ಪ್ರಚಲಿತ

ಫೇಸ್ ಬುಕ್ ನಲ್ಲೂ ದೇಶದ ಜನಪ್ರಿಯ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ನಂಬರ್. 1 ಸ್ಥಾನವನ್ನೇರಿದ ಯೋಗಿ ಆದಿತ್ಯನಾಥ್!!

ಉತ್ತರಪ್ರದೇಶದ ಚುಕ್ಕಾಣಿಯನ್ನು ಹಿಡಿದಿರುವ ಯೋಗಿ ಆದಿತ್ಯನಾಥರು ಜಿಹಾದಿಗಳಿಗೆ ಆಘಾತದ ಮೇಲೆ ಆಘಾತಗಳನ್ನು ನೀಡುತ್ತಾ, ರೌಡಿಗಳನ್ನು ಮಟ್ಟ ಹಾಕಿ ರಾಮರಾಜ್ಯ ವನ್ನಾಗಿ ಮಾಡುತ್ತಿರುವ ಜತೆಗೆ ತಾವು ತೆಗೆದುಕೊಳ್ಳುವ ಖಡಕ್ ನಿರ್ಧಾರಗಳಿಂದಲೇ ದೇಶದೆಲ್ಲೆಡೆ ಹೆಸರುವಾಸಿಯಾಗಿದ್ದಾರೆ!! ಆದರೆ ಸಾಮಾಜಿಕ ಜಾಲತಾಣಗಳಲ್ಲಿ ನರೇಂದ್ರ ಮೋದಿಯವರೇ ಪ್ರಭಾವಿ ವ್ಯಕ್ತಿಯಾಗಿ ಮಿಂಚುತ್ತಿದ್ದರೆ ಇತ್ತ ಯೋಗಿ ಆದಿತ್ಯನಾಥರು ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯ ವ್ಯಕ್ತಿಯಾಗಿ ಮಿಂಚುತ್ತಿದ್ದು, ಜನಮಾನಸದಲ್ಲಿ ಯೋಗಿ ಆದಿತ್ಯನಾಥರ ಪ್ರಭಾವ ಎಷ್ಟರ ಮಟ್ಟಿಗೆ ಇದೆ ಎಂಬುವುದು ಈ ಮೂಲಕ ಸಾಬೀತಾಗಿದೆ!!

ಯೋಗಿ ಆದಿತ್ಯನಾಥರು ಉತ್ತರ ಪ್ರದೇಶ ಗದ್ದುಗೆಯನ್ನು ಏರಿದ ದಿನದಿಂದಲೇ ಉತ್ತರ ಪ್ರದೇಶದ ನಕಾಶೆಯನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದು, ಅದಕ್ಕೆ ತಕ್ಕಂತೆ ಅನೇಕ ರೀತಿಯ ಐತಿಹಾಸಿಕ ಬದಲಾವಣೆಗಳನ್ನು ಉತ್ತರ ಪ್ರದೇಶದ ಜನ ಈಗಾಗಲೇ ಕಂಡುಕೊಂಡಿದ್ದಾರೆ. ಹಿಂದೂ ಹೃದಯಿ ಸಂತನಾಗಿರುವ ಯೋಗಿ ಆದಿತ್ಯನಾಥರು ತೆಗೆದುಕೊಂಡ ಕಠಿಣ ನಿರ್ಧಾರಗಳು ಈಡೀ ಉತ್ತರಪ್ರದೇಶದಲ್ಲಿ ಆ್ಯಂಟಿ ರೋಮಿಯೋ ಸ್ಕ್ವಾಡ್ ರಚಿಸಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಮುಂದಾಗಿದ್ದು, ರೈತರ ಸಾಲ ಮನ್ನಾ ಮಾಡಿ ರೈತರ ಏಳಿಗೆಗೆ ಶ್ರಮಿಸಿದ್ದು ಸೇರಿ ಅವರು ತೆಗೆದುಕೊಂಡ ಹಲವು ದಿಟ್ಟ ನಿರ್ಧಾರಗಳು ದೇಶದ ಗಮನ ಸೆಳೆದಿದ್ದವು.

