ಪ್ರಚಲಿತ

“ನಾನು ಗುಜರಾತ್ ಗೆ ಬರಲ್ಲ ಪ್ಲೀಸ್ ನನ್ನನ್ನು ಒತ್ತಾಯ ಮಾಡಬೇಡಿ”!! ಫವರ್ ಮಿನಿಸ್ಟರ್ ಡಿಕೆಶಿಯ ಬ್ಯಾಟರಿ ವೀಕ್ ಆಗಿದ್ದು ನಿಜವೇ??

ಇತ್ತೀಚೆಗಷ್ಟೇ ಅನಿತಾ ಕುಮಾರಸ್ವಾಮಿಯನ್ನು ಹಾಡಿ ಹೊಗಳಿದ್ದ ಇಂಧನ ಸಚಿವ ಡಿ.ಕೆ ಶಿವಕುಮಾರ್ ರಾಜ್ಯ ರಾಜಕಾರಣದಲ್ಲಿ ವೈರಿಗಳೆಂದು ಗುರುತಿಸಿಕೊಂಡಿದ್ದ ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ಹಾಗೂ ಡಿ.ಕೆ ಶಿವಕುಮಾರ್ ಇತ್ತೀಚೆಗೆ ಹೆಚ್ಚು ಸ್ನೇಹದಿಂದಿದ್ದಾರೆ. ಆದರೆ ಗುಜರಾತ್ ಚುನಾವಣಾ ಪ್ರಚಾರಕ್ಕೆ ಕರೆದ ಹೈಕಮಾಂಡ್ ನಾಯಕರಿಗೆ ಸಚಿವ ಡಿ.ಕೆ.ಶಿವಕುಮಾರ್ ಶಾಕ್ ನೀಡಿದ್ದಾರೆ.

ಹೌದು… ಈಗಾಗಲೇ ಮಂಡ್ಯ ಜಿಲ್ಲೆ ನಾಗಮಂಗಲ ಕ್ಷೇತ್ರದ ಶಾಸಕ ಚಲುವರಾಯಸ್ವಾಮಿ ಹಾಗೂ ರಾಮನಗರ ಜಿಲ್ಲೆ ಮಾಗಡಿ ಶಾಸಕರಾಗಿರೋ ಎಚ್.ಸಿ ಬಾಲಕೃಷ್ಣ ಅವರು ಕುಮಾರಸ್ವಾಮಿ ಹಾಗೂ ಡಿ.ಕೆ. ಶಿವಕುಮಾರ್ ದೋಸ್ತಿಯಿಂದ ದಿಗ್ಭ್ರಮೆಗೊಂಡಿದ್ದಾರೆ. ಆದರೆ ಇದೀಗ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ಕಾಂಗ್ರೆಸ್ ಗೆ, “ಐ ಆ್ಯಮ್ ಸಾರಿ, ಈಗ ನಾನು ಪ್ರಚಾರಕ್ಕೆ ಬರೋಕೆ ಆಗಲ್ಲ” ಎಂದು ನೇರವಾಗಿ ಹೇಳಿರುವುದು ಇನ್ನೊಂದು ಅಚ್ಚರಿಗೆ ಕಾರಣವಾಗಿದೆ!!

ಸೋನಿಯಾಗಾಂಧಿ ಅವರ ರಾಜಕೀಯ ಸಲಹೆಗಾರರಾದ ಅಹ್ಮದ್ ಪಟೇಲ್ ಅವರನ್ನು ರಾಜ್ಯಸಭೆಯಲ್ಲಿ ಗೆಲ್ಲಿಸಿದ ಕೀರ್ತಿ ರಾಜ್ಯದ ಪವರ್ ಮಿನಿಸ್ಟರ್ ಡಿ.ಕೆ.ಶಿವಕುಮಾರ್ ಅವರದ್ದು. ಆದರೆ ಗುಜರಾತ್ ಶಾಸಕರನ್ನು ರಾಜ್ಯಕ್ಕೆ ಕರೆತಂದಿದ್ದ ಸಚಿವ ಡಿ.ಕೆ.ಶಿವಕುಮಾರ್, ಐಟಿ ದಾಳಿಯನ್ನು ಎದುರಿಸಬೇಕಾಯ್ತು. ಎಲ್ಲವನ್ನು ಸಮರ್ಥವಾಗಿ ಎದುರಿಸಿ ಶಾಸಕರನ್ನು ಗುಜರಾತ್ ತಲುಪಿಸಿ ಅಹ್ಮದ್ ಪಟೇಲ್‍ರನ್ನು ರಾಜ್ಯಸಭೆಯ ಮೆಟ್ಟಿಲು ಹತ್ತಿಸಿದ್ರು. ಆದರೆ ಇದೇ ಜೋಶ್‍ನಲ್ಲಿ ಗುಜರಾತ್ ಚುನಾವಣಾ ಪ್ರಚಾರಕ್ಕೆ ಡಿಕೆಶಿಯನ್ನು ಕರೆದ ಹೈಕಮಾಂಡ್‍ಗೆ ಸಚಿವ ಡಿಕೆಶಿ ಶಾಕ್ ನೀಡಿದ್ದಾರೆ.

