್ಣಯ ತೆಗೆದುಕೊಳ್ಳಲಾಗಿದೆ. ಇದು ತನಿಖೆಯನ್ನು ಸುಲಭಗೊಳಿಸಲಿದೆ. ಜೊತೆಗೆ ನ್ಯಾಯಾಧೀಶರಿಗೂ ಕೆಲಸ ಕಡಿಮೆ ಮಾಡಲಿದೆ. ಜೊತೆಗೆ ಕೇಂದ್ರ ಸರ್ಕಾರ ಕಾನೂನು ವ್ಯವಸ್ಥೆಯನ್ನು ಆಧುನೀಕರಣ ಮಾಡುವುದಕ್ಕೂ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಈ ಪ್ರಕ್ರಿಯೆ ಹಲವಾರು ಮಜಲುಗಳನ್ನು ಒಳಗೊಂಡಿದ್ದು, ಐದು ವರ್ಷಗಳಲ್ಲಿ ಸರಿಯಾಗಿ ಅನುಷ್ಠಾನಗೊಳ್ಳಲಿದೆ. ಐದು ವರ್ಷಗಳ ನಂತರದಲ್ಲಿ ವಿಶ್ವದಲ್ಲೇ ಆಧುನಿಕವಾದ ಕಾನೂನು ಭಾರತದ್ದಾಗಿರಲಿದೆ ಎಂದು ಶಾ ಭರವಸೆ ವ್ಯಕ್ತಪಡಿಸಿದ್ದಾರೆ.

Tags

Related Articles

Close