ಅಂಕಣ

ದೇಶವನ್ನು ಮಾರಲು ಹೊರಟ, ಶತ್ರುಗಳ ಮುಂದೆ ಮಂಡಿಯೂರಿದ ಕಮಂಗಿಗಳಿಗೆ ಬರಿಗೈ ಫಕೀರ ಮೋದಿ ಮಾಡಿದ್ದೆಲ್ಲ ಅಪರಾಧವಾಗಿ ಕಾಣಲು ಕಾರಣವೇನು??

ಪ್ರಧಾನಿ ಮೋದಿಯವರನ್ನು ವಿರೋಧಿಸುತ್ತಿರುವ ಭಾರತದ ಸತ್ಪ್ರಜೆಗಳೇ......!

ಪ್ರಧಾನಿ ನರೇಂದ್ರ ಮೋದಿಯವರ ಅಧಿಕಾರಾವಧಿಯಲ್ಲಿ ದೇಶ ಅದೆಷ್ಟು ಬದಲಾವಣೆಯನ್ನು ಕಾಣುತ್ತಾ ಹೋಗಿದೆ ಎಂದರೆ ಹಾವಾಡಿಗರ ದೇಶ ಎಂದು ಕರೆಯುತ್ತಿದ್ದ ದೇಶ ಇದೀಗ ಅಭಿವೃದ್ಧಿಶೀಲ ರಾಷ್ಟ್ರ ಎನ್ನುವ ಹೆಗ್ಗಳಿಕೆ ಪಾತ್ರವಾಗಿದೆ!! ಹೀಗಿರಬೇಕಾದರೆ ಪ್ರಧಾನಿ ಮೋದಿಯ ಆಳ್ವಿಕೆಯನ್ನೇ ತುಚ್ಛವಾಗಿ ಕಾಣುತ್ತಾ, ಚಾಯ್ ವಾಲ್ ಎಂದೆಲ್ಲಾ ನಿಂದಿಸುತ್ತಿರುವ ಬುದ್ದಿಜೀವಿಗಳು ಮೋದಿಯವರ ಅಭಿವೃದ್ಧಿ ಕೆಲಸಗಳನ್ನೇ ನಿಂದಿಸುತ್ತಿದ್ದಾರೆ ಎಂದರೆ ವಂಶಾಡಳಿತ ರಾಜಕೀಯದ ಮುಂದೆ ಕೈಕಟ್ಟಿ ನಿಲ್ಲುವುದೇ ಇವರಿಗೆ ಶ್ರೇಯಸ್ಸು ಎಂದೆನಿಸುತ್ತೆ!!

ಹೌದು…. ಪ್ರಧಾನಿ ಮೋದಿಯವರನ್ನು ವಿರೋಧಿಸುತ್ತಿರುವ ಭಾರತದ ಸತ್ಪ್ರಜೆಗಳೇ ದೇಶ ಅಭಿವೃದ್ಧಿ ಪಥದತ್ತ ಸಾಗುವುದೇ ನಿಮಗೆ ಕಷ್ಟಕರ ಎಂದೆನಿಸುತ್ತದೆಯೇ?? ಯಾಕೆಂದರೆ ಮೋದಿ ಈಗಾಗಲೇ ದೇಶ ಅಭಿವೃದ್ಧಿ ಕಾಣಲು ನಾನಾ ರೀತಿಯ ಯೋಜನೆಗಳನ್ನು ತಂದಿದ್ದು, ಬ್ಲಾಕ್ ಮನಿದಂಧೆಯಲ್ಲಿ ತೊಡಗಿದ್ದವರಿಗೆ ರಾತ್ರೋರಾತ್ರೇ ಶಾಕ್ ನೀಡಿ ಕಾಳಧನಿಕರ ಸೊಕ್ಕನ್ನು ಮುರಿದಿದ್ದೇ ತಪ್ಪಾಯಿತೇ?? ನಮಗೂ ದೇಶಭಕ್ತಿ ಇದೆ ಎಂದೆ ಬೊಬ್ಬಿರುವ ಬುದ್ದಿಜೀವಿಗಳೇ……!! ನಿಮಗೆ ತಾಕತ್ತಿದ್ದರೆ ಪಾಕಿಸ್ತಾನವನ್ನು ಪ್ರೀತಿಸುವ ನಿಮ್ಮ ನಾಯಕರಲ್ಲಿರುವ ನೀತಿಗಳನ್ನು ನೀವು ವಿರೋಧಿಸುತ್ತಿರಾ??

