ಪ್ರಚಲಿತ

ಅಯೋಧ್ಯೆಯಲ್ಲಿ ಶ್ರೀರಾಮನ ಪರಿವಾರ ದೇವರುಗಳಿಗೂ ಆಲಯ ನಿರ್ಮಾಣಕ್ಕೆ ಟ್ರಸ್ಟ್ ಚಿಂತನೆ

ಅಯೋಧ್ಯೆಯಲ್ಲಿ ಬಹು ಕೋಟಿ ಜನರ ಬಯಕೆ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯಗಳು ಸಂಪೂರ್ಣವಾಗಿ, ಅದ್ಧೂರಿ ಲೋಕಾರ್ಪಣೆ ಕಾರ್ಯಕ್ರಮ, ಬಾಲ ರಾಮನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠೆ ಕಾರ್ಯ ಸಹ ನಡೆದಿದೆ. ಸುಮಾರು ಐನೂರು ವರ್ಷಗಳ ಕಾಯುವಿಕೆ, ತಾಳ್ಮೆಗೆ ಈ ಭವ್ಯ ರಾಷ್ಟ್ರ ಮಂದಿರ ಜಯ ನೀಡಿದೆ ಎಂದರೂ ತಪ್ಪಾಗಲಾರದು.

ಪ್ರಸ್ತುತ ಅಯೋಧ್ಯೆ ಭಕ್ತರ ಪ್ರವೇಶಕ್ಕೆ ಮುಕ್ತವಾಗಿದೆ. ರಾಮನ ಭಕ್ತರು ಸಹ ಆತನ ಪುಣ್ಯ ಮಂದಿರದಲ್ಲಿ ಬಾಲರಾಮನ‌ ದರ್ಶನ ಪಡೆಯಲು ಉತ್ಸುಕರಾಗಿದ್ದಾರೆ. ಈ ಎಲ್ಲಾ ಕೆಲಸಗಳ ಯಶದ ಬಳಿಕ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈಗ ಮತ್ತೊಂದು ಚಿಂತನೆಯನ್ನು ನಡೆಸುತ್ತಿದೆ. ಟ್ರಸ್ಟ್ ಅಯೋಧ್ಯೆಯ ಸಂಕೀರ್ಣದಲ್ಲಿ ಇನ್ನೂ ಹದಿಮೂರು ದೇವಾಲಯಗಳನ್ನು ನಿರ್ಮಾಣ ಮಾಡುವ ಬಗ್ಗೆ ಚಿಂತನೆ ನಡೆಸಿದೆ.

ಈ ಬಗ್ಗೆ ಟ್ರಸ್ಟ್‌ನ ಖಜಾಂಜಿ ಗುರುದೇವ್ ಗಿರಿಜಿ ಅವರು ಮಾಹಿತಿ ನೀಡಿದ್ದು, ಮುಂಬರುವ ದಿನಗಳಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರದ ಸಂಕೀರ್ಣದಲ್ಲಿ ಹದಿಮೂರು ದೇವಾಲಯಗಳನ್ನು ನಿರ್ಮಾಣ ಮಾಡುವುದು, ಅದರೊಂದಿಗೆ ಈಗಾಗಲೇ ಲೋಕಾರ್ಪಣೆಯಾಗಿರುವ ಪ್ರಧಾನ ದೇವಾಲಯದಲ್ಲಿ ಬಾಕಿ ಉಳಿದಿರುವ ಸಣ್ಣ ಪುಟ್ಟ ಕೆಲಸಗಳನ್ನು ಸಂಪೂರ್ಣ ಮಾಡುವುದು ಟ್ರಸ್ಟ್‌ನ ಮುಂದಿನ ಗಮ್ಯ ಎಂದು ಹೇಳಿದ್ದಾರೆ.

ರಾಮ ಮಂದಿರದ ಮೊದಲನೇ ಮಹಡಿಯ ಎಲ್ಲಾ ಕೆಲಸಗಳೂ ‌ಸಂಪೂರ್ಣವಾಗಿ ಮುಗಿದಿದೆ. ಅಲ್ಲಿ‌ ಪ್ರಭು ಶ್ರೀರಾಮನ ಬಾಲಕನಾಗಿದ್ದಾಗಿನ ವಿಗ್ರಹದ ಪ್ರತಿಷ್ಠಾಪನೆ ಕೆಲಸವೂ ನಡೆದಿದೆ. ಪ್ರಸ್ತುತ ಎರಡನೇ ಮಹಡಿಯ ಕೆಲಸ ಕಾರ್ಯಗಳು ಪ್ರಗತಿಯಲ್ಲಿದೆ. ಆ ಬಳಿಕ ಮಂದಿರದ ಶಿಖರದ ಕೆಲಸವನ್ನು ಪೂರ್ಣ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಪ್ರಧಾನ ದೇಗುಲದ ಕಾರ್ಯ ಮುಗಿದ ಬಳಿಕ ರಾಮ ಪರಿವಾರಕ್ಕಾಗಿ ಪ್ರಮುಖ ಐದು ದೇವಾಲಯಗಳನ್ನು ನಿರ್ಮಾಣ ಮಾಡಲಾಗುತ್ತದೆ. ಶ್ರೀರಾಮ ವಿಷ್ಣುವಿನ ಅವತಾರವಾಗಿದ್ದು ಮುಖ್ಯ ದೇಗುಲದ ನಾಲ್ಕು ಮೂಲೆಗಳಲ್ಲಿ ಗಣಪತಿ, ಶಿವ, ಸೂರ್ಯ, ಜಗದಂಬಾ ದೇವಿಗೆ ದೇವಾಲಯಗಳನ್ನು ನಿರ್ಮಾಣ ಮಾಡಲಾಗುತ್ತದೆ.

ಹಾಗೆಯೇ ದಂತಕಥೆಗಳಲ್ಲಿ ಹೇಳುವಂತೆ ಹನುಮಾನ ಪ್ರಾಣ ಭಕ್ತ ಹನುಮಂತನಿಗೆ ಪ್ರತ್ಯೇಕ ಆಲಯ ನಿರ್ಮಾಣ ಮಾಡಲಾಗುತ್ತದೆ. ಹಾಗೆಯೇ ಸೀತಾ ರಸೋಯಿ ಬಳಿ ಅನ್ನಪೂರ್ಣ ದೇವಿಗೆ ಆಲಯ ನಿರ್ಮಾಣ ಮಾಡಲಾಗುತ್ತದೆ. ಮಂದಿರದ ಹೊರಗೆ ವಾಲ್ಮೀಕಿ, ವಸಿಷ್ಠ, ವಿಶ್ವಾಮಿತ್ರ, ದೇವಿ ಶವಾರಿ ಮತ್ತು ಬೃಹತ್ ಪಕ್ಷಿ ಜಟಾಯುವಿಗೆ ದೇವಾಲಯಗಳನ್ನು ನಿರ್ಮಾಣ ಮಾಡಲಾಗುವುದು ಎಂದೂ ಅವರು ಮಾಹಿತಿ ನೀಡಿದ್ದಾರೆ.

Tags

Related Articles

Close