ಪ್ರಚಲಿತ

ಬೆಂಗಳೂರಿನಲ್ಲಿ ಇನ್ನೂ ಇದೆಯೇ ಹಳೆನೋಟುಗಳು? ಬೆನ್ನು ಬಿದ್ದ ಪೋಲಿಸರಿಗೆ ಸಿಕ್ಕಿದ್ದೇನು ಗೊತ್ತೇ?

ನರೇಂದ್ರ ಮೋದಿಯವರು ಹಳೆಯ ರೂ. 500, 1000 ರೂ ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿ ಇಷ್ಟು ದಿನಗಳು ಕಳೆದಿದೆ. ಕಪ್ಪು ಹಣ
ನಿಗ್ರಹಿಸಲು ಮತ್ತು ಪಾಕಿಸ್ತಾನದ ನಕಲಿ ನೋಟುಗಳ ಜಾಲದಿಂದ ಭಾರತ ದಿವಾಳಿ ಹೋಗುವುದನ್ನು ತಪ್ಪಿಸಲು ನರೇಂದ್ರ ಮೋದಿ ಈ ದಿಟ್ಟ ನಿರ್ಧಾರಕ್ಕೆ ಬಂದಿದ್ದರು. ಹಳೆ ನೋಟುಗಳನ್ನು ಬದಲಿಸಿ ಹೊಸ ನೋಟಿಗೆ ಪರಿವರ್ತಿಸುವ ಅವಧಿ ಎಂದೋ ಮುಕ್ತಾಯವಾಗಿದೆ. ಆದರೂ ಕೆಲವೊಂದು ಕಡೆ ಪೊಲೀಸರು ಕೋಟಿಗಟ್ಟಲೆ ರೂ. ಮೌಲ್ಯದ ಹಳೆ ನೋಟುಗಳನ್ನು ವಶಪಡಿಸುತ್ತಲೇ ಇದ್ದಾರೆ.

ಹೌದು ಪೊಲೀಸರು ಈ ಪ್ರಕರಣದ ಬಗ್ಗೆ ನಿಖರವಾದ ತನಿಖೆ ನಡೆಸಿದರೆ ಎಷ್ಟು ದೊಡ್ಡ ಕೇಸ್ ಗೊತ್ತಾ…. ಖಂಡಿತಾ ಬೆಚ್ಚಿಬೀಳಲೇ ಬೇಕು. ಯಾಕೆಂದರೆ ಇದು ಬರೀ ಹಳೆ ನೋಟಿನ ಕಥೆಯಲ್ಲ… ಹಳೆಯ ನೋಟುಗಳನ್ನು ಬದಲಿಸಲು ಯತ್ನಿಸಿದ ಆರೋಪದ ಮೇಲೆ ಪೆÇಲೀಸರು ಬೆಂಗಳೂರಿನ ಮಹಾ ಲಕ್ಷ್ಮಿ ಲೈಔಟ್‍ನ ಮೂವರನ್ನು ಬಂಧಿಸಿದ್ದಾರೆ. ಮೊಹಮ್ಮದ್ ಅಸ್ಲಮ್, ಕಾಳಿಂಗಪ್ಪ ಮತ್ತು ಮಂಜುನಾಥ್ ಎಂಬವರು ಪ್ರಕರಣದ ಆರೋಪಿಗಳು. ಆರೋಪಿಗಳಿಂದ ಪೊಲೀಸರು ವಶಪಡಿಸಿಕೊಂಡಿರುವ ಹಣವೆಷ್ಟು ಗೊತ್ತಾ? 1000 ರೂ. ಮುಖಬೆಲೆಯ ಬರೋಬ್ಬರಿ 5 ಕೋಟಿ ರೂ. ಮೌಲ್ಯದ ಹಳೆಯ ನೋಟುಗಳು!!! ಜೊತೆಗೆ ಬಂಧಿತರಿಂದ ಸ್ವಿಫ್ಟ್ ಹಾಗೂ ಡಿಸೈರ್ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.