ಗುಜರಾತ್ ಗೆ ಹೋದರೆ ಡಿಕೆಶಿ ಗೆ ಭಯ ಶುರುವಾಗಲಿದೆಯೇ !!!

ಐ ಆ್ಯಮ್ ಸಾರಿ, ಈಗ ನಾನು ಪ್ರಚಾರಕ್ಕೆ ಬರೋಕೆ ಆಗಲ್ಲ ಎಂದು ನೇರವಾಗಿ ಹೇಳಿದ್ದಾರೆ ಎನ್ನಲಾಗಿದೆ. ಶಾಸಕರನ್ನು ಕರೆತಂದ ನಂತರ ಐಟಿ ದಾಳಿ ನಡೆದು ಇನ್ನೂ ಸಂಕಷ್ಟದಲ್ಲೆ ಇರುವ ಸಚಿವ ಡಿಕೆಶಿ. ಮೋದಿ-ಶಾ ಜೋಡಿಯನ್ನು ಎದುರು ಹಾಕಿಕೊಂಡು ಗುಜರಾತ್ ಗೆ ಹೋಗಿ ತೊಡೆ ತಟ್ಟಿದ್ರೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಬಹುದು ಎಂಬ ಆತಂಕ ಡಿಕೆ ಶಿವಕುಮಾರ್ ಅವರದ್ದು ಎಂದು ಹೇಳಲಾಗ್ತಿದೆ.

ಗುಜರಾತ್ ಶಾಸಕರಿಂದ ಪ್ರಚಾರಕ್ಕೆ ಆಹ್ವಾನ ಬಂದರೂ ಗುಜರಾತ್ ಗೆ ಹೋಗಲು ಡಿಕೆಶಿ ಹಿಂದೇಟು ಹಾಕ್ತಿದ್ದಾರೆ. ದೇಶದ ಬೇರೆ ಬೇರೆ ರಾಜ್ಯದ ಚುನಾವಣಾ ಪ್ರಚಾರಕ್ಕೆ ಹೋಗಿದ್ದ ಡಿಕೆಶಿ ತಮ್ಮದೇ ನೆರವು ಪಡೆದ ಗುಜರಾತ್ ಶಾಸಕರು ಕರೆದರೂ ಪ್ರಚಾರಕ್ಕೆ ಹೋಗದ ಪರಿಸ್ಥಿತಿ ನಿರ್ಮಾಣವಾಗಿದೆ. ಅಷ್ಟೇ ಅಲ್ಲದೇ ಇತ್ತ ಕುಮಾರಸ್ವಾಮಿ ಹಾಗೂ ಡಿ.ಕೆ. ಶಿವಕುಮಾರ್ ದೋಸ್ತಿಕತೆ ಹೆಚ್ಚಾಗುತ್ತಿರುವುದು ಕೂಡ ಅನುಮಾನಗಳಿಗೆ ಎಡೆಮಾಡಿಕೊಟ್ಟಂತಿದೆ!!

ಅಷ್ಟೇ ಅಲ್ಲದೇ, ಈ ಹಿಂದೆ ಅನಿತಾ ಕುಮಾರಸ್ವಾಮಿ ಅವರ ಪರವಾಗಿ ಸಚಿವ ಡಿ.ಕೆ. ಶಿವಕುಮಾರ್ ಬ್ಯಾಟಿಂಗ್ ಮಾಡಿದ್ದು, “ಟೆಂಪರರಿ ನಾಯಕರು ಬರುತ್ತಾರೆ ಹೋಗುತ್ತಾರೆ. ಆದರೆ ನಿಮ್ಮ ಜೊತೆ ನಾವು ಶಾಶ್ವತವಾಗಿ ಇರುತ್ತೇವೆ” ಎಂದು ಹೇಳಿಕೆ ನೀಡುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಲ್ಲದೇ ಚೆನ್ನಪಟ್ಟದಲ್ಲಿ ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್ ಶುರುವಾಯ್ತಾ ಎನ್ನುವ ಗುಮಾನಿ ಹುಟ್ಟಿಕೊಂಡಿತ್ತು!! ಇನ್ನು ಡಿಕೆಶಿ ಯವರು ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗದೆ ಜೆಡಿಎಸ್ ನತ್ತ ಒಲವು ಮೂಡಿಸಿದ್ದನ್ನು ಕಂಡರೆ ಕಾಂಗ್ರೆಸ್ ನ ಕೈ ಕೊಡಲಿದ್ದಾರೆಯೇ ಎನ್ನುವ ಪ್ರಶ್ನೆಗಳು ಕಾಡಲಾರಂಭಿಸಿದೆ!!

