ಅಂಕಣ

ಮೋದಿ ಸರಕಾರವನ್ನು ನೋಡಿ ಆಸ್ಟ್ರೇಲಿಯವು ಕೆಲವು ಪಾಠಗಳನ್ನು ಕಲಿತುಕೊಳ್ಳಬೇಕಾಗಿದೆ ಎಂದ ಆಸೀಸ್ ಬಿಲಿಯನೇರ್!!

ಬಿಲಿಯನೇರ್ ನ ಬಿಲಿಯನ್ ಬೆಲೆಯ ಸಲಹೆ!!

ಪ್ರಧಾನಿ ಮೋದಿ ದೇಶಕಂಡಂತಹ ಅದ್ಭುತ ವ್ಯಕ್ತಿಯಾಗಿದ್ದು, ಇಡೀ ದೇಶವೇ ಮೋದಿಯವರನ್ನು ಪ್ರಶಂಸುತ್ತಿದೆ ಎಂದರೆ ಹೆಮ್ಮೆಯ ವಿಚಾರ!! ಆದರೆ ವಿಶ್ವದೆಲ್ಲೆಡೆ ಪ್ರಸಿದ್ಧಿಯನ್ನು ಪಡೆದಿರುವ ನರೇಂದ್ರ ಮೋದಿ ಒಬ್ಬ ಪ್ರಭಾವಿ ರಾಜಕಾರಣಿಯಾಗಿದ್ದು ಇದೀಗ ಆಸೀಸ್ ಬಿಲಿಯನೇರ್ ಮೋದಿ ಅವರನ್ನು ಪ್ರಶಂಸಿದ್ದಲ್ಲದೇ, ಮೋದಿ ಅವರ ವಿಷನ್ ಅನುಸರಿಸಲು ತಮ್ಮ ಆಸ್ಟ್ರೇಲಿಯ ಸರ್ಕಾರಕ್ಕೆ ಹೇಳಿದ್ದಾರೆ!!

ಹೌದು… ಬಿಲಿಯನೇರ್ ಗಿನಾ ರೈನ್ಹಾರ್ಟ್ ತಮ್ಮ ಆಸ್ಟ್ರೇಲಿಯಾದ ಸರ್ಕಾರಕ್ಕೆ ಡೊನಾಲ್ಡ್ ಟ್ರಂಪ್ ಮತ್ತು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಉದಾಹರಣೆಗಳನ್ನು ನೀಡಿ ಅವರನ್ನು ಅನುಸರಿಸಲು ಹೇಳಿದ್ದಾರೆ. ಕಂಪೆನಿಗಳ ತೆರಿಗೆಗಳನ್ನು ಮತ್ತು ರೆಡ್ ಟೇಪ್ ಅನ್ನು ಕಡಿತಗೊಳಿಸುವುದರ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಾತ್ಮಕ ವಾತಾವರಣವನ್ನು ಸೃಷ್ಟಿಸಿರುವುದರ ಬಗ್ಗೆ ರಾಷ್ಟ್ರೀಯ ಕೃಷಿ ಮತ್ತು ಇದರ ಸಂಬಂಧಿತ ಕೈಗಾರಿಕಾ ದಿನದ ಸ್ಮರಣಾರ್ಥವಾಗಿ ಕ್ಯಾನ್ಬೆರಾದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ರೈನ್ಹಾರ್ಟ್ ಅವರು ಹೇಳಿದ್ದಾರೆ!!

