ಪ್ರಚಲಿತ

ಕಮಲ ಹಿಡಿಯಲಿದ್ದಾರೆ ರಾಕಿಂಗ್ ಸ್ಟಾರ್! ಮೋದಿ ಬಗ್ಗೆ ಯಶ್ ಹೇಳಿದ್ದೇನು ಗೊತ್ತಾ?! ಸಿನಿಯಿಂದ ರಾಜಕೀಯದತ್ತ!

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ರಾಜಕೀಯ ಮೇಲಾಟಗಳು ಕೂಡಾ ಭರ್ಜರಿಯಾಗಿ ನಡೆಯುತ್ತಿದೆ. ಪಕ್ಷಗಳು ಒಂದು ಕಡೆ ಪಾದಯಾತ್ರೆ ರೂಪದಲ್ಲಿ ಪ್ರಚಾರ ನಡೆಯುತ್ತಿದ್ದರೆ ಮತ್ತೊಂದೆಡೆ ಸಮಾವೇಶಗಳ ಮೂಲಕ ಪ್ರಚಾರ ಕಾರ್ಯಗಳು ನಡೆಯುತ್ತಿವೆ. ಈ ಮಧ್ಯೆ ಕೆಲ ರಾಜಕಾರಣಿಗಳ ಪಕ್ಷಾಂತರ ಪರ್ವವೂ ಭರ್ಜರಿಯಾಗಿ ನಡೆಯುತ್ತಿದೆ.

ಕಮಲ ಹಿಡಿಯಲಿದ್ದಾರಂತೆ ರಾಕಿಂಗ್ ಸ್ಟಾರ್…!

ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಪಕ್ಷಗಳು ಸಿನಿ ತಾರೆಯರ ಮೊರೆ ಹೋಗುವುದು ಸಾಮಾನ್ಯ. ಹೀಗಾಗಿ ಈ ಬಾರಿಯೂ ಸಿನಿಮಾ ತಾರೆಯರ ಪ್ರಚಾರದ ಘರ್ಜನೆ ಮುಗಿಲು ಮುಟ್ಟಲಿದೆ. ಸ್ಯಾಂಡಲ್ ವುಡ್ ನಲ್ಲಿ ಒಂದಾಗಿರುವ ಈ ಸಿನಿ ತಾರೆಯರು ರಾಜಕೀಯ ಅಖಾಡಕ್ಕಿಳಿದು ತಮ್ಮ ನೆಚ್ಚಿನ ಅಭ್ಯರ್ಥಿ ಯ ಪರವಾಗಿ ಬ್ಯಾಟಿಂಗ್ ನಡೆಸಲಿದ್ದಾರೆ.

ಸದ್ಯ ಈ ಒಂದು ಸ್ಟೋರಿ ಸ್ಯಾಂಡಲ್ ವುಡ್ ನಲ್ಲಿ ಹಾಗೂ ರಾಜಕೀಯ ವಲಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಕನ್ನಡ ಸಿನಿರಂಗದ ಖ್ಯಾತ ನಟರಾದ ರಾಕಿಂಗ್ ಸ್ಟಾರ್ ಯಶ್ ಭಾರತೀಯ ಜನತಾ ಪಕ್ಷ ವನ್ನು ಸೇರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಅಧಿಕೃತವಾಗಿ ಭಾರತೀಯ ಜನತಾ ಪಕ್ಷದ ಸ್ಟಾರ್ ಪಚಾರಕರಾಗಲಿದ್ದಾರೆ ಎನ್ನುವ ಸುದ್ಧಿ ಇದೀಗ ಭಾರೀ ಸುದ್ದಿ ಮಾಡುತ್ತಿದೆ.

