ಪ್ರಚಲಿತ

ಉಗ್ರರನ್ನು ಪೋಷಿಸಿದ್ದು ನಾವೇ: ಅಂತ್ಯಕಾಲದಲ್ಲಿ ಸತ್ಯ ಒಪ್ಪಿಕೊಂಡ ಪಾಕ್!

ಭಯೋತ್ಪಾದನೆಯ ತವರೂರು ಪಾಕಿಸ್ತಾನಕ್ಕೆ ಕೆಟ್ಟ ಮೇಲೆ ಮೆಲ್ಲ ಮೆಲ್ಲನೆ ಬುದ್ದಿ ಬರುತ್ತಿರುವ ಹಾಗಿದೆ. ಇದೀಗ ಮುಜಾಹಿದ್ದೀನ್ ಉಗ್ರಗಾಮಿಗಳನ್ನು ಪೋಷಿಸಿದ್ದು ನಾವೇ ಎಂದು ಪಾಪಿಸ್ತಾನದ ಆಂತರಿಕ ಸಚಿವ ರಾಣಾ ಸಾನಾವುಲ್ಲಾ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

ಪಾಕ್‌ನ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಈ ವಿಚಾರವನ್ನು ಅವರು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಮುಜಾಹಿದ್ದೀನ್ ಉಗ್ರ ರನ್ನು ಜಾಗತಿಕ ಶಕ್ತಿಗಳೊಂದಿಗಿನ ಯುದ್ಧಕ್ಕೆ ಸಿದ್ಧಗೊಳಿಸುವುದು ತಪ್ಪು ಎಂದು ಅವರು ಒಪ್ಪಿಕೊಂಡಿದ್ದಾರೆ. ಆ ಮೂಲಕ ಜಗತ್ತಿಗೆ ಮಾರಕ ವಾಗಿರುವ ಭಯೋತ್ಪಾದಕ ಶಕ್ತಿಗಳನ್ನು ಬೆಳೆ ಸಿ ರು ವು ದು ಪಾಕಿಸ್ತಾನ ವೇ ಎಂಬುದನ್ನು ಅವರು ಜಗಜ್ಜಾಹೀರು ಮಾಡಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಪಾಕ್‌ನ ಪೇಶಾವರದಲ್ಲಿರುವ ಮಸೀದಿಯ ಭದ್ರತಾ ಸಿಬ್ಬಂದಿ ಮೇಲೆ ಉಗ್ರ ರು ದಾಳಿ ನಡೆಸಿದ್ದರು. ಪಾಕಿಸ್ತಾನವೇ ಸಾಕಿದ ಗಿಣಿ, ಕೊನೆಗೆ ಪಾಕಿಸ್ತಾನವನ್ನೇ ಹೆಚ್ಚಾಗಿ ಕುಕ್ಕಿದಂತೆ, ಪಾಕಿಸ್ತಾನವೇ ಸಾಕಿದ ಭಯೋತ್ಪಾದಕರು ಪಾಕಿಸ್ತಾನಕ್ಕೆಯೇ ಹಾನಿ ಎಸಗಿದ್ದು, ಆ ಬಳಿಕ ಅಲ್ಲಿನ ಅಧಿಕಾರಿಗಳಿಗೆ ತಾವು ಸಾಕಿದ್ದು ವಿಷ ಸರ್ಪಗಳನ್ನು ಎಂಬುದರ ಅರಿವಾದಂತಿದೆ.

ಮುಜಾಹಿದ್ದೀನ್ ಉಗ್ರ ರನ್ನು ಬೆಳೆಸುವ ಅಗತ್ಯ ಇರದೇ ಹೋದರೂ ಅವರನ್ನು ಬೆಳೆಸುವ ಕೆಲಸವನ್ನು ನಾವು ಮಾಡಿದೆವು. ಅವರೇ ಈಗ ಭಯೋತ್ಪಾದಕರಾಗಿದ್ದಾರೆ. ದೇಶದ ಭದ್ರತಾ ಸಮಿತಿ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆಯನ್ನು ನಿರ್ಧರಿಸುತ್ತದೆ ಎಂಬುದಾಗಿಯೂ ಪಾಕಿಸ್ತಾನ ತಿಳಿಸಿದೆ.

ಜನವರಿ ೩೦ ರಂದು ಪಾಕ್‌ನ ಪೇಶಾವರದಲ್ಲಿ ಭಯೋತ್ಪಾದಕ ದಾಳಿ ನಡೆದಿತ್ತು. ಈ ದಾಳಿಯಲ್ಲಿ ೧೦೦ ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು, ೨೨೦ ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಈ ದಾಳಿಯ ಹೊಣೆಯನ್ನು ನಿಷೇಧಿತ ಉಗ್ರ ಸಂಘಟನೆ ಕೆ ಗ್ರೀಕ್ ಎ ತಾಲೀಬಾನ್ ಎ ಪಾಕಿಸ್ತಾನ್ (ಟಿ ಟಿ ಪಿ) ಸಂಘಟನೆ ಹೊತ್ತುಕೊಂಡಿತ್ತು.

ಏನೇ ಇರಲಿ ಈ ವರೆಗೆ ಭಾರತವೂ ಸೇರಿದಂತೆ ಇತರ ರಾಷ್ಟ್ರಗಳ ಮೇಲಿನ ದಾಳಿಗೆ ಉಗ್ರರನ್ನು ಪ್ರಚೋದಿಸುತ್ತಿದ್ದ ಪಾಕಿಸ್ತಾನ, ಇಂದು ಅದೇ ಉಗ್ರರಿಂದ ಸಂಕಷ್ಟ ಅನುಭವಿಸುವಂತಾಗಿರುವುದು ದುರಂತ. ಸದ್ಯ ಪಾಕ್ ಪರಿಸ್ಥಿತಿ ಮಾಡಿದ್ದುಣ್ಣೋ ಮಹರಾಯ ಎಂಬಂತಾಗಿದೆ ಎಂದರೂ ಅತಿಶಯವಾಗಲಾರದು.

Tags

Related Articles

Close