ಪ್ರಚಲಿತ

ಯೋಗಿ ಗುಂಡಿನಿಂದ ಪಾರಾದ ಆ ಗೂಂಡಾಗಳು ಈಗ ಎಲ್ಲಿದ್ದಾರೆ ಗೊತ್ತಾ?! ಮಹಾಸಂತನ ಮಹಾ ಎನ್ ಕೌಂಟರ್ ಸ್ಟೋರಿ!!

ಫೈರ್ ಬ್ರಾಂಡ್ ಖ್ಯಾತಿಯ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ಸ್ಥಾನವನ್ನು ಏರಿದಂದಿನಿಂದಲೂ ಕೇವಲ ಉತ್ತರ ಪ್ರದೇಶದಲ್ಲಿ ಮಾತ್ರವಲ್ಲದೇ ಈಡೀ ದೇಶದಲ್ಲಿಯೇ ಪ್ರಖ್ಯಾತಿ ಹೊಂದಿರುವಂತಹ ಮುಖ್ಯಮಂತ್ರಿಯಾಗಿದ್ದಾರೆ ಎನ್ನುವ ವಿಚಾರ ತಿಳಿದೇ ಇದೆ!! ಈಗಾಗಲೇ ಉತ್ತರ ಪ್ರದೇಶದಲ್ಲಿ ನೆಮ್ಮದಿ ಕೆಡಿಸಿ, ತಮ್ಮ ಅಟ್ಟಹಾಸವನ್ನು ಮೆರೆದಿದ್ದ ರೌಡಿಗಳು ಯೋಗಿ ಆದಿತ್ಯನಾಥರ ಕಾನೂನು ಕ್ರಮಕ್ಕೆ ಹೆದರಿ ಪಜೀತಿಗೆ ಸಿಕ್ಕಿ ಹಾಕಿದವರೆಲ್ಲ ಇದೀಗ ಜೀವನ ಕಟ್ಟಿಕೊಳ್ಳಲು ಮುಂದಾಗಿದ್ದಾರೆ ಎಂದರೆ ನಂಬ್ತೀರಾ??

ಹೌದು… ಈಗಾಗಲೇ ಮುಸ್ಲಿಂ ಗುಂಡಾಗಳ ಕಿರುಕುಳಕ್ಕೆ ಬೇಸತ್ತು ವಲಸೆ ಹೋಗಿದ್ದ ಹಿಂದೂಗಳ ಎಲ್ಲ ಮನೆ ಎದುರು “ಮನೆ ಮಾರಾಟಕ್ಕಿವೆ” ಎಂಬ ಬೋರ್ಡ್ ಗಳೇ ಇಷ್ಟು ದಿನ ಕಾಣುತ್ತಿದ್ದವು. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಸಮಾಜದಲ್ಲಿ ಶಾಂತಿ ಕೆಡಿಸುವವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇದೀಗ ಖೈರಾನ ಪ್ರದೇಶದ ಜನರಿಗೆ ಹೊಸ ಭರವಸೆಯನ್ನು ಮೂಡಿಸಿದ್ದಂತೂ ಅಕ್ಷರಶಃ ನಿಜ. ಮುಸ್ಲಿಂ ಗುಂಡಾಗಳಿಂದ ಉಂಟಾಗಿದ್ದ ಗಲಭೆಗಳಿಗೆ ಚಿಂತಿತರಾಗಿದ್ದ ಹಿಂದೂಗಳಿಗೆ ಹಿಂದಿನ ಸರ್ಕಾರದಲ್ಲಿ ಸೂಕ್ತ ಭದ್ರತೆಯ ಕೊರತೆ ಕಾಣುತ್ತಿದ್ದಲ್ಲದೇ ಹಿಂದೂಗಳು ವಲಸೆ ಹೋಗಿದ್ದರು. ಆದರೆ ಯೋಗಿ ಆದಿತ್ಯನಾಥ್ ಆಡಳಿತದ 10 ತಿಂಗಳಲ್ಲಿಯೇ ಸುಮಾರು ಒಂದು ಡಜನ್ ಗಿಂತ ಹೆಚ್ಚು ಹಿಂದೂ ಕುಟುಂಬಗಳು ಇದೀಗ ಖೈರಾನ್ ಕ್ಕೆ ವಾಪಸ್ಸ್ ಆಗಿವೆ.

