ಪ್ರಚಲಿತ

ಐಸಿಸ್ ನಿರ್ನಾಮಕ್ಕೆ ಸುಬ್ರಮಣಿಯನ್ ಸ್ವಾಮಿಯ ಸೂಪರ್ ಪ್ಲಾನ್!! ಅಷ್ಟಕ್ಕೂ ಐಸಿಸ್ ಗಡಗಡನೇ ನಡುಗಿ ಹೋಗಲಿರುವುದಾದರೂ ಯಾಕೆ ಗೊತ್ತೇ??

ಇರಾಕ್ ಮತ್ತು ಸಿರಿಯಾದಲ್ಲಿ ಐಸಿಸ್ ಬಹುತೇಕ ಅಳಿವಿನಂಚಿಗೆ ಬಂದಿದ್ದರೂ ಭಾರತವೂ ಸೇರಿದಂತೆ ಕೆಲವು ದೇಶಗಳಲ್ಲಿ ಈ ಉಗ್ರ ಸಂಘಟನೆಯತ್ತ ಕೆಲವು ಮತಾಂಧ ಜನರಿಗೆ ಇರುವ ಆಕರ್ಷಣೆ ಇನ್ನೂ ಕಡಿಮೆಯಾಗಿಲ್ಲ ಅನ್ನೋದೇ ಬೇಸರದ ವಿಚಾರ!! ವಿಶ್ವದೆಲ್ಲೆಡೆ ಐಸಿಸ್ ಕೃತ್ಯವೇ ಬಹುದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಇದೀಗ ಐಸಿಸ್ ನಿರ್ನಾಮಕ್ಕೆ ಬಿಜೆಪಿ ಮುಖಂಡ, ರಾಜ್ಯ ಸಭೆ ಸದಸ್ಯ ಸುಬ್ರಮಣಿಯನ್ ಸ್ವಾಮಿಯವರು, ತಂತ್ರವೊಂದನ್ನು ಹೆಣೆಯುವ ಮೂಲಕ ಐಸಿಸ್ ಉಗ್ರರ ಎದೆಯಲ್ಲಿ ನಡುಕ ಉಂಟಾಗುವಂತೆ ಮಾಡಿದ್ದಾರೆ!!

ಇತ್ತೀಚೆಗಷ್ಟೇ ಐಸಿಸ್ ಒತ್ತೆಗೆ ಸಿಲುಕಿದ್ದ 39 ಭಾರತೀಯರು ಬದುಕಿರುವ ಸಾಧ್ಯತೆಗಳಿಗೆ ತೆರೆ ಎಳೆದಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರೆಲ್ಲ
ಮೃತರಾಗಿದ್ದಾರೆ ಎಂದು ಘೋಷಿಸಿದ್ದರು. ಈ ವೇಳೆ ರಾಜ್ಯಸಭೆಯಲ್ಲಿ ಮಾತನಾಡಿದ ಸಚಿವೆ ಸುಷ್ಮಾ ಸ್ವರಾಜ್, ಅಪಹಣಕ್ಕೀಡಾಗಿದ್ದ 39 ಭಾರತೀಯರನ್ನು “ಇಸ್ಲಾಮಿಕ್ ಸ್ಟೇಟ್ ಆಫ್ ಇರಾನ್ ಆ್ಯಂಡ್ ಇರಾಕ್” (ಐಸಿಸ್) ಉಗ್ರ ಸಂಘಟನೆ ಹತ್ಯೆ ಮಾಡಿದೆ ಎಂದು ತಿಳಿಸಿದ್ದರು.