ಅಮಾನ್ಯಗೊಂಡ ನೊಟುಗಳ ನಿರ್ಮೂಲನೆಗೆ ಕಾನೂನಾತ್ಮಕ ಬೆಂಬಲ ನೀಡುವ ಆರ್‍ಬಿಐ ಕಾಯ್ದೆ ತಿದ್ದುಪಡಿಯನ್ನೂ ಮಾಡಲಾಗಿದೆ. ಅಧ್ಯಾದೇಶದ ಪ್ರಕಾರ ಅಮಾನ್ಯ ಮಾಡಲಾದ 500 ರೂ. ಮತ್ತು 1000 ರೂ. ನೋಟುಗಳ ಮೂಲಕ ವರ್ಗಾವಣೆ ಮಾಡುವುದು ಅಥವಾ ಸ್ವೀಕರಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಜನರು ತಮ್ಮ ಬಳಿ ಅಮಾನ್ಯಗೊಂಡ ಗರಿಷ್ಠ 10 ನೋಟುಗಳನ್ನಷ್ಟೇ ಇಟ್ಟುಕೊಳ್ಳಬಹುದಾಗಿದೆ. ಆದ್ದರಿಂದ ಈ ಪ್ರಕರಣದ ಗಂಭೀರ ತನಿಖೆ ನಡೆಸಿದರೆ ಭಾರೀ ದೊಡ್ಡ ದೊಡ್ಡ ಕುಳಗಳ ಕೈಗೆ ಕೋಳ ಬೀಳುವುದು ಖಂಡಿತ.

ಮೋದಿ ನೋಟು ರದ್ದು ಮಾಡಿದ್ರೂ ಅಷ್ಟೊಂದು ಹಣ ಬಂದಿಲ್ಲ ಎಂದು ಬೊಬ್ಬೆ ಹೊಡೆಯುವವರಿಗೆ ಉತ್ತರ ಇಲ್ಲಿದೆ. ಸರಕಾರ ಭ್ರಷ್ಟಾಚಾರವನ್ನು ತಗ್ಗಿಸಲು ಸರಕಾರ ಏನೇ ಕ್ರಮ ಕೈಗೊಂಡರೂ ಸದಾ ಭ್ರಷ್ಟಾಚಾರಿಗಳೇ ತುಂಬಿಕೊಂಡಿರುವಾಗ ಯಾವುದೇ ಯೋಜನೆ ಯಶಸ್ವಿಯಾಗುವುದೇ ಇಲ್ಲ. ಆದ್ದರಿಂದ ಅಮಾನ್ಯಗೊಂಡ ನೋಟುಗಳನ್ನು ಬದಲಾವಣೆಗೆ ಗಡುವು ಎಂದೋ ಮುಗಿದಿದ್ದರೂ ಮತ್ತೆಯೂ ಕೆಲವು ಖದೀಮರು ಬ್ಲ್ಯಾಕ್ ಆಂಡ್ ವೈಟ್ ದಂಧೆಯಲ್ಲಿ ತೊಡಗಿಕೊಂಡಿದ್ದಾರೆ. ಹಾಗಾದರೆ ಇಷ್ಟೊಂದು ಹಣಗಳು ಎಲ್ಲಿದ್ದವು? ಈ ಹಣ ಯಾರದ್ದು ಎಂಬೆಲ್ಲಾ ಪ್ರಶ್ನೆಗಳು ತಲೆಕೊರೆಯುವಂತೆ ಮಾಡುವುದು ಸುಳ್ಳಲ್ಲ.

ಕೋಟಿಗಟ್ಟಲೆ ಹಣ ಯಾರದ್ದು ಎಂಬ ತಲೆಕೊರೆಯುವ ಪ್ರಶ್ನೆ…

ಹಳೆ ನೋಟುಗಳನ್ನು ಸಾಗಿಸುವಾಗ ಪೊಲೀಸರು ದೇಶಾದ್ಯಂತ ಇದುವರೆಗೆ ಹಲವಾರು ಮಂದಿಯನ್ನು ಬಂಧಿಸಿದ್ದಾರೆ. ಇಂದು ಹಳೆ ನೋಟುಗಳಿಗೆ ಬೆಲೆ ಇರದಿದ್ದರೂ ಮತ್ತೆ ಕೂಡಾ ಅದನ್ನು ವೈಟ್ ಮಾಡುವ ದಂಧೆ ನಡೆಯುತ್ತಿದೆ ಎಂದರೆ ಈ ಹಣ ದೇಶದ ಭಾರೀ ಕುಳಗಳಿಗೆ ಸೇರಿರುವ ಸಾಧ್ಯತೆಯೂ ಇದೆ. ಹಾಗಾದರೆ ಈ ಕೋಟಿಗಟ್ಟಲೆ ಹಣ ಯಾರದ್ದು? ಬಡವರು ತಮ್ಮ ಹಳೆ ನೋಟುಗಳನ್ನು ಬದಲಿಸಲು ಬ್ಯಾಂಕ್ ಮುಂದೆ ಗಂಟೆಗಟ್ಟಲೆ ಕ್ಯೂ ನಿಂತರೂ ಕೆಲವು ರಾಜಕಾರಣಿಗಳು ಬ್ಯಾಂಕ್ ಮೆಟ್ಟಿಲನ್ನೇ ಹತ್ತಿರಲಿಲ್ಲ. ಆದ್ದರಿಂದ ಆರೋಪಿಗಳನ್ನು ಸರಿಯಾದ ತನಿಖೆ ನಡೆಸಿದರೆ ಆ ಹಣ ಯಾರದ್ದು ಎಂಬ ಮಾಹಿತಿ ಸಿಗಬಹುದು. ಹಾಗಾದರೆ ಅವರಲ್ಲಿ ಇನ್ನೆಷ್ಟು ಹಣ ಇರಬಹುದು ಎಂಬ ಮಾಹಿತಿಯೂ ಸಿಗಬಹುದು.