ಕನ್ನಡ ಸುದ್ದಿ ಮಾಧ್ಯಮವೊಂದರ ವರದಿಯ ಪ್ರಕಾರ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಧಿಕೃತ ನಾಯಕ ರಾಗದಿದ್ದರೂ ಕನಿಷ್ಟ ಪಕ್ಷ ಭಾರತೀಯ ಜನತಾ ಪಕ್ಷದ ಸ್ಟಾರ್ ಪ್ರಚಾರಕರಾಗಿಯಾದರೂ ಬರುತ್ತಾರೆ ಎನ್ನುವ ಸುದ್ದಿಯನ್ನು ಮಾಡಿತ್ತು. ಭಾರತೀಯ ಜನತಾ ಪಕ್ಷದ ಪ್ರಕಾರವೂ ಕನ್ನಡ ಚಲನಚಿತ್ರ ನಟ ರಾಕಿಂಗ್ ಸ್ಟಾರ್ ಯಶ್ ಪ್ರಚಾರಕ್ಕಾಗಿ ಭಾರತೀಯ ಜನತಾ ಪಕ್ಷ ವನ್ನು ಅಪ್ಪಲಿದ್ದಾರೆ
ಎನ್ನುವ ಮಾಹಿತಿಯನ್ನು ನೀಡಿದ್ದಾರೆ.

ಮೋದಿಯನ್ನು ಹೊಗಳಿದ್ದ ಯಶ್..!!!

ರಾಕಿಂಗ್ ಸ್ಟಾರ್ ಯಶ್ ಭಾರತೀಯ ಜನತಾ ಪಕ್ಷ ವನ್ನೇ ಯಾಕೆ ಅಪ್ಪಿಕೊಳ್ಳಬೇಕು ಎನ್ನುವ ಪ್ರಶ್ನೆಯೂ ಮೂಡಿದೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ. ರಾಕಿಂಗ್ ಸ್ಟಾರ್ ಯಶ್ ಪ್ರಧಾನಿ ಮೋದಿಯವರ ಅಭಿಮಾನಿ. ಪ್ರದಾನಿ ಮೋದಿಯವರ ಅಪ್ರತಿಮ ಅಭಿವೃದ್ಧಿ ಯೋಜನೆ ಗಳನ್ನು ಹೊಗಳುತ್ತಲೇ ಇರುತ್ತಾರೆ. ಇತ್ತೀಚೆಗೆ ಕನ್ನಡ ಸುದ್ದಿ ಮಾಧ್ಯಮವಾದ ಸುವರ್ಣ ಸುದ್ಧಿ ವಾಹಿನಿ ನಡೆಸಿದ ಯಶ್ ಜತೆಗಿನ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಉತ್ತಮವಾದ ಮಾತುಗಳನ್ನಾಡಿ ಪ್ರಧಾನಿ ಎಂದರೆ ಹೀಗಿರಬೇಕು ಎಂದು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

