ಅಂಕಣಪ್ರಚಲಿತ

ಕನ್ಹಯ್ಯಾ ಮತ್ತು ಖಾಲಿದ್‍ನ ತಾಯಿ, ನಕ್ಸಲೈಟ್ ಗಳ ಅಮ್ಮ, ಎಡಪಂಥೀಯರ ಅಕ್ಕ, ಹಿಂದೂಗಳ ವಿರೋಧಿ, ಗೌರೀ ಲಂಕೇಶರ ದುರಂತ ಜೀವನ ಕಥನ!!!

ಗೌರಿ ಲಂಕೇಶ್!!! ಎಡಪಂಥೀಯ ಸಾಹಿತಿಗಳಿಂದ ಪ್ರೀತಿಯಿಂದ “ಗೌರಕ್ಕ” ಎಂಬುದಾಗಿ ಕರೆಯಲ್ಪಡುತ್ತಿದ್ದ ಸಾಹಿತಿ. ತನ್ನ ವಿಶಿಷ್ಠ ಚಿಂತನೆಗಳಿಂದ, ಎಡಪಂಥೀಯ ವಿಚಾರಧಾರೆಗಳಿಂದ ಕರುನಾಡಿನಲ್ಲಷ್ಟೇ ಅಲ್ಲದೇ ದೇಶದಲ್ಲಿಯೇ ಹೆಸರುವಾಸಿಯಾದವರು. ತನ್ನ ಪತ್ರಿಕೆಯಾದ ಗೌರೀ ಲಂಕೇಶ್‍ನಲ್ಲಿ ಕಠೋರ ಹಿಂದುತ್ವ ವಿರೋಧ ವಿಚಾರಗಳನ್ನು ಪ್ರತಿಪಾದಿಸಿತ್ತಿದ್ದವರು. ಆಘಾತಕಾರಿ ವಿಚಾರವೆಂದರೆ ಕಳೆದ ರಾತ್ರಿ ತಮ್ಮ ಮನೆಯ ಮುಂಭಾಗದಲ್ಲಿಯೇ ಹಂತಕರ ದಾಳಿಗೆ ಬಲಿಯಾಗಿ ಹೋದರು.!!

ಅವರ ವಿಚಾರಧಾರೆಗಳೇ ಅವರ ಮೃತ್ಯುವಿಗೆ ಕಾರಣಗಳು ಎಂಬುದಾಗಿ ಹೇಳಲಾಗುವುದಿಲ್ಲ. ಯಾಕೆಂದರೆ ಅದರಲ್ಲಿಯೂ ಅನೇಕ ಆಯಾಮಗಳಿದ್ದವು. ಯಾವುದೇ ತನಿಖೆಗಳು ಪ್ರಾರಂಭವಾಗದೇ, ಯಾವುದೇ ಆಧಾರಗಳಿಲ್ಲದೇ ಸಾಮಾಜಿಕ ಮಾಧ್ಯಮದಲ್ಲಿ ಕಮ್ಮಿನಿಷ್ಠರು ಅವರ ಹತ್ಯೆಗೆ ಬಲಪಂಥೀಯರೇ ಕಾರಣವೆಂದು ಬೊಬ್ಬಿಟ್ಟರು. ನೆನಪಿರಲಿ ಕೇವಲ ಒಂದು ವಿಚಾರಧಾರೆಗಳಿಂದಲೇ ಒಂದು ಹತ್ಯೆಯಾಗುವಂತಿದ್ದರೆ ಈ ರಾಷ್ಟ್ರದಲ್ಲಿ ವಿವಿಧತೆಯೇ ಇರುತ್ತಿರಲಿಲ್ಲವೇನೋ!!!

ತಮ್ಮ ತಂದೆಯಾದ ಪಿ.ಲಂಕೇಶ್ ಹಾದಿಯನ್ನು ಹಿಂಬಾಲಿಸಿಯೇ ಜೀವನ ಮಾಡುತ್ತಿದ್ದವರು ಗೌರಿ ಲಂಕೇಶ್.. ತಮ್ಮದೇ ಸ್ವಂತ ಪತ್ರಿಕೆ!! ಆದರೆ ಅದರಲ್ಲಿ
ಪ್ರಸಾರವಾಗುತ್ತಿದ್ದುದು ಮಾತ್ರ ನಕ್ಸಲ್ ಪರವಾದ ಚಿಂತನೆ. ರೋಹಿತ್ ವೆಮುಲಾ ದಲಿತನೆಂದು ತಿಳಿದ ಗೌರಿ ಲಂಕೇಶ್ ಮುಖಪುಸ್ತಕವೆಂಬ ಸಾಮಾಜಿಕ
ಜಾಲತಾಣದಲ್ಲಿ ರೋಹಿತ್ ವೆಮುಲಾನ ಚಿತ್ರವನ್ನು ಲಗತ್ತಿಸಿದ್ದರು. ಅದರಿಂದ ತಮ್ಮ ಪ್ರಚಾರ ಅಧಿಕವಾಗಬಹುದೆಂದು ತಿಳಿದರೋ ಅರಿಯದು. ಆದರೆ ರೋಹಿತ್
ವೆಮುಲಾ ದಲಿತನಲ್ಲ, ಹಾಗೂ ಆತ ಆತ್ಮಹತ್ಯೆ ಮಾಡಿದ್ದು ವೈಯುಕ್ತಿಕ ಕಾರಣಕ್ಕೆ ಎಂಬುದಂತೂ ಸಾಬೀತಾಗಿತ್ತು. ಅದಕ್ಕೆ ಇವರದ್ದು ನಂತರ ಮೌನವೇ
ಉತ್ತರವಾಗಿತ್ತು.

