ಪ್ರಚಲಿತ

ಮೋದಿ ಅಲೆ ಮಾತ್ರವಲ್ಲ! ಭಾರತದಲ್ಲಿ ಪ್ರಾರಂಭವಾಗಿದೆ ಹೊಸ ಅಲೆ!! ತ್ರಿಪುರದಲ್ಲಿ ಬಿಜೆಪಿ ಗೆದ್ದಿದ್ದು ಈ ಮಹಾನ್ ವ್ಯಕ್ತಿಯಿಂದ!! ಕರ್ನಾಟಕದಲ್ಲಾಗಲಿದೆ ಸಂಚಲನ!!

ಹಾ! ದೇಶದಲ್ಲಿ ಈಗಿರುವುದು ಕೇವಲ ಮೋದಿ ಅಲೆ ಮಾತ್ರವಲ್ಲ! ಬದಲಿಗೆ ಕೇಸರೀ ವಸ್ತ್ರ ಹೊದ್ದ ಯೋಗಿಯ ಮಹಾನ್ ಅಲೆಯೊಂದು ಸುನಾಮಿಯಂತೆ ಅಪ್ಪಳಿಸಿದೆ! ಅದರಲ್ಲು ಕಾಂಗ್ರೆಸ್ ಗೆ ಯೋಗಿಯ ಬೆಂಕಿಯಲೆಯೊಂದು ಧೃತಿಗೆಡಿಸಿರುವಾಗಲೇ, ಇತ್ತ ಕಮ್ಯುನಿಸ್ಟ್ ಪಕ್ಷಗಳಿಗೂ ನಡುಕ ಹುಟ್ಟಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ೨೫ ವರ್ಷಗಳ ನಂತರ, ತ್ರಿಪುರದಲ್ಲಿ ಬಿಜೆಪಿಯ ರಣಕಹಳೆ ಗೆದ್ದಿದೆ! ಕೇಸರೀ ಧ್ವಜವೊಂದು ರಾರಾಜಿಸಿದೆ!!

ತ್ರಿಪುರ, ನಾಗಾಲ್ಯಾಂಡ್ ಮತ್ತು ಮೇಘಾಲಯ ದ ಚುನಾವಣಾ ಪ್ರಚಾರದಲ್ಲಿ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಅಮಿತ್ ಷಾ , ಅರುಣ್ ಜೇಟ್ಲಿ ಯಿಂದ ಹಿಡಿದು ಯೋಗಿ ಆದಿತ್ಯನಾಥ್ ರವರು ಕೂಡ ಭಾಗವಹಿಸಿದ್ದರಷ್ಟೇ!! ತ್ರಿಪುರದಲ್ಲಂತೂ, ಮುಖ್ಯಮಂತ್ರಿ ಮಾಣಿಕ್ ಸರಕಾರದ ವಿರುದ್ಧ ಮಾತಿನಲ್ಲೇ ಚಾಟಿಯೇಟು ನೀಡಿದ್ದ ಯೋಗಿ ಆದಿತ್ಯನಾಥ್ ರ ಬರುವಿಕೆಯೊಂದನ್ನು ತಡೆಯಲು ಬಹಳಷ್ಟು ಪ್ರಯತ್ನಿಸಿದ್ದ ಕಮ್ಯನಿಸ್ಟರ ಸರಕಾರ ಕೊನೆಗೂ ವಿಫಲವಾಗಿತ್ತು!!