ಅಲ್ಲದೇ, ಈ ಹಿಂದೆ ಕಷ್ಟು ವಿವಾದ ಮತ್ತು ಕುತೂಹಲಕ್ಕೆ ಕಾರಣವಾಗಿದ್ದ, ಇಂಧನ ಇಲಾಖೆಯಲ್ಲಿ 2004ರಿಂದ 14ರ ವರೆಗೆ ನಡೆದ ವಿದ್ಯುತ್ ಖರೀದಿ ಹಗರಣ ಕುರಿತು ಇಂಧನ ಸಚಿವ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ರಚಿಸಿದ್ದ ಸದನ ಸಮಿತಿ ವರದಿ ಮಂಡನೆ ಮಾಡಿತ್ತು. ಈ ವರದಿಗೆ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದು, ಅದಕ್ಕಾಗಿ ರಾಜಕೀಯ ದ್ವೇಶದ ಆರೋಪ ಮಾಡಿದ್ದಾರೆ. ಇನ್ನು “ಐ ಆ್ಯಮ್ ಸಾರಿ, ಈಗ ನಾನು ಗುಜರಾತ್ ಪ್ರಚಾರಕ್ಕೆ ಬರೋಕೆ ಆಗಲ್ಲ” ಎಂದು ನೇರವಾಗಿ ನುಡಿದಿರುವ ಡಿಕೆಶಿ ಅಮಿತ್ ಶಾ ಮತ್ತು ನರೇಂದ್ರ ಮೋದಿಯವರ ಭಯ ಕಾಡುತ್ತಿರುವುದು ನಿಜವೇ ಎನ್ನುವ ಗುಮಾನಿ ಹುಟ್ಟಿಕೊಂಡಿದೆ!!

ಆದರೆ ಐಟಿ ದಾಳಿ ನಡೆದ ನಂತರವು ಏನು ಆಗಿಲ್ಲ ಎಂಬಂತೆ ನಡೆದುಕೊಂಡಿದ್ದ ಡಿಕೆಶಿಗೆ ಒಳಗೊಳಗೆ ಮೋದಿ-ಶಾ ಭಯ ಕಾಡುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿದ್ದು, ರಿಸ್ಕ್ ಯಾಕೆ ಅಂತ ಗುಜರಾತ್ ಕಡೆಗೆ ತಲೆ ಹಾಕದೆ ಸುಮ್ಮನಿದ್ದಾರೆ ಎನ್ನುವ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಜೋರಾಗಿ ಕೇಳಿಬರುತ್ತಿದೆ. ಇತ್ತ ರಾಜ್ಯ ರಾಜಕಾರಣದಲ್ಲಿ ವೈರಿಗಳೆಂದು ಗುರುತಿಸಿಕೊಂಡಿದ್ದ ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ಹಾಗೂ ಡಿ.ಕೆ ಶಿವಕುಮಾರ್ ಇತ್ತೀಚೆಗೆ ಹೆಚ್ಚು ಸ್ನೇಹದಿಂದಿರುವುದು ಕೂಡ ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದ್ದಲ್ಲದೇ, “ನಾನು ಗುಜರಾತ್ ಗೆ ಬರಲ್ಲ ಪ್ಲೀಸ್ ನನ್ನನ್ನು ಒತ್ತಾಯ ಮಾಡಬೇಡಿ” ಎಂದು ಹೈಕಮಾಂಡ್ ಗೆ ಹೇಳಿರುವುದು ಕೂಡ ಬಹಳಷ್ಟು ಅಚ್ಚರಿಯನ್ನು ಉಂಟು ಮಾಡಿದ್ದು ಮಾತ್ರ ಸುಳ್ಳಲ್ಲ!!

ಕೃಪೆ: ಪಬ್ಲಿಕ್ ಟಿವಿ

– ಅಲೋಖಾ

Tags

Related Articles

Close