ಪ್ರಚಲಿತ

ಯಾವುದೇ ರಕ್ಷಣಾ ಸಚಿವರು ಭೇಟಿ ನೀಡದ ಆ ಯುದ್ದ ಪ್ರದೇಶಕ್ಕೆ ಮಹಿಳಾ ರಕ್ಷಣಾ ಸಚಿವೆ ಬೇಟಿ ನೀಡಿದ್ದಾದರೂ ಯಾಕೆ? ಇತಿಹಾಸ ನಿರ್ಮಿಸಿದ ಆ ಪ್ರದೇಶ ಯಾವುದು ಗೊತ್ತಾ?

ದೇಶಕ್ಕೋಸ್ಕರ ಪ್ರಾಣವನ್ನೇ ಮುಡಿಪಾಗಿಸಿಟ್ಟಿರುವ ಅದೆಷ್ಟೋ ಸೈನಿಕರು ಕೊರೆಯುವ ಚಳಿಯನ್ನು ಲೆಕ್ಕಿಸದೆ, ಸುಡುವ ಬಿಸಿಲಿಗೆ ಕ್ಯಾರೆ ಅನ್ನದೇ ತನ್ನ ದೇಶಕ್ಕೋಸ್ಕರ ಹಗಲಿರುವ ದುಡಿಯುವ ಸೈನಿಕರ ಪಾಡು ಹೇಳತೀರದು. ಆದರೆ ನಿರ್ಮಲಾ ಸೀತಾರಾಮನ್ ಅವರು ದೇಶದ ರಕ್ಷಣಾ ಸಚಿವೆಯಾಗಿ ನೇಮಕಗೊಂಡಾಗಿನಿಂದಲೂ ಸೈನಿಕರಿಗೆ ಸಾಕಷ್ಟು ಸವಲತ್ತುಗಳನ್ನು ನೀಡುತ್ತಾ ಬಂದಿದ್ದು, ಇದೀಗ ರಕ್ಷಣಾ ಸಚಿವರ ಇತಿಹಾಸದಲ್ಲೇ ಯಾವುದೇ ರಕ್ಷಣಾ ಸಚಿವರು ಭೇಟಿ ನೀಡದ ಪ್ರದೇಶಕ್ಕೆ ನಿರ್ಮಲಾ ಸೀತಾರಾಮನ್ ಬೇಟಿ ನೀಡಿ ಸೈನಿಕರೊಂದಿಗೆ ಕಾಲ ಕಳೆಯುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ಹೌದು… ತೀವ್ರ ಕುತೂಹಲ ಕೆರಳಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಸಚಿವಸಂಪುಟ ಪುನರ್’ರಚನೆಯಲ್ಲಿ ವಾಣಿಜ್ಯ ಖಾತೆಯನ್ನು ನಿರ್ವಹಿಸುತ್ತಿದ್ದ ನಿರ್ಮಲಾ ಸೀತಾರಾಮನ್ ಅವರು ದೇಶದ ರಕ್ಷಣಾ ಸಚಿವೆಯಾಗಿ ನೇಮಕಗೊಂಡಿದ್ದು, 58 ವರ್ಷದ ನಿರ್ಮಲಾ ಸೀತಾರಾಮನ್ ಅವರು ಆಯ್ಕೆಯಾಗುವ ಮೂಲಕ ಪೂರ್ಣಾವಧಿಯಾಗಿ ರಕ್ಷಣಾ ಖಾತೆಯನ್ನು ಹೊಂದಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನೂತನ ರಕ್ಷಣಾ ಸಚಿವೆಯಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ನಿರ್ಮಲಾ ಸೀತಾರಾಮನ್ ಕಡಿಮೆ ಅವಧಿಯಲ್ಲಿ ಗಡಿಭಾಗಗಳಿಗೆ ಭೇಟಿ ನೀಡುತ್ತಲೇ ಬರುತ್ತಿದ್ದು, ಇದೀಗ ಧೀರ ಸೈನಿಕರಿಗೆ ಸ್ಥೈರ್ಯ ತುಂಬಲು ದೇಶದ ರಕ್ಷಣಾ ಸಚಿವರ ಇತಿಹಾಸದಲ್ಲೇ ಯಾವುದೇ ರಕ್ಷಣಾ ಸಚಿವ ಭೇಟಿ ನೀಡದ ಪ್ರದೇಶಕ್ಕೆ ಬೇಟಿ ನೀಡುವ ಮೂಲಕ, ಒರ್ವ ಮಹಿಳಾ ಸಚಿವೆಯಾಗಿ ಮೊಟ್ಟ ಮೊದಲ ಬಾರಿಗೆ ದಾಖಲೆ ನಿರ್ಮಿಸಿದ್ದಾರೆ.

