ಪ್ರಚಲಿತ

ಮುಸ್ಲಿಂ ಸೈನಿಕನನ್ನು ಪಾಕಿಸ್ತಾನಕ್ಕೆ ಕರೆದ ಪಾಪಿಗಳಿಗೆ ಆ ದೇಶಭಕ್ತ ಭಾರತೀಯ ಮುಸ್ಲಿಂ ಸೈನಿಕ ಏನಂದ ಗೊತ್ತಾ..? ಇದು ದೇಶಪ್ರೇಮದ ಪರಾಕಾಷ್ಟೆ..!

ಈ ಭಾರತದ ಭೂಮಿಯ ಮಣ್ಣಿನಲ್ಲೇ ಹುಟ್ಟಿದ್ದರೇ ಸಾಕು ಎಂದು ಕೆಲವರು ಅಂದುಕೊಳ್ಳುತ್ತಾರೆ!! ಅಷ್ಟರ ಮಟ್ಟಿಗೆ ಈ ದೇಶ ಪ್ರಭಾವ ಬೀರಿದೆ!! ಇಲ್ಲಿ ಎಲ್ಲಾ ಧರ್ಮದವರನ್ನೂ ಅಣ್ಣ ತಮ್ಮಂದಿರಂತೆ ನೋಡಿಕೊಳ್ಳುತ್ತಾರೆ!! ಅದೆಷ್ಟೋ ವಿದೇಶಿಯರೂ ಭಾರತದ ಆಚಾರ ವಿಚಾರಗಳನ್ನು ನೋಡಿ ಈ ಮಣ್ಣಿನಲ್ಲಿ ಹುಟ್ಟಬೇಕು ಎನ್ನುತ್ತಾರೆ!! ಮೊನ್ನೆ ನಮ್ಮ ಭಾರತೀಯ ಯೋಧ ಜೌರಂಗಜೇಬ ಈ ದೇಶಕ್ಕೋಸ್ಕರ ತನ್ನ ಪ್ರಾಣ ತ್ಯಾಗವನ್ನೇ ಮಾಡಿದ್ದಾರೆ!! ತಾನೊಬ್ಬ ಮುಸ್ಲಿಮನಾದರೂ ಯಾವುದೇ ಜಾತಿ ಧರ್ಮವನ್ನು ಲೆಕ್ಕಿಸದೆ ಈ ದೇಶದ ಗಡಿಯನ್ನು ಕಾಯುತ್ತಾ ಉಗ್ರರ ಅಟ್ಟಹಾಸಕ್ಕೇ ಬಲಿಯಾಗಿದ್ದರು!! ಇಲ್ಲಿಯವರೆಗೆ ನಾವು ಔರಂಗಜೇಬ ಎನ್ನುವ ಹೆಸರು ಕೇಳುತ್ತಿದ್ದಂತೆಯೇ ಮತಾಂಧ, ಮೊಘಲ್ ವಿಸ್ತರಣಾವಾಧಿಯ ನೆನಪಾಗುತ್ತದೆ!! ಆದರೆ ಈಗ ಶಹೀದ್ ಔರಂಗಜೇಬ ಎಂಬ ಹೆಸರು ಕೇಳುತ್ತಿದ್ದಂತೆಯೇ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ನಮ್ಮ ಹುತಾತ್ಮ ಯೋಧನನ್ನು ನೆನಪಾಗಿ ಕಣ್ಣಂಚಿನಲ್ಲಿ ನೀರು ಬರುತ್ತದೆ!! ಇದೇ ರೀತಿ ಈ ದೇಶಕ್ಕಾಗಿ ಹಲವಾರು ಯೋಧರು ಪ್ರಾಣ ತ್ಯಾಗ ಮಾಡಿದ್ದಾರೆ!!

Image result for indian soldiers

ನಾನು ಹುಟ್ಟಿದ್ದೂ ವಾರಣಾಸಿಯ ಗಂಗೆಯ ಮಡಿಲಲ್ಲಿ ಸಾಯುವುದು ಕೂಡಾ ಗಂಗೆಯ ಮಡಿಲಲ್ಲಿ ಎಂದ ನಮ್ಮ ಯೋಧ!!

