ಪ್ರಚಲಿತ

ಯೋಗಿ ನಾಡಿನಲ್ಲಿಯೇ ಮುಸಲ್ಮಾನನ ಕೈಚಳಕದಲ್ಲಿ ಮೂಡಲಿದೆ ವಿಶ್ವ ಸಂತನ ಪ್ರತಿಮೆ!! ಅಷ್ಟಕ್ಕೂ ಈ ಮುಸಲ್ಮಾನನಾದರೂ ಯಾರು ಗೊತ್ತೇ??

ಈಗಾಗಲೇ ಭಾರತದ ಅತ್ಯಂತ ಅಪಾಯಕಾರಿ ರಾಜ್ಯ ಎಂದು ಪ್ರಖ್ಯಾತಿಯನ್ನು ಗಳಿಸಿದ್ದಂತಹ ಉತ್ತರ ಪ್ರದೇಶ ಇಂದು ಫೈರ್ ಬ್ರಾಂಡ್ ಖ್ಯಾತಿಯ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಾರ್ಯವೈಖರಿಯಿಂದಾಗಿ ಕೊಲೆ ಸುಲಿಗೆಗಳಿಗೆ ಬ್ರೇಕ್ ಬಿದ್ದಿದೆಯಲ್ಲದೇ, ಇದರ ಜೊತೆಗೆ ಕೋಮು ಸೌಹರ್ದತೆಯನ್ನು ಮೆರೆಯುತ್ತಿರುವ ವಿಚಾರ ತಿಳಿದೇ ಇದೆ!! ಆದರೆ ಇದೀಗ ಯೋಗಿ ನಾಡಿನಲ್ಲಿ ಒರ್ವ ಮುಸಲ್ಮಾನನ ಕೈ ಚಳಕದಲ್ಲಿ ವಿಶ್ವ ಸಂತನಾಗಿರುವ ವಿವೇಕಾನಂದರ ಪ್ರತಿಮೆ ಪ್ರತಿಷ್ಠಾಪನೆಗೊಳ್ಳಲಿದೆ ಎಂದರೆ ಅದು ನಿಜಕ್ಕೂ ಕೂಡ ಹೆಮ್ಮೆಯ ವಿಚಾರವೇ ಸರಿ.

ಸ್ವಾಮಿ ವಿವೇಕಾನಂದರರು ಅಂದು ಚಿಕಾಗೋದಲ್ಲಿ “ಅಮೇರಿಕಾದ ನನ್ನ ಪ್ರೀತಿಯ ಸಹೋದರ, ಸೋದರಿಯರೇ” ಎಂಬ ಐದು ಪದಗಳ ಕಂಚಿನ ಕಂಠದ ವಾಕ್ಯವು, ಪಾಶ್ಚಾತ್ಯರನ್ನು ತನ್ನ ಕಾಲ ಬುಡಕ್ಕೆ ಬೀಳುವಂತೆ ಮಾಡಿತ್ತು. ಅಲ್ಲಿ ಆರಂಭವಾದ ಇವರ ಭಾಷಣ ಇಡೀ ಪಾಶ್ಚಾತ್ಯರನ್ನು ತಲ್ಲಣಗೊಳಿಸಿತ್ತಲ್ಲದೇ ಹಿಂದೂ ಧರ್ಮವನ್ನು ಕಡೆಗಣಿಸುತ್ತಿದ್ದ ಪಾಶ್ಚಾತ್ಯರಿಗೆ ಸನಾತನ ಧರ್ಮದ ಮಹತ್ವವನ್ನು ವಿಶ್ವದಾದ್ಯಂತ ಸಾರಿರುವ ಹಿರಿಮೆಯೂ ಇವರದ್ದಾಗಿದೆ!! ಇಂತಹ ಮಹಾನ್ ಪುರುಷನ ಪ್ರತಿಮೆ ಇನ್ನು ಮುಂದೆ ಉತ್ತರ ಪ್ರದೇಶದಲ್ಲಿ ತಲೆ ಎತ್ತಿ ನಿಲ್ಲಲಿದ್ದು, ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದನಿಂದ ಈ ಒಂದು ಬೃಹತ್ ಪ್ರತಿಮೆಯೂ ನಿರ್ಮಾಣವಾಗಲಿದೆ.