ಸಾವಿರ ವರ್ಷ ಕುಳಿತು ತಿಂದ್ರೂ ಕರಗದಷ್ಟು ಆಸ್ತಿಪಾಸ್ತಿಗಳನ್ನು ಮಾಡಿರುವ ನಿಮ್ಮ ನಾಯಕರ ಮೇಲೆ ನಿಮಗೆಷ್ಟು ಗೌರವ ಅಲ್ವೇ?? ಹಗರಣಗಳ ಮೇಲೆ
ಹಗರಣಗಳನ್ನು ಮಾಡುತ್ತಾ ಬೊಫೋರ್ಸ್ ಹಗರಣದಲ್ಲಿ ಸಾಕಷ್ಟು ಹಣವನ್ನು ಮಾಡಿಕೊಂಡಿರುವವರನ್ನು ವಿರೋಧಿಸಿ. ಅದನ್ನು ಬಿಟ್ಟು ಭ್ರಷ್ಟಚಾರ ಮುಕ್ತ ಸರ್ಕಾರ ನಡೆಸುತ್ತಿರುವರನ್ನು, ಅದರ ಜೊತೆಗೆ ಬರಿಗೈನಲ್ಲಿ ಬಾಳುತ್ತಿರುವ ಪ್ರಧಾನಿ ನರೇಂದ್ರ ಮೋದಿಯನ್ನು ವಿರೋಧಿಸಿವುದು ಸರಿ ಎಂದೆನಿಸುತ್ತಿದೆಯೇ!!

ಕಾಶ್ಮೀರ ಹೊತ್ತಿ ಹುರಿಯುತ್ತಿದ್ದರು ಕೂಡ ಕೈಕಟ್ಟಿ ಕುಳಿತಿದ್ದಲ್ಲದೇ ಶಾಂತಿ ನೆಲೆಸುವುದು ಪಾಕಿಸ್ತಾನಿ ಪ್ರೇರಿತ ಭಯೋತ್ಪಾದಕರಿಗೆ ಬೇಕಿರಲಿಲ್ಲ. ಅಷ್ಟೇ ಅಲ್ಲದೇ, ಕೆಲವು ರಾಜಕೀಯ ಪಕ್ಷಗಳಿಗೂ ಶಾಂತಿ ಬೇಕಿಲ್ಲ. ಆ ಸಂದರ್ಭದಲ್ಲಿ ಕಾಶ್ಮೀರದ ಮೂಲ ನಿವಾಸಿಗಳಾದ ಕಾಶ್ಮೀರಿಪಂಡಿತರು ದೆಹಲಿಯ ಬೀದಿಯಲ್ಲಿ ಟೆಂಟ್‍ನಲ್ಲಿದ್ದರು, ಲಕ್ಷಾಂತರ ಎಕರೆ ಸೇಬು ತೋಟ, ವ್ಯಾಪಾರ, ವ್ಯವಹಾರ ಎಲ್ಲಾ ಬಿಟ್ಟು ಪ್ರಾಣ ಉಳಿಸಿಕೊಳ್ಳಲು ಓಡಿ ಬಂದರು. ವಿರೋಧಿಗಳನ್ನು ಎದುರಿಸಿದವರು ಹೆಣವಾದರು. ಇಂದು ಕಾಶ್ಮೀರದಲ್ಲಿ ಟಾರ್ಚ್ ಹಾಕಿ ಹುಡುಕಿದರೂ ಒಬ್ಬನೇ ಒಬ್ಬ ಹಿಂದೂ ಸಿಗುವುದಿಲ್ಲ. ಆದರೆ ನಿಮ್ಮದೇ ನಾಯಕರು ಅಂದು ಪಾಕಿಸ್ತಾನ, ಚೀನಾವನ್ನು ಎದುರಿಸಲಾಗದೆ ಕೈಕಟ್ಟಿಕುಳಿತಿದ್ದ ಹೇಡಿಗಳಾಗಿದ್ದರು. ಈ ಬಗ್ಗೆ ತುಟಿಕ್ ಪಿಕ್ ಎನ್ನದ ಬುದ್ದಿಜೀವಿಗಳು, ಪಾಕಿಸ್ತಾನ ಮತ್ತು ಚೀನಾವನ್ನು ಹೆಡೆಮುರಿ ಕಟ್ಟುತ್ತಿರುವ ಮೋದಿಯವರನ್ನು ವಿರೋಧಿಸುತ್ತಿರಲ್ಲ ಯಾಕೆ?? ಭಾರತ ಮುಸಲ್ಮಾನ ರಾಷ್ಟ್ರವಾಗುವುದೇ ನಿಮ್ಮ ಕನಸೇ??

