ಪ್ರಚಲಿತ

ಬೆಂಗಳೂರಿನ ಮೋದಿ ಸಮಾವೇಶದಲ್ಲಿ ಅನಂತ್ ಕುಮಾರ್ ಹೆಗಡೆ ಹೆಸರು ಮೊಳಗುತ್ತಿತ್ತು ಯಾಕೆ?! ಫಯರ್ ಬ್ರಾಂಡ್ ಹೆಸರಿಗೆ ಮೋದಿ ಪುಳಕಿತ!!

ಭಾರತೀಯ ಜನತಾ ಪಕ್ಷ… 2014ರ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವನ್ನು ದಾಖಲಿಸಿ, ಹೊಸ ಇತಿಹಾಸ ನಿರ್ಮಿಸಿ ನರೇಂದ್ರ ಮೋದೀ ಎಂಬ ದಕ್ಷ ಆಡಳಿತಗಾರ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾರಣವಾದ ಜಗತ್ತಿನ ನಂಬರ್ ವನ್ ರಾಜಕೀಯ ಪಕ್ಷ. ಈ ಪಕ್ಷ ಲೋಕಸಭಾ ಚುನಾವಣೆಯ ನಂತರ ಹಿಂತಿರುಗಿ ನೋಡಲೇ ಇಲ್ಲ. ದೆಹಲಿಯ ಹಿಡಿದ ನಂತರ ಈ ಪಕ್ಷ ಗೆದ್ದಿದ್ದು ಬರೋಬ್ಬರಿ 19 ರಾಜ್ಯ.

ಮಧ್ಯ ಪ್ರದೇಶ, ರಾಜಸ್ಥಾನ,ಹಿಮಾಚಲ ಪ್ರದೇಶ, ಮಹಾರಾಷ್ಟ್ರ,ಗುಜರಾತ್ ಸಹಿತ 19 ರಾಜ್ಯಗಳಲ್ಲಿ ಕಮಲ ಅರಳಿಸುವಲ್ಲಿ ಭಾರತೀಯ ಜನತಾ ಪಕ್ಷ ಯಶಸ್ವಿಯಾಗಿತ್ತು. ಕಾಂಗ್ರೆಸ್ ಮುಕ್ತ ಭಾರತಕ್ಕೆ ಪಣ ತೊಟ್ಟಿದ್ದ ಭಾರತೀಯ ಜನತಾ ಪಕ್ಷ ಭಾರೀ ಯಶಸ್ಸನ್ನು ಪಡೆದಿತ್ತು. ಭಾರತೀಯ ಜನತಾ ಪಕ್ಷದ ಚಾಣಾಕ್ಯ ಎಂದೇ ಖ್ಯಾತಿ ಗಳಿಸಿರುವ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಮುಂದಿನ ದೃಷ್ಟಿ ನೆಟ್ಟಿದ್ದೇ ಕರ್ನಾಟಕದತ್ತ. ಕರ್ನಾಟಕದಲ್ಲಿ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಿದ್ರೆ ಕಮಲ ಪಡೆಯ ಕನಸು ನನಸು ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಪುಟಿದೆದ್ದಿದೆ ಕನ್ನಡದ ಕಮಲ ಪಡೆ..!

ಚುನಾವಣೆ ಸಮೀಸುತ್ತಿದ್ದಂತೆಯೇ ಕರ್ನಾಟಕದ ಭಾರತೀಯ ಜನತಾ ಪಕ್ಷದ ನಾಯಕರು ಕಾರ್ಯಪ್ರವೃತ್ತರಾಗಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ,ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಬಸ್ ಏರಿ ಪರಿವರ್ತನಾ ಯಾತ್ರೆ ಮೂಲಕ ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲೂ ಸಂಚರಿಸಿ ಹೊಸ ದಾಖಲೆ ಬರೆದಿದ್ದಾರೆ. ಯಡಿಯೂರಪ್ಪ ತೆರಳಿದ ಪ್ರತಿ ಕ್ಷೇತ್ರದಲ್ಲೂ ಜನವೋ ಜನ. ಕೋಟ್ಯಾಂತರ ಜನರು ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಈ ಮೂಲಕ ಮುಂದಿನ ಚುನಾವಣೆಯಲ್ಲಿ ಕಮಲ ಅಧಿಕಾರದ ಗದ್ದುಗೆಗೆ ಏರುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.

ಬೆಂಗಳೂರಿನಲ್ಲಿ ನಡೆಯಿತು ಐತಿಹಾಸಿಕ ಸಮಾವೇಶ..!