ಅಷ್ಟೇ ಅಲ್ಲದೇ, ಆಳವಾದ ರಾಡಾರ್‍ಗಳನ್ನು ಬಳಸಿ ಹತ್ಯೆಗೀಡಾಗಿರುವ ಭಾರತೀಯ ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ. ಅಷ್ಟೇ ಅಲ್ಲದೇ ಮೃತ ದೇಹಗಳನ್ನು ಸಾಮೂಹಿಕ ಸಮಾಧಿ ಮಾಡಲಾಗಿದ್ದು, ಡಿ ಎನ್ ಎ ಪರೀಕ್ಷೆ ಮೂಲಕ ಭಾರತೀಯರನ್ನು ಗುರುತಿಸಲಾಗಿದೆ. ಮೃತ ದೇಹಗಳ ಮಾದರಿಗಳನ್ನು ಡಿ ಎನ್ ಎ ಪರೀಕ್ಷೆಗಾಗಿ ಬಾಗ್ದಾದ್‍ಗೆ ಕಳುಹಿಸಲಾಗಿತ್ತು. ಇದರಲ್ಲಿ 38 ಮಂದಿ ಭಾರತೀಯರು ಎಂಬುದು ಖಚಿತಗೊಂಡಿದೆ ಎಂದು ತಿಳಿಸಿದ್ದರು. ಆದರೆ ಮೌಸುಲ್ ನಲ್ಲಿ 39 ಭಾರತೀಯರನ್ನು ಕೊಲೆ ಮಾಡಿರುವ ಐಸಿಸ್ ಭಯೋತ್ಪಾದಕರ ವಿರುದ್ಧ ಇಡೀ ವಿಶ್ವವೇ ಸಿಡಿದು ನಿಂತಿದೆಯಲ್ಲದೇ ಐಸಿಸ್ ನಿರ್ನಾಮ ಮಾಡದೇ ವಿಶ್ವಕ್ಕೆ ಶಾಂತಿ ದೊರಕುವುದಿಲ್ಲ ಎಂಬ ಸತ್ಯ ಬಹಿರಂಗವಾಗಿದೆ.

ಈ ನಿಟ್ಟಿನಲ್ಲಿ ಭಾರತ ಸೇರಿ ವಿಶ್ವದ ಭಾಗಶಃ ರಾಷ್ಟ್ರಗಳು ಐಸಿಸ್ ವಿರುದ್ಧ ಸಿಡಿದೆದ್ದು, ಇದೀಗ ಭಾರತ 39 ನಿವಾಸಿಗಳನ್ನು ಕಳೆದುಕೊಂಡು ಕುದ್ದು ಹೋಗಿದೆ. ಆದ್ದರಿಂದ ಐಸಿಸ್ ನಿರ್ನಾಮಕ್ಕೆ ಬಿಜೆಪಿ ಮುಖಂಡ, ರಾಜ್ಯ ಸಭೆ ಸದಸ್ಯ ಸುಬ್ರಮಣಿಯನ್ ಸ್ವಾಮಿ ಭರ್ಜರಿ ಯೋಜನೆಯೊಂದಕ್ಕೆ ಸಲಹೆ ನೀಡಿದ್ದಾರೆ.

ಅಷ್ಟಕ್ಕೂ ಬಿಜೆಪಿ ಮುಖಂಡ, ರಾಜ್ಯ ಸಭೆ ಸದಸ್ಯ ಸುಬ್ರಮಣಿಯನ್ ಸ್ವಾಮಿ ಹೇಳಿದ್ದೇನು ಗೊತ್ತೇ??

ಹೌದು… ಭಾರತೀಯರನ್ನು ಮಾತ್ರವಲ್ಲದೇ, ಅದೆಷ್ಟೋ ಅಮಾಯಕರನ್ನು ವಿಚಿತ್ರ ರೀತಿಯಲ್ಲಿ ಹತ್ಯೆ ಗೈದಿರುವ ದುರಳ ರಕ್ಕಸರೇ ಗಡಗಡ ನಡುಗುವಂತಹ ವಿಚಾರವೊಂದನ್ನು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ಇಸ್ಲಾಮಿಕ್ ರಾಷ್ಟ್ರ ಕಟ್ಟುವ ಗುರಿಯನ್ನು ಹೊತ್ತಿರುವ ಇವರ ಕನಸಿಗೆ ಎಳ್ಳು ನೀರು ಬಿಡುವಂತಹ ಸಲಹೆ ಯೊಂದನ್ನು ಸ್ವಾಮಿ ನೀಡಿದ್ದು, ಇದರಿಂದ ಮಾತ್ರವೇ ಐಸಿಸ್ ದುಷ್ಕೃತ್ಯಗಳನ್ನು ತಡೆಗಟ್ಟಲು ಸಾಧ್ಯ ಎಂದು ಹೇಳಿದ್ದಾರೆ. ಅಷ್ಟಕ್ಕೂ ಸ್ವಾಮಿ ಹೇಳಿದ್ದೇನು ಗೊತ್ತೇ??

