ಪ್ರಚಲಿತ

ಕೈಲಾಸ ಪರ್ವತ ಮಾನವ ನಿರ್ಮಿತ ಪಿರಮಿಡ್ ಮತ್ತು ಇದರೊಳಗಿದೆ ಆಧುನಿಕವಾಗಿ ನಮಗಿಂತಲೂ ಮುಂದುವರಿದಿರುವಂತಹ ಮಾನವ ಜನಾಂಗ!!

ಭೂಮಿಯ ಮೇಲೆ ಎಷ್ಟೋ ರಹಸ್ಯಗಳಿವೆ. ಈ ರಹಸ್ಯಗಳನ್ನು ಭೇದಿಸುವುದು ಆಧುನಿಕ ಕಾಲದ ವಿಜ್ಞಾನ-ತಂತ್ರಜ್ಞಾನಕ್ಕೂ ಸಾಧ್ಯವಾಗಿಲ್ಲ. ಪ್ರಪಂಚದ ಅತ್ಯಂತ ರಹಸ್ಯಪೂರ್ಣ ಜಾಗಗಳಲ್ಲಿ ಒಂದು ಕೈಲಾಸ ಪರ್ವತ. ಸಾಕ್ಷಾತ್ ಶಿವ ತನ್ನ ಪರಿವಾರದೊಂದಿಗೆ ಕೈಲಾಸದಲ್ಲಿ ವಾಸವಾಗಿದ್ದಾನೆಂದು ನಂಬಲಾಗಿದೆ. ಇಷ್ಟು ವರ್ಷಗಳ ಕಾಲ ಕೈಲಾಸ ಪರ್ವತ ಪ್ರಕೃತಿ ದತ್ತವಾದದ್ದೆಂದು ನಂಬಲಾಗಿತ್ತು ಆದರೀಗ ಇದೊಂದು ಮಾನವ ನಿರ್ಮಿತ ಪಿರಮಿಡ್ ಎಂದು ಸಾಬೀತಾಗಿದೆ. ರಷ್ಯಾ ಮತ್ತು ಅಮೇರಿಕಾದ ವಿಜ್ಞಾನಿಗಳು ಹಲವಾರು ವರ್ಷಗಳಿಂದ ಕೈಲಾಸ ಪರ್ವತದ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ.

ಈ ವಿಜ್ಞಾನಿಗಳ ಪ್ರಕಾರ ಕೈಲಾಸ ಪರ್ವತ ಮತ್ತು ಅದರ ಸುತ್ತಲಿರುವ ಇತರ ಪರ್ವತಗಳು ಮಾನವ ನಿರ್ಮಿತ ಪಿರಮಿಡ್ ಆಗಿವೆ. ಇವು ಒಳಗಿಂದ ಟೊಳ್ಳಾಗಿವೆ ಮತ್ತು ಕೈಲಾಸ ಪರ್ವತದ ಒಳಗೆ ಹೋಗುವ ಮಾರ್ಗ ಇದರ ತುತ್ತ ತುದಿಯಲ್ಲಿದೆ. ವಿಜ್ಞಾನಿಗಳ ಪ್ರಕಾರ ಒಬ್ಬ ಅಲೌಕಿಕ ಶಕ್ತಿಯ ಮನುಷ್ಯ ಕೈಲಾಸವನ್ನು ನಿರ್ಮಿಸಿರಬಹುದು. ನಮ್ಮ ಪುರಾಣಗಳಲ್ಲಿಯೂ ಕೈಲಾಸವನ್ನು ಶಿವನ ಮನೆಯೆಂದೇ ಕರೆಯಲಾಗುತ್ತದೆ. ಅಂದರೆ ಕೈಲಾಸ ಪರ್ವತವನ್ನು ಶಿವನೇ ನಿರ್ಮಿಸಿರಬಹುದೆ? ಪುರಾಣಗಳಲ್ಲಿ ರಾವಣನು ಕೈಲಾಸವನ್ನು ಎತ್ತಿದ್ದನೆಂದು ಐತಿಹ್ಯವಿದೆ, ಕೈಲಾಸವನ್ನು ಎತ್ತಬಹುದೆಂದಾರೆ ಇದು ಪ್ರಾಕೃತಿಕವಲ್ಲ ಬದಲಾಗಿ ಮಾನವ ನಿರ್ಮಿತ ಪಿರಮಿಡ್ ಎನ್ನುವ ವಿಜ್ಞಾನಿಗಳ ವಾದಕ್ಕೆ ಪುಷ್ಟಿ ದೊರಕಿದಂತಾಗುತ್ತದೆ.

