ಪ್ರಚಲಿತ

ಜಾಗತಿಕವಾಗಿ ಪಾಕಿಸ್ತಾನದ ಮರ್ಯಾದೆ ಹರಾಜು ಹಾಕಿದ ತಾಲಿಬಾನ್!

ಭಾರತದ ಶತ್ರು ರಾಷ್ಟ್ರ ಪಾಕಿಸ್ತಾನ ಒಂದಿಲ್ಲೊಂದು ಕಾರಣಕ್ಕೆ ಜಗತ್ತಿನೆದುರು ಆಗಾಗ ಬೆತ್ತಲಾಗುತ್ತಲೇ ಇರುತ್ತದೆ. ಅಪಹಾಸ್ಯ‌ಕ್ಕೆ ಈಡಾಗುತ್ತಲೇ ಇರುತ್ತದೆ. ಸದ್ಯ ಪಾಕಿಸ್ತಾನವನ್ನು ಅಪಹಾಸ್ಯ ಮಾಡಿ ತಾಲೀಬಾನ್ ಫೋಟೋ ಒಂದನ್ನು ಹಂಚಿಕೊಂಡಿದೆ.

1971 ರ ಯುದ್ಧದಲ್ಲಿ ಭಾರತ ದೇಶದೆದುರು ಪಾಕಿಸ್ತಾನದ ಸೇನೆ ಶರಣಾದ ಚಿತ್ರವನ್ನು ಹಂಚಿಕೊಂಡು ಅಫ್ಘಾನಿಸ್ತಾನದ ತಾಲೀಬಾನಿಗಳು ಪಾಕಿಸ್ತಾನವನ್ನು ತಮಾಷೆ ಮಾಡಿದ್ದಾರೆ. ಅಫ್ಘಾನಿಸ್ತಾನದ ತಹ್ರೀಕ್ – ಎ – ತಾಲೀಬಾನ್ ಪಾಕಿಸ್ತಾನದ ಅಡಗುದಾಣಗಳ ವಿರುದ್ಧ ಸಂಭಾವ್ಯ ಸೇನಾ ಕಾರ್ಯಾಚರಣೆಯ ಬಗ್ಗೆ ಪಾಕ್ ನ ಆಂತರಿಕ ಸಚಿವ ಸನಾವುಲ್ಲಾ ಸುಳಿವು ನೀಡಿದ್ದು, ಆ ಬಳಿಕ ಪಾಕಿಸ್ತಾನವನ್ನು ಕುರಿತು ವ್ಯಂಗ್ಯವಾಡಿ ಭಾರತಕ್ಕೆ ಶರಣಾದ ಚಿತ್ರವನ್ನು ಹಂಚಿಕೊಂಡಿದೆ. ಜೊತೆಗೆ ಎಚ್ಚರಿಕೆಯ ಸಂದೇಶವನ್ನು ಸಹ ನೀಡಿದೆ.

ಈ ಬಗ್ಗೆ ಟ್ವೀಟ್ ಮಾಡಿದ್ದು, ತಾಲೀಬಾನ್ ನಾಯಕ ಮತ್ತು ಉಪ ಪ್ರಧಾನಿಯಾದ ಅಹ್ಮದ್ ಯಾಸಿರ್ ಎಂಬಾತ, 1971 ರ ಬಾಂಗ್ಲಾದೇಶ ರಚನೆಗೆ ಕಾರಣವಾದ ಯುದ್ಧದ ಸಂದರ್ಭದಲ್ಲಿ, ಇಸ್ಲಾಮಾಬಾದ್ ಭಾರತದೆದುರು ಮಂಡಿಯೂರಿತ್ತು. ಈ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಹಾಗೆಯೇ ಟಿಟಿಪಿ ಮೇಲೆ ಮಿಲಿಟರಿ ದಾಳಿ ಆರಂಭಿಸಿದಲ್ಲಿ ಮತ್ತೆ ಇಂತಹದ್ದೇ ಅವಮಾನಕರ ಘಟನೆ ಮರುಕಳಿಸಲಿದೆ ಎಂದು ತಾಲೀಬಾನ್ ಹೇಳಿದೆ.

ಈ ಸಂಬಂಧ ತಾಲೀಬಾನ್ ಮಾಡಿರುವ ಟ್ವೀಟ್‌ನಲ್ಲಿ “ಪಾಕ್‌ನ ಆಂತರಿಕ ಮಂತ್ರಿಗಳೇ, ಅದ್ಭುತ. ಸಿರಿಯಾದಲ್ಲಿರುವ ಕುರ್ದಿಗಳನ್ನು ಗುರಿಯಾಗಿಸಲು ಸಿರಿಯಾ ಅಥವಾ ಪಾಕಿಸ್ತಾನ ಟರ್ಕಿಯಲ್ಲ. ಇದು ಅಫ್ಘಾನಿಸ್ತಾನ. ಹೆಮ್ಮೆಯ ಸಾಮ್ರಾಜ್ಯ‌ಗಳ ಸ್ಮಶಾನ. ನಮ್ಮ ಮೇಲೆ ಮಿಲಿಟರಿ ದಾಳಿ ನಡೆಸಲು ಪ್ರಯತ್ನ ಮಾಡಬೇಡಿ. ಹಾಗಾದಲ್ಲಿ ಈ ಹಿಂದೆ ಭಾರತದೆದುರು ನಾಚಿಗೆಕೆಟ್ಟ ಸಂದರ್ಭ ಮತ್ತೆ ಸೃಷ್ಟಿಯಾಗಬಹುದು” ಎಂದು ತಿಳಿಸಿದೆ.

ಒಟ್ಟಿನಲ್ಲಿ ಇರಲಾರದೆ ಇರುವೆ ಬಿಟ್ಟುಕೊಂಡು ವಿಶ್ವದೆದುರು ಪಾಕಿಸ್ತಾನ ತಲೆ ತಗ್ಗಿಸುವಂತಾಗಿದೆ.

Tags

Related Articles

Close