ಐಸಿಸ್ ನಿರ್ನಾಮ ಆಗಬೇಕಾದರೆ ಕಾರ್ಯ ಶೈಲಿ ಬದಲಾಗಬೇಕಾಗಿರುವುದು ಅತೀ ಮುಖ್ಯವಾಗಿಯಲ್ಲದೇ ಐಸಿಸ್ ಕೊಳಕರನ್ನು ಹತ್ತಿಕ್ಕಲು ಭಾರತದ ಮಾನವ ಶಕ್ತಿ, ಅಮೆರಿಕಾದ ಅಸ್ತ್ರದ ತಾಕತ್ತು ಮತ್ತು ಇಸ್ರೇಲ್ ದೇಶದ ಬುದ್ಧಿಮತ್ತೆಯನ್ನು ಒಗ್ಗಟ್ಟಾಗಿ ಬಳಸಿಕೊಂಡರೇ ನಿಶ್ಚಿತವಾಗಿ ಐಸಿಸ್ ನನ್ನು ಬಗ್ಗು ಬಡಿಯಬಹುದು ಎಂಬ ಸಲಹೆ ನೀಡಿದ್ದಾರೆ. ಐಸಿಸ್ ನ್ನು ನಿರ್ನಾಮ ಮಾಡಲು ನಿಶ್ಚಿತವಾಗಿ ಸಂಯುಕ್ತ ಬಲ ನಿರ್ಮಿಸಿಕೊಳ್ಳಬೇಕು. ಎಲ್ಲ ರಾಷ್ಟ್ರಗಳು ಒಗ್ಗೂಡಿ ಕಾರ್ಯಾಚರಣೆ ನಡೆಸಿದಾಗ ಮಾತ್ರ ಐಸಿಸ್ ದುಷ್ಕೃತ್ಯಗಳನ್ನು ತಡೆಗಟ್ಟಲು ಸಾಧ್ಯ ಎಂದು ಸುಬ್ರಮಣಿಯನ್ ಸ್ವಾಮಿ ಸಲಹೆ ನೀಡಿದ್ದಾರೆ.

ಸಂಸತ್ ನಲ್ಲಿ ಕಾಂಗ್ರೆಸ್ ಭಾರತೀಯರ ಸಾವಿನಲ್ಲೂ ರಾಜಕೀಯ ಮಾಡುತ್ತಿರುವುದನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ಯ ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೇ ಎಲ್ಲ ಭಾರತೀಯರ ಕಳೆಬರಹವನ್ನು ವಾಪಸ್ಸ ತರಲು ಕ್ರಮ ಕೈಗೊಂಡಿದ್ದಾರೆ. ಆದರೆ ಸಕಾರಾತ್ಮಕ ಸಲಹೆ ನೀಡಬೇಕಾದ ಕಾಂಗ್ರೆಸ್ ಸರ್ಕಾರ ಕೇವಲ ಕಾಟಾಚಾರಕ್ಕೆ ಪ್ರತಿಭಟನೆ ಮಾಡುತ್ತ ಸಂಸತ್ ಸಮಯವನ್ನು ಹಾಳು ಮಾಡುತ್ತಿದೆ. ಆದರೆ ಇದೆಲ್ಲದರ ನಡುವೆ ಸುಬ್ರಮಣಿಯನ್ ಸ್ವಾಮಿ ನೀಡಿರುವ ಸಲಹೆಗೆ ಬಾರಿ ಶ್ಲಾಘನೆ ವ್ಯಕ್ತವಾಗಿದೆ.

ಅಷ್ಟಕ್ಕೂ ಈ ಐಸಿಸ್ ಉಗ್ರರು ವಿಚಿತ್ರ ರೀತಿ ಹತ್ಯೆ ನಡೆಸುವುದೇಕೆ ಗೊತ್ತೇ?