ಈ ಸಂಸ್ಥೆಯ ಸಂಸ್ಥಾಪಕಿ ಹಾಗೂ ಪೆÇೀಷಕಿಯಾಗಿರುವ ಗಿನಾ ರೈನ್ಹಾರ್ಟ್, ಅಮೆರಿಕದ ಅಧ್ಯಕ್ಷರಾಗಿರುವ ಟ್ರಂಪ್ ಚುನಾವಣೆಯಲ್ಲಿ ಜಯಗಳಿಸಿದ್ದಲ್ಲದೇ, ಟ್ರಂಪ್ ಸರ್ಕಾರವು ತಮ್ಮ ಜನರ ಸಮಸ್ಯೆಗಳನ್ನು ಆಲಿಸುತ್ತಾರೆ ಎಂದು ಹೇಳಿದರು. “ಅವರು ಇದೀಗ ಅಮೇರಿಕಾವನ್ನು ಮುನ್ನಡೆಸುತ್ತಿದ್ದು- ಅವರಿಗೆ ಮತ ಚಲಾಯಿಸದಿದ್ದರೂ ಕೂಡ ತಮ್ಮ ಸ್ಪಷ್ಟವಾದ ನಿಲುವನ್ನು ಹೊಂದಿರುವುದರಿಂದ ಆರ್ಥಿಕತೆಯಲ್ಲಿ ಯಾವೆಲ್ಲಾ ಹೋರಾಟಗಳು ನಡೆದಿದೆಯೋ ಅವೆಲ್ಲದಕ್ಕೂ ಉತ್ತರ ಸಿಕ್ಕಿದೆ. ಹಾಗಾಗಿ ಇದೀಗ ಆರ್ಥಿಕತೆಯಲ್ಲಿ ಪ್ರಗತಿಯು ಮತ್ತೆ ಮರುಕಳಿಸುವಂತಿದೆ” ಎಂದು ಅವರು ಹೇಳಿದ್ದಾರೆ.

“ಟ್ರಂಪ್ ಸರ್ಕಾರದಲ್ಲಿ ಕಂಪೆನಿಯ ತೆರಿಗೆಯನ್ನು ಕಡಿತಗೊಳಿಸುವಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದು, ಇದೀಗ ಅಮೆರಿಕಾದಲ್ಲಿ ವ್ಯಾಪಾರ ಮಾಡಲು ಉತ್ತಮವಾಗಿದೆ. ಅಷ್ಟೇ ಅಲ್ಲದೇ ಬಂಡವಾಳವನ್ನು ಪ್ರಚೋದಿಸುವುದರ ಜೊತೆಗೆ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಲು ಉತ್ತಮವಾಗಿದೆ” ಎಂದು ಹೇಳಿದ್ದಾರೆ!!

Image result for aussie-billionaire-praises-modi and tells-government-follow-modi's-vision/

ಇನ್ನು ಆಸ್ಟ್ರೇಲಿಯ ಸರ್ಕಾರವು ಭಾರತದಿಂದ ಕೂಡ ಕೆಲವು ಪಾಠಗಳನ್ನು ಕಲಿತುಕೊಳ್ಳಬೇಕಾಗಿದೆ ಎಂದಿದ್ದಾರೆ!!!

ಪ್ರಧಾನಿ ಮೋದಿಯವರ “ಅತ್ಯಂತ ಸಮರ್ಪಿತ” ನಾಯಕತ್ವದಲ್ಲಿ ಹಿಂದೆ ಕುಖ್ಯಾತ ಕೆಂಪು ಟೇಪ್ ಅನ್ನು ತುಂಡರಿಸಿದ ನಂತರ ಯಶಸ್ಸನ್ನು ಕಂಡಿರುವ ಭಾರತದಿಂದ ಆಸ್ಟ್ರೇಲಿಯಾವು ಪಾಠಗಳನ್ನು ಕಲಿಯಬೇಕಾಗಿದೆ ಎಂದು ಶ್ರೀಮತಿ ರೈನ್ಹಾರ್ಟ್ ಹೇಳಿದರು. ರೆಡ್ ಟೇಪ್ ನ ಕಡಿತದ ನಂತರ, ಭಾರತವು ಈಗ ವಿಶ್ವದಲ್ಲಿಯೇ ಅತಿ ವೇಗವಾಗಿ ಬೆಳೆಯುತ್ತಿರುವ, ಆರ್ಥಿಕತೆಯ ದೇಶವಾಗಿ ಹೊರಹೊಮ್ಮುತ್ತಿರುವ ರಾಷ್ಟ್ರವಾಗಿದೆ ಎಂದಿದ್ದಾರೆ!!