ಮಹಮ್ಮದ್ ಹಮೀದ್‍ನನ್ನು ಪಾಕಿಸ್ತಾನದವರು ಮನಪರಿವರ್ತನೆ ಮಾಡುವ ಪ್ರಯತ್ನವನ್ನು ಮಾಡಿದ್ದರು. ನೀನೂ ಮುಸಲ್ಮಾನ ಪಾಕಿಸ್ತಾನಕ್ಕೆ ಬಂದು ಬಿಡು ಎಂದು ಬೆದರಿಕೆ ತುಂಬಿ ಒತ್ತಾಯ ಮಾಡಿದರು. ಆದರೆ ನವಶೇರಾದ ಶೆರ್ ಅಂತಲೇ ಕರೆಯಿಸಿಕೊಳ್ಳುತ್ತಿದ್ದ ಮಹಮ್ಮದ್ ಹಮೀದ್ ಅದನ್ನು ತಿರಸ್ಕರಿಸಿ `ನಾನು ಹುಟ್ಟಿ ಬೆಳೆದದ್ದು ವಾರಣಾಸಿಯ ಗಂಗೆಯ ಮಡಿಲಿನಲ್ಲಿ, ನಾನು ಸಾಯುವುದು ಕೂಡ ಗಂಗೆಯ ಮಡಿಲಿನಲ್ಲಿಯೇ’ ಅಂತ ಹೇಳಿ ದೇಶಭಕ್ತಿ ಮೆರೆದ ಆತ ಕೊನೆಗೆ ಪರಮವೀರ ಚಕ್ರ ಪಡೆದು ಈ ದೇಶದ ಹೆಮ್ಮೆಯ ಪುತ್ರನಾದ. ದೇಶಕ್ಕೆ ಸ್ವತಂತ್ರ ಬಂದ ಬೆನ್ನಲ್ಲೆ ದೇಶವಿಭಜನೆ ನಡೆದ ಸಂದರ್ಭದ ಒಂದು ಘಟನೆಯದು, ಆತ ಮಹಮದ್ ಹಮೀದ್ ಹುಟ್ಟಿದ್ದು ವಾರಣಾಸಿಯ ಹತ್ತಿರದ ಗಂಗೆಯ ಮಡಿಲಿನಲ್ಲಿ,ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದದ್ದು ಕಾಶ್ಮೀರದ ಭಾರತ-ಪಾಕ್ ಗಡಿಯಲ್ಲಿ. ಕೊನೆಗೆ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರ ಆತುರದ, ಬೇಜವಾಬ್ದಾರಿತನದ ತಪ್ಪು ನಿರ್ಧಾರದಿಂದಾಗಿ ದೇಶ ವಿಭಜನೆಯ ಸಂದರ್ಭದಲ್ಲಿ ನಡೆದ ರಕ್ತಪಾತ, ಅಸಂಖ್ಯ ಭಾರತೀಯರ ಮಾರಣಹೋಮದಿಂದ ನಮ್ಮವರ ರಕ್ತದ ಹೊಳೆಯೇ ಹರಿದದ್ದು ನಮ್ಮ ದೇಶದ ದುರಂತ ಇತಿಹಾಸ. ಈ ದೇಶದ ಮುಸಲ್ಮಾನರಿಗೆ ಪ್ರೇರಣೆಯಾಗಬೇಕಾದದ್ದು ಇಂತಹ ದೇಶಪ್ರೇಮಿ ಮುಸಲ್ಮಾನರು. ಭಾರತೀಯ ಮುಸಲ್ಮಾನರಿಗೆ ಪ್ರೇರಣೆಯಾಗಬೇಕಾದದ್ದು ಮತಾಂಧ ಔರಂಗಜೇಬನಲ್ಲ, ಹುತಾತ್ಮ ಸೈನಿಕ ಔರಂಗಜೇಬ!! ಇಲ್ಲಿ ಯಾವ ಜಾತಿ ಧರ್ಮಕ್ಕೂ ಬೇಧ ಭಾವ ಮಾಡಲ್ಲ!! ನಮ್ಮ ದೇಶಕ್ಕಾಗಿ ಮಾತ್ರ ನಾವು ಹೋರಾಡಬೇಡು!! ನಿಜವಾಗಿಯೂ ಇಂದು ನಾವು ಇಲ್ಲಿ ಇಷ್ಟು ಸುರಕ್ಷಿತವಾಗಿ ಜೀವನ ನಡೆಸುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ನಮ್ಮ ಸೈನಿಕರು!!  ಕೆಲವರು ಈ ದೇಶದಲ್ಲೇ  ಜೀವನ ಮಾಡುತ್ತಾ ಪಾಕಿಸ್ತಾನಕ್ಕೆ ಬೆಂಬಲ ಸೂಚಿಸುವವರಿಗೆ ಇದೆಲ್ಲ ಪಾಠವಾಗಬೇಕು!!