ಭಾರತದಲ್ಲಿರುವ ಶಾಂತಿ, ಸೌರ್ಹಾದತೆಯನ್ನು ಮುರಿಯುವಲ್ಲಿ ಕಾರಣಕರ್ತರು ಎಂದು ಕರೆಯುವ ವಂಶಾಡಳಿತದ ನಾಯಕರುಗಳು ಒಂದೊಂದು ಪಕ್ಷವನ್ನು ತಮ್ಮ ಒಂದೊಂದು ಮನೆತನಕ್ಕೆ ಸ್ವಂತ ಮಾಡಿಕೊಂಡಿದ್ದಾರೆ ಎಂದರೆ ಇವರ ಬಗ್ಗೆ ನಿಮಗೇನೂ ಅನಿಸುತ್ತಿಲ್ಲವೇ?? ಕೇವಲ ಒಂದೇ ಮನೆತನ ಹಲವು ದಶಕಗಳಿಂದಲೂ ಪಕ್ಷವನ್ನು ತನ್ನ ಕಪಿಮುಷ್ಠಿಯಲ್ಲಿ ಹಿಡಿದುಕೊಂಡು ಬಂದಿದ್ದಲ್ಲದೇ, ಭಾರತದ ಸೊಸೆಯೆಂದು ವಿದೇಶದಿಂದ ಬಂದವರ ಕೈಯಲ್ಲಿ ಭಾರತ ದೇಶ ಕೊಟ್ಟು ಬಿಟ್ಟಿದ್ದರಲ್ಲ ಅದನ್ನು ಪ್ರಶ್ನಿಸಿ, ಬೇಕಾದರೆ ಅದನ್ನು ವಿರೋಧಿಸಿ. ಅದನ್ನು ಬಿಟ್ಟು ತನ್ನವರಿಗೆ, ತನ್ನ ಬಂಧೂಗಳಿಗೆ ರಾಜಕೀಯದ ಗಾಳಿಯನ್ನೆ ಸೋಕಿಸದ ಮೋದಿಯನಲ್ಲ!!

