ಪ್ರಚಲಿತ

ಅಂಬಿ ಅಂಕಲ್ ಅಂಬಿ ಅಂಕಲ್ ಎಂದು ಅಂಬರೀಷ್ ಹಿಂದೆನೇ ಸುತ್ತಾಡುತ್ತಿದ್ದ ರಮ್ಯಾ ಕೊನೆಗೂ ಬತ್ತಿ ಇಟ್ಟೇ ಬಿಟ್ಟಳು ನೋಡಿ…..

ಕಾಂಗ್ರೆಸ್‍ನ ಜಾಲತಾಣಗಳ ಮುಖ್ಯಸ್ಥೆ, ಮಂಡ್ಯದ ಜಂಬದ ಕೋಳಿ ಪದ್ಮಾವತಿ ರಮ್ಯಾ ಅಲಿಯಾಸ್ ದಿವ್ಯಸ್ಪಂದನಾಳ ಕಿರುಕುಳದಿಂದ ಬೇಸತ್ತ ಅಂಬರೀಶ್ ಹಾಗೂ ಇವರ ಬೆಂಬಲಿಗರು ಮಹತ್ವದ ನಿರ್ಧಾರವೊಂದಕ್ಕೆ ಬಂದಿದ್ದಾರೆ. ರಾಹುಲ್ ಗಾಂಧಿ ಈಕೆಯನ್ನು ಯಾವಾಗ ಜಾಲತಾಣಗಳ ಮುಖ್ಯಸ್ಥೆಯನ್ನಾಗಿ ಆಯ್ಕೆ ಮಾಡಿಕೊಂಡರೋ ಅಂದಿನಿಂದಲೇ ಅಹಂಕಾರದಿಂದ ಮೆರೆದಾಡಿದ ರಮ್ಯ ಅಲಿಯಾಸ್ ದಿವ್ಯ ಸ್ಪಂದನ, ಅಂಬಿಯ ವರ್ಚಸ್ಸು, ವಯಸ್ಸಿಗೂ ಗಮನಕೊಡದೆ ಸೈಡಿಗಟ್ಟಲು ಶುರುಮಾಡಿ ಬಿಟ್ಟಳು ಎನ್ನುವುದು ಅಂಬಿ ಬೆಂಬಲಿಗರ ಮನದ ನೋವು. ಇದೇ ನೋವು ಇಂದು ಮಂಡ್ಯದ ಕಾಂಗ್ರೆಸಿನ ಬುಡವನ್ನೇ ಗಡಗಡ ಅಲುಗಾಡಿಸುವತೆ ಮಾಡುವತ್ತ ಬಂದು ನಿಲ್ಲಿಸಿದೆ.

ಅಂಬಿ ಅಂಕಲ್ ಅಂಬಿ ಅಂಕಲ್ ಎಂದೆಲ್ಲಾ ವಯ್ಯಾರ ಮಾಡುತ್ತಾ ಅಂಬಿಯ ಹಿಂದೆಯೇ ಚಿಕ್ಕ ಮಗುವಿನಂತೆ ಸುತ್ತಾಡುತ್ತಿದ್ದ ದಿವ್ಯಸ್ಪಂದನ ಕೊನೆಗೆ ಅಂಕಲ್‍ನನ್ನೇ ಆಚೆ ತಳ್ಳಿಬಿಟ್ಟಲು. ಆರಂಭದಲ್ಲಿ ಎಸ್ ಎಂ ಕೃಷ್ಣರಂಥಹಾ ಲೀಡರ್‍ಗಳ ಮುಂದೆ ಮುದುಡಿ ಕುಳಿತುಕೊಳುತ್ತಿದ್ದ ರಮ್ಯಾ ಮುಂದೆ ಕಾಂಗ್ರೆಸ್‍ನ ಹಿರಿಮುಖಂಡರ ಕಿವಿಹಿಂಡುವಷ್ಟು ದೊಡ್ಡವಳಾಗಿಬಿಟ್ಟಳು. ಅದ್ಯಾವುದೋ ವಿಷಘಳಿಗೆಯಲ್ಲಿ ಮಂಡ್ಯದ ಟಿಕೆಟ್ ಪಡೆದು ಗೆದ್ದುಬಿಟ್ಟು ಬಳಿಕ ಮತ್ತೆ ಸ್ಪರ್ಧಿಸಿ ಸೋತು ಮನೆ ಸೇರಿಕೊಂಡಿದ್ದ ರಮ್ಯಾಳಿಗೆ ಸಾಕ್ಷಾತ್ ರಾಹುಲ್‍ನ ದಯೆ ಇಲ್ಲದೇ ಇರುತ್ತಿದ್ದರೆ ಇಂದಿಗೂ ಸಿನಿಮಾದಲ್ಲಿ ನಟಿಸುತ್ತಾ ಮರ ಮರ ಸುತ್ತಾಡುತ್ತಾ ಡೈರೆಕ್ಟರ್ ಕೊಟ್ಟ ಡೈಲಾಗನ್ನೇ ಉರುಹೊಡೆದು, ಕ್ಯಾಮರಾ ಮುಂದೆ ನಿಲ್ಲಬೇಕಿರುತ್ತಿತ್ತು..

