ಪ್ರಚಲಿತ

ಅಂಬೇಡ್ಕರ್ ಹೆಸರನ್ನೇ ಬದಲಿಸಿದ ಯೋಗಿ!! ಉತ್ತರದಲ್ಲಿ ಮತ್ತೊಂದು ಕ್ರಾಂತಿ!!

ಡಾ.ಬಿ.ಆರ್ ಅಂಬೇಡ್ಕರ್ ಭಾರತದ ಸಂವಿಧಾನ ಶಿಲ್ಪಿಯಾಗಿ ಅವರು ಈ ನೆಲದಲ್ಲಿ ಸ್ವಾತಂತ್ರ್ಯ ಸಮಾನತೆ ಹಾಗೂ ಭ್ರಾತೃತ್ವದ ತಳಹದಿ ಮೇಲೆ ಹೊಸ ಸಮಾಜವನ್ನು ಪ್ರಜಾಪ್ರಭುತ್ವದ ಮೌಲ್ಯಗಳ ಮೂಲಕ ಕಾನೂನು ಬದ್ಧವಾಗಿ ಸ್ಥಿರಗೊಳಿಸುವ ನಿರ್ವಣದ ಕನಸು ಕಂಡವರು!! ಅದಕ್ಕಾಗಿ ಜೀವಮಾನವಿಡೀ ಶ್ರಮಿಸಿದವರು. ಭಾರತದ ಸಂವಿಧಾನ ಈ ಹೊಸ ಸಮಾಜದ ಭದ್ರ ಬುನಾದಿ ಆಗುವಂತೆ ತಮ್ಮೆಲ್ಲಾ ಚಿಂತನೆ ಬೌದ್ಧಿಕತೆಗಳನ್ನು ಧಾರೆ ಎರೆದವರು ಡಾ.ಬಿ.ಆರ್ ಅಂಬೇಡ್ಕರ್!!

ಭಾರತದೇಶವನ್ನು ಕಾಡುತ್ತಿದ್ದ ಅಸ್ಪ್ಕಶ್ಯತೆ ಎಂಬ ಅನಿಷ್ಟವನ್ನು ಮೂಲೋತ್ಪಾಟನೆ ಮಾಡಿದ ಮಹಾಪುರುಷ ಅಂಬೇಡ್ಕರ್. ಸ್ವತಂತ್ರ ಭಾರತದ ಸಂವಿಧಾನ ರಚಿಸಿದ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್!! ಅನ್ಯಾಯ, ಶೋಷಣೆ, ಅಸ್ಪೃಶ್ಯತೆ ಮೊದಲಾದ ಸಾಮಾಜಿಕ ಅನಿಷ್ಟಗಳ ವಿರುದ್ದ ಹೋರಾಡಿ ಜಯಗಳಿಸಿದ ವ್ಯಕ್ತಿ. ಅಶಕ್ತ ದಲಿತ ಸಮೂಹದ ನೋವಿನ ಮಾರ್ದನಿ ಎಂದೇ ಪ್ರಸಿದ್ದರಾಗಿದ್ದರು. ಮೇಲಾಗಿ ಮಾನವತಾವಾದಿ ಸಂವಿಧಾನ ಶಿಲ್ಪಿ ಎಂದು ಪರಿ ಗಣಿತರಾದವರು. ಇವರು ಭಾರತ ದೇಶದ ನಾಯಕರಲ್ಲ ವಿಶ್ವದ ನಾಯಕರಾಗಿದ್ದು, ಮಾತ್ರವಲ್ಲದೇ ಅವರ ಹುಟ್ಟಿದ ದಿನವನ್ನು 143 ರಾಷ್ಟ್ರಗಳಲ್ಲಿ ಆಚರಣೆ ಮಾಡುವ ಮೂಲಕ ವಿಶೇಷ ಗೌರವ ನೀಡಲಾಗುತ್ತಿರುವ ಮಹಾನ್ ವ್ಯಕ್ತಿ!!