“ಪ್ರಧಾನಿ ನರೇಂದ್ರ ಮೋದಿಯವರು ಓರ್ವ ಅಗ್ರೆಸ್ಸಿವ್ ನಾಯಕ. ಅವರಿಗೆ ದೇಶವನ್ನು ಆಳುವ ಸಾಮರ್ಥ್ಯ ಇದೆ. ಅವರ ಕೆಲಸವನ್ನು ಕಂಡು ನಾನೇ ಬೆಚ್ಚಿ ಬಿದ್ದಿದ್ದೇನೆ. ತನ್ನ ಜೀವನವನ್ನೇ ದೇಶಕ್ಕೆ ಮುಡಿಪಾಗಿಟ್ಟ ಮೋದೀಜೀ ನಿಜವಾಗಿಯೂ ಗ್ರೇಟ್‌. ಜಗತ್ತಿನ ಅತ್ಯಂತ ದೊಡ್ಡ ರಾಷ್ಟ್ರ ವನ್ನು ಆಳೋದು ಅಂದ್ರೆ ಸುಲಬದ ಮಾತಲ್ಲ. ಸಿಂಗಾಪುರದ ನಾಯಕರೇ ಹೇಳುತ್ತಾರೆ. ಅವರಿಗೆ ಅಲ್ಲಿನ ರಾಷ್ಟ್ರವನ್ನು ಆಳೋದೇ ಕಷ್ಟ. ಇನ್ನು ಭಾರತ ಸಾಧ್ಯನೇ ಇಲ್ಲ ಎಂದು. ಅಂತದರಲ್ಲಿ ಇಷ್ಟೊಂದು ದೊಡ್ಡ ರಾಷ್ಟ್ರವನ್ನು ಆಳ್ವಿಕೆ ಮಾಡಿ ಚೇಂಜ್ ಮಾಡುತ್ತೇನೆ ಎಂದು ಕನಸು ಕಟ್ಟಿಕೊಂಡು ಹೊರಟಿದ್ದಾರೆ. ಇದು ನಿಜಕ್ಕೂ ಗ್ರೇಟ್.. ಓರ್ವ ಚಾಯ್ ವಾಲಾನಾಗಿ ಇಷ್ಟು ಎತ್ತರಕ್ಕೆ ಬೆಳೆದು ನಿಂತ ಅವರ ಸಾಮರ್ಥ್ಯ ಮುಚ್ಚುವಂತೆ ಮಾಡಿದೆ” ಎಂದು ಯಶ್ ಹೇಳಿದ್ದರು. ತನ್ನ ೩೨ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಸುವರ್ಣ ನ್ಯೂಸ್ ಜೊತೆಗೆ ಮೋದೀಜೀ ಬಗ್ಗೆ ಈ ರೀತಿಯಲ್ಲಿ ಬಣ್ಣಿಸಿದ್ದರು.

ಇದೇ ವೇಳೆ ತಾವು ರಾಜಕೀಯಕ್ಕೆ ಜಿಗಿಯುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರ ನೀಡಿದ ಯಶ್, “ರಾಜಕೀಯ ಅನ್ನೋದು ಜನಸೇವೆ ಮಾಡಲು ಇರುವ ಮಾರ್ಗವಾಗಿದೆ. ಅದರಲ್ಲಿ ಕೀಳರಿಮೆ ಬೇಡ. ಅವಕಾಶ ಸಿಕ್ಕರೆ ರಾಜಕೀಯಕ್ಕೆ ಜಿಗಿಯುತ್ತೇನೆ” ಎಂದು ಹೇಳಿದ್ದಾರೆ.

ಕೆಲಸದಲ್ಲೂ ಹೋಲಿಕೆ..!