ರಾಷ್ಟ್ರನಾಯಕಿಯಾಗಿ ಹೊರಹೊಮ್ಮಿದ ರಮ್ಯಾ ದೆಹಲಿಯಲ್ಲೇ ಬಿಡಾರ ಹೂಡಿದ್ದಳು. ಆ ಬಳಿಕ ಮಂಡ್ಯದತ್ತ ತಲೆಯನ್ನೇ ಹಾಕದಿದ್ದ ದಿವ್ಯಸ್ಪಂದನಾ ಚುನಾವಣೆ ಹತ್ರ ಬರುತ್ತಿದ್ದಂತೆ ಮತ್ತೆ ಕರ್ನಾಟಕದಲ್ಲಿ ಕಾಲಿಡುವ ಮಾತಷ್ಟೇ ಅಲ್ಲದೆ ಮಂಡ್ಯದಲ್ಲಿ ಅಂಬಿಯನ್ನು ಮೂಲೆಗಟ್ಟಿ ತಾನೇ ಸ್ಪರ್ಧಿಸಲಿದ್ದಾಳೆಂಬ ಗುಸುಗುಸು ಪಿಸುಪಿಸು ಮಾತು ಕೇಳಿಬರಲಾರಂಭಿಸಿದೆ. ಇದು ಅಂಬರೀಶ್‍ಗೆ ತಲೆತಿರುಗುವಂತೆ ಮಾಡಿದ್ದು, ತನಗೆ ಈ ಕಾಂಗ್ರೆಸ್‍ನ ಸಹವಾಸವೇ ಬೇಡವೆಂದು ತನ್ನೆಲ್ಲಾ ಬೆಂಬಲಿಗರ ಜೊತೆ ಸೇರಿ ಕಾಗ್ರೆಸ್ ತೊರೆದು ಜೆಡಿಎಸ್ ಸೇರಲಿದ್ದಾರಂತೆ.