ಯಾವಾಗ ಯೋಗಿ ಅಧಿಕಾರ ವಹಿಸಿಕೊಂಡರೋ ಆಗ ಖೈರಾನ್ ದಲ್ಲಿನ ಚಿತ್ರಣ ಬದಲಾಗಿದ್ದಲ್ಲದೇ, ಹಿಂದೂಗಳು ತಮ್ಮ ತಮ್ಮ ವ್ಯಾಪಾರಗಳನ್ನು ಆರಂಭಿಸಿದ್ದು, ತಮ್ಮ ನಿತ್ಯದ ಕಾರ್ಯಕಲಾಪಗಳಲ್ಲಿ ತೊಡಗಿಕೊಂಡಿದ್ದಾರೆ. ಮುಸ್ಲಿಂ ಗುಂಡಾಗಳ ಕಿರುಕುಳಕ್ಕೆ ಬೇಸತ್ತು ವಲಸೆ ಹೋಗಿದ್ದ ಹಿಂದೂಗಳಿಗೆ ಭದ್ರತೆ ನೀಡುವ ನಿಟ್ಟಿನಲ್ಲಿ ಸಿಎಂ ಆದಿತ್ಯನಾಥ್ ಸರ್ಕಾರ, ಉತ್ತರಪ್ರದೇಶವನ್ನು ಗುಂಡಾಗಳಿಂದ ಮುಕ್ತಗೊಳಿಸುವ ಕಾರ್ಯಕ್ಕೂ ಇಳಿದಿರುವ ವಿಚಾರವೂ ತಿಳಿದೇ ಇದೆ. ಆದರೆ ಇದೀಗ ರೌಡಿ ಇತಿಹಾಸವುಳ್ಳವರೇ ತಮ್ಮ ಇತಿಹಾಸವನ್ನು ಬದಲಾಯಿಸಲು ಮುಂದಾಗಿದ್ದಾರೆ ಎಂದರೆ ಅದೂ ನಿಜಕ್ಕೂ ಕೂಡ ಹೆಮ್ಮೆಯ ವಿಚಾರವೇ ಆಗಿದೆ.

ಈಗಾಗಲೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಾನೂನು ಸುವ್ಯವಸ್ಥೆ ಕುರಿತು ಕೈಗೊಂಡ ಕಠಿಣ ಕ್ರಮಗಳು, ದಿಟ್ಟ ನಿಲುವುಗಳಿಂದ ಹಿಂದೂಗಳಿಗೆ ಸೂಕ್ತ ಭದ್ರತೆ ದೊರೆಯುತ್ತಿರುವ ಜತೆಗೆ ಯೋಗಿ ಸರ್ಕಾರ ರಕ್ಷಣೆ ನೀಡುತ್ತಿದೆ. ಆದರೆ ಕಳೆದ ವರ್ಷದ ಆರಂಭದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ, 1,240 ಎನ್ ಕೌಂಟರ್ ಗಳು ನಡೆದಿವೆ. ಅಷ್ಟೇ ಅಲ್ಲದೇ, ಯುಪಿ ಡಿಜಿಪಿ ಕಚೇರಿಯಿಂದ ನೀಡಲ್ಪಟ್ಟ ಮಾಹಿತಿಯ ಪ್ರಕಾರ, 142 ಮಂದಿ ಅಪರಾಧಿಗಳು ವಾಟೆಂಡ್ ಲಿಸ್ಟ್ ನಲ್ಲಿದ್ದು, ಅವರನ್ನು ಶರಣಾಗುವಂತೆ ಸರ್ಕಾರ ಹೇಳಿತ್ತು!!

ಹಾಗಾಗಿ, ಕಳೆದ ವರ್ಷ ಆರಂಭದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ 1,240 ಎನ್ ಕೌಂಟರ್ ಗಳು ನಡೆದಿದ್ದು, ಅದರಲ್ಲಿ 40 ಅಪರಾಧಿಗಳು ಎನ್ ಕೌಂಟರ್ ಗೆ ಬಲಿಯಾಗಿದ್ದರೆ 305 ಮಂದಿ ಗಾಯಗೊಂಡಿದ್ದಾರೆ. ತದನಂತರ ದಿಟ್ಟ ನಿರ್ಧಾರವನ್ನು ಕೈಗೊಂಡಿರುವ ಸಿಎಂ ಆದಿತ್ಯನಾಥ್ ಸರ್ಕಾರವು ರೌಡಿಗಳನ್ನು ಎನ್ ಕೌಂಟರ್ ಮಾಡಲು ಆದೇಶಿಸಿದ್ದು, ಶರಣಾಗಲು ಒಪ್ಪದವರನ್ನು ಸಹ ಎನ್ ಕೌಂಟರ್ ಮಾಡುವಂತೆ ದಿಟ್ಟ ಆದೇಶ ಹೊರಡಿಸಿದ್ದಾರೆ. ಇದರಿಂದ ಪತರಗುಟ್ಟಿರುವ ಉತ್ತರ ಪ್ರದೇಶದ ರೌಡಿಗಳು ಈಗ ಹಿಂಡು ಹಿಂಡಾಗಿ ಬಂದು ಶರಣಾಗುತ್ತಿದ್ದು, ಅವರನ್ನು ಇಡಲು ಜೈಲಿನಲ್ಲಿ ಸ್ಥಳವೇ ಸಾಕಾಗುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿತ್ತು!!

