ಅಂಕಣದೇಶಪ್ರಚಲಿತ

ವಾಯುಪಡೆಯಲ್ಲಿ ನಾರಿ ಶಕ್ತಿಯ ಕಾಲ ಇದೀಗ ಆರಂಭ!! ಯುದ್ದ ವಿಮಾನವನ್ನು ಹಾರಾಟ ನಡೆಸಿ ಇತಿಹಾಸ ಸೃಷ್ಟಿಸಿದ ಭಾರತದ ಮೊದಲ ಮಹಿಳೆಯಾದರೂ ಯಾರು ಗೊತ್ತೇ?

ದೇಶದ ಮೊದಲ ಪೂರ್ಣಕಾಲಿಕ ಮಹಿಳಾ ರಕ್ಷಣಾ ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಅವರು ಅಧಿಕಾರ ವಹಿಸಿಕೊಂಡ ನಂತರ ರಕ್ಷಣಾ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯನ್ನು ತಂದಿದ್ದಲ್ಲದೇ, ಮಹಿಳೆಯರಿಗೆ ಉನ್ನತ ಸ್ಥಾನಮಾನ ನೀಡುವ ಮಹತ್ವದ ನಿರ್ಧಾರವನ್ನು ಕೈಗೊಂಡಿರುವ ಹಿರಿಮೆ ಇವರದ್ದಾಗಿದೆ. ಈ ಮೂಲಕ ಸೇನೆಯಲ್ಲೂ ಲಿಂಗ ಸಮಾನತೆ ತರುವ ಪ್ರಯತ್ನಕ್ಕೆ ನಾಂದಿ ಹಾಡಿರುವ ಇವರು ಮಿಗ್-21 ಯುದ್ಧ ವಿಮಾನವನ್ನು ಮಹಿಳೆಯೋರ್ವರು ಏಕಾಂಗಿಯಾಗಿ ಹಾರಾಟ ನಡೆಸುತ್ತಾರೆ ಎಂದರೆ ಅದು ನಿಜಕ್ಕೂ ಕೂಡ ಗ್ರೇಟ್!!

ಭಾರತದ ಮಹಿಳೆಯರ ತಾಕತ್ತು ಕೇವಲ ಯುದ್ದಭೂಮಿಯಲ್ಲಿ ಮಾತ್ರವಲ್ಲದೇ ಇದೀಗ ಬಾನಂಗಳದಲ್ಲಿ ಪ್ರದರ್ಶಿತವಾಗುತ್ತಿದ್ದು, ಭಾರತದ ಸೈನ್ಯದಲ್ಲಿರುವ ಮಹಿಳೆಯೊಬ್ಬರು ಮಿಗ್ 21 ಬಿಸನ್ ಯುದ್ಧ ವಿಮಾನವನ್ನು ಏಕಾಂಗಿಯಾಗಿ ಹಾರಾಟ ಮಾಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಹೌದು… ವಿಶ್ವದಲ್ಲೇ ತನ್ನ ಸೈನಿಕ ಬಲದ ಮೂಲಕ ಗಮನ ಸೆಳೆದಿರುವ ಭಾರತೀಯ ಸೇನೆ ಇದೀಗ ಹೊಸ ಇತಿಹಾಸ ಸೃಷ್ಟಿಸಿರುವುದು ಹೆಮ್ಮೆಯ ವಿಚಾರವಾಗಿದೆ!! ಅಷ್ಟಕ್ಕೂ ರಕ್ಷಣಾ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸಿರುವ ಭಾರತೀಯ ವಾಯುಪಡೆಯ ಮಹಿಳಾ ಪೈಲೆಟ್ ಆದರೂ ಯಾರು ಗೊತ್ತೇ??

