ಪ್ರಚಲಿತ

ಸನಾತನ ಧರ್ಮವನ್ನು ಅವಹೇಳನ ಮಾಡಿದ ‘ಕಾಮಾಲೆ ಕಣ್ಣಿನ’ ಉದಯ ನಿಧಿ

ನಮ್ಮ ದೇಶದ ಉಸಿರು, ಸಂಸ್ಕೃತಿಯೇ ಆಗಿರುವ ಸನಾತನ ಹಿಂದೂ ಧರ್ಮವನ್ನು ಅವಹೇಳನ ಮಾಡುವುದು, ಹಿಂದೂಗಳ ಭಾವನೆಗೆ ಧಕ್ಕೆ ತರುವುದು, ನೋ ವು ಟು ಮಾಡುವುದರಲ್ಲಿ ಕೆಲವು ಕ್ರಿಮಿಗಳಿಗೆ ಅದೇನೋ ಸಂತೋಷ. ಹಿಂದೂಗಳನ್ನು ಕೆಣಕಿ ತಾವು ಪ್ರಚಾರಕ್ಕೆ ಬರಲು ಎಷ್ಟು ಹೀನ ಮಟ್ಟಕ್ಕೆ ಬೇಕಾದರೂ ಇಂತಹ ದುರ್ಗತಿ ‌ಪರ ಜೀವಿಗಳು ಇಳಿದು ಬಿಡುತ್ತಾರೆ. ಅವರಿಗೆ ನಾಚಿಕೆ, ಮಾನ, ಮರ್ಯಾದೆ ಯಾವುದೂ ಇಲ್ಲದೇ ಹೋದರೂ, ಹಿಂದೂ ಧರ್ಮವನ್ನು ದೂಷಿಸುವ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಅಂತಹ ದುರಾತ್ಮರ ಸಾಲಿಗೆ ತಮಿಳುನಾಡು ಮುಖ್ಯಮಂತ್ರಿ ಸ್ಟ್ಯಾಲಿನ್ ಪುತ್ರ ಉದಯ ನಿಧಿ ಸ್ಟ್ಯಾಲಿನ್ ಸಹ ಈಗ ಸೇರ್ಪಡೆಯಾಗಿದ್ದಾರೆ.

ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ ರೋಗಗಳಿಗೆ ಹೋಲಿಕೆ ಮಾಡುವ ಮೂಲಕ ತಮ್ಮದು ಕಾಮಾಲೆ ಕಣ್ಣು ಎಂಬುದನ್ನು ಜನರೆದುರು ತೆರೆದಿಟ್ಟಿದ್ದಾರೆ. ಆ ಮೂಲಕ ವಿವಾದ ಸೃಷ್ಟಿ ಮಾಡಿರುವ ಉದಯ ನಿಧಿ ವಿರುದ್ಧ ದೇಶದೆಲ್ಲೆಡೆ ವ್ಯಾಪಕ‌ ಆಕ್ರೋಶ ಸಹ ವ್ಯಕ್ತವಾಗಿದೆ. ಕೆಲ ದಿನಗಳ ಹಿಂದಷ್ಟೇ ಸನಾತನ ಧರ್ಮದ ವಿರುದ್ಧ ನಾಲಿಗೆ ಹರಿಯ ಬಿಟ್ಟಿರುವ ಸ್ಟ್ಯಾಲಿನ್ ಪುತ್ರ, ಸನಾತನ ಧರ್ಮವು ಸಾಮಾಜಿಕ ನ್ಯಾಯ, ಸಮಾನತೆಗೆ ವಿರುದ್ಧವಾಗಿದೆ ಎನ್ನುವ ಮೂಲಕ ತನ್ನ ನೀಚತನವನ್ನು ಪ್ರದರ್ಶನ ಮಾಡಿದ್ದಾರೆ.

ಸನಾತನ ಧರ್ಮದ ಕೆಲವು ವಿಚಾರಗಳನ್ನು ವಿರೋಧ ಮಾಡಿದರೆ ಸಾಲದು. ಬದಲಾಗಿ ಅವುಗಳನ್ನು ಸಂಪೂರ್ಣ ನಿರ್ಮೂಲನೆ ಮಾಡಲು ನೋಡಬೇಕು. ಡೆಂಗ್ಯೂ, ಮಲೇರಿಯಾ, ಕೊರೋನಾವನ್ನು ನಾವು ವಿರೋಧ ಮಾಡುವುದಲ್ಲ. ಅವುಗಳನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಪ್ರಯತ್ನ ಪಡಬೇಕು. ಹಾಗೆಯೇ ಸನಾತನ ಧರ್ಮವನ್ನು ಸಹ ನಿರ್ಮೂಲನೆ ಮಾಡಲು ನಮ್ಮ ಪ್ರಯತ್ನ ನಡೆಯಬೇಕು ಎಂದು ದುರ್ಮಾರ್ಗಿ ಉದಯ ನಿಧಿ ನಾಲಿಗೆ ಹರಿಯ ಬಿಟ್ಟಿದ್ದಾರೆ.