Image result for yogi adityanath

ಆದರೆ ಇದಕ್ಕಿಂತಲೂ ಮಿಗಿಲಾಗಿ ಉತ್ತರ ಪ್ರದೇಶದ ರೌಡಿಗಳೇ ತಮ್ಮ ಇತಿಹಾಸವನ್ನೇ ಬದಲಾಯಿಸಿಕೊಳ್ಳುತ್ತಿರುವ ಮೂಲಕ ಇದೀಗ ಸುದ್ದಿಯಾಗಿದ್ದಾರೆ. ಗೂಂಡಾಗಿರಿಯಿಂದಲೇ ತಮ್ಮ ಜೀವನವನ್ನು ಸಾಗಿಸುತ್ತಿದ್ದ ಅದೆಷ್ಟೋ ರೌಡಿಗಳು ಯೋಗಿ ಸರ್ಕಾರದ ದಿಟ್ಟ ನಿರ್ಧಾರದಿಂದಾಗಿ ತಮ್ಮ ಜೀವನ ಶೈಲಿಯನ್ನೇ ಬದಲಾಯಿಸಿ ಹೊಸ ಜೀವನವನ್ನು ಆರಂಭಿಸುತ್ತಿದ್ದಾರೆ.

ಇದಕ್ಕೆ ಸಾಕ್ಷಿ ಎನ್ನುವಂತೆ, ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವುದರ ಜೊತೆಗೆ ಲಿಸಾದಿ ಗೇಟ್ ಪೆÇಲೀಸ್ ಠಾಣೆಯಲ್ಲಿ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದ್ದ ಅಖೀಲ್(35) ರೌಡಿಶೀಟರ್ ಇದೀಗ ತಮ್ಮ ಗೂಂಡಾಗಿರಿಯನ್ನೇ ಬದಿಗೊತ್ತಿದ್ದಾನೆ!! ಹಾಗಾಗಿ, ಇತ್ತೀಚೆಗೆ ಕೆಲವು ತಿಂಗಳಿನಿಂದ ಈತ ತನ್ನ ಮನೆಯ ಬಳಿಯೇ ಪುಟ್ಟದೊಂದು ಸೈಕಲ್ ರಿಪೇರಿ ಅಂಗಡಿ ತೆರೆದಿದ್ದು, ಬೆಳಗ್ಗಿನಿಂದ ಸಂಜೆವರೆಗೆ ಅಂಗಡಿಯಲ್ಲಿ ದುಡಿಯುತ್ತಿದ್ದಾನೆ.

ಇನ್ನು, ತನ್ನ ಏರಿಯಾದಲ್ಲಿ ಕುಖ್ಯಾತ ರೌಡಿಯಾಗಿದ್ದ ಉಮರ್ ದರಜ್ ಎಂಬಾತ ಈಗ ಹಣ್ಣಿನ ವ್ಯಾಪಾರ ಮಾಡುತ್ತಿದ್ದಾನೆ. “ಕೆಲವು ತಿಂಗಳ ಹಿಂದೆ ಜೀವನ ತುಂಬಾ ಕಷ್ಟಕರವಾಗಿತ್ತು. ನನ್ನ ಜೀವ ಉಳಿಸಿಕೊಳ್ಳಲು ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡುತ್ತಿದ್ದೆ. ಆದರೆ ನನ್ನನ್ನು ಎನ್‍ಕೌಂಟರ್ ನಲ್ಲಿ ಸಾಯಿಸುವುದಿಲ್ಲ” ಎಂದು ಪೆÇಲೀಸರು ಭರವಸೆ ನೀಡಿದ ನಂತರ, ಹಣ್ಣಿನ ವ್ಯಾಪಾರ ಮಾಡಲು ನಿರ್ಧರಿಸಿದೆ” ಎಂದು ಉಮರ್ ಪತ್ರಿಕೆಯೊಂದಕ್ಕೆ ಹೇಳಿದ್ದಾನೆ.