ಇನ್ನೂ ಒಂದು ಆಶ್ಚರ್ಯದ ವಿಚಾರವೆಂದರೆ ಕೈಲಾಸ ಪರ್ವತವನ್ನು ಇದುವರೆಗೂ ಯಾರೂ ಹತ್ತಲಾಗಿಲ್ಲ. ಹತ್ತುವುದು ಬಿಡಿ, ಈ ಪರ್ವತದ ಸಮೀಪಕ್ಕೂ ಯಾರಿಗೂ ಹೋಗಲಾಗುವುದಿಲ್ಲ. ಈ ಪರ್ವತವನ್ನು ಹತ್ತಲು ಪ್ರಯತ್ನ ಪಟ್ಟವರೆಲ್ಲರ ಅನುಭವದ ಒಂದೇ ಆಗಿದೆ. ಅವರ ಪ್ರಕಾರ ಈ ಪರ್ವತದ ಹತ್ತಿರ ಹೋದ ತಕ್ಷಣವೇ ಅವರ ಅರೋಗ್ಯದಲ್ಲಿ ಏರುಪೇರಾಗುತ್ತದಂತೆ. ಅವರ ಎದೆ ಬಡಿತ ಹೆಚ್ಚಾಗಿ ಉಸಿರುಗಟ್ಟಲು ಶುರುವಾಗಿ ಇನ್ನೇನು ಸತ್ತೇ ಬಿಡುತ್ತೇವೆಂಬ ಅನುಭವವಾಗುತ್ತದೆ. ಮೌಂಟ್ ಎವರೆಷ್ಟ್ ಗಿಂತ ಚಿಕ್ಕದಾಗಿರುವ ಕೈಲಾಸವನ್ನು ಯಾವ ದಿಕ್ಕಿನಿಂದಲೂ ಹತ್ತಲಾಗುವುದಿಲ್ಲ ಎಂಬುದು ಅಚ್ಚರಿಯ ವಿಚಾರ. ವಿಜ್ಞಾನಿಗಳ ಪ್ರಕಾರ ಈ ಪರ್ವತದ ಸುತ್ತ ಯಾವುದೋ ರೇಡಿಯೋ ತರಂಗಗಳು ಪ್ರವಹಿಸುತ್ತಿರುತ್ತವಂತೆ, ಆದ್ದರಿಂದಲೇ ಪರ್ವತವನ್ನು ಹತ್ತುವುದು ಸಾಧ್ಯವೇ ಇಲ್ಲ. ಗಟ್ಟಿ ಗುಂಡಿಗೆಯವರು ಬೇಕಿದ್ದರೆ ಪ್ರಯತ್ನಿಸಿ ನೋಡಬಹುದು!!

ಕೈಲಾಸ ಪರ್ವತ ಭೂಮಿಯ ಕೇಂದ್ರ ಬಿಂದುವಾದ “ಅಕ್ಷ ಮುಂಡಿಯ” ಮೇಲಿದೆ. ಇಲ್ಲಿ ಸಮಯ ಅತಿ ವೇಗವಾಗಿ ಚಲಿಸುತ್ತದೆ. ಕೈಯ ಉಗುರುಗಳು ಮತ್ತು ತಲೆಗೂದಲು ಅತಿ ವೇಗವಾಗಿ ಬೆಳೆಯುತ್ತದೆ. ಮನುಷ್ಯನನ್ನು ಅತಿ ಬೇಗ ಮುಪ್ಪು ಅಡರಿಕೊಳ್ಳುತ್ತದೆ ಎಂಬುದು ಕೈಲಾಸದ ಸಮೀಪ ಹೋದವರ ಅನುಭವ. ಪ್ರಪಂಚದ ಎಲ್ಲಾ ಅದ್ಭುತ ಕಲಾಕೃತಿಗಳನ್ನು ಕೈಲಾಸ ಪರ್ವತವನ್ನು ಕೇಂದ್ರವಾಗಿಟ್ಟುಕೊಂಡೆ ಕಟ್ಟಲಾಗಿದೆ. ಪುರಾಣಗಳ ಪ್ರಕಾರ ಕೈಲಾಸವನ್ನು ಪವಿತ್ರ ಹೃದಯದ ವ್ಯಕ್ತಿಯಷ್ಟೇ ಹತ್ತಲು ಸಾಧ್ಯ. ಸ್ವರ್ಗದ ದ್ವಾರ ಕೈಲಾಸ ಪರ್ವತದ ಮೂಲಕವೇ ತೆರೆದುಕೊಳ್ಳಲಾಗುತ್ತದೆ ಎಂದು ಭಾರತೀಯರು ನಂಬುತ್ತಾರೆ. ವಿಜ್ಞಾನಿಗಳ ಪ್ರಕಾರ ಕೈಲಾಸ ಪರ್ವತದೊಳಗೆ ರಹಸ್ಯ ನಗರ ಒಂದಿದೆ. ಈ ನಗರದೊಳಗಣ ತಾಂತ್ರಿಕವಾಗಿ ಮತ್ತು ವೈಜ್ಞಾನಿಕವಾಗಿ ನಮಗಿಂತಲೂ ಮುಂದುವರಿದಿರುವ ಜನಾಂಗ ಒಂದಿದೆ! ಈ ಜನಾಂಗ ನಮ್ಮ ವಂಶವಾಹಿನಿಗಳನ್ನು ಸುರಕ್ಷಿತವಾಗಿಡುವ ಕಾರ್ಯವನ್ನು ಮಾಡುತ್ತಿವೆಯೆಂಬುದು ವಿಜ್ಞಾನಿಗಳ ತರ್ಕ.