ಮೋದಿ ಬರ್ತಾರೆಂದರೆ ಕೇಳಬೇಕಾ. ಅದು ಜನರಿಂದ ತುಂಬಿ ತುಳುಕುತ್ತಿರುವ ಒಂದು ಸಮುದ್ರದಂತೆ ಭಾಸವಾಗುವ ಸಮಾವೇಶ. ಕಾಂಗ್ರೆಸ್ ನ ಕುತಂತ್ರದ ನಡುವೆಯೂ ಮೋದಿ ಜಾತ್ರೆಗೆ ಬರೋಬ್ಬರಿ 5 ಲಕ್ಷ ಜನ ಸೇರಿದ್ದರು. ಸಮಾವೇಶ ಅಕ್ಷರಷಃ ಜನಜಾತ್ರೆಯಾಗಿ ಬದಲಾಗಿತ್ತು. ಕರ್ನಾಟಕ ಅದಾಗಲೇ ಬದಲಾಗಿತ್ತು.

ಭಾರತೀಯ ಜನತಾ ಪಕ್ಷದ ಪ್ರತಿಯೊಬ್ಬ ನಾಯಕನೂ ಮಾತನಾಡಬೇಕಾದರೆ ಅನಂತ್ ಕುಮಾರ್ ಹೆಗಡೆ ಮಾತನಾಡಬೇಕು ಎಂಬ ಘೋಷಣೆ ಸಭಾಂಗಣದಿಂದ ಮಾರ್ಧನಿಸುತ್ತಿತ್ತು. ಮೋದಿ ಮೋದಿ ಘೋಷಣೆಯೊಂದಿಗೆ ಹೆಗಡೆ ಹೆಗಡೆ ಘೋಷಣೆ ವೇದಿಕೆಯ ಮೇಲಿದ್ದ ನಾಯಕರಿಗೆ ಅಪ್ಪಳಿಸುತ್ತಿತ್ತು. ಆದರೆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಮಾತ್ರ ನಸು ನಗುತ್ತಲೇ ವೇದಿಕೆ ಮೇಲೆ ಕುಳಿತಿದ್ದರು.

ಪ್ರಧಾನಿ ಮೋದಿ ಭಾಷಣ ಆರಂಭಿಸುತ್ತಿದ್ದಂತೆಯೇ “ಭಾರತ್ ಮಾತಾ ಕೀ ಜೈ” ಘೋಷಣೆಯೊಂದಿಗೆ ಮೋದಿ ಮೋದಿ ಎಂಬ ಘೋಷಣೆ ಧ್ವನಿಯಾಗುತ್ತಿತ್ತು. ಅದರ ಮಧ್ಯೆ ಅನಂತ್ ಕುಮಾರ್ ಹೆಗಡೆಯವರ ಹೆಸರೂ ಮೋದಿ ಕಿವಿಯನ್ನು ನಿಮಿರುವಂತೆ ಮಾಡಿತ್ತು. ಪ್ರಧಾನಿ ಮೋದಿ ವೇದಿಕೆಯಲ್ಲಿದ್ದ ಪ್ರತಿಯೋರ್ವರ ಹೆಸರನ್ನು ಹೇಳುತ್ತಿದ್ದರು. ಆವಾಗ ಮಧ್ಯೆ ಅನಂತ್ ಕುಮಾರ್ ಹೆಗಡೆಯವರ ಹೆಸರನ್ನೂ ಮೋದಿ ಹೇಳಿದ್ದರು.

ಯಾವಾಗ ಅನಂತ್ ಕುಮಾರ್ ಹೆಗಡೆಯವರ ಹೆಸರು ಮೋದಿಯವರ ಬಾಯಿಂದ ಉದುರಿತ್ತೋ ಆವಾಗ ಲಕ್ಷ ಲಕ್ಷ ಕಾರ್ಯಕರ್ತರ ಘೋಷಣೆ ಮುಗಿಲು ಮುಟ್ಟಿತ್ತು. ಮೋದಿ ಮತ್ತೊಬ್ಬರ ಹೆಸರನ್ನು ಹೇಳಿಕೊಳ್ಳಲೂ ಸಮಯವಿರಲಿಲ್ಲ. ಅಷ್ಟೊಂದು ಉದ್ಘೋಷ ಅನಂತ್ ಕುಮರ್ ಹೆಗಡೆ ಪರ ಮೊಳಗುತ್ತಿತ್ತು. ಇದನ್ನರಿತ ಪ್ರಧಾನಿ ನರೇಂದ್ರ ಮೋದಿಯೇ ಒಂದು ಕ್ಷಣ ಬಿಟ್ಟ ಕಣ್ಣು ಬಿಟ್ಟಂಗೆ ನೋಡುತ್ತಿದ್ದರು. ಮೊನ್ನೆ ಮೊನ್ನೆ ತಾನೇ ಕೇಂದ್ರ ಸಚಿವ ಸ್ಥಾನಕ್ಕೇರಿದ ಅನಂತ್ ಕುಮಾರ್ ಹೆಗಡೆಯವರ ಹೆಸರು ಇಷ್ಟು ಬೇಗ ಖ್ಯಾತಿ ಪಡೆದದ್ದನ್ನು ಕಂಡ ಮೋದಿಯೇ ಸ್ವತಃ ಮೂಕವಿಸ್ಮಿತರಾಗಿದ್ದರು.