ಅಂಬಿ ಅಂಕಲ್ ಅಂಬಿ ಅಂಕಲ್ ಎಂದು ಓಡಾಡುತ್ತಿದ್ದ ರಮ್ಯ ಇದೀಗ ಅಂಬರೀಶ್ ಬುಡಕ್ಕೆ ನೀರು ತಂದಿಟ್ಟಿದ್ದಾರೆ. ಕಾಂಗ್ರೆಸ್ ಸೇರಿ ರಾಷ್ಟ್ರೀಯ ನಾಯಕಿಯಾಗಿ, ರಾಹುಲ್ ಗಾಂಧಿ ನಂಬಿಕಸ್ತ ಲೀಡರ್ ಎಂದೆನಿಸಿಕೊಂಡ್ರು ನೋಡಿ ರಮ್ಯ ಖದರ್ ಬದಲಾಗಿ ಹೋಯ್ತು. ಮಂಡ್ಯದಲ್ಲಿ ಮನೆ ಮಾಡ್ತೀನಿ,ಜನರ ಸಮಸ್ಯೆ ಆಲಿಸ್ತಿನಿ ಅಂದವರು ಆ ಬಳಿಕ ದೆಹಲಿಯಲ್ಲಿ ಸೆಟ್ಲ್ ಆಗಿದ್ದರು. ಆದರೆ 2018ರ ಚುನಾವಣೆ ಹತ್ರ ಬಂತಲ್ಲಾ ಅದಕ್ಕಾಗಿಯೇ ಮತ್ತೆ ಮಂಡ್ಯಾಕ್ಕೆ ವಕ್ಕರಿಸಲಿದ್ದಾಳೆ ರಮ್ಯಾ..

ಈಗಾಗಲೇ ಡಿಕೆಶಿ ಬುಡಕ್ಕೆ ಹೈಕಮಾಂಡ್ ಮಟ್ಟದಲ್ಲಿ ಬೆಂಕಿ ಹಚ್ಚಿರುವ ರಮ್ಯ, ಅಂಬರೀಶ್ ಅವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಅಗತ್ಯವಿಲ್ಲ. ಮಂಡ್ಯ ಕಾಂಗ್ರೆಸ್ ಕಿತ್ತಾಟಕ್ಕೆ ಅಂಬರೀಶ್ ಅವರೇ ಕಾರಣ, ಮಂಡ್ಯದಲ್ಲಿ ಪಕ್ಷ ಸಂಘಟನೆಯನ್ನು ಮಾಡುತ್ತಿಲ್ಲ ಎಂದು ದೆಹಲಿ ನಾಯಕರಿಗೆ ಕಿವಿ ಚುಚ್ಚಿ ಇನ್ನಿಲ್ಲದ ಕಿರುಕುಳ ನೀಡಿದ್ದಾಳೆ. ಇದನ್ನೆಲ್ಲಾ ಸಾಕಷ್ಟು ಬಾರಿ ಸಹಿಸಿಕೊಂಡು ಬಂದಿದ್ದ ಅಂಬಿಯ ಸಹನೆಯ ಕಟ್ಟೆ ಒಡೆದು ಕಾಂಗ್ರೆಸ್‍ನಿಂದ ಸಿಡಿದು ಚೂರಾಗುವ ವಿಷ್ಯಕ್ಕೆ ಬಂದು ನಿಂತಿದ್ದಾರೆ.

ರಮ್ಯ ಮಾತಿಗೆ ರಾಹುಲ್ ಇಲ್ಲ ಅನ್ನಲು ಸಾಧ್ಯವೇ ಇಲ್ವಂತೆ, ಹೀಗಾಗಿ ಅಂಬರೀಶ್ ಅವರಿಗೆ ಮುಂದಿನ ಚುನಾವಣೆ ಟಿಕೆಟ್ ಸಿಗುವುದು ಅನುಮಾನ. ಬದಲಾಗಿ ರಮ್ಯ ಅವರೇ ಮಂಡ್ಯ ಕಾಂಗ್ರೆಸ್ ಅಭ್ಯರ್ಥಿಯಾಗುವುದು ಖಚಿತವಾಗಿದೆ. ಈ ಮೂಲಕ ಮೇಲ್ಮನೆ ಪ್ರವೇಶಿಸಿ ಸಚಿವೆಯಾಗುವ ಕನಸಿಗೆ ತಣ್ಣೀರು ಎರಚಿದ ನಾಯಕರಿಗೆ ಟಾಂಗ್ ಕೊಡಲು ರಮ್ಯ ಮುಂದಾಗಿದ್ದಾರೆ.