ಕೈಲಾಸ ಪರ್ವತದೊಳಗೆ ಸುರಂಗ ಮಾರ್ಗವಿದೆ ಹಾಗೂ ಅದು ರೋಮಾನಿಯಾದ ಮತ್ತು ಈಜಿಪ್ಟಿನ ಪಿರಮಿಡ್ ನ ಸುರಂಗದೊಂದಿಗೆ ಸಂಪರ್ಕ ಹೊಂದಿದೆ. ಈ ಮೂರೂ ಪಿರಮಿಡ್ ಗಳ ಕೆಳಗೆ ಮಾನವ ಜನಾಂಗಗಳಿವೆ. ಈ ಎಲ್ಲಾ ಸುರಂಗಗಳು ಮಂಗೋಲಿಯಾದ ಗೋಬಿ ಪ್ರಸ್ತಭೂಮಿ ಮತ್ತು ಅಂಟಾರ್ಟಿಕಾದ ಕೆಳಗಿರುವ ಅತೀ ಸುಸಜ್ಜಿತ ಮತ್ತು ಅತೀ ಆಧುನಿಕ ಜನಾಂಗವನ್ನು ಸಂಪರ್ಕಿಸುತ್ತವೆ ಎಂದು ಈಗಾಗಾಲೇ ಶೋಧನೆಗಳ ಮೂಲಕ ಕಂಡುಕೊಳ್ಳಲಾಗಿದೆ. ರೋಮಾನಿಯಾದ ಪಿರಮಿಡ್ ಕೆಳಗೆ ಅಗರ್ಥಾ ಮತ್ತು ಕೈಲಾಸದ ಕೆಳಗೆ ಶಾಂಭಲಾ ಎನ್ನುವ ರಹಸ್ಯ ನಗರಗಳಿವೆ. ಈ ನಗರಗಳ ಉಲ್ಲೇಖ ನಮ್ಮ ವೇದ-ಪುರಾಣಗಳಲ್ಲಿಯೂ ಇವೆ. ಈ ಸುರಂಗಳ ಮೂಲಕ ಒಳ ಹೋಗುವುದು ಸಾಧ್ಯವೇ ಇಲ್ಲವೆನ್ನುತ್ತಾರೆ ಸಂಶೋಧನಕರ್ತರು. ಇಲ್ಲಿ ಕಾಲಿಡುತ್ತಿದ್ದಂತೇ ಯಾವುದೋ ಅದೃಶ್ಯ ಶಕ್ತಿಯೊಂದು ಥಟ್ಟನೆ ರೇಡಿಯೋ ತರಂಗಗಳನ್ನು ಪ್ರವಹಿಸಿ ಬಿಡುತ್ತವೆ ಎನ್ನುತ್ತಾರೆ ಈ ಸುರಂಗಗಳ ರಹಸ್ಯವನ್ನು ಭೇದಿಸಲು ಪ್ರಯತ್ನ ಪಟ್ಟವರು.