ಸಲಫಿ ಜಿಹಾದ್ ಉಗ್ರರಾಗಿರುವ ಇವರು ಇಸ್ಲಾಮಿಕ್ ರಾಷ್ಟ್ರ ಕಟ್ಟುವುದು ಇವರ ಗುರಿ. 1999ರಲ್ಲಿ ಜಮಾ ಅತ್ ಅಲ್ ತವಹಿದ್ ವ-ಅಲ್-ಜಿಹಾದ್ ಹೆಸರನ ಪುಟ್ಟ ಸಂಘಟನೆಯಾಗಿ ಸಿರಿಯಾ ಕೇಂದ್ರವಾಗಿಸಿ ಹುಟ್ಟಿಕೊಂಡಿತ್ತು. ಬಳಿಕ 2004ರಲ್ಲಿ ಅಲ್‍ಖೈದಾಕ್ಕೆ ಸೇರ್ಪಡೆಗೊಂಡಿತು. 2003ರ ಸಿರಿಯಾ ನಾಗರಿಕ ದಂಗೆ, ಇರಾಕ್ ಯುದ್ಧದ ಬಳಿಕ ಸಂಘಟನೆ ಪ್ರಬಲವಾಗಿದ್ದು ಸಿರಿಯಾದಲ್ಲಿ ವಿಸ್ತಾರವಾಗಿತ್ತು. 2014ರಲ್ಲಿ ಅಲ್‍ಖೈದಾದಿಂದ ಬೇರ್ಪಟ್ಟ ಬಳಿಕ ಐಸಿಸ್ ವ್ಯಾಪಕವಾಗಿ ದಾಳಿ ಸಂಘಟಿಸಿದ್ದು, ಸಿರಿಯಾ ಮತ್ತು ಇರಾಕ್‍ನ ಬಹುಭಾಗವನ್ನು ಹಿಡಿತದಲ್ಲಿರಿಸಿದೆ. ಅನೇಕ ತೈಲ ಬಾವಿಗಳನ್ನೂ ಇದು ವಶಪಡಿಸಿಕೊಂಡಿರುವುದು, ಬ್ಯಾಂಕ್‍ಗಳನ್ನು ಕೊಳ್ಳೆ ಹೊಡೆದಿರುವುದರಿಂದ ವಿಶ್ವದ ಅತಿ ಶ್ರೀಮಂತ ಉಗ್ರಗಾಮಿ ಸಂಘಟನೆಯಾಗಿದೆ.

ಸಾಮೂಹಿಕ ನರಹತ್ಯೆ, ಶಿರಚ್ಛೇದ, ಬೆಂಕಿ ಹಚ್ಚುವುದು, ಎತ್ತರದ ಕಟ್ಟಡದಿಂದ ದೂಡಿ ಸಾಯಿಸುವುದು ಇತ್ಯಾದಿಗಳಿಗೆ ಐಸಿಸ್ ಕುಪ್ರಸಿದ್ಧಿ. ಇಂತಹ ಹತ್ಯೆಗಳನ್ನು ಮಾಡುವುದೂ ಅಲ್ಲದೇ ಅದರ ವಿಡಿಯೋ, ಫೆÇೀಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಉಗ್ರ ಸಂಘಟನೆ ಅಪೆÇ್ಲೀಡ್ ಮಾಡುತ್ತದೆ. ಇದಕ್ಕೆ ಕಾರಣವೇನು ಎಂಬ ಪ್ರಶ್ನೆ ಬರಬಹುದು. ಹೌದು. ಇದರಿಂದ ಜಗತ್ತಿನಲ್ಲಿ ಸಂಘಟನೆ ಅತಿ ಉಗ್ರ, ಹಿಂಸಾತ್ಮಕ ಎಂದು ಬೆದರಿಸುವ ತಂತ್ರ ಇದರ ಹಿಂದಿದೆ. ಇಂತಹ ಹಲವು ಕೃತ್ಯಗಳನ್ನು ಮಾಡುತ್ತಲೇ ಅದನ್ನು ಜಗತ್ತಿಗೆ ತೋರಿಸುವುದರಿಂದ ಸಹಜವಾಗಿಯೇ ಸಂಘಟನೆ ಬಗ್ಗೆ ತೀವ್ರ ಹೆದರಿಕೆಯ ಮನಸ್ಥಿತಿ ಉಂಟಾಗುತ್ತದೆ.

ಆದರೆ ಇರಾಕ್‍ನ ಎರಡನೇ ಅತಿ ದೊಡ್ಡ ನಗರವಾದ ಮೊಸುಲ್ ಮೇಲೆ ದಾಳಿ ನಡೆಸಿದ್ದ ಐಸಿಸ್ ಸೆರೆ ಹಿಡಿದಿದ್ದ ಒತ್ತೆಯಾಳುಗಳಲ್ಲಿ ಪಂಜಾಬ್, ಹಿಮಾಚಲ ಪ್ರದೇಶ ಹಾಗು ಬಿಹಾರದ ಕಾರ್ಮಿಕರೂ ಇದ್ದರು. ಭಯೋತ್ಪಾದಕ ದಾಳಿಗೆ ಬೆದರಿ ಮೊಸುಲ್ ಬಿಡಲು ಯತ್ನಿಸಿದ್ದ ಈ ಕಾರ್ಮಿಕರನ್ನು ಐಸಿಸ್ ತೆಕ್ಕೆಗೆ ತೆಗೆದುಕೊಂಡಿತ್ತು. ಆದರೆ ಈ ಸೆರೆಯಾಳುಗಳ ಪೈಕಿ ಪಂಜಾಬ್‍ನ ಗುರ್ ದಾಸ್‍ಪುರದ ಹಜ್ರಿತ್ ಮಶಿ ಎಂಬುವವರು ತಪ್ಪಿಸಿಕೊಂಡು ಬಂದ ಬಳಿಕ ತಮ್ಮ ಜತೆಗಿದ್ದವರ ಕಗ್ಗೊಲೆಗೈದಿದ್ದನ್ನು ಕಣ್ಣಾರೆ ಕಂಡಿದ್ದಾಗಿ ತಿಳಿಸಿದ್ದರು.