ಭಾರತದಲ್ಲಿ ರೆಡ್ ಟೇಪ್ ಕಡಿತದ ನಂತರ ವಿವಿಧ ಕೈಗಾರಿಕೆಗಳಲ್ಲಿ ಬೆಳವಣಿಗೆಯನ್ನು ಕಂಡಿದ್ದಲ್ಲದೇ, ಅನೇಕ ಪ್ರೋತ್ಸಾಹಗಳನ್ನು ಪಡೆದುಕೊಂಡಿದೆ. ಅಷ್ಟೇ ಅಲ್ಲದೇ, ಅಲ್ಪ ಕಾಲಾವಧಿಯಲ್ಲಿ ದೇಶದ ಜನಜೀವನದ ಮಟ್ಟವನ್ನು ದ್ವಿಗುಣಗೊಳಿಸುವುದಕ್ಕೂ ಇದು ಕಾರಣವಾಯಿತು. ಇದರ ಜೊತೆಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಾಧ್ಯವಾಯಿತಲ್ಲದೇ ಬಡತನವನ್ನು ಹೆಚ್ಚಿನ ಮಟ್ಟದಲ್ಲಿ ನಿರ್ಮೂಲನೆ ಮಾಡಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.

ರಫ್ತು ಆಧಾರಿತ ರಾಷ್ಟ್ರವೊಂದನ್ನು ತುಲನಾತ್ಮಕವಾಗಿ ಸಣ್ಣ ಜನಸಂಖ್ಯೆಯೊಂದಿಗೆ ಆಸ್ಟ್ರೇಲಿಯದ ಅಭ್ಯುದಯ ಮತ್ತು ಜೀವನ ಮಟ್ಟವನ್ನು ಸುಧಾರಿಸಲು
ಸ್ಪರ್ಧಾತ್ಮಕವಾಗಿ ರಫ್ತಾಗುವ ಮತ್ತು ಸಾಗರೋತ್ತರ ಸರಕುಗಳನ್ನು ಮಾರಾಟ ಮಾಡುವ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರಬೇಕು ಎಂದು ರೈನ್ಹಾರ್ಟ್ ಹೇಳಿದರು. ಅಷ್ಟೇ ಅಲ್ಲದೇ ಆಸ್ಟ್ರೇಲಿಯಾ ಕೂಡ ಸಮೃದ್ಧಿಯ ಮಾರ್ಗಕ್ಕೆ ತೆರಿಗೆ ನೀಡಬಾರದು ಮತ್ತು ಸರಕಾರವು ಹೆಚ್ಚು ಆರ್ಥಿಕವಾಗಿ ಜವಾಬ್ದಾರನಾಗಿರಬೇಕು ಹಾಗಾಗಿ ಆಸ್ಟ್ರೇಲಿಯವೂ ಮೋದಿ ಮತ್ತು ಟ್ರಂಪ್ ಸರಕಾರದಿಂದ ಪಾಠ ಕಲಿಯಬೇಕಾಗಿದೆ ಎಂದು ಹೇಳಿದ್ದಾರೆ.

ವಿಶ್ವದಲ್ಲಿಯೇ ಅತ್ಯಂತವಾಗಿ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರ ಎಂದು ಕರೆಸಿಕೊಂಡಿರುವ ಭಾರತ, ಇಂದು ನರೇಂದ್ರ ಮೋದಿಯವರಿಂದ ಸಾರ್ಥಕ ಯಶಸ್ಸನ್ನು ಕಾಣುತ್ತಿದೆ!!! ಭ್ರಷ್ಟಚಾರ ಮುಕ್ತ ಸರ್ಕಾರವನ್ನು ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಈಡೀ ವಿಶ್ವಕ್ಕೆ ಮಾದರಿ ವ್ಯಕ್ತಿಯಾಗಿ ಹೊರಹೊಮ್ಮುತ್ತಿರುವುದಂತೂ ಅಕ್ಷರಶಃ ನಿಜ!!

ಮೂಲ:http://www.indianpolitics.co.in/international-news/aussie-billionaire-praises-modi-tells-government-follow-modis-vision/

– ಅಲೋಖಾ

Tags

Related Articles

Close