ಪ್ರಚಲಿತ

ಏನಾಗುತ್ತಿದೆ ಕರ್ನಾಟಕದಲ್ಲಿ? ಚುನಾವಣೆಗೆ ಮುನ್ನವೇ ಮೂಟೆಗಟ್ಟಲೇ ಹಣ ಮತ್ತು ಹೆಂಡ ವಶ! ಎಟಿಎಮ್ ನಲ್ಲಿ ಹಣವಿಲ್ಲದೇ ಇರುವುದು ಈ ಕಾರಣಕ್ಕಾ?!

ಒಂದು ಬದಿಯಲ್ಲಿ, ಕೆಲವು ರಾಜ್ಯಗಳು ನಗದು ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಇನ್ನೊಂದೆಡೆ, ಮತ್ತೊಂದಿಷ್ಟು ರಾಜ್ಯಗಳಲ್ಲಿ ಹಣ ಮೂಟೆ ಮೂಟೆಗಳಲ್ಲಿ ಹರಿದಾಡುತ್ತಿವೆ! ಗುಮಾನಿಯೆಂದರೆ, ತಮ್ಮ ರಾಜಕೀಯ ಸ್ವಾರ್ಥಕ್ಕೆ ಬಳಸಿಕೊಳ್ಳುವ ಆತುರದಲ್ಲಿ ದೇಶಾದ್ಯಂತ ಎಟಿಎಮ್ ಗಳಲ್ಲಿ ಹಣ ಬರಿದಾಗಲು ಕಾರಣವಾಯಿತೇ ಎಂಬುದು!

ಎಟಿಎಂಗಳು ದೇಶದ ಕೆಲವು ಭಾಗಗಳಲ್ಲಿ ಹಣವಿಲ್ಲದೇ ಖಾಲಿ ಹೊಡೆಯುತ್ತಿವೆ! ವಾರವಾಸರೂ, ‘ನೋ ಕ್ಯಾಷ್’ ತೂಗು ಫಲಕಗಳೇ ಕಣ್ಣಿಗೆ ರಾಚುತ್ತಿವೆ! ಆದರೆ ವಿಧಾನಸಭೆ ಚುನಾವಣೆಗೆ ತಯಾರಿ ನಡೆಸುತ್ತಿರುವ ಕರ್ನಾಟಕದಲ್ಲಿ, ಅದೂ ವಿಶೇಷವಾಗಿ ಪ್ರಚಾರಾರ್ಥವಾಗಿ ಹಣದ ಹೊಳೆಯೇ ಹರಿಯುತ್ತಿದೆ! ಅರ್ಥವೇನೆಂದರೆ, ಜನ ಸಾಮಾನ್ಯರಿಗೆ ಹಣದ ಕೊರತೆಯಾಗುತ್ತಿದೆ! ಆದರೆ, ರಾಜಕಾರಣಿಗಳಲ್ಲ! ಹೇಗೆ?!

ಮಂಗಳವಾರ ದಂದು ಚುನಾವಣಾ ಆಯೋಗವು ಕರ್ನಾಟಕದಲ್ಲಿ ಈ ಬಾರಿ ವಶಪಡಿಸಿಕೊಂಡ ಹಣದ ಮೊತ್ತವೊಂದು 2013 ಅಸೆಂಬ್ಲಿ ಮತ್ತು 2014 ರ ಲೋಕಸಭೆ ಚುನಾವಣೆಯಲ್ಲಿ ವಶಪಡಿಸಿಕೊಂಡಿರುವ ಒಟ್ಟಾರೆ ಮೊತ್ತದ ನಗದು ಮೊತ್ತಕ್ಕೆ ಸರೊಇಯಾಗಿದೆ ಎಂದು ಬಹಿರಂಗಪಡಿಸಿದೆ. ಮಾರ್ಚ್ 27 ರಿಂದ ಏಪ್ರಿಲ್ 24 ರವರೆಗೆ ಮಾದರಿ ಮಾದರಿ ಸಂಹಿತೆ ಜಾರಿಗೆ ಬಂದಾಗ ಈ ಒಟ್ಟಾರೆ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ!