ಈ ಹಿಂದೆ ರಾಜ್ಯದಲ್ಲಿ ಒಟ್ಟು 19,108 ಮದರಸಾಗಳಿಗೆ ರಾಜ್ಯ ಮದರಸಾ ಮಂಡಳಿ ಮಾನ್ಯತೆ ನೀಡಿದ್ದು, ಇವುಗಳಲ್ಲಿ 16,808 ಮದರಸಾಗಳನ್ನು ತಮ್ಮ ಮಾಹಿತಿ ವಿವರವನ್ನು ಮಂಡಳಿಯ ವೆಬ್‍ಸೈಟ್‍ಗೆ ನೀಡಿತ್ತು!! ಆದರೆ ಸುಮಾರು 2300 ಮದರಸಾಗಳು ಯಾವುದೇ ರೀತಿಯ ಮಾಹಿತಿಯನ್ನು ನೀಡದೆ ಇದ್ದುದರಿಂದ ಅವುಗಳನ್ನು ನಕಲಿ ಮಸೀದಿಗಳೆಂದು ಸರ್ಕಾರ ಘೋಷಿಸಿತ್ತು!! ಅಷ್ಟೇ ಅಲ್ಲದೇ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರು ಮುಖ್ಯಮಂತ್ರಿಯಾದ ಬಳಿಕ ತೆಗೆದುಕೊಂಡ ಪ್ರಮುಖ ಹಾಗೂ ದಿಟ್ಟ ನಿರ್ಧಾರದಿಂದಾಗಿ ನಕಲಿ ಮದರಸಾಗಳಿಗೆ ಬೀಗ ಹಾಕಿದ್ದರು!! ಆದರೆ ಇದೀಗ ಫೇಸ್ ಬುಕ್ ನಲ್ಲಿ ದೇಶದಲ್ಲೇ ಅತಿ ಹೆಚ್ಚು ಜನಪ್ರಿಯತೆ ಹೊಂದಿರುವ ಮುಖ್ಯಮಂತ್ರಿಯಾಗಿ ಹೊರಹೊಮ್ಮುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ!!

ಇದುವರೆಗೂ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಹಾಗೂ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಇದುವರೆಗೂ ಸಾಮಾಜಿಕ ಜಾಲತಾಣದಲ್ಲಿ ಅತೀ ಜನಪ್ರಿಯ ರಾಜಕಾರಣಿಗಳಾಗಿದ್ದರು. ಪ್ರಸಕ್ತ ವರ್ಷದ ಜನವರಿಯಲ್ಲಿ ಫೇಸ್ ಬುಕ್ ಮಾಹಿತಿ ನೀಡಿದ್ದು, 2017ರ ಜನವರಿ ಒಂದರಿಂದ ಡಿಸೆಂಬರ್ 31ರವರೆಗಿನ ವರದಿ ಪ್ರಕಾರ ಯೋಗಿ ಆದಿತ್ಯನಾಥರು ಫೇಸ್ ಬುಕ್ಕಿನಲ್ಲಿ ಜನಪ್ರಿಯ ವ್ಯಕ್ತಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಫೇಸ್ ಬುಕ್ ಎಲ್ಲಾ ರಾಜಕಾರಣಿಗಳ, ಉದ್ಯಮಿಗಳ, ಸರ್ಕಾರಿ ಇಲಾಖೆಗಳ ಫೇಸ್ ಬುಕ್ ಪೇಜ್‍ಗಳಿಗೆ ಅವುಗಳ ಜನಪ್ರಿಯತೆ ಆಧರಿಸಿ ರ್ಯಾಂಕಿಂಗ್ ನೀಡಿದ್ದು, ಭಾರತೀಯ ಸಿಎಂ ಕೆಟಗರಿಯಲ್ಲಿ ಯೋಗಿಯವರ ಫೇಸ್ ಬುಕ್ ಪೇಜ್ ಮೊದಲ ಸ್ಥಾನ ಪಡೆದುಕೊಂಡಿದೆ!! ಅಷ್ಟೇ ಅಲ್ಲದೇ ಫೇಸ್ ಬುಕ್ ಬಿಡುಗಡೆಗೊಳಿಸಿರುವ ರ್ಯಾಂಕಿಂಗ್ ಗಳ ಪಟ್ಟಿಯಲ್ಲಿ ಯೋಗಿ ಆದಿತ್ಯನಾಥರು ಎಲ್ಲಾ ಸಿಎಂಗಳನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ!! ಇನ್ನು, ರಾಜಸ್ಥಾನದ ಸಿಎಂ ವಸುಂಧರಾ ರಾಜೆ ಅವರು ಎರಡನೇ ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ಜನಪ್ರಿಯತೆಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ!!