“When the BJP took charge in UP, there was a fear among mothers and sisters to walk alone in the streets and communal violence occurred every third day. Today, I can claim proudly that in the last 10 months of BJP regime in that state there has been no communal clashes in UP. However, in Karnataka, there have been 22 murders of BJP karyakarthas and no action. This shows that wherever Congress is in power all is not well with governance in those states,

ಯೋಗಿ ಆದಿತ್ಯನಾಥ್ ಸುಮ್ಮಸುಮ್ಮನೇ ಕಾಲಿಟ್ಟಿರಲಿಲ್ಲ ತ್ರಿಪುರಕ್ಕೆ! ಬದಲಾಗಿ, ತ್ರಿಪುರದಲ್ಲಿ ಗೆಲ್ಲಲು ಪ್ರಮುಖವಾಗಿದ್ದದ್ದೇ ಧಾರ್ಮಿಕತೆ!! ಉತ್ತರ ಪ್ರದೇಶದ ಗೋರಖ ನಾಥ ದೇವಸ್ಥಾನಕ್ಕೆ ತ್ರಿಪುರದಲ್ಲಿ ೧೦ – ೧೨ ಲಕ್ಷ ಜನ ನಡೆದುಕೊಳ್ಳುವುದಲ್ಲದೇ, ದೇವಸ್ಥಾನದ ಸಂಪ್ರದಾಯಗಳನ್ನೂ ಸಹ ಭಯ ಭಕ್ತಿಯಿಂದ ಪಾಲಿಸುವುದನ್ನೇ ಬಂಡವಾಳ ಹೂಡಿದ ಯೋಗಿ ಆದಿತ್ಯನಾಥ್ ಹೇಳಿದ್ದು ಒಂದೇ ಮಾತು! ನಾನು ಕೇಸರೀ ವಸ್ತ್ರ ಹೊದ್ದ ರಾಜಕೀಯ ಸಂತ! ಗೋರಖನಾಥನ ನ್ನು ಆರಾಧಿಸುವವರು ಭಾರತ ಮಾತೆಯ ಉಳಿವಿಗೂ ಹೋರಾಡಬೇಕಾಗಿದೆ ಎಂಬುದಷ್ಟನ್ನೇ!! ಹಿಂದೂಗಳ ಸಾವನ್ನೂ ಸಹ ವಿರೋಧಿಸೊ್ದ ಯೋಗಿ ಆದಿತ್ಯನಾಥ್ ಗೋರಖನಾಥನ ಸಾಕ್ಷ್ಯ ವಹಿಸಿಯೇ ಹೇಳಿದ್ದರು! ಹಿಂದೂಗಳು ಉಳಿಯಬೇಕಾ?! ಗೋರಖನಾಥನ ಸಾಕ್ಷ್ಯವಾಗಿ ಬಿಜೆಪಿಗೆ ಮತ ಹಾಕಿ!! ಅಷ್ಟೇ!! ತ್ರಿಪುರದ ೩೫ ಲಕ್ಷ ಮತದಾರರಲ್ಲಿ ಅರ್ಧಕ್ಕರ್ಧ ಜನ ಬಿಜೆಪಿಗೆ ಜೈ ಕಾರ ಹಾಕಿದ್ದರು!!

ಕೇವಲ ಇದೊಂದೇ ಅಲ್ಲ! ತ್ರಿಪುರಾದ ಪ್ರಚಾರಕ್ಕೂ ಮುನ್ನ ಯೋಗಿ ಆದಿತ್ಯನಾಥ್ ಪ್ರತೀ ಸೂಕ್ಷ್ಮ ವಿಚಾರಗಳ ಬಗ್ಗೆ ಗಮನ ಕೊಟ್ಟಿದ್ದರು! ಕಮ್ಯುನಿಸ್ಟ್ ಸರಕಾರ ಎಸ್ ಸಿ, ಎಸ್ ಟಿ ಮತ್ತು ಇತರೆ ಹಿಂದುಳಿದ ವರ್ಗಗಳ ಉನ್ನತಿಗೆ ಪ್ರಯತ್ನ ಪಡದೇ ಇದ್ದದ್ದು, ಯಾವುದೇ ರೀತಿಯ ಸೌಲಭ್ಯವನ್ನೂ ನೀಡದೇ
ಇದ್ದದ್ದು, ಹಿಂದೂಗಳ ಮಾರಣ ಹೋಮ, ರೋಹಿಂಗ್ಯಾಗಳ ಬಗ್ಗೆ ತ್ರಿಪುರಾಗಿದ್ದ ನಿರ್ಧಾರ, ಅಭಿವೃದ್ದಿಯ ಕಡೆಗಿದ್ದ ತಿರಸ್ಕಾರ. . ಹೀಗೆ ಅದೆಷ್ಟೋ ವಿಚಾರಗಳನ್ನು ಮಂಡಿಸಿದ್ದ ಯೋಗಿ ಆದಿತ್ಯನಾಥ್ ಎಲ್ಲದಕ್ಕಿಂತ ಹೆಚ್ಚಿನ ಗಮನ ಇರಿಸಿದ್ದು ತ್ರಿಪುರಾ ಪ್ರಜೆಗಳ ಪ್ರಸ್ತುತ ಮನಃಸ್ಥಿತಿಯ ಬಗ್ಗೆ!!