ಆದರೆ ಈ ಮಾತುಗಳನ್ನು ತಳ್ಳಿ ಹಾಕಿದ್ದ ಭಾರತ ಸರ್ಕಾರ ಯಾವುದೇ ಸಾಕ್ಷ್ಯ ಸಿಗುವವರೆಗೂ ಒತ್ತೆಯಾಳುಗಳನ್ನು ಜೀವಂತವಿರುವುದಾಗಿ ಪರಿಗಣಿಸುವುದಾಗಿ ಹೇಳಿತ್ತು. ಅಷ್ಟೆ ಅಲ್ಲದೇ ಐಸಿಸ್ ಹಿಡಿತದಿಂದ ಮೊಸುಲ್ ಅನ್ನು ಮುಕ್ತಗೊಳಿಸಿದ ಬಳಿಕ ಒತ್ತೆಯಾಳುಗಳನ್ನು ಹುಡುಕಿಕೊಡಲು ಇರಾಕೀ ಪಡೆಗಳಿಗೆ ಭಾರತ ಸರ್ಕಾರ ವಿನಂತಿ ಮಾಡಿಕೊಂಡಿತ್ತು. ಆದರೆ ಇರಾಕ್‍ನಲ್ಲಿ ಅಟ್ಟಹಾಸ ಮೆರೆದಿದ್ದ ಐಸಿಸ್ ಉಗ್ರರು, ವಿದೇಶಿ ಪ್ರಜೆಗಳನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದು ವಿವಿಧ ರಾಷ್ಟ್ರಗಳ ಪ್ರಜೆಗಳನ್ನು ಬೇರೆ ಬೇರೆ ನೆಲೆಗಳಲ್ಲಿ ಅಡಗಿಸಿಟ್ಟಿದ್ದರು.

ಭಾರತೀಯರ ಜೊತೆಗೆ 51 ಬಾಂಗ್ಲಾದೇಶಿ ಕಾರ್ಮಿಕರನ್ನು ಒತ್ತೆಯಾಗಿರಿಸಿಕೊಂಡಿದ್ದ ಐಸಿಸ್ ಪಡೆಯ ನಿರ್ನಾಮಕ್ಕೆ ಇದೀಗ ಸುಬ್ರಮಣಿಯನ್ ಸ್ವಾಮಿ ಸೂಕ್ತ ಸಲಹೆ ನೀಡಿ ಉಗ್ರರನ್ನು ಮಟ್ಟ ಹಾಕಲು ರಣತಂತ್ರವನ್ನೇ ಹೂಡಿರುವುದೇ ಹೆಮ್ಮೆಯ ವಿಚಾರವಾಗಿದೆ. ಒಟ್ಟಿನಲ್ಲಿ ಅದೆಷ್ಟೋ ಅಮಾಯಕರನ್ನು ಬರ್ಬರವಾಗಿ ಕೊಂದಿರುವ ದುರುಳ ರಕ್ಕಸರನ್ನು ಬೇರು ಸಹಿತ ಕಿತ್ತೊಗೆಯಲು ಹರ ಸಾಹಸ ಪಡುತ್ತಿರುವ ದೇಶಗಳಿಗೆ ಸ್ವಾಮಿಯವರ ಈ ಮಾಸ್ಟರ್ ಪ್ಲಾನ್ ಯಾವ ರೀತಿ ಕೆಲಸ ಮಾಡಲಿದೆ ಅನ್ನೋದನ್ನು ಕಾದು ನೋಡಬೇಕಾಗಿದೆ.

– ಅಲೋಖಾ

Tags

Related Articles

Close