ರಮ್ಯ ಏನಿದ್ದರೂ ರಾಹುಲ್‍ನ ಬಲಗೈ ಬಂಟೆ! ಈಕೆ ಹೇಳಿದ್ರೆ ಮುಗಿಯಿತು ಎನ್ನುವ ಮಾತೊಂದಿದೆ. ಮಂಡ್ಯದಲ್ಲಿ ತಾನೇ ಸ್ಪರ್ಧಿಸಿ ಗೆಲ್ಲಬೇಕೆಂದು ಕನಸು ಕಾಣುತ್ತಿರುವ ರಮ್ಯಾ ಅದಕ್ಕಾಗಿ ಸಿದ್ದತೆ ಮಾಡಿಕೊಂಡಿದ್ದಾಳೆ. ಅದಕ್ಕಾಗಿ ಮನೆಯನ್ನೂ ಕೊಂಡಿದ್ದಾಳೆ. ಎಷ್ಟಾದರೂ ರಮ್ಯಾ ರಾಹುಲ್‍ನ ನಿಕಟವರ್ತಿಯಲ್ಲವೇ ?ಆದ್ದರಿಂದ ಈಕೆಯ ಮಾತಿಗೆ ಯಾರೂ ಎರಡು ಮಾತಾಡುವಂತಿಲ್ಲ. ಆದ್ದರಿಂದ ಅಂಬಿಗೆ ಬಕೆಟ್ ಕೊಟ್ಟು ರಮ್ಯಾ ಟಿಕೆಟ್ ಪಡೆಯುವುದು ಖಾತ್ರಿಯಾಗಿದೆ.

ಅಂಬಿ ಅವರು ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಮೂರು ಬಾರಿ ಗೆದ್ದಿದ್ದರು. ಮುಂಚಿನ ಬೈಎಲೆಕ್ಷನ್‍ನಲ್ಲಿ ರಮ್ಯಾ ಗೆಲ್ಲಲು ಅಂಬಿ ಸಹಾಯ ದೊಡ್ಡದಿದೆ. ಕೊನೆಗೆ ಅಂಬಿ ಶಾಸಕರೂ ಆದರು. ಆ ಬಳಿಕ ಎಸ್ ಕೃಷ್ಣನನ್ನು ಸೈಡಿಗಟ್ಟಿ ಅವರನ್ನೂ ಕಾಂಗ್ರೆಸ್‍ನಿಂದ ತೊರೆಯುವಂತೆ ಮಾಡುವಲ್ಲಿ ಸಫಲಳಾದಳು. ತಾನು ಗೆಲ್ಲಲು ಅಂಬಿ ಹಾಗೂ ಎಸ್ ಎಂ ಕೃಷ್ಣ ಎನ್ನುವುದನ್ನೂ ಮರೆತುಬಿಟ್ಟಳು. ಆದರೆ ಇತ್ತೀಚೆಗೆ ಅಂಬಿಗೆ ಟಿಕೆಟ್ ಕೊಡದೆ ತಾನೇ ಸ್ಪರ್ಧಿಸಲು ಮುಂದಾಗಿರುವುದು ಅಂಬಿ ಹಾಗೂ ಅವರ ಬೆಂಬಲಿಗರಿಗೆ ನೋವು ತಂದಿದೆ.

ಹಾಗೆ ನೋಡಿದರೆ ಅಂಬಿ ಎಂದೋ ಕಾಂಗ್ರೆಸ್ ಬಿಡಲು ತಯಾರಿದ್ದರು. ಮುಂಚೆ ಅವರಿಂದ ಸಚಿವಗಿರಿಯನ್ನು ಕಿತ್ತು ಹಾಕಲಾಗಿತ್ತು. ಇದು ಮಂಡ್ಯದವರಿಗೆ ಅಪಾರ ನೋವು ತಂದಿತ್ತು. ಅಂದೇ ಅವರು ಕಾಂಗ್ರೆಸ್‍ಗೆ ರಾಜೀನಾಮೆ ನೀಡುವುದಾಗಿ ರಾಜೀನಾಮೆ ಪತ್ರವನ್ನೂ ಕಳಿಸಿದ್ದರು. ಆದರೆ ಅವರನ್ನು ಸಮಧಾನಪಡಿಸಿ ಮತ್ತೆ ಕಾಂಗ್ರೆಸ್‍ನಲ್ಲೇ ಉಳಿಸುವಲ್ಲಿ ಸಫಲರಾಗಿದ್ದರು.