ಹೌದು……

ಆ ಪ್ರದೇಶಕ್ಕೆ ಹೋಗಲು ಗಟ್ಟಿ ಗುಂಡಿಗೆ ಬೇಕು. ಸ್ವಲ್ಪ ಏರು ಪೇರಾದರೂ ಮೈ ಮರಗುಟ್ಟುತ್ತೆ. ಅಂತಹ ಸ್ಥಿತಿಯಲ್ಲೇ ನಮ್ಮ ಸೈನಿಕರು ನಿತ್ಯ ದೇಶ ರಕ್ಷಣೆಗಾಗಿ ಹೋರಾಡುತ್ತಿರುವ ಆ ಧೀರ ಸೈನಿಕರಿಗೆ ಸ್ಥೈರ್ಯ ತುಂಬಲು ದೇಶದ ರಕ್ಷಣಾ ಸಚಿವರ ಇತಿಹಾಸದಲ್ಲೇ ಯಾವುದೇ ರಕ್ಷಣಾ ಸಚಿವ ಭೇಟಿ ನೀಡದ ಭಾರತ ಚೀನಾ ಗಡಿಯ ಲಡಾಕ್ ಪ್ರದೇಶಕ್ಕೆ ರಕ್ಷಣಾ ನಿರ್ಮಲಾ ಸೀತಾರಾಮನ್ ಭೇಟಿ ನೀಡುವ ಮೂಲಕ ಭಾರತೀಯ ಸೈನಿಕರಿಗೆ ಸ್ಥೈರ್ಯ ತುಂಬಿದ್ದಾರೆ.

ಜಮ್ಮು-ಕಾಶ್ಮೀರ ಗಡಿಭಾಗದ ಲಡಾಖ್ ಪ್ರಾಂತ್ಯಕ್ಕೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಭೇಟಿ ನೀಡಿದರು ಎಂದು ಸೇನಾ ಮೂಲಗಳು ತಿಳಿಸಿವೆ. ಭಾರತ-ಚೀನಾ ಗಡಿ ಪ್ರದೇಶಕ್ಕೆ ಹೊಂದಿರುವ ಥೋಯ್ಸಿ ವಾಯುನೆಲೆಗೆ ಆಗಮಿಸಿದ ರಕ್ಷಣಾ ಸಚಿವೆ, ಕಾರ್ಯಚರಣೆಯ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ ನಂತರ ಅತೀ ಎತ್ತರದ ಸೇನಾನೆಲೆಯಾದ ದೌಲಾತ್ ಬೇಗ್ ಓಲ್ಡಿಗೆ ಭೇಟಿ ನೀಡಿದ್ದಾರೆ.

ಅಷ್ಟೇ ಅಲ್ಲದೇ, ಮೈನಸ್ 55 ಸಿ ಚಳಿ ಇರುವ 16,700 ಅಡಿ ಎತ್ತರದಲ್ಲಿರುವ ಪೂರ್ವ ಲಡಾಖ್ ನ ದೌಲತ್ ಬೇಗ್ ಒಲ್ಡಿ ಯಲ್ಲಿರುವ ಸೈನ್ಯದ ಶಿಬಿರಕ್ಕೆ ಭೇಟಿ ನೀಡಿ ಸೈನಿಕರೊಂದಿಗೆ ಕಾಲ ಕಳೆಯುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ರಕ್ಷಣಾ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ನಿರ್ಮಲಾ ಸೀತಾರಾಮನ್ ಅವರು ಇದೇ ಮೊದಲ ಬಾರಿಗೆ ಲಡಾಖ್ ಪ್ರದೇಶಕ್ಕೆ ಭೇಟಿ ನೀಡಿರುವ ಇವರು ಮೈ ನಡುಗಿಸುವ ಚಳಿಯಲ್ಲೂ ದೇಶಕ್ಕಾಗಿ ಹೋರಾಟ ನಡೆಸುತ್ತಿರುವ ಯೋಧರಿಗೆ ಸಚಿವೆ ಅಭಿನಂದನೆ ಸಲ್ಲಿಸಿದ್ದಾರೆ.