Related image

ಹೌದು… ಈಗಾಗಲೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಾನೂನು ಸುವ್ಯವಸ್ಥೆ ಕುರಿತು ಕೈಗೊಂಡ ಕಠಿಣ ಕ್ರಮಗಳು, ದಿಟ್ಟ ನಿಲುವುಗಳಿಂದ ಹಿಂದೂಗಳಿಗೆ ಸೂಕ್ತ ಭದ್ರತೆ ದೊರೆಯುತ್ತಿರುವ ಜತೆಗೆ ಯೋಗಿ ಸರ್ಕಾರವು ತನ್ನ ನಾಡಿನ ಜನತೆಗೆ ರಕ್ಷಣೆ ನೀಡುತ್ತಲೇ ಬರುತ್ತಿದೆ. ಹಾಗಾಗಿ ಕಳೆದ ವರ್ಷದ ಆರಂಭದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ, 1,240 ಎನ್ ಕೌಂಟರ್ ಗಳು ನಡೆದಿವೆ. ಅಷ್ಟೇ ಅಲ್ಲದೇ, ಯುಪಿ ಡಿಜಿಪಿ ಕಚೇರಿಯಿಂದ ನೀಡಲ್ಪಟ್ಟ ಮಾಹಿತಿಯ ಪ್ರಕಾರ, 142 ಮಂದಿ ಅಪರಾಧಿಗಳು ವಾಟೆಂಡ್ ಲಿಸ್ಟ್ ನಲ್ಲಿದ್ದು, ಅವರನ್ನು ಶರಣಾಗುವಂತೆ ಸರ್ಕಾರ ಹೇಳಿ ಗೂಂಡಾಗಳಿಗೆ ಯೋಗಿ ಸರ್ಕಾರ ಬಿಸಿ ತಟ್ಟಿತ್ತು!!

ಆದರೆ ಇದೀಗ ಉತ್ತರ ಪ್ರದೇಶದ ರೌಡಿಗಳೇ ತಮ್ಮ ಇತಿಹಾಸವನ್ನೇ ಬದಲಾಯಿಸಿಕೊಳ್ಳುತ್ತಿರುವ ಮೂಲಕ ಗೂಂಡಾಗಿರಿಗೆ ಗುಡ್ ಬೈ ಹೇಳಿ ಮಾಮುಲಿ ಮನುಷ್ಯರಂತೆ ದುಡಿದು ತಿನ್ನುವ ಕಾಯಕದಲ್ಲಿ ತೊಡಗಿರುವ ವಿಚಾರವೂ ತಿಳಿದೇ ಇದೆ!! ಇಂತಹ ಯೋಗಿಯ ನಾಡಿನಲ್ಲಿ ಇದೀಗ ಸ್ವಾಮಿ ವಿವೇಕಾನಂದರ ಅತಿ ಎತ್ತರದ ಪ್ರತಿಮೆಯೊಂದು ವರ್ಷಾಂತ್ಯಕ್ಕೆ ಪ್ರತಿಷ್ಠಾಪನೆಗೊಳ್ಳಲಿದೆ! ಅಷ್ಟಕ್ಕೂ ಈ ಪ್ರತಿಮೆಯ ವಿಶೇಷವಾದರೂ ಏನು ಗೊತ್ತೇ?? ಯೋಗಿ ನಾಡಿನಲ್ಲಿ ತಮ್ಮ ಕೈ ಚಳಕವನ್ನು ಮೆರೆಯಲಿರುವ ಆ ಮುಸಲ್ಮಾನ ನಾದರೂ ಯಾರು ಗೊತ್ತೇ???

ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರಾಗಿರುವ ಸ್ವಾಮಿ ವಿವೇಕಾನಂದರು ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಪರಿಗಣಿತರಾಗಿದ್ದಂತ ವ್ಯಕ್ತಿಯಾಗಿದ್ದಾರೆ!! ಭಾರತದ ತತ್ವಗಳನ್ನು ಪಾಶ್ಚಾತ್ಯ ಪ್ರಪಂಚಕ್ಕೆ ತಿಳಿಸಿಕೊಟ್ಟಿರುವ ಸ್ವಾಮಿ ವಿವೇಕಾನಂದರ ಪ್ರತಿಮೆಯೂ ಉತ್ತರಪ್ರದೇಶದಲ್ಲಿ ರಾರಾಜಿಸಲಿದೆ ಎಂದರೆ ಇದಕ್ಕಿಂತಲೂ ದೊಡ್ಡ ಹೆಮ್ಮೆಯ ವಿಚಾರ ಮತ್ತೊಂದಿಲ್ಲ.

ಕಲಾವಿದನ ಕೈಚಳಕದಲಿ ಮೂಡಲಿದೆ ಸ್ವಾಮಿ ವಿವೇಕನಂದರ ಪ್ರತಿಮೆ!! ಅಷ್ಟಕ್ಕೂ ಆ ಕಲಾವಿದನಾದರೂ ಯಾರು ಗೊತ್ತೇ??