ಇಂದ್ರಜಿತ್ ಲಂಕೇಶ್ ಕುರಿತಾಗಿ ನಿಮಗೆ ಗೊತ್ತಿರಬಹುದು. ಖಾಸಗಿ ವಾಹಿನಿಯೊಂದರ ರಿಯಾಲಿಟೀ ಶೋ ನಲ್ಲಿ ಭಾಗವಹಿಸುತ್ತಿದ್ದಾರೆ. ಗೌರಿ ಲಂಕೇಶ್‍ರ ತಮ್ಮ ಈತ ಎಂಬುದೇ ಸೋಜಿಗದ ಸಂಗತಿ. ಯಾಕೆ ಆಶ್ಚರ್ಯವಾಗುತ್ತಿದೆಯೆಂದರೆ ಸಹೋದರ-ಸಹೋದರಿಯರ ನಡುವಿನ ಬಾಂಧವ್ಯದಂತೆ ಅವರ ಬಂಧನ ಇರಲೇ ಇಲ್ಲ. ಅದಕ್ಕೆ ಒಂದು ಪ್ರಬಲ ಕಾರಣ ವಿಚಾರಧಾರೆಗಳೇ ಎಂದರೆ ತಪ್ಪಲ್ಲ. ಗೌರಿಯವರು ನಕ್ಸಲ್ ಚಿಂತನೆಯನ್ನೇ ಪ್ರತಿಪಾದಿಸುತ್ತಾರೆಂಬುದಾಗಿ ಇಂದ್ರಜಿತ್
ಬಹಿರಂಗವಾಗಿಯೇ ಹೇಳಿಕೆಯನ್ನು ಕೊಟ್ಟಿದ್ದರು. ಆದರೆ ಪಿಸ್ತೂಲ್ ಹಿಡಿದುಕೊಂಡು ತನ್ನನ್ನು ಇಂದ್ರಜಿತ್ ಬೆದರಿಸಿದ್ದ ಎಂಬುದಾಗಿ ಪೋಲಿಸರಿಗೆ ದೂರು ಕೊಟ್ಟಿದ್ದರು ಗೌರಿ ಲಂಕೇಶ್!! ಈ ಘಟನೆ ತಮ್ಮ ಕುಟುಂಬದಲ್ಲಿ ದೊಡ್ಡ ಬಿರುಕನ್ನೇ ಮೂಡಿಸಿತ್ತು. ಇದೇ ವೈಚಾರಿಕ ಭಿನ್ನತೆಗಳು ತಮ್ಮ ದಾಂಪತ್ಯ ಜೀವನವನ್ನೂ ಮುರಿದಿತ್ತು.

ನಕ್ಸಲ್ ಚಿಂತನೆಯ ಪ್ರೋತ್ಹಾಹಿಸುವಲ್ಲಿ ಅವರು ಸದಾ ನಿರತರಾಗಿದ್ದರು. ಕರ್ನಾಟಕದಲ್ಲಿ ಅನೇಕ ದಾಳಿಯ ರುವಾರಿಯಾಗಿದ್ದ ಸಕೇತ್ ರಾಜನ್ 2005 ರಲ್ಲಿ
ಹತ್ಯೆಯಾದ. ಈ ಹತ್ಯೆಯನ್ನೂ ಕಟುವಾಗಿಯೇ ವಿರೋಧಿಸಿದ್ದರು ಈ ಪರ್ತಕರ್ತರು. ಅನೇಕ ನಕ್ಸಲ್ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ವ್ಯಕ್ತಿಗಳೊಡನೆ ಸತತವಾಗಿ ಸಂಪರ್ಕವನ್ನು ಇಟ್ಟುಕೊಂಡಿದ್ದರು. ನಕ್ಸಲರು ಜನರ ಜೀವನವನ್ನು ಬೆಳಗುತ್ತಾರೆಂಬ ಕಲ್ಪನೆಯಲ್ಲಿದ್ದರೇ ಗೌರಿ ಲಂಕೇಶ್?? ಅರಿಯದು. ಅವರ ಅಮ್ಮನಾಗಿ ಲಂಕೇಶ್ ಅವರು ಆಗಿರುವುದು ಮಾತ್ರ ಸತ್ಯ. ಆದರೆ ಇದೇ ನಕ್ಸಲರು ಜನರ ಜೀವನವನ್ನು ಕತ್ತಲೆಯಾಗಿಸುತ್ತಿದ್ದಾರೆ ಅನ್ನುವ ವಿಚಾರ ಬುದ್ಧಿಜೀವಿಯಾದ ಅವರಿಗೆ
ಮರೆತುಹೋಯಿತೇ??