ಓಟಿಗಾಗಿ ಧರ್ಮವನ್ನು ಒಡೆಯುತ್ತಿದ್ದು, ತಮಗೆ ಧರ್ಮವೇ ಇಲ್ಲ ಎಂದು ಹೇಳಿ ದಿನಕ್ಕೊಂದು ಧರ್ಮದ ವೇಷವನ್ನು ಹಾಕುವವರನ್ನು ನೀವು ನಂಬುತ್ತಿರಲ್ಲವೇ?! ಅವರನ್ನು ಅದೆಷ್ಟೂ ಬೆಂಬಲಿಸುತ್ತೀರಿ, ಅದೆಷ್ಟು ಪ್ರೀತಿಸುತ್ತೀರಿ!! ಮೊನ್ನೆ ಮೊನ್ನೆ ಚುನಾವಣಾ ಪ್ರಚಾರಕ್ಕೆ ತೆರಳಿದ ನಿಮ್ಮದೇ ನಾಯಕ ಹಿಂದುಯೇತರ ಎಂದು ಸಹಿ ಹಾಕಿದ್ದು ನೆನಪಿಲ್ಲವೇ?? ಇಷ್ಟು ದಿನ ದೇವಾಲಯಗಳಿಗೆ ಬೇಟಿ ನೀಡದವರು ಚುನಾವಣೆ ಹತ್ತಿರ ಬರುತ್ತಿದ್ದಂತೆ ಹಿಂದೂಗಳ ಮತ ಓಲೈಕೆಗಾಗಿ ದೇವಾಸ್ಥಾನಗಳಿಗೆ ತೆರಳುತ್ತಿರುವವರ ಬಗ್ಗೆ ನಿಮಗೇನೂ ಅನಿಸುತ್ತಿಲ್ಲವೇ?? ಅದನ್ನು ಬಿಟ್ಟು ಯಾವುದೇ ಧರ್ಮವನ್ನು ಒಡೆಯದೆ, ಯಾವ ಧರ್ಮದ ವೇಷ ಹಾಕದೆ, ತನ್ನ ಧರ್ಮವನ್ನ ಬಿಡದೆ ಬದುಕುತ್ತಿರುವ ಮೋದಿಯವರ ಮೇಲೆ ಏಕೆ ನಿಮಗಿಷ್ಟು ಕೋಪ??

ಭಯೋತ್ಪಾದನೆಗೆ ಬೆಂಬಲ ಕೊಡುತ್ತಿರುವ ನಿಮ್ಮದೇ ನಾಯಕರು, ಪರದೆಯ ಹಿಂದೆ ನಿಂತು ಆಟಗಳನ್ನು ಆಡುತ್ತಿದ್ದರೂ ಕೂಡ, ಐಸಿಸ್ ಜೊತೆ ಸಂಪರ್ಕವನ್ನು ಹೊಂದಿರುವ ನಿಮ್ಮದೇ ಪ್ರೀತಿಪಾತ್ರರಾದ ಕೆಲವರು ಪ್ರಧಾನಿ ಮೋದಿಯವರನ್ನೇ ಕೊಲ್ಲಲು ಬಹಿರಂಗವಾಗಿ ಘೋಷಿಸಿದರಲ್ಲ, ಆ ಸಂದರ್ಭದಲ್ಲಿ ಭಯೋತ್ಪಾದಕರೊಂದಿಗೆ ನಂಟು ಹೊಂದಿದ್ದದವರನ್ನು ನೀವು ಬೆಂಬಲಿಸಿದಿರಿ!! ಆ ಬಗ್ಗೆ ಧ್ವನಿ ಎತ್ತಬೇಕೇಂದು ನಿಮಗೆ ಅನಿಸಲಿಲ್ಲ!!ಆದರೆ ಭಯೋತ್ಪಾದನೆಯನ್ನು ಬಗ್ಗು ಬಡಿಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಎಂದರೆ ನಿಮಗ್ಯಾಗಿಷ್ಟು ಅಸೂಯೆ??