ಮಂಗಳವಾರದ ವರೆಗೆ 41.94 ಕೋಟಿ ರೂ ಹಣವನ್ನು ವಶಪಡಿಸಿಕೊಳ್ಳಲಾಗಿದೆ! ಆದರೆ, 2013 ರ ಚುನಾವಣೆಯಲ್ಲಿ 14.42 ಕೋಟಿ ರೂ. ಮತ್ತು 2014 ರಲ್ಲಿ 28.08 ಕೋಟಿ ರೂ. ವಶಪಡಿಸಿಕೊಂಡಿದ್ದ ಚುಮಾವಣಾ ಆಯೋಗದ ಪ್ರಕಾರ, ಆ ಎರಡು ವರ್ಷಗಳಲ್ಲಿ ವಶಪಡಿಸಿಕೊಂಡಿದ್ದ ಒಟ್ಟು 42.5 ಕೋಟಿ ರೂ. ಗೆ ಸಮನಾಗಿ ಈ ವರ್ಷದಲ್ಲಿ ಹಣದ ಹೊಳೆ ಜೋರಾಗಿ ಹರಿದಿದೆ!

“The amount of unaccounted cash seized this election till Tuesday was Rs 41.94 crore which is almost equivalent to the sum of Rs 14.42 crore seized during the 2013 polls and Rs 28.08 crore seized in 2014. Both of them together amount to Rs 42.5 crore.”

ಇನ್ನೂ, ಕರ್ನಾಟಕದ ವಿಧಾನಸಭಾ ಚುನಾವಣೆಗೆ ಎರಡು ವಾರಗಳಿಗಿಂತ ಹೆಚ್ಚಿನ ಸಮಯವಿದೆ! ಮತದಾರರ ಮೇಲೆ ಪ್ರಭಾವ ಬೀರಲು ಬಳಸಲಾಗುವ ಅದೆಷ್ಟು ಹಣವನ್ನು ಇನ್ನೂ ವಶಪಡಿಸಿ ಕೊಳ್ಳಲಾಗುವುದೋ ಗೊತ್ತಿಲ್ಲ ಎಂದು ಹೇಳಿರುವ ಚುನಾವಣಾ ಆಯೋಗ, ಕೇವಲ ಹಣ ಮಾತ್ರವಲ್ಲ! ಬದಲಾಗಿ, ನೀತಿ ಸಂಹಿತೆಯನ್ನಯ ಉಲ್ಲಂಘಿಸಿ ನಡೆಯುತ್ತಿದ್ದ ಅಕ್ರಮ ಮದ್ಯ ವ್ಯವಹಾರವನ್ನೂ ಸಹ ತಡೆಗಟ್ಟಲಾಗಿದ್ದು, ಬಹಳಷ್ಟು ಪ್ರಮಾಣದ ಮದ್ಯವನ್ನೂ ವಶ ಪಡಿಸಿಕೊಂಡಿದೆ ಚುನಾವಣಾ ಆಯೋಗ!

ಕಳೆದ ಎರಡು ಪ್ರಮುಖ ಚುನಾವಣೆಗಳಲ್ಲಿ , ಅಂದರೆ 2013 ರ ಅಸೆಂಬ್ಲಿ ಚುನಾವಣೆಗಳು ಮತ್ತು 2014 ರ ಲೋಕಸಭಾ ಚುನಾವಣೆಯಲ್ಲಿ ಒಟ್ಟು 112,877 ಲೀಟರ್ ಆಲ್ಕೋಹಾಲ್ ಅನ್ನು ಚುನಾವಣಾ ಆಯೋಗ ವಶಪಡಿಸಿಕೊಂಡಿದೆ. ಈ ಚುನಾವಣೆಯಲ್ಲಿ ಇದುವರೆಗೆ ಇರುವ ಅಂಕಿ-ಅಂಶಗಳ ಪ್ರಕಾರ, ವಶ ಪಡಿಸಿಕೊಂಡ ಮದ್ಯಗಳು 409,099.785 ಲೀಟರ್ ಗಳಷ್ಟಾಗಿವೆ! ಆದರೆ, ಕಳೆದ ವರ್ಷಗಳಲ್ಲಿ ಚುನಾವಣಾ ಆಯೋಗ 296,221.785 ಲೀಟರ್ಗಳಷ್ಟು ಆಲ್ಕೋಹಾಲ್ ಅನ್ನು ವಶಪಡಿಸಿಕೊಂಡಿದೆ! ಇದರ ಅರ್ಥ 2013 ಮತ್ತು 2014 ರ ಒಟ್ಟು ಪ್ರಮಾಣಕ್ಕಿಂತ ಮೂರು ಪಟ್ಟು ಈ ಸಲ ಅಕ್ರಮ ಮದ್ಯದ ಸರಬರಾಜು ಹೆಚ್ಚಾಗಿದೆ!!