ಭಾರತ ಚೀನಾ ಗಡಿಯಾಗಿರುವ ಪೂರ್ವ ಲಡಾಖ್ ನ ದೌಲತ್ ಬೇಗ್ ಒಲ್ಡಿ ಸೈನಿಕರ ಶಿಬಿರಕ್ಕೆ ಭಾರತದ ಇತಿಹಾಸದಲ್ಲೇ ಪ್ರಥಮ ಭಾರಿಗೆ ರಕ್ಷಣಾ ಸಚಿವರೊಬ್ಬರ ಪ್ರಥಮ ಭೇಟಿಯಾಗಿದೆ. ಈ ಮೂಲಕ ರಕ್ಷಣ ಸಚಿವೆ ಮೈನಸ್ ಡಿಗ್ರಿ ಚಳಿಯಲ್ಲೂ ತಮ್ಮ ಕಾರ್ಯ ಚಟುವಟಿಕೆಯಿಂದ ಇದ್ದು, ಸೈನಿಕರೊಂದಿಗೆ ಮುಕ್ತ ಚರ್ಚೆ ನಡೆಸಿದ್ದಾರೆ. ಇದು ಸೈನಿಕರಲ್ಲಿ ಸ್ಥೈರ್ಯ ತುಂಬಿತಲ್ಲದೇ, ದೇಶದ ರಕ್ಷಣಾ ಸಚಿವರು ಸಂದಿಗ್ಧ ಪರಿಸ್ಥಿತಿಯಲ್ಲಿರುವ ಪ್ರದೇಶಕ್ಕೆ ಭೇಟಿ ನೀಡಿದ್ದು, ಸೈನಿಕರಲ್ಲಿ ಅಭಿಮಾನ ಹೆಚ್ಚಿಸಿದೆ.

ಭಾರತ ಮತ್ತು ಚೀನಾ ಗಡಿಗೆ ಹೊಂದಿಕೊಂಡಿರುವ ಭಾರತೀಯ ಸೇನೆಯ ಕ್ಯಾಂಪ್‍ಗಳಿಗೆ ತೆರಳಿ ರಕ್ಷಣಾ ಸಚಿವರು ಸಮಾಲೋಚನೆ ನಡೆಸಿದ್ದು, ಮಂಜು ಮುಸುಕಿದ ಚಳಿಯಲ್ಲಿಯೂ ಸೈನಿಕರನ್ನು ಭೇಟಿ ಮಾಡಿದ ನಿರ್ಮಲಾ ಸೀತಾರಾಮನ್, ಈ ಭೇಟಿ ಕುರಿತು ಚಿತ್ರಗಳನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.

“ರಕ್ಷಣಾ ಸಚಿವೆ ನಿರ್ಮಲಾ ಅವರು ಮೊದಲಿಗೆ ಭಾರತ ಹಾಗೂ ಚೀನಾ ಗಡಿಯಲ್ಲಿರುವ ಸೇನೆಯ ಥೋಯಿಸ್ ಕ್ಯಾಂಪ್‍ಗೆ ಭೇಟಿ ನೀಡಿದ ಬಳಿಕ ಇಲ್ಲಿ ರಕ್ಷಣಾ ಸಚಿವರಿಗೆ ಸೇನೆಯ ಕಾರ್ಯಾಚರಣೆ ಸಿದ್ಧತೆಗಳ ಬಗ್ಗೆ ವಿವರಿಸಲಾಯಿತು. ನಂತರ ಅವರು ದೌಲತ್ ಬೇಗ್ ಒಲ್ಡಿಯಾ ಹಾಗೂ ಚುಶುಲ್ ಸೆಕ್ಟರ್‍ಗಳಿಗೆ ತೆರಳಿ ಭದ್ರತಾ ಸಿಬ್ಬಂದಿಯೊಂದಿಗೆ ಸಮಾಲೋಚನೆ ನಡೆಸಿದರು” ಎಂದು ಸೇನೆಯ ವಕ್ತಾರರು ತಿಳಿಸಿದ್ದಾರೆ.

ರಕ್ಷಣಾ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಲಡಾಖ್‍ಗೆ ನಿರ್ಮಲಾ ಸೀತಾರಾಮನ್ ಅವರು ಇದೇ ಮೊದಲ ಬಾರಿಗೆ ಭೇಟಿ ನೀಡಿದ್ದಾರೆ. ಅಲ್ಲದೇ, ಸೇನೆಯ ಲಘು ವಿಮಾನದಲ್ಲಿ ಅವರು ಹಾರಾಟ ನಡೆಸಿದ್ದು, ರಕ್ಷಣಾ ಸಚಿವರಿಗೆ ಲೆಫ್ಟಿನೆಂಟ್ ಜನರಲ್ ಡಿ.ಅಂಬು ಮತ್ತಿತರ ಸೇನೆ ಅಧಿಕಾರಿಗಳು ಸಾಥ್ ನೀಡಿದರು ಎಂದು ವಕ್ತಾರರು ವಿವರಿಸಿದ್ದಾರೆ.

– ಅಲೋಖಾ

Tags

Related Articles

Close