ಯಾರೆಲ್ಲಾ ಶಾಮೀಲು..?

ಹಣ ಬದಲಾವಣೆಯ ಗಡುವುದು ಮುಗಿದಿದ್ದರೂ ಮತ್ತೆ ವೈಟ್ ಮಾಡುವ ದಂಧೆ ನಡೆಯುತ್ತಿದೆ ಎಂದರೆ ಅದಕ್ಕೆ ದೊಡ್ಡ ದೊಡ್ಡ ರಾಜಕಾರಣಿಗಳ ಸಹಾಯ ಖಂಡಿತಾ ಇರಬಹುದು. ಯಾಕೆಂದರೆ ಅವರ ಕೈವಾಡ ಇಲ್ಲದೆ ಇಷ್ಟೊಂದು ದೊಡ್ಡ ಮಟ್ಟದ ದಂಧೆ ನಡೆಯಲು ಸಾಧ್ಯವೇ ಇಲ್ಲ. ಅಲ್ಲದೆ ಈ ಹಣ ಯಾವ ಬ್ಯಾಂಕ್‍ನಲ್ಲಿ ವೈಟ್ ಮಾಡಲಾಗುತ್ತದೆ ಎಂದು ಗೊತ್ತಾದರೆ ಯಾವ ಯಾವ ಬ್ಯಾಂಕ್‍ಗಳು ಶಾಮೀಲಾಗಿವೆ. ಎಷ್ಟು ಮಂದಿ ಶಾಮೀಲಾಗಿದ್ದಾರೆ… ಎಂಬ ಮಾಹಿತಿಗಳು ಸಿಗಬಹುದು. ಈ ಜಾಲದ ಬೆನ್ನತ್ತಿದರೆ ಅದೊಂದು ದೊಡ್ಡ ಮಟ್ಟದ ಮಾಫಿಯಾವೇ ಆಗಲಿರುವ ಸಾಧ್ಯತೆ ಇದೆ.

ವಿಪರ್ಯಾಸ ಏನು ಗೊತ್ತಾ?

ಪೊಲೀಸರು ಆರೋಪಿಗಳನ್ನು ಬಂಧಿಸಿ ಸುಮ್ಮನಿರುತ್ತಾರೆ. ಆದರೆ ಈ ಪ್ರಕರಣದಲ್ಲಿ ಯಾರೆಲ್ಲಾ ಇದ್ದಾರೆ ಎಂಬ ಬಗ್ಗೆ ಸರಿಯಾದ ತನಿಖೆಯನ್ನೂ ನಡೆಸುವುದಿಲ್ಲ.
ಸುದ್ದಿವಾಹಿನಿಗಳು ಇದನ್ನು ಕೇವಲ ಬ್ರೇಕಿಂಗ್ ಸುದ್ದಿ ಕೊಟ್ಟು ಸುಮ್ಮನಾಗುತ್ತವೆ ಅಷ್ಟೆ. ಕೆಲಸಕ್ಕೆ ಬಾರದ ವಿಷಯಗಳ ಬಗ್ಗೆ ಒಂದಷ್ಟು ಹೊತ್ತು ಡಿಸ್ಕಷನ್ ಮಾಡುವ ಮೀಡಿಯಾಗಳು ಇದರ ಬೆನ್ನು ಬೀಳುವುದಿಲ್ಲ ಎಂದರೆ ಅದಕ್ಕಿಂತ ದೊಡ್ಡ ವಿಪರ್ಯಾಸ ಬೇರೊಂದಿಲ್ಲ. ಇಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದ ಪ್ರಕರಣದ ಬಗ್ಗೆ ಬೆನ್ನುಬಿದ್ದರೆ ದೊಡ್ಡ ಮಾಫಿಯಾವೊಂದು ಹೊರಬೀಳಬಹುದು.

Source : Original Link

-ಚೇಕಿತಾನ

Tags

Related Articles

Close