“A total of 112,877 litres of alcohol was seized in the last two major elections— 2013 Assembly elections and the 2014 Lok Sabha elections. The figure for the same in this elections till date is 409,099.785 litres. This means that the seizures till now is more than three times the combined quantity of 2013 and 2014, as 296,221.785 more litres of alcohol have been seized.”

ವಿತ್ತೀಯ ಮೌಲ್ಯದ ವಿಷಯದಲ್ಲಿ, 2014 ರ ಲೋಕಸಭಾ ಚುನಾವಣೆಗಿಂತ ಈಗ ಮದ್ಯದ ಪ್ರಮಾಣವು ಏಳು ಪಟ್ಟು ಹೆಚ್ಚಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ! ಮಂಗಳವಾರ ತನಕ, ಅಬಕಾರಿ ಸುಂಕ ಇಲಾಖೆ ಸಹ ತಾತ್ಕಾಲಿಕವಾಗಿ ಬೆಂಗಳೂರಿನ 303 ಬಾರ್ ಮತ್ತು ರಿಟೇಲ್ ಅಂಗಡಿಗಳ ಲೈಸೆನ್ಸ್ ಅನ್ನು ಪೋಲ್ ಕಂಡಕ್ಟ್ ಅನ್ನು ಉಲ್ಲಂಘಿಸಿದ್ದಕ್ಕಾಗಿ ರದ್ದುಗೊಳಿಸಲಾಗಿಉದೆ! ಇಡೀ ರಾಜ್ಯಕ್ಕೆ ಸದ್ಯಕ್ಕಿರುವುದು ೭೯೩ ಲೈಸೆನ್ಸ್ ಗಳು!! 2014 ರ ಲೋಕಸಭೆ ಚುನಾವಣೆಯಲ್ಲಿ 14 ಮಳಿಗೆಗಳನ್ನು ಮಾತ್ರ ಮುಚ್ಚಲಾಗಿತ್ತು!

ಇಲಾಖೆಯ ಪ್ರಕಾರ, ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ತೆರಿಗೆ ಇಲಾಖೆ 4.13 ಕೋಟಿ ರೂ. ಮೌಲ್ಯದ ನಗದು ಮತ್ತು 1.52 ಕೋಟಿ ಮೌಲ್ಯದ 4.52 ಕೆ.ಜಿ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿತ್ತು ಮತ್ತು 4.13 ಕೋಟಿ ರುಪಾಯಿಗಳಲ್ಲಿ ಶೇ. 97 ರಷ್ಟು ವಶಪಡಿಸಿಕೊಂಡಿದೆ!!

ವಿವಿಧ ನಗರಗಳಲ್ಲಿ ನಗದನ್ನು ವಶಪಡಿಸಿಕೊಂಡ ಪ್ರಕರಣಗಳಲ್ಲಿ ಬೆಂಗಳೂರಿನಲ್ಲಿ 2.47 ಕೋಟಿ ರೂ. ಮತ್ತು ಬಳ್ಳಾರಿಯಲ್ಲಿ ರೂ. 55 ಲಕ್ಷ ರೂ ಸಿಕ್ಕಿದೆ ಎಂದು ಹೇಳಲಾಗಿದೆ!

ಮೇ 12 ರಂದು ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ! ಮೇ 15 ರಂದು ಮತದಾನ ಎಣಿಕೆ ನಡೆಯಲಿದೆ!! ಪ್ರಸ್ತುತ 224 ಸದಸ್ಯ
ಶಾಸಕಾಂಗ ಸಭೆಯು ಮೇ 28 ರಂದು ಕೊನೆಗೊಳ್ಳಲಿದೆ!!

“The Income Tax department in Bengaluru seized cash worth Rs 4.13 crore and 4.52 kg gold jewellery worth Rs 1.32 crore and, interestingly, 97 per cent of the Rs 4.13 crore seized was in high denomination currency. The department further pointed out that among cash seizures in various cities, Bengaluru tops the list with the figure of Rs 2.47 crore followed by Bellary at Rs 55 lakh.”