ಸುರಂಗಗಳ ಒಳಗೆ ಇರುವ ಜನರು ಆಕಾರದಲ್ಲಿ ನಮಗಿಂತಲೂ ಎತ್ತರ ಮತ್ತು ಬುದ್ದಿ ಮತ್ತೆಯಲ್ಲಿ ನಮಗಿಂತಲೂ ಮುಂದಿದ್ದಾರೆ ಎನ್ನಲಾಗುತ್ತದೆ. ಇಲ್ಲಿ ಮನುಷ್ಯನ ಮತ್ತು ಪ್ರಾಣಿ ಪಕ್ಷಿಗಳ ವಂಶವಾಹಿನಿಗಳನ್ನು ಸಂರಕ್ಷಿಸಿ ಇಡಲಾಗಿದೆ ಎನ್ನುವುದನ್ನು ವಿದೇಶೀ ವಿಜ್ಞಾನಿಗಳೇ ಪ್ರತಿಪಾದಿಸುತ್ತಿದಾರೆ. ಭೂಮಿಯ ಮೇಲೆ ಪ್ರಾಕೃತಿಕ ವಿಕೋಪಗಳಿಂದಾಗಿ ಮನುಷ್ಯ ಮತ್ತು ಪ್ರಾಣಿ ಸಂಕುಲದ ನಾಶವಾದಾಗ ಈ ವಂಶವಾಹಿನಿಗಳಿಂದ ಮತ್ತೊಮ್ಮೆ ಸೃಷ್ಟಿ ಕಾರ್ಯವನ್ನು ನಡೆಸಲಾಗುತ್ತದೆ ಎನ್ನುತ್ತಾರೆ ಬಶ್ಕೋರಸ್ತಾನದ ವೈದ್ಯ ಮತ್ತು ಟಿಬೆಟ್ ಸಂಶೋಧನಕರ್ತರಾದ ಪ್ರೊಫೆಸರ್ ಅರ್ನ್ಸ್ಟ್ ಮುಲ್ಡಶೇವ್. ಥುಲೇ ಸೋಸೈಟಿ ಎಂಬ ಸಂಸ್ಥೆಯ ಪ್ರಕಾರ ಮಂಗೋಲಿಯಾದ ಗೋಬಿ ಪ್ರಸ್ತ ಭೂಮಿಯಡಿಯಲ್ಲಿ ಒಂದು ಉಚ್ಚ ಸಭ್ಯತೆಯ ನಾಗರಿಕತೆ ಇದೆಯಂತೆ. ಈ ನಾಗರಿಕತೆ ಎರಡು ಕವಲುಗಳಾಗಿ ಕೈಲಾಸ ಮತ್ತು ರೋಮಾನಿಯಾದ ಪಿರಮಿಡ್ ಗಳವರೆಗೆ ಹಬ್ಬಿಕೊಂಡಿದೆ ಎನ್ನಲಾಗುತ್ತದೆ.

ಈ ರಹಸ್ಯ ಸುರಂಗಗಳ ಬಗ್ಗೆ ಜಗತ್ತಿಗೆ ತಿಳಿಯದಂತೆ ಅಮೇರಿಕಾ, ವೆಟಿಕನ್ ಮತ್ತು ರೋಮಾನಿಯಾ ಸರಕಾರಗಳು ಒಳ ಒಪ್ಪಂದ ಮಾಡಿಕೊಂಡಿವೆ ಎಂದೆನ್ನಲಾಗುತ್ತದೆ. ಭಾರತದ ಪ್ರಾಚೀನ ಗ್ರಂಥಗಳಲ್ಲಿಯೂ ಕೈಲಾದೊಳಗಣ ಶಿವನ ಸನ್ನಿಧಾನವಿದೆ ಎಂದು ಹೇಳಲಾಗಿದೆ. ಇದರ ಅರ್ಥ ವೇದ ಪುರಾಣಗಳು ಕೇವಲ ಕಟ್ಟು ಕಥೆಯಲ್ಲ, ಬದಲಾಗಿ ವಿಜ್ಞಾನದ ಆಧಾರದ ಮೇಲೆ ಕಂಡು ಕೊಂಡ ಸತ್ಯಗಳು. ಆಧುನಿಕ ಜಗತ್ತಿನಲ್ಲಾಗುವ ಅನ್ವೇಷಣೆಗಳು, ನಮ್ಮ ವೇದ ಪುರಾಣಗಳೆಲ್ಲವೂ ಸತ್ಯ ಎಂಬುದನ್ನು ಜಗತ್ತಿಗೆ ಸಾರುತ್ತಿವೆ. ಒಪ್ಪಿಕೊಳ್ಳುವ ಮನಸ್ಸು ನಮಗೆ ಇರಬೇಕು ಅಷ್ಟೆ.

source: https://www.rbth.com/blogs/tatar_straits/2017/02/24/when-a-russian-doctor-tried-to-crack-the-mystery-of-the-abode-of-lord-shiva_707558

sharvari

Tags

Related Articles

Close