ಆ ಬಳಿಕ ಸಿಎಂ ಸಿದ್ದು ಜೊತೆ ಮುನಿಸಿಕೊಂಡಿದ್ದ ರೆಬೆಲ್ ಸ್ಟಾರ್ ಕಾಂಗ್ರೆಸ್‍ನಿಂದ ಬಹುದೂರ ಉಳಿದಿದ್ದರು. ಕೊನೆಗೆ ಹೇಗೋ ಅವರನ್ನು ಸಮಧಾನಪಡಿಸಿದ್ದರು. ಆದರೆ ಮೊನ್ನೆ ಮೊನ್ನೆವರೆಗೆ ಅಂಕಲ್ ಅಂಕಲ್ ಎಂದು ತಿರುಗಾಡಿಕೊಂಡಿದ್ದ ರಮ್ಯನೇ ತನ್ನ ರಾಜಕೀಯ ಜೀವನಕ್ಕೆ ಬೆಂಕಿ ಇಟ್ಟಿದ್ದಾಳೆ ಎಂದು ತಿಳಿದು ಮುನಿಸಿಕೊಂಡಿರುವ ಅಂಬಿ ಪಕ್ಷವನ್ನೇ ತೊರೆದು ಜೆಡಿಎಸ್‍ನಿಂದ ಸ್ಪರ್ಧಿಸಲಿದ್ದಾರಂತೆ.

ಈಗಾಗಾಲೇ ಜೆಡಿಎಸ್ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿರುವ ಅಂಬಿಗೆ ಜೆಡಿಎಸ್‍ನಿಂದ ಟಿಕೆಟ್ ಕನಫರ್ಮ್ ಆಗಿದೆ ಎಂದು ಬಲ್ಲಮೂಲಗಳಿಂದ ಮಾಹಿತಿ ಲಭಿಸಿದೆ. ಇನ್ನು ಕೆಲವೇ ದಿನಗಳಲ್ಲಿ ಅಂಬಿ ಜೆಡಿಎಸ್‍ಗೆ ಹಾರಲಿದ್ದು, ಇದು ಶಾಸಕಿಯಾಗುವ ರಮ್ಯಾ ಆಸೆಗೆ ತಣ್ಣೀರೆರಚಿದಂತಾಗಿದೆ. ರಮ್ಯಾಳಿಂದ ಸಿಟ್ಟುಗೊಂಡಿರುವ ಮಂಡ್ಯದ ಒಕ್ಕಲಿಗರು ಈಕೆಯನ್ನು ಸೋಲಿಸಲೇಬೇಕೆಂಬ ಹಠದಲ್ಲಿದ್ದಾರೆ. ಜೊತೆಗೆ ಅಂಬಿಗೆ ಅಭಿಮಾನಿಗಳ ದಂಡೇ ಇದ್ದು, ಅವರ ಮಾತಿಗೆ ಸಾಕಷ್ಟು ತೂಕವಿದೆ. ಇಂಥವರನ್ನೇ ಸೈಡಿಗಟ್ಟಿರುವ ದುರಹಂಕಾರಿ ರಮ್ಯಾಳಿಗೆ ಬುದ್ದಿಕಲಿಸದೇ ಬಿಡುವುದಿಲ್ಲ ಎಂದು ಅಂಬಿ ಅಭಿಮಾನಿಗಳು ಪಟ್ಟುಹಿಡಿದು ಕುಳಿತಿದ್ದಾರೆ.

source:http://kannada.asianetnews.com/video/ramya-entry-creates-ripple-in-mandya-politics

-ಚೇಕಿತಾನ

Tags

Related Articles

Close