ಜೆಎನ್‍ಯು ವಿಶ್ವವಿದ್ಯಾನಿಲಯದಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ನಡೆದ ದೇಶದ್ರೋಹಿ ಚಟುವಟಿಕೆಗಳು, ಘೋಷಣೆಗಳನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಈ ದೇಶವನ್ನು ತುಂಡು ತುಂಡಾಗಿ ಕತ್ತರಿಸುತ್ತೇವೆ ಎಂಬುದಾಗಿ ಬೊಬ್ಬಿಟ್ಟವರು ಈ ದೇಶದ ಯುವ ನಾಯಕರಾಗಿ ಬಿಂಬಿಸಲ್ಪಟ್ಟರು. ಆ ವ್ಯಕ್ತಿಗಳು ಗೌರಿ ಲಂಕೇಶರ ಪುತ್ರರಾದರು. ಇದು ಅವರೇ ಹೇಳಿದ ವಿಚಾರ. ಉಮರ ಖಾಲಿದ್ ಹಾಗೂ ಕನ್ಹೈಯಾ ನನ್ನ ಮಕ್ಕಳಿದ್ದ ಹಾಗೆ ಎಂದಿದ್ದರು ಅವರು. ದೇಶಭಕ್ತರು ಹಾಗೂ ದೇಶದ್ರೋಹಿಗಳ ನಡುವಿನ ವ್ಯತ್ಯಾಸವನ್ನು ಮರೆತೇ ಬಿಟ್ಟಿದ್ದರಾ ಈ ನಾಡಿನ ಶ್ರೇಷ್ಠ ಪತ್ರಕರ್ತರೆಸಿಕೊಂಡವರು??

ಇನ್ನೊಂದು ಪ್ರಮುಖ ವಿಚಾರವನ್ನು ನಿಮ್ಮ ಮುಂದೆ ಹಂಚಬೇಕು. ಲಂಕೇಶ್ ಪತ್ರಿಕೆ ಯಾವುದೇ ಜಾಹಿರಾತುಗಳಿಲ್ಲದೇ ಪ್ರಕಟವಾಗುತ್ತಿದೆ. ನಿಮಗೆ ಗೊತ್ತಿರಬಹುದು. ಯಾವುದೇ ಪತ್ರಿಕೆಗೆಗಳ ಪ್ರಮುಖ ಆದಾಯದ ಮೂಲವೇ ಜಾಹಿರಾತುಗಳಿಂದ ಬರುವ ಆದಾಯ. ಹಾಗಾದರೆ ಯಾವುದೇ ಜಾಹಿರಾತುಗಳಿಲ್ಲದೇ ಈ ಪತ್ರಿಕೆ ಪ್ರಕಟವಾಗುತ್ತಿದೆಯೆಂದರೆ ಅದರ ಹಿಂದಿನ ಮರ್ಮವೇನು? ಎಡಪಂಥೀಯ ಚಿಂತನೆಗಳನ್ನು ಪ್ರಸಾರ ಮಾಡುವ ಸಲುವಾಗಿಯೇ ಕೆಲವು ಸರ್ಕಾರೇತರ ಸಂಸ್ಥೆಗಳು ಪ್ರಾಯೋಜನ ಮಾಡುತ್ತಿವೆಯಾ ಅನ್ನುವ ಸಂಶಯವೂ ಮೂಡುತ್ತಿರುವುದಂತೂ ಸತ್ಯ.

ಮಂಗಳೂರಿನಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಹಿಂದೂಗಳಿಗೆ ಅಪ್ಪ- ಅಮ್ಮವೇ ಇಲ್ಲ ಎಂದರು. ಆದರೂ ಅವರು ಇದ್ದುದು ಅದೇ ಧರ್ಮದಲ್ಲಿ ಎಂಬುದನ್ನು
ಮರೆತರು. ಅವರು ಉದಾಹರಿಸಿದ ಎಲ್ಲಾ ಧರ್ಮಗುರುಗಳ ಮೂಲ ಧರ್ಮಯಾವುದೆಂಬ ಪ್ರಶ್ನೆಗೆ ಅವರಲ್ಲಿ ಉತ್ತರವಿರಲಿಲ್ಲ. ಅಂತಿಮ ಕ್ಷಣದವರೆಗೂ!!

ಭಗವಂತನ ಸ್ವಂತ ನಾಡು ಕೇರಳ ಭಾರತಕ್ಕೆ ಸಂಬಂಧಪಟ್ಟಿಲ್ಲವೆಂದು ಹೇಳಿದ ಪತ್ರಿಕೋದ್ಯಮದ ಆಶಾಕಿರಣವೆಂದು ಬಿಂಬಿಸಲಾಗುತ್ತಿದ್ದ ಲಂಕೇಶರಿಗೆ ಅಲ್ಲಿ ಸಾಲು ಸಾಲಾಗಿ ದೇಶಭಕ್ತರ ನರಹತ್ಯೆಯಾಗುತ್ತಿರುವುದು ಮಾತ್ರ ಕೊನೆಗೂ ಅರಿವಾಗದೇ ಹೋಯಿತು.!!!

ಎಡಪಂಥೀಯ ವಿಚಾರಧಾರೆಗಳನ್ನೇ ಪ್ರಚಾರ ಮಾಡುತ್ತಿದ್ದ ಗೌರಿ ಲಂಕೇಶ್ ಈ ದೇಶದಲ್ಲಿ ಅಭಿಪ್ರಾಯ ಸ್ವಾತಂತ್ರಕ್ಕೂ ದಾರಿಯಿಲ್ಲ ಎಂದಿದ್ದರು. ಅದೂ ಕೆಲವು
ಹತ್ಯೆಗಳನ್ನು ಗಮನಿಸಿದ ನಂತರ. ಆದರೆ ಕೇರಳದಲ್ಲಿ ಹಾಗೂ ಬಂಗಾಳ ರಾಜ್ಯದಲ್ಲಿ ತಿಂಗಳಿಗೊಂದು ನರಹತ್ಯೆಯೇ ನಡೆಯುತ್ತಿತ್ತು, ನಡೆಯುತ್ತಿದೆ. ಅದರ
ಕುರಿತಾಗಿಯೂ ಅವರ ಉತ್ತರ ಮೌನವೇ ಆಗಿತ್ತು!!! ಒಟ್ಟಾರೆಯಾಗಿ ತಮ್ಮ ವಿಚಾರಧಾರೆಗಳನ್ನು ಸಮರ್ಥಿಸುವ ಸಲುವಾಗಿ ಎಲ್ಲವನ್ನೂ ಹೀಗಳೆಯುತ್ತಿದ್ದ ದಿಟ್ಟ
ಪತ್ರಕರ್ತೆ ಗೌರಿ ಲಂಕೇಶ್ ನಿನ್ನೆಯ ದಿವಸ ಅಮಾನುಷವಾಗಿ ಹತ್ಯೆಯಾಗಿ ಹೋದರು.

ಒಂದು ಮಾತನ್ನು ನಾವೆಲ್ಲಾ ಗಮನಸಿರಬಹುದು. ಮಾನವರು 3 ರೀತಿಯಾಗಿರುತ್ತಾರಂತೆ. ಬದುಕಿಯೂ ಬದುಕುವವರು, ಬದುಕಿಯೂ ಸತ್ತವರು, ಸತ್ತೂ
ಬದುಕುವವರು. ಅಂದರೆ ಸತ್ತ ನಂತರವೂ ಜನರ ಮನಸ್ಸಿನಲ್ಲಿ ಉತ್ತಮ ವ್ಯಕ್ತಿಯಾಗಿ ಜನರ ಮನದಲ್ಲಿ ಸ್ಥಾಯಿಯಾಗಿರುವುದು. ಅಂತಹ ಸಾವುಗಳು ಮಾತ್ರ ಜನರ ಮನಸ್ಸನ್ನು ದುಃಖದ ಕಡಲಲ್ಲಿ ತೇಲುವಂತೆ ಮಾಡುತ್ತವೆಯೇ ಹೊರತು ಹತ್ಯೆಗಳಾಗಲೀ, ಆತ್ಮಹತ್ಯೆಗಳಾಗಲೀ ಅಲ್ಲ ಎಂಬುದು ಮಾತ್ರ ಸ್ಪಷ್ಟ ಹಾಗೂ ಸತ್ಯ.
– ವಸಿಷ್ಠ

Tags

Related Articles

Close