ರಾಜ್ಯದಲ್ಲಿ ಹಣದ ಒಳಹರಿವನ್ನು ಪರಿಶೀಲಿಸಲು ವಿಮಾನ ನಿಲ್ದಾಣಗಳು ಮತ್ತು ರೈಲ್ವೇ ನಿಲ್ದಾಣಗಳಲ್ಲಿ ಉನ್ನತ ಮಟ್ಟದಲ್ಲಿ ಪೂರ್ವ ಎಚ್ಚರಿಕೆಯನ್ನು ಮತ್ತು ಭದ್ರತೆಯನ್ನು ಒದಗಿಸಲಾಗಿದೆ ಎಂದು ಇಲಾಖೆ ಹೇಳಿದೆ. ಇಲಾಖೆಯು ಕರ್ನಾಟಕದ ಸಾಮಾನ್ಯ ಸಾರ್ವಜನಿಕ ಮತ್ತು ಇತರ ಏಜೆನ್ಸಿಗಳಿಂದ ಚುನಾವಣಾ-ಸಂಬಂಧಿತ ದೂರುಗಳನ್ನು ಸ್ವೀಕರಿಸಲು ರಾಜ್ಯ ರಾಜಧಾನಿಯಲ್ಲಿ 24 × 7 ನಿಯಂತ್ರಣಾ ಕೊಠಡಿಯನ್ನು ಸ್ಥಾಪಿಸಿದೆ, ಮತ್ತು ಯಾವುದೇ ಜಿಲ್ಲೆಯಲ್ಲೂ ಕೆಲಸ ಮಾಡಲು ಎಲ್ಲಾ ಜಿಲ್ಲೆಗಳಲ್ಲಿ ಸ್ಟ್ರೈಕ್ ತಂಡಗಳನ್ನು ರಚಿಸಲಾಗಿದೆ.

“ಸಾರ್ವಜನಿಕ ಇಲಾಖೆಯ ವಿವಿಧ ಸ್ಥಳಗಳಲ್ಲಿ ಇಲಾಖೆಯು ಗುಪ್ತಚರ ದಳದ ಜೊತೆಗೂಡಿ ಕರ್ತವ್ಯ ನಿರ್ವಹಿಸುತ್ತಿದೆ ಮತ್ತು ಅದರ ವಾಯು ಗುಪ್ತಚರ ಘಟಕಗಳು ಕರ್ನಾಟಕ ರಾಜ್ಯದಲ್ಲಿನ ಎಲ್ಲಾ ವಿಮಾನ ನಿಲ್ದಾಣಗಳಲ್ಲೂ ಮತ್ತು ನೆರೆಯ ರಾಜ್ಯವಾದ ಗೋವಾದಲ್ಲಿಯೂ ಸಹ ನಿಕಟ ವೀಕ್ಷಣೆ ನಡೆಸುತ್ತಿದೆ” ಎಂದು ಇಲಾಖೆ ಸ್ಪಷ್ಟ ಪಡಿಸಿದೆ!!

ಅಂದರೆ, ಕರ್ನಾಟಕ ಚುನಾವಣೆಯಲ್ಲಿ ಸದ್ಯಕ್ಕೆ ತಾಂಡವವಾಡುತ್ತಿರುವುದು ಹಣ ಹಾಗೂ ಹೆಂಡವಾ?! ಹೇಳಲೇ ಬೇಕೆಂದರೆ, ಬಹುಷಃ ಎಲ್ಲಿಯವರೆಗೆ ಹಣ ಮತ್ತು ಹೆಂಡಕ್ಕೋಸ್ಕರ ತಮ್ಮ ಮತ ವನ್ನು ಮಾರಿಕೊಳ್ಳುವಷ್ಟರ ಮಟ್ಟಿಗೆ ಜನ ಇಳಿಯುತ್ತಿರುತ್ತಾರೋ, ಬಹುಷಃ ಅಲ್ಲಿಯ ತನಕವೂ ಈ ದೇಶವೊಂದು ತನ್ನದೇ ಜನರಿಂದ ಮೋಸಕ್ಕೊಳಗಾಗುತ್ತಲೇ ಇರುತ್ತದೆ!

Source :https://www.thenewsminute.com/article/poll-bound-ktaka-cash-alcohol-seizures-see-record-spike-over-last-two-polls-80146


ಪೃಥು ಅಗ್ನಿಹೋತ್ರಿ

Tags

Related Articles

Close