Image result for ambedkar with yogi

ಇಂತಹ ಅಭೂತ ಪೂರ್ವ ಇತಿಹಾಸ ಸೃಷ್ಟಿಸಿದ ಅಂಬೇಡ್ಕರ್‍ಗೆ ಕಾಂಗ್ರೆಸ್ ಸರಕಾರದಿಂದ ಅಂದಿನಿಂದ ಇಂದಿನವರೆಗೂ ಸಿಕ್ಕಿರುವುದು ಅವಮಾನಗಳ ಸುರಿಮಳೆ ಮಾತ್ರ.. ಆದರೆ ಕಾಂಗ್ರೆಸ್ಸಿಗರು ಡಾ. ಬಿ.ಆರ್ ಅಂಬೇಡ್ಕರ್‍ಗೆ ಮಾಡಿದ ಅವಮಾನವನ್ನು ಸಹಿಸದ ಬಿಜೆಪಿ ಸರಕಾರ ಮಾತ್ರ ಅವರಿಗೆ ಯಾವೆಲ್ಲಾ ಸ್ಥಾನವನ್ನು ಕೊಡಬೇಕೋ ಅದನ್ನೆಲ್ಲಾ ಕೊಡುತ್ತನೇ ಬಂದಿದ್ದಾರೆ!! ಇದೀಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಂದ ಅಂಬೇಡ್ಕರ್ ಹೆಸರಿನ ಜೊತೆಗೆ ಹೊಸ ಹೆಸರನ್ನು ಸೇರ್ಪಡೆ ಮಾಡುವ ಮೂಲಕ ಹೊಸ ನಾಂದಿಯನ್ನು ಹಾಡಿದ್ದಾರೆ!!

ಯೋಗಿ ಸರಕಾರದಿಂದ ಅಂಬೇಡ್ಕರ್ ಹೆಸರಿಗೆ ಹೊಸ ಸೇರ್ಪಡೆ!!

ಯೋಗಿ ಆದಿತ್ಯ ನಾಥ್ ನಾಯಕತ್ವದ ಉತ್ತರ ಪ್ರದೇಶದ ಬಿಜೆಪಿ ಸರಕಾರ ಸಂವಿಧಾನ ಶಿಲ್ಪಿ ಡಾ. ಭೀಮ್ ರಾವ್ ಅಂಬೇಡ್ಕರ್ ಹೆಸರಿಗೆ ಹೊಸ ಸೇರ್ಪಡೆ ಮಾಡಿದೆ. ಅಂಬೇಡ್ಕರ್ ಅವರ ಹೆಸರಿನ ನಡುವಿನಲ್ಲಿ ‘ರಾಮ್ ಜೀ’ ಎನ್ನುವ ಹೆಸರನ್ನು ಸೇರಿಸಲು ಉತ್ತರಪ್ರದೇಶದ ರಾಜ್ಯಪಾಲ ರಾಮ್ ನಾಯ್ಕ್ ಅವರಿಗೆ ಸರ್ಕಾರ ಶಿಫಾರಸು ಮಾಡಿದೆ.!!
ಇನ್ನುಮುಂದೆ ಉತ್ತರ ಪ್ರದೇಶ ಸರಕಾರದ ಎಲ್ಲಾ ಅಧಿಕೃತ ಪತ್ರ ವ್ಯವಹಾರಗಳಲ್ಲಿ ಈ ಹೆಸರು ಕಾಣಿಸಿಕೊಳ್ಳಲಿದೆ ಎಂದು ತಿಳಿದು ಬಂದಿದೆ. ವರದಿಗಳ ಪ್ರಕಾರ ಎಲ್ಲಾ ಇಲಾಖೆ ಗಳಿಗೆ ಹೆಸರು ಬದಲಾಯಿಸಿಕೊಳ್ಳುವಂತೆ ಆದೇಶ ನೀಡಿದ್ದು, ಅಲಹಾಬಾದ್ ಹೈ ಕೋರ್ಟ್ ಮತ್ತು ಲಕ್ನೋ ಪೀಠದ ಅನುಮತಿಯನ್ನು ಕೋರಿದೆ. ರಾಮ್‍ಜೀ ಎನ್ನುವುದು ಅಂಬೇಡ್ಕರ್ ಅವರ ತಂದೆಯ ಹೆಸರಾಗಿದ್ದು ಬಿಜೆಪಿ ಈಗ ದೊಡ್ಡ ಸಾಹಸಕ್ಕೆ ಕೈ ಹಾಕಿದೆ ಎಂದೇ ಹೇಳಬಹುದು!!

ಈ ಮೊದಲು ಉತ್ತರ ಪ್ರದೇಶದಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಅಳವಡಿಸಬೇಕು ಎಂದು ಆದೇಶ ಹೊರಡಿಸಿತ್ತು!! ಈ ಕುರಿತು ಆದೇಶ ಹೊರಡಿಸಿದ್ದ ಯೋಗಿ ಆದಿತ್ಯನಾಥ್ ಸರ್ಕಾರ ವಿಧಾನಸಭೆಯ ಮೇಲ್ಮನೆ, ಕೆಳಮನೆ, ರಾಜ್ಯ ಮಟ್ಟದ ಅಧಿಕಾರಿಗಳು, ಸರ್ಕಾರಿ ಸಂಸ್ಥೆಗಳು, ಮಹಾನಗರ ಪಾಲಿಕೆಗಳು, ಸರ್ಕಾರಿ ಶಾಲೆಗಳು ಸೇರಿ ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರವನ್ನು ಕಡ್ಡಾಯಗೊಳಿಸಿ ಎಂದು ಆದೇಶ ಕೂಡಾ ಹೊರಡಿಸಿತ್ತು!! ಅಂಬೇಡ್ಕರ್ ಜನ್ಮದಿನ, ಮಹಾ ಪರಿನಿರ್ವಾಣ ದಿನಗಳನ್ನು ಆಚರಿಸುವಾಗ ಚಿತ್ರ ಕಡ್ಡಾಯವಾಗಿ ಇರಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಿತ್ತು!!