ಉತ್ತರ ಪ್ರದೇಶದಲ್ಲಿ ಎಲ್ಲಾ ಧರ್ಮದ ಜನರನ್ನೂ ಒಂದೇ ರೀತಿಯಲ್ಲಿ ನೋಡಿಕೊಂಡು ನಿರ್ಧಾರ ಕೈಗೊಳ್ಳುತ್ತಿರುವ ಯೋಗಿ, ಯುಪಿ ಯ ಅಭಿವೃದ್ಧಿಯಲ್ಲಿ ಹೊಸ ಕ್ರಾಂತಿ ಸೃಷ್ಟಿಸಿದ್ದಲ್ಲದೇ ಟೀಕಾಕಾರರ ಟೀಕೆಗಳನ್ನು ಲೆಕ್ಕಿಸದೆ ಯೋಗಿ ಆದಿತ್ಯನಾಥರು ರಾಜ್ಯದಲ್ಲಿ ಉತ್ತಮವಾಗಿ ಆಡಳಿತ ನಡೆಸುತ್ತಿದ್ದು, ಹಲವು ಸುಧಾರಣೆ ಜಾರಿಗೆ ತಂದಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾನಗಳಲ್ಲಿ ಒಂದಾಗಿರುವ ಫೇಸ್ ಬುಕ್ ನಲ್ಲಿ ಜನಪ್ರಿಯ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ!!

ಈಗಾಗಲೇ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರು ಮುಖ್ಯಮಂತ್ರಿಯಾದ ಬಳಿಕ ಇದುವರೆಗೆ ಭಯಾನಕ 40ಕ್ಕೂ ಅಧಿಕ ರೌಡಿಗಳನ್ನು ಎನ್ ಕೌಂಟರ್ ಮಾಡಲಾಗಿದ್ದು, ಸುಮಾರು 1294 ಬಾರಿ ಮಾಡಿದ ಎನ್ ಕೌಂಟರ್ ನಲ್ಲಿ ನೂರಾರು ರೌಡಿಗಳು ಗಾಯಗೊಂಡಿದ್ದಾರೆ. 3065 ರೌಡಿಗಳನ್ನು ಬಂಧಿಸಲಾಗಿದೆ. ಕೆಲವು ರೌಡಿಗಳಂತೂ ಪೆÇಲೀಸರ ಕ್ರಮಕ್ಕೆ ಹೆದರಿ ನಮಗೆ ಬೇಲ್ ನೀಡುವುದೇ ಬೇಡ, ಜೈಲಿನಲ್ಲೇ ಇರುತ್ತೇವೆ ಎಂದು ಮನವಿ ಮಾಡುವಷ್ಟರ ಮಟ್ಟಿಗೆ ರಾಜ್ಯದಲ್ಲಿ ಅಪರಾಧ ತಡೆಯಲಾಗಿದೆ. ಇದಕ್ಕೆಲ್ಲ ಯೋಗಿ ಆದಿತ್ಯನಾಥರು, ಪೆÇಲೀಸ್ ಇಲಾಖೆಗೆ ನೀಡಿದ ಸ್ವಾತಂತ್ರ್ಯವೇ ಕಾರಣವಾಗಿದ್ದಂತೂ ಅಕ್ಷರಶಃ ನಿಜ!!