ಅದಕ್ಕೋಸ್ಕರವೇ, ಯೋಗಿ ಆದಿತ್ಯನಾಥ್ ತ್ರಿಪುರಾಗೆ ಬಿಜೆಪಿ ನಾಯಕರನ್ನು ಅಟ್ಟಿದ್ದು!! ಮಾಣಿಕ್ ಸರಕಾರವನ್ನು “ತಡೆಯೊಡ್ಡುವ ಸರಕಾರ” ಎಂದಿದ್ದ ಯೋಗಿ ಆದಿತ್ಯನಾಥ್ ಹೇಗೆ ಕೇಂದ್ರ ಸರಕಾರದ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಮಾಣಿಕ್ ಸರಕಾರ ಅಡ್ಡಗಟ್ಟಿ ಜನರಿಗೆ ತಲುಪದಂತೆ ಮಾಡಿತ್ತು ಎಂಬುದರ ಸಂಪೂರ್ಣ ಸಾಕ್ಷ್ಯಾಧಾರ ನೀಡಿದ್ದರು ಯೋಗಿ! ಅಲ್ಲಿಗೆ ಮಾಣಿಕ್ ಸರಕಾರದ ಕಥೆ ಮುಗಿದಿತ್ತು!!

ಈಗಿದೆ ಕರ್ನಾಟಕದ ಪಾಲು!! ಅಲೆ ಎಬ್ಬಿಸಲಿದೆ ಯೋಗಿಯ ಬೆಂಕಿ ಜ್ವಾಲೆ!!

ಈ ವೇಳೆ ಕರ್ನಾಟಕವನ್ನು ಹಾಡಿ ಹೊಗಳಿದ ಯೋಗಿ ಆದಿತ್ಯನಾಥ್, “ಇದು ಅಂತಿಂತ ನೆಲ ಅಲ್ಲ. ರಾಮಭಕ್ತ ಹನಮಂತ ಜನಿಸಿದ ಪುಣ್ಯ ನೆಲ. ಈ ನೆಲಕ್ಕೆ ನಾನು ಬಂದಿರೋದು ನಿಜವಾಗಿಯೂ ನನ್ನ ಅಧೃಷ್ಟ. ನನಗೆ ಸಿದ್ದರೂಢಾ ಸ್ವಾಮೀಜೀಗಳ ದರ್ಶನವೂ ಇಲ್ಲಿ ಆಯಿತು. ಅವರ ದರ್ಶನವೇ ನನ್ನ ಜೀವನದ ಪುಣ್ಯ” ಎಂದು ಹೇಳಿದ್ದರು.