Related image

 

ಜೌರಂಗಜೇಬ ಎಂದು ಹೆಸರು ಕೇಳಿದಾಕ್ಷಣ ಒಬ್ಬ ಮುಸ್ಲಿಮ್ ಅನ್ನಿಸಬಹುದು ಆದರೆ ಆತ ಮಾಡಿದ ತ್ಯಾಗವನ್ನು ಒಮ್ಮೆ ನೆನಪಿಸಿದರೆ ಯಾರ ಕಣ್ಣಲ್ಲೂ ಒಂದು ಹನಿ ನೀರು ಬರದೆ ಇರದು!! ರಂಜಾನ್ ಹಬ್ಬವನ್ನು ಆಚರಿಸಲು ರಜೆ ನಿಮಿತ್ತ ಊರಿಗೆ ತೆರಳುತ್ತಿದ್ದ ಈ ಭಾರತೀಯ ಯೋಧನನ್ನು ಅಪಹರಿಸಿ ಆತನಿಂದ ಕೆಲ ಮಾಹಿತಿಯನ್ನು ಪಡೆಯಲು ಚಿತ್ರಹಿಂಸೆ ಕೂಡಾ ನೀಡಿದ್ದರು!! ತದ ನಂತರ ನೀನೂ ಮುಸಲ್ಮಾನ ಪಾಕಿಸ್ತಾನಕ್ಕೆ ಬಂದು ಬಿಡು ಎಂದು ಒತ್ತಡವನ್ನು ಹಾಕಿದ್ದರು!! ತನ್ನನ್ನು ಸಾಯಿಸುತ್ತಾರೆ ಎಂದು ತಿಳಿದರೂ ಸಹ ಈ ಯೋಧ ಅಂಜದೆ ಪ್ರಾಣತ್ಯಾಗ ಮಾಡಿದ್ದಾರೆ ಇದು ಇಡೀ ದೇಶದ ಜನರಿಗೆ ಮಾದರಿಯಾಗಬೇಕು!!

ತಾನೂ ಕೂಡಾ ಕುಟುಂಬದೊಂದಿಗೆ ರಂಜಾನ್ ಹಬ್ಬವನ್ನು ಆಚರಿಸಬೇಕು ಎಂದು ಖುಷಿಯಿಂದ ಮನೆಗೆ ಮನೆಗೆ ಬಂದ ಸಮಯದಲ್ಲಿ ಜೌರಂಗಜೇಬ ಎಂಬ ಯೋಧನನ್ನು ಉಗ್ರರು ಅಪಹರಿಸುತ್ತಿದ್ದ ಸುದ್ಧಿ ತಿಳಿದಾಗ ಇಡೀ ದೇಶವೇ ತತ್ತರಿಸಿದ್ದವು!! ಯಾವುದೇ ಜಾತಿಮತ ಎಂದು ತಿಳಿಯದೆ ಎಲ್ಲರೂ ನಮ್ಮ ಸೈನಿಕನ ಬರುವಿಕೆಗಾಗಿ ಕಾಯುತ್ತಿದ್ದರು!! ಔರಂಗಜೇಬನ ಮನೆಯವರು ಕೂಡಾ ದೇವರಲ್ಲಿ ನಮ್ಮ ಮಗ ಅದಷ್ಟು ಬೇಗ ಮನೆಗೆ ಬರಲಿ ಮತ್ತೆ ದೇಶ ಕಾಯಲು ಹೋಗುವಂತಾಗಲಿ ಎಂದು ದೇವರಲ್ಲಿ ಪರಿಪರಿಯಾಗಿ ಬೇಡಿದ್ದರು!! ವಿಧಿಯಾಟ ನೋಡಿ ಪಾಪಿ ಪಾಕಿಸ್ತಾನಿಗಳ ಅಟ್ಟಹಾಸಕ್ಕೆ ಬಲಿಯಾಗಬೇಕಾಯಿತು!!