ಉತ್ತರ ಪ್ರದೇಶದಲ್ಲಿ ಸ್ವಾಮಿ ವಿವೇಕಾನಂದರ ಅತಿ ಎತ್ತರದ ಪ್ರತಿಮೆಯೊಂದು ವರ್ಷಾಂತ್ಯಕ್ಕೆ ಪ್ರತಿಷ್ಠಾಪನೆಗೊಳ್ಳಲಿದ್ದು, ಈಗಾಗಲೇ ಇದರ ಎಲ್ಲಾ ತಯಾರಿಯೂ ಭರ್ಜರಿಯಾಗಿಯೇ ನಡೆದಿದೆ. ಅಷ್ಟಧಾತುವಿನಿಂದ ನಿರ್ಮಾಣವಾಗಲಿರುವ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ನಿರ್ಮಿಸಲಿರುವುದು ಬೇರಾರು ಅಲ್ಲ…. ಅಂತಾರಾಷ್ಟ್ರೀಯ ಯುವ ಕಲಾವಿದ ವಾಜಿದ್ ಖಾನ್!! ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ ವಾಜಿದ್ ಖಾನ್ ಭಾರತದಲ್ಲೇ ಅತ್ಯಂತ ಎತ್ತರದ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ನಿರ್ಮಿಸುತ್ತಿರುವುದೇ ಹೆಮ್ಮೆಯ ವಿಚಾರವಾಗಿದೆ.

Image result for vivekananda statue

ಕೋಲ್ಕತ್ತಾದಲ್ಲಿ ಪ್ರತಿಷ್ಠಾಪಿಸಿರುವ 40 ಅಡಿ ಎತ್ತರದ ವಿವೇಕಾನಂದರ ಪ್ರತಿಮೆ ದೇಶದ ಅತೀ ಎತ್ತರದ ಪ್ರತಿಮೆ ಎಂದು ಹೆಸರಾಗಿತ್ತು!! ಆದರೆ ಇದೀಗ ಇದಕ್ಕೆ ಸೆಡ್ಡು ಹೊಡೆಯುವಂತೆ 170 ಅಡಿ ಎತ್ತರದ ಪ್ರತಿಮೆಯನ್ನು ರಚಿಸುವ ಕಾರ್ಯ ಇಂದೋರ್ ನಲ್ಲಿ ನಡೆಯುತ್ತಿರುವುದೇ ಹೆಮ್ಮೆಯ ವಿಚಾರವಾಗಲಿದೆ. ಉತ್ತರ ಪ್ರದೇಶ, ದಿಲ್ಲಿ ಹಾಗೂ ಗುಜರಾತ್ ನ ಕೆಲವು ಉದ್ಯಮಿಗಳು ಇದರ ವೆಚ್ಚ ಭರಿಸಲಿದ್ದು, ಅಂತಿಮವಾಗಿ ಎಲ್ಲಿ ಪ್ರತಿಮೆಯನ್ನು ಪ್ರತಿಷ್ಠಾಪಿಸ ಬೇಕು ಎಂಬುವುದನ್ನು ಅವರೇ ನಿರ್ಧರಿಸಲಿದ್ದಾರೆ.

ಈ ಬೃಹತ್ ಪ್ರತಿಮೆಯಲ್ಲಿದೆ ನಾನಾ ವಿಶೇಷತೆಗಳು……!!

ಹೌದು…. ಈಗಾಗಲೇ ಈ ಬೃಹತ್ ಪ್ರತಿಮೆ ನಿರ್ಮಾಣಕ್ಕೆ ಎಲ್ಲಾ ತಯಾರಿಗಳು ನಡೆದಿದ್ದು, ಬರೋಬ್ಬರಿ 170 ಅಡಿ ಎತ್ತರ ಇರಲಿದೆ ಎಂದು ತಿಳಿದು ಬಂದಿದೆ!! ಅಷ್ಟೇ ಅಲ್ಲದೇ ಅಷ್ಟಧಾತುಗಳ ಪ್ರತಿಮೆಯು ಇದಾಗಲಿದ್ದು, ಉತ್ತರ ಪ್ರದೇಶ, ದಿಲ್ಲಿ ಹಾಗೂ ಗುಜರಾತ್ ನ ಕೆಲವು ಉದ್ಯಮಿಗಳು ಇದರ ವೆಚ್ಚ ಭರಿಸಲಿದ್ದಾರೆ!! ಹಾಗಾಗಿ ಇನ್ನು ಕೆಲವೇ ತಿಂಗಳಿನಲ್ಲಿ ಸ್ವಾಮಿ ವಿವೇಕಾನಂದರ 170 ಅಡಿ ಎತ್ತರದ ಅಷ್ಟಧಾತುವಿನ ಪ್ರತಿಮೆಯು ಉತ್ತರ ಪ್ರದೇಶದಲ್ಲಿ ರಾರಾಜಿಸಲಿದೆ!!

