ಪ್ರಚಲಿತ

ಅಯೋಧ್ಯೆಯ ರಾಮನ ಜೊತೆಗೆ ಭಾರತಕ್ಕೆ ‘ಸೂರ್ಯೋದಯ’

ಸೂರ್ಯ ವಂಶಜ, ರಘು ಕುಲ ತಿಲಕ ಪ್ರಭು ಶ್ರೀರಾಮ ತನ್ನ ಜನ್ಮ ಭೂಮಿಯ ರಾಷ್ಟ್ರ ಮಂದಿರದಲ್ಲಿ ವಿರಾಜಮಾನನಾದ ಬೆನ್ನಲ್ಲೇ, ಇಡೀ ದೇಶದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸೂರ್ಯೋದಯವಾಗುವಂತಹ ಯೋಜನೆಯೊಂದಕ್ಕೆ ಪ್ರದಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ.

ಶ್ರೀರಾಮನನ್ನು ಭವ್ಯ ಆಲಯದಲ್ಲಿ ಪ್ರತಿಷ್ಠಾಪನೆ ಮಾಡಿದ ನೆನಪಿಗಾಗಿ, ಆ ಸಂತಸವನ್ನು ಜನರಿಗೆ ಮತ್ತಷ್ಟು ಸಿಗುವ ಹಾಗೆ ಮಾಡುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ‘ಸೂರ್ಯೋದಯ ಯೋಜನೆ’ಗೆ ನಿನ್ನೆ ಜೀವ ತುಂಬಿದ್ದಾರೆ. ಆ ಮೂಲಕ ದೇಶದಲ್ಲಿ ಮತ್ತೊಂದು ಅಭಿವೃದ್ಧಿ ಕಾರ್ಯಕ್ಕೆ ಅವರು ಸಿದ್ಧತೆ ಮಾಡಿಕೊಂಡಂತಾಗಿದೆ.

ಅಯೋಧ್ಯೆಯಿಂದ ದೆಹಲಿಗೆ ತೆರಳಿದ ತಕ್ಷಣವೇ ಪ್ರಧಾನಿ ಮೋದಿ ಅವರು ‘ಸೂರ್ಯೋದಯ ಯೋಜನೆ’ಗೆ ಚಾಲನೆ ನೀಡಿದ್ದಾರೆ. ದೇಶದ ಬಡ ಮತ್ತು ಮಧ್ಯಮ ವರ್ಗದ ಒಂದು ಕೋಟಿ ಮನೆಗಳಿಗೆ ಸೋಲಾರ್ ಸಂಪರ್ಕ ಒದಗಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಈ ಮಹತ್ವಾಕಾಂಕ್ಷೆಯ ಯೋಜನೆಗೆ ಚಾಲನೆ ನೀಡಿರುವುದಾಗಿದೆ. ದೇಶದ ಬಡ ಮತ್ತು ಮದ್ಯಮ ವರ್ಗದ ಜನರಿಗೆ ಇಂಧನ, ವಿದ್ಯುತ್ ಬಿಲ್ ಉಳಿತಾಯ ಮಾಡುವ ಹಾಗಾಗುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಈ ಬಗ್ಗೆ ಪ್ರಧಾನಿ ಮೋದಿ ಅವರೇ ಮಾಹಿತಿ ನೀಡಿದ್ದು, ನಿನ್ನೆ ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.

ಪ್ರಪಂಚದ ಎಲ್ಲಾ ಭಕ್ತರು ಸೂರ್ಯ ವಂಶದ ಭಗವಾನ್ ಶ್ರೀರಾಮನ ಬೆಳಕಿನಿಂದ ಯಾವಾಗಲೂ ಶಕ್ತಿ ಪಡೆಯುತ್ತಾರೆ. ಇಂದು ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠೆ ಅಯೋಧ್ಯೆಯಲ್ಲಿ ನಡೆದಿದೆ. ಈ ಸಂದರ್ಭದಲ್ಲಿ ಭಾರತದ ಜನರು ತಮ್ಮ ಮನೆಯ ಮೇಲ್ಚಾವಣಿ‌ಗಳಲ್ಲಿ ತಮ್ಮದೇ ಆದ ಸೋಲಾರ್ ರೂಫ್ ಟಾಪ್ ವ್ಯವಸ್ಥೆ ಹೊಂದಿರಬೇಕು ಎನ್ನುವ ನಮ್ಮ ಸಂಕಲ್ಪ ಮತ್ತಷ್ಟು ಬಲವಾಗಿದೆ. ಅಯೋಧ್ಯೆಯಿಂದ ದೆಹಲಿಗೆ ಹಿಂದಿರುಗಿದ ಬಳಿಕ ವ
ನಾನು ತೆಗೆದುಕೊಂಡ ಮೊದಲ ನಿರ್ಣಯವೇ ಇದಾಗಿದೆ. ಒಂದು ಕೋಟಿ ಮನೆಗಳಿಗೆ ಸೋಲಾರ್ ಸಂಪರ್ಕ ಒದಗಿಸುವ ನಿಟ್ಟಿನಲ್ಲಿ ‘ಪ್ರದಾನ ಮಂತ್ರಿ ಸೂರ್ಯೋದಯ ಯೋಜನೆ’ ಪ್ರಾರಂಭ ಮಾಡುವುದಾಗಿ ತಿಳಿಸಿದ್ದಾರೆ.

ಇದು ಬಡ ವರ್ಗದ ಮತ್ತು ಮಧ್ಯಮ ವರ್ಗದ ಜನರಿಗೆ ವಿದ್ಯುತ್, ಇಂಧನ ಬಿಲ್ ಉಳಿತಾಯ ಮಾಡಿರುವ ನಿಟ್ಟಿನಲ್ಲಿ ಇದನ್ನು ಜಾರಿಗೆ ತರಲಾಗಿದೆ ಎಂದು ಹೇಳಿದ್ದಾರೆ. ಇಂಧನ ಕ್ಷೇತ್ರದಲ್ಲಿ ಭಾರತ ಸ್ವಾವಲಂಬಿಯಾಗುವುದಕ್ಕೂ ಇದು ಪೂರಕವಾಗಲಿದೆ ಎಂದು ಅವರು ತಿಳಿಸಿದ್ದಾರೆ.

Tags

Related Articles

Close