Image result for soldier aurangzeb

ಆತನನ್ನು ಕೊಲೆ ಮಾಡುವ ಮುಂಚೆ ಆತನ ವಿಡಿಯೋ ಮತ್ತು ಆತನ ಭಾವಚಿತ್ರವನ್ನು ದ್ರೋಹಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಾರೆ!! ತನ್ನನ್ನು ಉಗ್ರರು ಸಾಯಿಸುತ್ತಾರೆ ಎಂದು ತಿಳಿದರೂ, ಸ್ವಲ್ವವೂ ಪ್ರಾಣಕ್ಕಾಗಿ ಅಂಜದೆ ನಮ್ಮ ದೇಶಕ್ಕಾಗಿ ಪ್ರಾಣತ್ಯಾಗ ಮಾಡುತ್ತೇನೆ ಎಂದು ಹೆಮ್ಮೆಯಿಂದ ಪ್ರಾಣ ಬಿಡುತ್ತಾನೆ ಎನ್ನುವ ಕಣ್ಣುಗಳಲ್ಲಿ ಕಾಂತಿ, ಮುಗ್ಧ ಸತೃಂಪ್ತ ಭಾವ ಯಾವುದೇ ದೇಶಭಕ್ತನ ಮನಕಲುಕದೇ ಇರಲು ಸಾಧ್ಯವೇವಿಲ್ಲ!!

ಅಷ್ಟಕ್ಕೇ ಆತ ಆ ರೀತಿ ಅವನ ಹಬ್ಬದ ಸಮಯದಲ್ಲಿ ಅವನದ್ದೇ ಮತಕ್ಕೆ ಸೇರಿದವರಿಂದ ಅಮಾನುಷವಾಗಿ ಹತ್ಯೇಗೀಡಾಗಿದ್ದು ಯಾಕೇ ಗೊತ್ತೇ? ದೇಶಭಕ್ತಿ, ಹೌದು ಆತನ ಸೇನೆಯ ಕರ್ತವ್ಯನಿಷ್ಠೆ ಮತ್ತು ದೇಶಭಕ್ತಿ. ಕಳೆದ ಏಪ್ರಿಲ್ ನಲ್ಲಿ ನಮ್ಮ ಸೇನೆ ಭರ್ಜರಿ ಬೇಟೆಗಯಾಡಿ ಹಿಜಬುಲ್ ಮುಜಾಹೀದ್ದಿನ ಸಂಘಟನೆಯ ಕಮಾಂಡರ್ ಸಮೀರ್ ಟೈಗರ್ ನನ್ನು ಹತ್ಯೆ ಮಾಡಿತ್ತು. ಆ ಭೇಟಯಾಡಿದ ತಂಡದ ನೇತೃತ್ವ ವಹಿಸಿದ್ದವರು ಮೇಜರ್ ರೋಹಿತ್ ಶುಕ್ಲಾ, ಅವರ ತಂಡದ ಸದಸ್ಯನಾಗಿದ್ದು ಅಷ್ಟೇ ಅಲ್ಲದೇ ಮೇಜರ್ ಶುಕ್ಲಾರ ನಿಕಟವರ್ತಿಯಾಗಿ ಅವರ ನೆರಳಿನಂತೆ ಇದ್ದವನು ಈ ಔರಂಗಜೇಬ್ . ಆ ಕಾರಣಕ್ಕಾಗಿಯೇ ಸೇನೆಯ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಅವರದ್ದೇ ಮತದವನು ಎನ್ನುವುದನ್ನೂ ಲೆಕ್ಕಿಸದೇ ಅಮಾನುಷವಾಗಿ ಅತನನ್ನು ಗುಂಡಿಕ್ಕಿ ಕೊಲ್ಲಲಾಯಿತು. ಮೂಲತಃ ಕಾಶ್ಮೀರದವನೇ ಆದ ಔರಂಗಜೇಬ್ ಸೈನ್ಯಕ್ಕೆ ಕಲ್ಲುಹೊಡಿಯುವ ಕಣಿವೆಯ ದೇಶದ್ರೋಹಿ ಯುವಕರ ಮಧ್ಯೆಯೇ ದೇಶಭಕ್ತಿ ಮೆರೆದು ಸೇನೆಯ ಕೆಲಸಕ್ಕೆ ಸೇರಿಕೊಂಡಿದ್ದ. ಆ ದೇಶಭಕ್ತನ ಸಾವು ಕೇವಲ ಆತನ ಕುಟುಂಬಕ್ಕೆ ಮಾತ್ರವಲ್ಲದೇ ಇಡೀ ದೇಶಕ್ಕಾದ ನಷ್ಟ ಮತ್ತು ನೋವು.