ಅಷ್ಟಧಾತುಗಳಿಂದ ಅಂದರೆ, ಕಬ್ಬಿಣ, ಚಿನ್ನ, ಬೆಳ್ಳಿ, ತಾಮ್ರ, ಸೀಸ, ತವರ ಮತ್ತು ಪಾದರಸಗಳಿಂದ ಪ್ರತಿಮೆ ನಿರ್ಮಾಣಗೊಳ್ಳಲಿದ್ದು, ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದನಿಂದ ಈ ಒಂದು ಬೃಹತ್ ಪ್ರತಿಮೆಯೂ ನಿರ್ಮಾಣವಾಗಲಿರುವುದೇ ಹೆಮ್ಮೆಯ ವಿಚಾರ!!

37 ವರ್ಷ ಪ್ರಾಯದ ವಾಜಿದ್ ಖಾನ್ ಮೂಲತಃ ಮಧ್ಯ ಪ್ರದೇಶದವರು. ಸದ್ಯ ಇಂದೋರ್‍ನಲ್ಲಿ ನೆಲೆಸಿದ್ದು, ಅಲ್ಲಿಯೇ ಸ್ಟುಡಿಯೋವನ್ನು ಹೊಂದಿದ್ದಾರೆ!! ಡ್ರಾಯಿಂಗ್ ಮತ್ತು ಪೇಂಟಿಂಗ್‍ನಲ್ಲಿ ಪದವಿ ಪಡೆದಿರುವ ವಾಜಿದ್ ಕಬ್ಬಿಣದ ಮೊಳೆಗಳಿಂದ ಶಿಲ್ಪ ರಚನೆ ಮಾಡುವ ಪರಿಣಿತ ಕಲಾವಿದರಾಗಿದ್ದಾರೆ. ಈಗಾಗಲೇ ಲಂಡನ್‍ನ ರಾಯಲ್ ಅರಮನೆಯಲ್ಲಿ ಬ್ರಿಟಿಷ್ ರಾಣಿ ಎಲಿಜಬೆತ್ ಅವರ ಬೃಹತ್ ಪ್ರತಿಮೆ ನಿರ್ಮಿಸಿಸುವ ಮೂಲಕ ಹೆಸರುವಾಸಿಯಾಗಿರುವ ಇವರು, 2022ರ ಕತ್ತರ್ ನಲ್ಲಿ ನಡೆಯಲಿರುವ ‘ಫಿಫಾ’ ವಿಶ್ವಕಪ್ ಫುಟ್ ಬಾಲ್ ಟೂರ್ನಿಯ ಶಿಲ್ಪಕೃತಿಯನ್ನು ಖಾನ್ ರಚಿಸುತ್ತಿದ್ದಾರೆ.

ಒಟ್ಟಿನಲ್ಲಿ, “ದೇಶವನ್ನು ಮುನ್ನಡೆಸಲು ಸಶಕ್ತವಾದ ಯುವಪಡೆಯನ್ನು ನಿರ್ಮಿಸುವುದೇ ನನ್ನ ಗುರಿ” ಎಂದ ವೇದಾಂತದ ಸಿಡಿಲಮರಿಯಾಗಿರುವ ಸ್ವಾಮಿ ವಿವೇಕಾನಂದರು ಇದೀಗ ದೇಶದಲ್ಲಿಯೇ ಎತ್ತರವಾದ ಅಷ್ಠಧಾತುಗಳಿಂದ ಕೂಡಿರುವ ಬೃಹತ್ ಪ್ರತಿಮೆಯ ಮೂಲಕ, ಕೆಲವೇ ತಿಂಗಳಿನಲ್ಲಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ರಾಜ್ಯದಲ್ಲಿ ರಾರಾಜಿಸಲಿದ್ದಾರೆ ಎಂದರೆ ಅದಕ್ಕಿಂತಲೂ ಹೆಮ್ಮೆಯ ವಿಚಾರ ಮತ್ತೊಂದಿಲ್ಲ!!

– ಅಲೋಖಾ

Tags

Related Articles

Close