ಇದೊಂದು ನಿಜವಾಗಿಯೂ ಗಮನಿಸಬೇಕಾದ ಅಂಶವಾಗಿದೆ. ಕೆಲಸ ಕಾರ್ಯಗಳಲ್ಲಿ ಯಶ್ ಮೋದಿ ಯವರ ನೀತಿಯನ್ನು ಅನುಸರಿಸುತ್ತಾರೆ. ಪ್ರಧಾನಿ
ನರೇಂದ್ರ ಮೋದಿಯವರು ಸ್ವಚ್ಚ ಭಾರತ ಸಂಕಲ್ಪ ವನ್ನು ಹೊಂದಿರುವ ನಾಯಕರಾಗಿದ್ದಾರೆ. ಅಂತೆಯೇ ಕೆರೆಗಳ ಅಭಿವೃದ್ಧಿ ಹಾಗೂ ಅದರ ಹೂಳೆತ್ತುವ ಕಾರ್ಯ ದಲ್ಲೂ ಭಾರೀ ಆಸಕ್ತಿ ಹೊಂದಿದ್ದ ನಾಯಕರಾಗಿದ್ದರು. ಸೇಮ್ ಟು ಸೇಮ್ ಯಶ್. ಯಶ್ ಹಾಗು ಅವರ ಪತ್ನಿ ರಾಧಿಕಾ ಪಂಡಿತ್ ಕೆರೆಗಳ ಅಭಿವೃದ್ಧಿ ಹಾಗು ಅದರ ಹೂಳೆತ್ತುವ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಅನೇಕ ಕೆರೆಗಳನ್ನು ಯಶ್ ದಂಪತಿ ಹೂಳೆತ್ತುವ ಮೂಲಕ ಅಭಿವೃದ್ಧಿ ಪಡಿಸಿದ್ದರು. ಕೆಲವೇ ದಿನಗಳಲ್ಲಿ ಆ ಕೆರೆಗಳು ಜಲಧಾರೆಯನ್ನೇ ಹರಿಸಿತ್ತು. ಸ್ವಂತ ಖರ್ಚಿನಿಂದ ಯಶ್ ಮಾಡಿದ್ದ ಈ ಸಾಧನೆ ಭಾರೀ ಜನಮಣ್ಣನೆಗೆ ಕಾರಣವಾಗಿತ್ತು. ಬರಗಾಲದಿಂದ ತುತ್ತಾಗಿದ್ದ ಬರಪೀಡಿತ ಪ್ರದೇಶದಲ್ಲಿ ಕಲ್ಯಾಣಿಗಳನ್ನು ಉಕ್ಕಿ ಹರಿಯುವಂತೆ ಮಾಡಿತ್ತು. ನೀರಿಲ್ಲದ ಜನರಿಗೆ ಯಶ್ ಅಕ್ಷರಶಃ ಆಧುನಿಕ ಭಾಗೀರಥ ಆಗಿಬಿಟ್ಟಿದ್ದರು. ಸರಿ ಸುಮಾರು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಕಿಂಗ್ ಸ್ಟಾರ್ ಯಶ್ ಹಲವಾರು ಕಾರ್ಯದಲ್ಲಿ ಹೋಲಿಕೆಯ ಪ್ರಮಾಣ ವನ್ನು ಹೊಂದಿರುತ್ತಾರೆ.

ಒಟ್ಟಾರೆ ಯಶ್ ಕಮಲವನ್ನು ಅಪ್ಪುವುದೇ ಆದರೆ ಕರ್ಣಾಟಕದ ದಲ್ಲಿ ಭಾರತೀಯ ಜನತಾ ಪಕ್ಷ ಕ್ಕೆ ಭಾರೀ ಶಕ್ತಿ ಬರಲಿದೆ. ಅಪಾರ ಅಭಿಮಾನಿಗಳ ಫೇವರೆಟ್ ಆಗಿರುವ ಯಶ್ ಆಗಮದಿಂದ ಪಕ್ಷಕ್ಕೆ ಲಾಭವಾಗಬಹುದು ಎಂಬುದು ಕಮಲ ಕಲಿಗಳ ಲೆಕ್ಕಾಚಾರ. ಪಕ್ಷಕ್ಕೆ ಅಧಿಕೃತ ವಾಗಿ ಸೇರದಿದ್ದರೂ ಪ್ರಚಾರದ ಸಮಯದಲ್ಲಿ ಕೈಜೋಡಿಸಬಹುದು ಎಂದು ಹೇಳಲಾಗುತ್ತಿದೆ. ಈ ಬಾರಿ ಭಾರತೀಯ ಜನತಾ ಪಕ್ಷದ ಅಲೆ ರಾಜ್ಯದಲ್ಲಿ ಇರುವ ಕಾರಣ ಪಕ್ಷ ಅಧಿಕಾರಕ್ಕೆ ಬರಲಿದೆ ಎನ್ನಲಾಗುತ್ತಿದ್ದು ಯಶ್ ಎಂಟ್ರಿ ನೀಡಿದರೆ ಚುನಾವಣಾ ಕಣ ಮತ್ತಷ್ಟು ರಂಗೇರುವುದರಲ್ಲಿ ಅನುಮಾನವೇ ಇಲ್ಲ.

-ಸುನಿಲ್ ಪಣಪಿಲ

Tags

Related Articles

Close