ರಕ್ಷಣಾ ಸಚಿವರ ಇತಿಹಾಸದಲ್ಲಿಯೇ ಯಾವುದೇ ರಕ್ಷಣಾ ಸಚಿವರು ಬೇಟಿ ನೀಡದ ಪ್ರದೇಶಕ್ಕೆ ನಿರ್ಮಲಾ ಸೀತಾರಾಮನ್ ಬೇಟಿ ನೀಡಿ ಸೈನಿಕರೊಂದಿಗೆ ಕಾಲ ಕಳೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದು, ದೇಶದ ಮೊದಲ ಮಹಿಳಾ ರಕ್ಷಣಾ ಸಚಿವೆ ಎಂಬ ಹೆಗ್ಗಳಿಕೆಯ ಜತೆಗೆ ಸುಖೋಯ್-30 ಯುದ್ಧವಿಮಾನದಲ್ಲಿ ಹಾರಾಟ ನಡೆಸಿದ ಎರಡನೇ ನಾಯಕಿ ಎಂಬ ಗರಿಮೆಯನ್ನು ನಿರ್ಮಲಾ ಸೀತಾರಾಮನ್ ಮುಡಿಗೇರಿಸಿ ಕೊಂಡಿರುವ ವಿಚಾರ ತಿಳಿದಿದೇ ಇದೆ!!

ಆದರೆ ಮಹಿಳೆಯರೂ ಯಾವ ಸಾಧನೆಗೂ ಸೈ ಎನ್ನುವುದಕ್ಕೆ ಉತ್ತಮ ನಿದರ್ಶನ ಎಂದರೆ ಕಲ್ಪನಾ ಚಾವ್ಲ, ಪಿಟಿ ಉಷಾ, ಧೀರೆ ನೀರಜಾ ಹೀಗೆ ಅದೆಷ್ಟೋ ಮಹಿಳಾ ಮಣಿಯರ ದಂಡೇ ಹರಿದು ಬರುತ್ತೇ!! ಆದರೆ ಇದೀಗ, ಭಾರತೀಯ ವಾಯುಪಡೆಯ ಮಹಿಳಾ ಪೈಲೆಟ್ ಅವಾನಿ ಚತುರ್ವೇದಿ ಹೊಸ ಇತಿಹಾಸ ಬರೆದಿದ್ದಾರೆ. ಕಳೆದ ಸೋಮವಾರ ಏಕಾಂಗಿಯಾಗಿ ಮಿಗ್-21 ಯುದ್ಧ ವಿಮಾನವನ್ನು ಹಾರಾಟ ನಡೆಸಿದ್ದು, ಈ ಸಾಧನೆ ಮಾಡುವ ಮೂಲಕ ಇತಿಹಾಸವನ್ನು ಸೃಷ್ಟಿಸಿರುವ ಜೊತೆಗೆ ಮೊದಲ ಭಾರತೀಯ ಮಹಿಳೆ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ.

ಮಧ್ಯಪ್ರದೇಶದ ರೇವಾ ಜಿಲ್ಲೆಯವರಾಗಿರುವ ಅವನಿ ಚತುರ್ವೇದಿ ಅವರ ಈ ಸಾಧನೆಯನ್ನು ಭಾರತೀಯ ವಾಯು ಪಡೆಯಲ್ಲಿ ನಾರಿ ಶಕ್ತಿಯ ಸೇರ್ಪಡೆ ಎಂದೇ ಬಣ್ಣಿಸಲಾಗುತ್ತಿದೆ. ಅವಾನಿ ಅವರ ಸಾಧನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ವಾಯುಪಡೆ ವಕ್ತಾರರಾದ ವಿಂಗ್ ಕಮಾಂಡರ್ ಅನುಪಮಾ ಬ್ಯಾನರ್ಜಿ, “ಮಹಿಳಾ ಪೈಲೆಟ್ ಮೊದಲ ಬಾರಿಗೆ ಏಕಾಂಗಿಯಾಗಿ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿರುವುದು ಭಾರತೀಯ ವಾಯುಪಡೆ ಇತಿಹಾಸದಲ್ಲಿ ಮೈಲಿಗಲ್ಲಾಗಿದೆ. ಇದರೊಂದಿಗೆ ವಾಯುಪಡೆಯಲ್ಲಿ ನಾರಿ ಶಕ್ತಿಯ ಕಾಲ ಆರಂಭವಾಗಿದೆ” ಎಂದು ಹೇಳಿದ್ದಾರೆ.