ಭ್ರಷ್ಟಾಚಾರವೆಂಬ ಮಹಾಪರ್ವತವನ್ನೆ ಗುಡ್ಡೆ ಹಾಕಿದವರನ್ನು ವಿರೋಧಿಸಿ, ದೇಶ ಹಾಳಾದರೆ ತಮಗೇನೂ ಅಂತೇಳಿ ಆರಾಮವಾಗಿ ಇರುವವರನ್ನ ವಿರೋಧಿಸಿ ಆದರೆ ಇಲ್ಲಿಯವರೆಗೆ ತನ್ನ ಮೇಲೆ ಭ್ರಷ್ಟಾಚಾರದ ಒಂದು ಸಣ್ಣ ಚುಕ್ಕೆಯನ್ನು ಇಟ್ಟುಕೊಳ್ಳದ, ದೇಶಕ್ಕಾಗಿ ಪ್ರತಿದಿನ, ಪ್ರತಿಕ್ಷಣ ದುಡಿಯುತ್ತಿರುವ ಪ್ರಧಾನಿ ನರೇಂದ್ರ ಮೋದಿಯನ್ನಲ್ಲ!! ಈಗಾಗಲೇ ಅದೆಷ್ಟೋ ಸಮೀಕ್ಷೆಗಳು ಮಾಡಿರುವ ವರದಿಯ ಪ್ರಕಾರ ನರೇಂದ್ರ ಮೋದಿ “ಯೂತ್ ಐಕಾನ್” ಆಗಿ ಹೊರಹೊಮ್ಮಿದ್ದಾರೆ!! ಅಷ್ಟೇ ಅಲ್ಲದೇ, ವಿಶ್ವದೆಲ್ಲೆಡೆ ಪ್ರಸಿದ್ದಿಯನ್ನು ಪಡೆದಿರುವ ದೇಶದ ಮೊದಲ ಪ್ರಧಾನಿ ಎನ್ನುವ ಹೆಗ್ಗಳಿಕೆ ಪಾತ್ರರಾಗಿರುವ ಮೋದಿಯನ್ನು ವಿರೋಧಿಸುತ್ತಿರಲ್ಲ ಹಾಗಾದರೆ ದೇಶದಲ್ಲಿ ಅಶಾಂತಿ ನೆಲೆಸಿದರೆ ನಿಮಗೆ ಸಂತೃಪ್ತಿಯೇ??

ಮೋಜು ಮಸ್ತಿಗೋಸ್ಕರ ವಿದೇಶ ಪ್ರವಾಸ ಮಾಡುವ ರಾಜಕಾರಣಿಗಳನ್ನು ವಿರೋಧಿಸುವ ಬದಲು ದೇಶದ ಅಭಿವೃದ್ಧಿಗಾಗಿ ಫಕೀರನಂತೆ ದೇಶ ವಿದೇಶ ಸುತ್ತುತ್ತಿರುವ ಮೋದಿಯವರನ್ನು ದೂಷಿಸುತ್ತಿರಲ್ಲ ಹಾಗಾದರೆ ನಿಮಗೆ ಭಾರತ ಅಭಿವೃದ್ಧಿ ರಾಷ್ಟ್ರವಾಗುವ ಬಯಕೆಯೇ ನಿಮಗಿಲ್ಲ ಎಂದಾಯಿತು!! ದೇಶವನ್ನು ಪರಾಕೀಯರೊಂದಿಗೆ ಹಂಚಿದವರು ನಿಮಗೆ ಇಷ್ಟವಾದರೂ. ಆದರೆ ವಿಶ್ವಕ್ಕೆ ಮಾದರಿಯಾಗಿರುವ ವ್ಯಕ್ತಿ ನಿಮಗೆ ವಿರೋಧಿಯಾದರು ಎಂದರೆ ಸ್ವಲ್ಪ ಯೋಚಿಸಿ.

ದೇಶ ಸುಭಿಕ್ಷೆಯತ್ತ ತೆರಳುತ್ತಿರಬೇಕಾದರೆ ಮೋದಿಯವರನ್ನು ವಿರೋಧಿಸಿ ನೀವು ಪಡೆದುಕೊಳ್ಳುವ ಲಾಭವಾದರೂ ಏನು?? ಸತ್ಯಕ್ಕೆ ಸಾವಿಲ್ಲ ಎಂದು ಹೇಳುತ್ತಾರೆ ಸತ್ಯ, ಧರ್ಮದ ಹಾದಿಯಲ್ಲಿ ಸಾಗುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ವಿರೋಧಿಸುತ್ತಿರಲ್ಲ!! ಹಾಗಾದರೆ ನಮ್ಮ ದೇಶ ಪರಕೀಯರ ಪಾಲಾಗುವುದಕ್ಕೂ ನೀವು ಸಜ್ಞಾಗಿದ್ದೀರಾ ಎಂದಾಯಿತು ಅಲ್ವೇ??!!

– ಅಲೋಖಾ

Related Articles

Close