ಅದಲ್ಲದೆ ತನ್ನ ಸಾವಿನ ಬಳಿಕ ತೀವ್ರ ದುಃಖಕ್ಕೀಡಾಗಿರುವ ಔರಂಗಜೇಬ್ ತಂದೆ ಮತ್ತು ಸಹೋದರ ತಾವೂ ಸೇನೆ ಸೇರಲು ಸಿದ್ದವಿರುವುದಾಗಿ ತಿಳಿಸಿರುವ ಮೂಲಕ ತಮ್ಮ ದೇಶಾಭಿಮಾನ ಎಂತಹದ್ದು ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ!! ಈಗಾಗಲೇ ರಂಜಾನ್ ಪವಿತ್ರ ಮಾಸದಲ್ಲಿಯೂ ನರಿ ಬುದ್ದಿಯನ್ನು ತೋರಿಸಿರುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಸ್ವತಃ ಔರಂಗಜೇಬ್ ನ ತಂದೆ ಹಾಗೂ ಸಹೋದರ ಮುಂದಾಗಿದ್ದಾರೆ ಎಂದರೆ ಇದಲ್ಲವೇ ನಿಜವಾದ ದೇಶಪ್ರೇಮ!! “ಕಾಶ್ಮೀರ ನಮ್ಮದು ಅಲ್ಲೇಕೆ ಪಾಕಿಸ್ತಾನದ ಧ್ವಜ ಹಾರಾಡುತ್ತಿದೆ? ಕಾಶ್ಮೀರದ ಮೂಲೆ ಮೂಲೆಯಲ್ಲೂ ಭಾರತದ ತ್ರಿವರ್ಣ ಧ್ವಜ ಹಾರಾಡಬೇಕು” ಎಂದು ಮೊಹಮ್ಮದ್ ಹನೀಫ್ ಹೇಳಿದ್ದಲ್ಲದೇ ನಿಶಸ್ತ್ರನಾದ ತನ್ನ ಮಗನ ಮೇಲೆ ಗುಂಡು ಹಾರಿಸಿ ಕೊಂದ ಪಾಕಿಗಳು ಹೇಡಿಗಳು ಎಂದು ಪಾಕಿಸ್ತಾನದ ಮೇಲೆ ಕಿಡಿಕಾರಿದ್ದಾರೆ!!

Image result for indian soldiers

ಈಗಾಗಲೇ ಕಣಿವೆಯಲ್ಲಿ ಭಯೋತ್ಪಾದಕರ, ಪ್ರತ್ಯೇಕವಾದಿಗಳ, ಪಾಕಿ ಉಗ್ರ ಸೈನಿಕರ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ದೃಢ ನಿರ್ಧಾರ ಕೈಗೊಂಡಿರುವ ವಿಚಾರ ಗೊತ್ತೇ ಇದೆ!! ಕೇವಲ ಒಂದು ತಿಂಗಳು ಸೇನೆ ಕಾರ್ಯಾಚರಣೆ ಸ್ಥಗಿತಗೊಳಿಸಿದಕ್ಕೆ ಆಟಾಟೋಪ ನಡೆಸಿದವರ ವಿರುದ್ಧ ಇದೀಗ ರಕ್ಷಣಾ ಪಡೆಗಳು ತಿರುಗಿ ಬೀಳುತ್ತಿದ್ದು ಪಾಕಿಸ್ತಾನ ಉಗ್ರರ ಒಂದೊಂದೇ ತಲೆ ಉರುಳುತ್ತಿದೆ!! ಇದರ ಬೆನ್ನಲ್ಲೇ ಔರಂಗಜೇಬ್ ನ ತಂದೆ ಹಾಗೂ ಸಹೋದರ ಸೇನೆ ಸೇರಲು ಸಿದ್ಧವಿರುವ ಇಂಗಿತ ವ್ಯಕ್ತ ಪಡಿಸುವ ಮೂಲಕ ದೇಶಪ್ರೇಮ ಮೆರೆದಿದ್ದಾರೆ!!

source: www.nationalistviews.com

Tags

Related Articles

Close