ವಿಶ್ವದಲ್ಲೇ ತನ್ನ ಸೈನಿಕ ಬಲದ ಮೂಲಕ ಗಮನ ಸೆಳೆದಿರುವ ಭಾರತೀಯ ಸೇನೆ ಇದೀಗ ಹೊಸ ಇತಿಹಾಸ ಸೃಷ್ಟಿಸಿದ್ದು, ಮೊದಲ ಬಾರಿಗೆ ಏಕಾಂಗಿಯಾಗಿ ಮಹಿಳಾ ಪೈಲಟ್ ಅವನಿ ಚತುರ್ವೇದಿ ಯುದ್ಧ ವಿಮಾನವನ್ನು ಏಕಾಂಗಿಯಾಗಿ ಹಾರಾಟ ನಡೆಸಿದ ಭಾರತೀಯ ಸೇನೆಯ ಮಹಿಳಾ ಪೈಲಟ್ ಅಧಿಕಾರಿಯಾಗಿದ್ದಾರೆ. ಗುಜರಾತ್‍ನ ಜಮ್ ನಗರ್‍ನಲ್ಲಿ ಸೋಮವಾರ ಅವನಿ ಚತುರ್ವೇದಿ ಒಬ್ಬರೇ ಮಿಗ್-21 ಬಿಸನ್ ಯುದ್ಧ ವಿಮಾನ ಹಾರಾಟ ನಡೆಸಿದ್ದಾರೆ. ಅಷ್ಟೇ ಅಲ್ಲದೇ, ಇದು ಭಾರತೀಯ ವಾಯುಪಡೆ ಹಾಗೂ ಭಾರತಕ್ಕೆ ಇದೊಂದು ಅನನ್ಯ ಸಾಧನೆ ಎಂದು ವಾಯುಪಡೆಯ ಕಮಾಂಡರ್ ಪ್ರಶಾಂತ್ ದೀಕ್ಷಿತ್ ತಿಳಿಸಿದ್ದಾರೆ.

ಹೌದು…. 2016ರ ಜೂನ್ ತಿಂಗಳಲ್ಲಿ ಭಾರತದ ಮೊದಲ ಮೂವರು ಮಹಿಳಾ ಪೈಲೆಟ್ ಅಧಿಕಾರಿಗಳನ್ನು ಸೇರಿಸಿಕೊಳ್ಳಲಾಗಿದ್ದು, ಅದರಲ್ಲಿ ಅವಾನಿ ಚತುರ್ವೇದಿಯೂ ಒಬ್ಬರಾಗಿದ್ದಾರೆ. ಕಳೆದ ವಾರದವರೆಗೂ ಇಬ್ಬರು ಪೈಲೆಟ್ ಗಳ ತರಬೇತಿ ಯುದ್ಧ ವಿಮಾನ ಹಾರಾಟ ನಡೆಸಿದ್ದು, ಈ ಯುದ್ಧ ವಿಮಾನದಲ್ಲಿ ನುರಿತ ಮಾರ್ಗದರ್ಶಕರ ಜತೆ ಅವಾನಿ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದರು. ಆದರೆ ಈಗ ಮೊದಲ ಬಾರಿಗೆ ಮಿಗ್-21 ಏಕ ವ್ಯಕ್ತಿ ಚಾಲಿತ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿ ಇತಿಹಾಸ ಸೃಷ್ಟಿಸಿದ್ದಾರೆ!!