ಇಂಡಿಯನ್ ಎಕ್ಸ್ ಪ್ರೆಸ್’ ಇಂಗ್ಲೀಷ್ ಸಂಸ್ಥೆಯು ಭಾರತದ ಅತ್ಯಂತ ಪ್ರಭಾವಶಾಲಿ ನಾಯಕರ ಪಟ್ಟಿಯೊಂದನ್ನು ಈ ಹಿಂದೆ ಬಿಡುಗಡೆ ಮಾಡಿದ್ದು, ಈ ಸಮೀಕ್ಷೆಯಲ್ಲೂ ನರೇಂದ್ರ ಮೋದಿಯವರು ಮೊದಲ ಸ್ಥಾನ ಪಡೆದುಕೊಂಡಿದ್ದರು!! ಇನ್ನು ನರೇಂದ್ರ ಮೋದಿಯವರ ಬೆನ್ನಿಗೆ ನಿಂತು, ಭಾರತೀಯ ಜನತಾ ಪಕ್ಷವನ್ನು ರಾಷ್ಟ್ರದೆಲ್ಲೆಡೆ ಅದ್ಭುತವಾಗಿ ಸಂಘಟಿಸುತ್ತಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಯೋಗಿ ಆದಿತ್ಯನಾಥರು 9ನೇ ಪ್ರಭಾವಶಾಲಿ ನಾಯಕ ಎನ್ನುವ ಕೀರ್ತಿಗೆ ಪಾತ್ರರಾಗುವ ಮೂಲಕ ಈಡೀ ದೇಶದಲ್ಲಿಯೇ ಪ್ರಭಾವಶಾಲಿ ಮುಖ್ಯಮಂತ್ರಿ ಎನ್ನುವ ಕೀರ್ತಿಗೂ ಭಾಜನರಾಗಿದ್ದಾರೆ!!

ಹಿಂದುತ್ವದ ಫೈರ್ ಬ್ರಾಂಡ್ ಎಂದೇ ಪ್ರಖ್ಯಾತಿಯನ್ನು ಗಳಿಸಿರುವ ಇವರು ತನ್ನ ಉಗ್ರ ಭಾಷಣಗಳಿಂದಲೇ ಹೆಸರುವಾಸಿಯಾಗಿದ್ದು, ಅದೇ ಚಾರ್ಮ್‍ನಿಂದಲೇ 5 ಬಾರಿ ಸಂಸದರಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾರೆ. ದಿಟ್ಟ ನಿರ್ಧಾರಗಳ ಮೂಲಕ ದೇಶದ ಗಮನ ಸೆಳೆದಿರುವ ಯೋಗಿ ಆದಿತ್ಯನಾಥರು ದೇಶದಲ್ಲೇ ಫೇಸ್ ಬುಕ್ ನಲ್ಲಿ ಅತೀ ಹೆಚ್ಚು ಜನಪ್ರಿಯತೆ ಗಳಿಸಿರುವುದು ಅವರ ಪ್ರಖರ ನಾಯಕತ್ವಕ್ಕೆ ಹಿಡಿದ ಕನ್ನಡಿಯಾಗಿದ್ದಂತೂ ಅಕ್ಷರಶಃ ನಿಜ.

ಒಟ್ಟಿನಲ್ಲಿ ಸಮರ್ಥ ನಾಯಕತ್ವ, ದಿಟ್ಟ ನಿರ್ಧಾರಗಳು ಈಡೀ ಉತ್ತರಪ್ರದೇಶವನ್ನೇ ಬದಲಾಯಿಸಿದ್ದು, ಎಡಪಕ್ಷಗಳು ಸೃಷ್ಟಿಸಿದ್ದ ಕಂದಕಗಳನ್ನು ಒಂದೊಂದಾಗಿಯೇ ಕಳಚಿ ರಾಮರಾಜ್ಯವನ್ನಾಗಿ ನಿರ್ಮಿಸುತ್ತಿರುವ ಇವರ ಸಾಧನೆ ನಿಜಕ್ಕೂ ಕೂಡ ಹೆಮ್ಮೆ ತರುವಂತಹದ್ದೇ ಆಗಿದೆ!!

ಮೂಲ:http://news13.in/archives/100909

– ಅಲೋಖಾ

Tags

Related Articles

Close