ಇವರಷ್ಟೇ ಅಲ್ಲದೇ, ಇಮ್ರಾನ್ ಎನ್ನುವಾತ ಗುಜರಿ ವ್ಯಾಪಾರ ನಡೆಸುತ್ತಿದ್ದರೆ, ರವಿ ಮತ್ತು ಹೇಮಂತ್ ಎಂಬುವವರು ಆಟೋ ಓಡಿಸುವ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರಲ್ಲದೇ, ಅದೆಷ್ಟೋ ರೌಡಿಗಳು ತಮ್ಮ ಗೂಂಡಾಗಿರಿಯ ಇತಿಹಾಸಕ್ಕೆ ಗುಡ್ ಬೈ ಹೇಳಿದ್ದಾರೆ!! ಪೆÇಲೀಸರು ಹೇಳುವ ಪ್ರಕಾರ ರೌಡಿಶೀಟರ್ ಗಳ ಈ ಮನಃಪರಿವರ್ತನೆಗೆ ಕಾರಣವೆಂದರೆ ಯೋಗಿ ಸರ್ಕಾರ ರಚನೆಯಾದ ನಂತರ ಪೆÇಲೀಸರು ಅಳವಡಿಸಿಕೊಂಡಿರುವ ಎನ್ ಕೌಂಟರ್ ನಂತಹ ಕಠಿಣ ಕ್ರಮಗಳು ಎಂದು ಹೇಳಿದ್ದಾರೆ.

ಈ ಬಗ್ಗೆ ಮಾತಾನಾಡಿದ ಮೀರತ್‍ನ ಎಸ್‍ಪಿ ಮನ್ ಸಿಂಗ್ ಚೌಹಾನ್, “ಸುಧರ್ ಜಾವೋ ಯಾ ಊಪರ್ ಜಾವೊ (ಸರಿ ದಾರಿಗೆ ಬನ್ನಿ ಅಥವಾ ಸಾಯಲು ತಯಾರಾಗಿ)!! ನಾವು ತುಂಬಾ ಸರಳವಾದ ಆಫರ್ ನೀಡಿದೆವು. ಅಪರಾಧ ಚಟುವಟಿಕೆಗಳನ್ನು ಬಿಟ್ಟು ಜೀವನಾಧಾರಕ್ಕಾಗಿ ಹಣ ಸಂಪಾದಿಸಲು ಓಳ್ಳೆ ದಾರಿಯನ್ನು ಆರಿಸಿಕೊಳ್ಳಿ. ನಿಮಗೆ ನೆರವಾಗಲು ನಾವಿದ್ದೇವೆ ಹಾಗೂ ಅದಕ್ಕೆ ಪ್ರತಿಯಾಗಿ ನೀವು ಯಾವುದೇ ಭಯವಿಲ್ಲದೆ ಘನತೆಯಿಂದ ಜೀವನ ನಡೆಸಬಹುದು ಎಂದು ರೌಡಿಶೀಟರ್ ಗಳಿಗೆ ಹೇಳಿದ್ದೇವು” ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೇ “ಕೆಲವರ ವಿರುದ್ಧ ಸುಮಾರು 20 ವರ್ಷಗಳಿಂದ ಪ್ರಕರಣಗಳು ಬಾಕಿ ಇವೆ. ಕೆಲವು ಗಂಭೀರ ಪ್ರಕರಣಗಳಾಗಿದ್ದರೆ ಇನ್ನೂ ಕೆಲವು ಸಣ್ಣ ಪುಟ್ಟ ಪ್ರಕರಣಗಳು. ದೀರ್ಘ ಸಮಯದಿಂದ ಪ್ರಕರಣಗಳು ಬಾಕಿ ಇರುವ ಹಿನ್ನಲೆಯಲ್ಲಿ ಅವರು ಜೀವನದಲ್ಲಿ ನೆಲೆ ಕಂಡುಕೊಳ್ಳಲು ಸಾಧ್ಯವಾಗಿರಲಿಲ್ಲ. ಕಾನೂನಿನ ಭಯ ಹಾಗೂ ಜೀವನ ನಡೆಸಲು ಅಪರಾಧ ಚಟುವಟಿಕೆ ಮುಂದುವರಿಸದೇ ಬೇರೆ ದಾರಿ ಇಲ್ಲ ಎಂಬ ವಿಷಮ ಪರಿಸ್ಥಿತಿ ಇದಕ್ಕೆ ಕಾರಣವಾಗಿತ್ತು” ಎಂದು ಚೌಹಾನ್ ವಿವರಿಸಿದ್ದಾರೆ.

ಒಟ್ಟಾರೆಯಾಗಿ, ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರೌಡಿಶೀಟರ್ ಗಳು ಹಾಗೂ ಕ್ರಿಮಿನಲ್‍ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೆÇಲೀಸರಿಗೆ ಸೂಚಿಸಿದ ಪರಿಣಾಮ, ಎನ್ ಕೌಂಟರ್ ಗೆ ಹೆದರಿ ರೌಡಿಗಳು ಈಗ ತಮ್ಮ ಜೀವನವನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ ಎಂದರೆ ಅದಕ್ಕಿಂತಲೂ ದೊಡ್ಡ ಹೆಮ್ಮೆಯ ವಿಚಾರ ಮತ್ತೊಂದಿಲ್ಲ!!

source: http://news13.in/archives/98997

– ಅಲೋಖಾ

Tags

Related Articles

Close