ಸುದೀರ್ಘ 30 ನಿಮಿಷಗಳ ಕಾಲ ಅವಾನಿ ಅವರು ರಷ್ಯಾ ಮೂಲದ ಜೆಟ್ ನಲ್ಲಿ ಯಶಸ್ವಿಯಾಗಿ ಹಾರಾಟ ನಡೆಸಿ ಇತಿಹಾಸ ನಿರ್ಮಿಸಿದ್ದಾರೆ. 2016ರಲ್ಲಿ ವಾಯಪಡೆಗೆ ಸೇರಿದ ನಂತರ ಅವಾನಿ ಅವರು ಬೀದರ್ ನಲ್ಲಿರುವ ವಾಯು ನೆಲೆಯಲ್ಲಿ ಸುದೀರ್ಘ ಒಂದು ವರ್ಷ ತರಬೇತಿ ಪಡೆದಿದ್ದರು. ನಂತರ ಆರು ತಿಂಗಳ ಕಾಲ ಹಕಿಮ್ ಪೇಟ್ ನ ಕಿರಣ ತರಬೇತಿ ಜೆಟ್ ನಲ್ಲಿ ತರಬೇತಿ ಪಡೆದಿದ್ದರು ಹಿರಿಮೆ ಇವರದ್ದಾಗಿದೆ.

ಮಿಗ್-21 ಬಿಸನ್ ಯುದ್ಧ ವಿಮಾನ ಹಾರಾಟ ನಡೆಸಿ ಅವನಿ ಚತುರ್ವೇದಿ ಭಾರತೀಯ ಸೈನ್ಯದ ಇತಿಹಾಸದಲ್ಲಿ ಹೊಸ ಭಾಷ್ಯ ಬರೆದಿದ್ದಾರೆ. ಮಿಗ್-21 ಬಿಸನ್ ಯುದ್ಧ ವಿಮಾನ ವಿಶ್ವದಲ್ಲೇ ಅತ್ಯಧಿಕ (ಪ್ರತಿ ಗಂಟೆಗೆ 340 ಕಿ.ಮೀ.) ಲ್ಯಾಂಡಿಂಗ್ ಹಾಗೂ ಟೇಕ್‍ಆಫ್ ವೇಗ ಹೊಂದಿದೆ ಎಂದು ಪ್ರಶಾಂತ್ ದೀಕ್ಷಿತ್ ತಿಳಿಸಿದ್ದಾರೆ. 2016ರ ಜೂನ್ 8ರಂದು ಅವನಿ ಚತುರ್ವೇದಿ, ಮೋಹನಾ ಸಿಂಗ್ ಹಾಗೂ ಭಾವನಾಕಾಂತ್ ಅವರನ್ನು ಭಾರತದ ಯುದ್ಧ ವಿಮಾನದ ಮೊದಲ ಮಹಿಳಾ ಪೈಲಟ್‍ಗಳೆಂದು ಘೋಷಿಸಲಾಗಿತ್ತು.

ಹಾಗಾಗಿ, ಅವಾನಿ ಚತುರ್ವೇದಿ, ಮೋಹನಾ ಸಿಂಗ್ ಹಾಗೂ ಭಾವನಾಕಾಂತ್ ಅವರ ತರಬೇತಿ ಜನವರಿಯಲ್ಲಿ ಪೂರ್ಣಗೊಂಡಿದ್ದು, ಶೀಘ್ರವೇ ಮೋಹನಾ ಸಿಂಗ್ ಹಾಗೂ ಭಾವನಾಕಾಂತ್ ಕೂಡ ಯುದ್ಧ ವಿಮಾನದ ಹಾರಾಟ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಲ್ಯಾಂಡಿಂಗ್ ಹಾಗೂ ಟೇಕ್‍ಆಫ್ ವೇಗ ಹೊಂದಿರುವ ಮಿಗ್-21 ಬಿಸನ್ ಯುದ್ದ ವಿಮಾನವನ್ನು ಹಾರಾಟ ನಡೆಸುವ ಮೂಲಕ ಇತಿಹಾಸ ಸೃಷ್ಟಿ ಮಾಡಿರುವ ಅವನಿ ಚತುರ್ವೇದಿಯವರ ಸಾಧನೆ ನಿಜಕ್ಕೂ ಕೂಡ ಹೆಮ್ಮೆ ತರಿಸುವಂತಹದ್ದಾಗಿದೆ.

– ಅಲೋಖಾ

Tags

Related Articles

Close