Image result for ambedkar with yogi

ಬಿಜೆಪಿ ದಲಿತ ವಿರೋಧಿ ಎನ್ನುವ ವಿರೋಧ ಪಕ್ಷಗಳಿಗೆ ಈ ಮೂಲಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಕ್ಕ ಉತ್ತರ ನೀಡಿದ್ದು, ಡಾ.ಬಿ.ಆರ್ ಅಂಬೇಡ್ಕರ್ ಹೆಸರಿನ ಜೊತೆಗೆ ರಾಮ್ ಜೀ ಅಂತಾ ಸೇರ್ಪಡೆ ಭಾವಚಿತ್ರವಷ್ಟೇ ಅಲ್ಲದೆ ದಲಿತರ ಏಳಿಗೆಗೆ, ರಕ್ಷಣೆಗೆ ಇನ್ನು ಹೊಸ ಅಸ್ತ್ರಗಳು ಹೊರ ಬರಲಿವೆ ಎಂದು ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ!! 2014ರ ಲೋಕಸಭೆ ಚುನಾವಣೆ ಮತ್ತು 2017 ರ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ದಲಿತರು ಬಿಜೆಪಿ ಭಾರಿ ಬೆಂಬಲ ನೀಡಿದ್ದರು. ಅಲ್ಲದೇ ದಲಿತರ ಪಕ್ಷ ಎಂದೇ ಗುರುತಿಸಿಕೊಂಡಿದ್ದ ಬಹುಜನ್ ಸಮಾಜ ಪಾರ್ಟಿಯನ್ನು ಬಿಟ್ಟು ಜನರ ಬಿಜೆಪಿ ಮತ ನೀಡಿದ್ದರು. ದಲಿತರು ಬಿಜೆಪಿ ಮೇಲೆ ವಿಶ್ವಾಸವಿಟ್ಟಿದ್ದು, ಅದನ್ನು ಕಾಯ್ದುಕೊಂಡು ಹೋಗಲಾವುದು. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಉತ್ತಮವಾಗಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಮೊದಲೇ ಹೇಳಿದ್ದರು!! ಯೋಗಿ ಆದಿತ್ಯನಾಥ್ ಸರ್ಕಾರದ ಈ ನಿರ್ಧಾರಕ್ಕೆ ದಲಿತರು ಸೇರಿ ಉತ್ತರ ಪ್ರದೇಶದ ಎಲ್ಲ ವರ್ಗದ ಜನರು ಸಂತಸ ವ್ಯಕ್ತಪಡಿಸಿದ್ದಾರೆ!!

ಆದರೆ ಕಾಂಗ್ರೆಸ್‍ನಲ್ಲಿ ಜೀವನ ಪರ್ಯಂತ ಸೇವೆಸಲ್ಲಿಸಿದ್ದ ಡಾ.ಬಿ.ಆರ್ ಅಂಬೇಡ್ಕರ್‍ರವರನ್ನು ಹೀನಾಯವಾಗಿ ಅವಮಾನಿಸಿದ್ದಲ್ಲದೇ ಅವರಿಗೆ ಬೇರೆ ಯಾವ ರೀತಿಯ ಸೌಲಭ್ಯವೂ ಅವರಿಗೆ ನೀಡಿಲ್ಲ!! ಜೀವಂತ ಇರುವಾಗಂತೂ ಅವರಿಗೆ ಯಾವುದೇ ಸ್ಥಾನವನ್ನೂ ನೀಡದ ಕಾಂಗ್ರೆಸ್ಸಿಗರು ಮರಣದ ಸಮಯದಲ್ಲೂ ಅವರಿಗೆ ಒಂದಿಂಚೂ ಜಾಗ ನೀಡದೆ ಮಾಡಿದ ಅವಮಾನ ನಿಜವಾಗಿಯೂ ಮರೆಯಲಸಾಧ್ಯ!! ಆದರೆ ಇಲ್ಲಿಯವರೆಗೆ ಕಾಂಗ್ರೆಸ್‍ಗೆ ಮಾಡಲಾಗದಂತಹ ಕಾರ್ಯವನ್ನು ಇಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಮಾಡಿದ್ದಾರೆ!!

source: udayavani

ಪವಿತ್ರ

Tags

Related Articles

Close