ಅನಂತ್ ಕುಮಾರ್ ಹೆಗಡೆ ಮಾತನಾಡಬೇಕೆಂಬ ಹಠ ಕಾರ್ಯಕರ್ತರು ವ್ಯಕ್ತಪಡಿಸಿದರಾದರೂ ಅದು ಈಡೇರಲೇ ಇಲ್ಲ. ಅಧಿಕವಾದ ಸಮಯದ ಒತ್ತಡ ಹಾಗೂ ಇನ್ನಿತರ ರಾಷ್ಟ್ರ ನಾಯಕರು ಮಾತನಾಡಲಿಕ್ಕೆ ಇದ್ದ ಕಾರಣ ಕಾರ್ಯಕರ್ತರ ಅಪೇಕ್ಷೆ ಈಡೇರಲೇ ಇಲ್ಲ. ಆದರೆ ಅನಂತ್ ಕುಮಾರ್ ಹೆಗಡೆ ಎಂಬ ದಿಟ್ಟ ಹಿಂದುತ್ವವಾದಿ ಹಾಗೂ ಅಪ್ಪಟ ಹೋರಾಟಗಾರ ಇಂದು ಹಿಂದುತ್ವದ ಹಾಗೂ ಭಾರತೀಯ ಜನತಾ ಪಕ್ಷದ ಮಾಸ್ ಹೀರೋ ಆಗಿ ಬೆಳೆದಿದ್ದಾರೆ.

ಒಂದು ಸಮಯದಲ್ಲಿ ಮೈಸೂರಿನ ಒಂದು ಪೇಟೆಯಲ್ಲಿ ದಿನಸಿ ಮೂಟೆಗಳನ್ನು ಹೊತ್ತೊಯ್ದ ಇದೇ ಅನಂತ್ ಕುಮಾರ್ ಹೆಗಡೆ ಇಂದು 5 ಬಾರಿ ಸಂಸದರಾಗಿ, ಈಗ ಮೋದಿ ಸರ್ಕಾರದಲ್ಲಿ ಸಚಿವರಾಗಿ, ಹಿಂದುತ್ವದ ಫೈರ್ ಬ್ರಾಂಡ್ ಆಗಿ ಹೆಸರು ವಾಸಿಯಾಗಿದ್ದಾರೆ. ತನಗನಿಸಿದ್ದನ್ನು ನೇರವಾಗಿ ಹೇಳಿಯೇ ಬಿಡುವ ಜಾಯಮಾನ ಅನಂತ್ ಕುಮಾರ್ ಹೆಗಡೆಯವರದ್ದು. ಕೆಲ ಸಮಯಗಳಿಂದ ಭಾರೀ ವಿವಾದವೇ ಅವರ ಸುತ್ತ ಸುತ್ತುತ್ತಿತ್ತು. ಆದರೆ ಅವರ ಆ ವಿವಾದದ ಮಾತುಗಳಲ್ಲಿ ಅದೆಷ್ಟೋ ಸತ್ಯ ಅಡಗಿದೆ ಎಂದರೆ ಸುಳ್ಳಲ್ಲ.

ಒಟ್ಟಾರೆ ಅನಂತ್ ಕುಮಾರ್ ಹೆಗಡೆ ಎಂಬ ಬೆಂಕಿ ಚೆಂಡು ರಾಜಕೀಯದಲ್ಲಿ ಯಾವುದೇ ಪ್ರತಿಫಲಪೇಕ್ಷೆ ಇಲ್ಲದೆ ರಾಜಕೀಯಕ್ಕೆ ಬಂದು ಸಾಮಾನ್ಯ ಕಾರ್ಯಕರ್ತನಾಗಿ ದುಡಿದು, ಸಂಸದನಾಗಿ, ಇಂದು ಕೇಳದೆನೇ ಸಂಸದರಾಗಿ ಆಯ್ಕೆಯಾಗಿದ್ದಾರೆ. ಇದು ಅವರ ದಕ್ಷ ಪ್ರಾಮಾಣಿಕತೆಗೆ ಸಿಕ್ಕ ಗೌರವ ಅಲ್ಲದೆ ಮತ್ತೇನೂ ಅಲ್ಲ. ಈ ಕಾರಣಕ್ಕಾಗಿಯೇ ಅವರನ್ನು ಜನರು ಇಂದಿಗೂ ಗುರುತಿಸಿಕೊಳ್ಳುವುದು.

-ಸುನಿಲ್ ಪಣಪಿಲ

Tags

Related Articles

Close