ಇವರ ಈ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆ, ಆಕ್ರೋಶ ವ್ಯಕ್ತವಾಗಿದೆ. ಸನಾತನ ಧರ್ಮದ ಪರ ಇರುವ ಭಾರತೀಯ ಜನತಾ ಪಕ್ಷ ಸಹ ಉದಯ ನಿಧಿ ಸ್ಟ್ಯಾಲಿನ್ ಹೇಳಿಕೆಯನ್ನು ಖಂಡಿಸಿದೆ. ಉದಯ ನಿಧಿ ಸನಾತನ ಧರ್ಮವನ್ನು ಕೊರೋನಾ, ಡೆಂಗ್ಯೂ, ಮಲೇರಿಯಾಗೆ ಹೋಲಿಕೆ ಮಾಡಿದ್ದಾರೆ. ಅವರ ಹೇಳಿಕೆಯನ್ನು ಮಾತ್ರ ವಿರೋಧ ಮಾಡುವುದಲ್ಲ. ಬದಲಾಗಿ ಸಂಪೂರ್ಣ ಅವರ ಚಿಂತನೆಯನ್ನೇ ನಿರ್ಮೂಲನೆ ಮಾಡಲು ನಾವು ಕೆಲಸ ಮಾಡಬೇಕು. ಆ ವ್ಯಕ್ತಿ ಸನಾತನ ಧರ್ಮವನ್ನು ಅನುಸರಿಸುವ ಜನರ ಹತ್ಯೆಗೆ ಕರೆ ನೀಡಿದ್ದಾರೆ ಎಂದು ಹೇಳಿದೆ.

ಒಟ್ಟಿನಲ್ಲಿ ಈ ದೇಶದಲ್ಲಿ ಸನಾತನ ಧರ್ಮ, ಹಿಂದೂ ಧರ್ಮವನ್ನು ಅವಹೇಳನ ಮಾಡುವವರಿಗೆ ಯಾವುದೇ ಭಯ ಇಲ್ಲವಾಗಿದೆ. ಬೇಕಾಬಿಟ್ಟಿ ಹೇಳಿಕೆ ನೀಡಿದರೂ ನಮ್ಮನ್ನು ಯಾರೂ, ಏನೂ ಮಾಡುವುದು ಸಾಧ್ಯವಿಲ್ಲ. ಸನಾತನಿಗಳು ಸಹೃದಯರು, ಅವರಲ್ಲಿ ಎಲ್ಲವನ್ನೂ ಸಹಿಸುವ ‌ತಾಳ್ಮೆ ಇದೆ ಎಂಬುದನ್ನು ಅರಿತಿರುವ ಇಂತಹ ಅವಿವೇಕಿಗಳು, ಹಿಂದೂಗಳನ್ನು ಕೆಣಕುವ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ, ತಮ್ಮ ತೀಟೆ ತೀರಿಸಿಕೊಳ್ಳುತ್ತಿದ್ದಾರೆ ಎನ್ನುವುದು ಸ್ಪಷ್ಟ ಮತ್ತು ಸತ್ಯ.

ಹಿಂದೂ ರಾಷ್ಟ್ರದಲ್ಲಿದ್ದುಕೊಂಡೇ ಸನಾತನ ಹಿಂದೂ ಧರ್ಮವನ್ನು ಅವಹೇಳನ ಮಾಡಿದರೂ ತಮಗೆ ಅದರಿಂದ ಅಪಾಯ ಇಲ್ಲ ಎಂಬುದು ಇಂತಹ ನಾಮರ್ಧರಿಗೆ ತಿಳಿದಿರುವುದರಿಂದಲೇ, ಇವರುಗಳು ತಮ್ಮ ಚೂರು ನಾಲಿಗೆ ಹರಿ ಬಿಡುತ್ತಿರುವುದು. ಅದೇ ಎಲ್ಲಾದರೂ ಬೇರೆ ಧರ್ಮಗಳ ಬಗ್ಗೆ ಉಸಿರೆತ್ತಿದರೆ ನಾಳೆ ಇಂತಹ ನಾಲಾಯಕ್ಕು‌ಗಳ ಹೆಣವೂ ಸಿಗಲಾರದು ಎಂಬ ಅರಿವು ಇವರಿಗಿದೆ. ಹಿಂದೂಗಳ ಸಹಿಷ್ಣುತೆ, ತಾಳ್ಮೆಯ ಜೊತೆಗೆ ಆಟವಾಡುವ ಇವರಿಗೆ ಆ ದೇವರೇ ತಕ್ಕ ಪಾಠ ಕಲಿಸಲಿ ಎಂಬುದು ನಮ್ಮ ಪ್ರಾರ್ಥನೆ.

Tags

Related Articles

Close