“ರಾಜ್ಯದಲ್ಲಿ ಹಿಂದೂ ವಿರೋಧಿ ಕೃತ್ಯಗಳು ಮುಗಿಲು ಮುಟ್ಟಿದೆ. ಹಿಂಸೆ ಅತ್ಯಾಚಾರಗಳು ಎಲ್ಲೆಲ್ಲೂ ನಡೆಯುತ್ತಿದೆ. ಹಿಂದೂ ಸಂಘಟನೆಯ ಕಾರ್ಯಕರ್ತರ ಕೊಲೆಗಳು ರಾಜಾರೋಷವಾಗಿ ನಡೆಯುತ್ತಿದೆ. ಇದನ್ನು ತಡೆಯುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸಾಲು ಸಾಲು ಗೋಹತ್ಯೆಗಳು ನಿರಂತರವಾಗಿ ನಡೆಯುತ್ತಿದ್ದು ಇದರ ಬಗ್ಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಬದಲಾಗಿ ಹಿಂದೂ ಕಾರ್ಯಕರ್ತರ ಮೇಲೆಯೇ ಸಾಲು ಸಾಲು ಕೇಸುಗಳನ್ನು ಜಡಿಯಲಾಗುತ್ತಿದೆ.”

“ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ದೇಶದ್ರೋಹಿ ಟಿಪ್ಪುವಿನ ಪೂಜೆ ಮಾಡುತ್ತಿದೆ. ದೇಶವೇ ದೇಶಪ್ರೇಮಿಗಳ ದಿನಾಚರಣೆಯನ್ನು ಆಚರಿಸುತ್ತಿದ್ದರೆ ಈ ರಾಜ್ಯದ ಮುಖ್ಯಮಂತ್ರಿಗಳು ಮಾತ್ರ ಟಿಪ್ಪು ಜಪದಲ್ಲೇ ಮುಳುಗಿ ಹೋಗಿದ್ದಾರೆ. ಟಿಪ್ಪು ಒಬ್ಬ ಮತಾಂಧ. ಟಿಪ್ಪುವಿನ ಮೇಲೆ ಲಕ್ಷಾಂತರ ಹಿಂದೂಗಳ ಸಿಟ್ಟಿದೆ. ಹೀಗಿರುವಾಗ ಅದೇಗೆ ಮುಖ್ಯಮಂತ್ರಿಗಳು ಆತನ ಜಯಂತಿಯನ್ನು ಆಚರಿಸಿದರೋ ಗೊತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯರ ಭಾಷಣ ಕೇಳಿ ನನಗೆ ಆಶ್ಚರ್ಯವಾಗಿತ್ತು ಎಂದು ಖಾರವಾಗಿಯೇ ಹೇಳಿದ್ದಾರೆ. ಈ ನೆಲದಲ್ಲಿ ಹನುಮ ಜನಿಸಿದ್ದಾನೆ. ಹನುಮನ ಜಯಂತಿಯನ್ನು ನೀವು ಎಂದಾದರೂ ಆಚರಿಸಿದ್ದೀರಾ..? ಮೊದಲು ಟಿಪ್ಪು ಜಯಂತಿಯನ್ನು ಬಿಟ್ಟು ಈ ನೆಲಕ್ಕೆ ಕೀರ್ತಿ ತಂದ ಹನುಮನ ಜಯಂತಿಯನ್ನು ಮಾಡಿ!!”

ಸಿದ್ಧರಾಮಯ್ಯ ಸರಕಾರಕ್ಕೆ ಉಗಿದಿದ್ದ ಯೋಗಿ ಆದಿತ್ಯನಾಥ್ ಕರ್ನಾಟಕದಲ್ಲಿಯೂ ಸಹ ಪ್ರಚಾರದಲ್ಲಿ ಭಾಗಿಯಾಗಿದ್ದರು! ತ್ರಿಪುರಾದ ಫಲಿತಾಂಶವೇನಾದರೂ ಕರ್ನಾಟದಲ್ಲಿ ಪ್ರತಿಫಲಿಸಿದರೆ, ಬಹುಷಃ ಮುಂದಿನ ವರ್ಷಗಳಲ್ಲಿ ಹಿಂದೂಗಳು ಬದುಕಲು ಸಾಧ್ಯವಿದೆಯಷ್ಟೇ!!

– ಪೃಥು ಅಗ್ನಿಹೋತ್ರಿ

Tags

Related Articles

Close