ಅಂಕಣಪ್ರಚಲಿತರಾಜ್ಯ

ಸಿದ್ಧರಾಮಯ್ಯ ಸರಕಾರದಿಂದ ಕೆಎಎಸ್ ಅಧಿಕಾರಿಗೆ ‘ಸೈಕಲ್’ ಭಾಗ್ಯ! 20 ಕಿಮೀ ದೂರ ಸೈಕಲ್ ತುಳಿಯುತ್ತಿರುವ ಕೆಎಎಸ್ ಅಧಿಕಾರಿ!

ಸಿದ್ಧರಾಮಯ್ಯ ಸರಕಾರದಲ್ಲಿ ‘ನಿಷ್ಠಾವಂತ’ರಿಗೆ ಬೆಲೆಯಿರುವುದು ಹೋಗಲಿ, ಬದುಕಲು ಅವಕಾಶವೂ ಇಲ್ಲ ಎನ್ನುವುದು ಗೊತ್ತಿರುಚ ಸಂಗತಿಯೇ! ಕಳೆದ ಐದು ವರ್ಷಗಳಿಂದಲೂ ಸಹ ಅದೆಷ್ಡೋ ದಕ್ಷ ಪೋಲಿಸ್ ಅಧಿಕಾರಿಗಳಿಗೆ ಸಾವಿನ ಭಾಗ್ಯವನ್ನು, ಇನ್ನು ಒಂದಷ್ಟು ಅಧಿಕಾರಿಗಳಿಗೆ ವರ್ಗಾವಣೆ ಭಾಗ್ಯಗಳಂತಹ ತರಾವರಿ ಭಾಗ್ಯಗಳನ್ನು ಕರುಣಿಸಿರುವ ಸಿದ್ಧರಾಮಯ್ಯನ ಸರಕಾರ ಉಳಿಯುವುದು ಇನ್ನೆಂಟೇ ತಿಂಗಳಾದರೂ ಕೂಡ, ‘ ಆರುವ ದೀಪವೊಂದು ಜೋರಾಗಿ ಉರಿಯುವಂತೆ’ ಈಗ ಕೆಎಎಸ್ ಅಧಿಕಾರಿಯೊಬ್ಬರಿಗೆ ‘ ಸೈಕಲ್’ ಭಾಗ್ಯವನ್ನು ನೀಡಿದೆ!

ರಾಜ್ಯದಲ್ಲಿ ಕೆಎಎಸ್ ಹಾಗೂ ಐಎಎಸ್ ಅಧಿಕಾರಿಗಳ ನಡುವಿನ ಮನಸ್ತಾಪಗಳು ಹೊಸಲದಲ್ಲವಾದರೂ ಸಹ, ಹಿರಿಯ ಕೆಎಎಸ್ ಅಧಿಕಾರಿಯಾದ ಕೆ.ಮಥಾಯಿ ಸೇರ್ಪಡೆಯಾಗಿದ್ದಾರೆ ಅಷ್ಟೇ! ಸಕಾಲ ಇಲಾಖೆಗೆ ವರ್ಗಾವಣೆಗೊಂಡು 11 ತಿಂಗಳಾದರೂ ಸಹ ವಾಹನ ಸೌಲಭ್ಯ ನೀಡದೇ, ಮನವಿಗೆ ಉತ್ತರಿಸುವ ಸೌಜನ್ಯವನ್ನೂ ತೋರದಿರುವ ಕರ್ನಾಟಕ ರಾಜ್ಯ ಸರ್ಕಾರ ಅಳಿದುಳಿದ ಅನ್ಯಾಯ ಮಾಡುವುದರಲ್ಲಿಯೇ ನಿರತನಾಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ!!

ಕೆಎಎಸ್ ಅಧಿಕಾರಿ ಕೆ.ಮಥಾಯಿ, ರಾಜಾನುಕುಂಟೆಯಿಂದ ಎಂ.ಎಸ್.ಬಿಲ್ಡಿಂಗ್ ನಲ್ಲಿರುವ ತಮ್ಮ ಕಛೇರಿಗೆ ಸೈಕಲ್ ನಲ್ಲೇ ಆಗಮಿಸಿದ್ದಾರೆ! ಎಂತಹ ದುರವಸ್ಥೆ ನೋಡಿ! ಒಬ್ಬ ಕೆಎಎಸ್ ದಕ್ಷ ಅಧಿಕಾರಿ ಯಾವ ವಾಹನವೂ ಇಲ್ಲದೇ, ಯಾವುದೇ ರಕ್ಷಣೆ ಇಲ್ಲದೇ, ಬರೋಬ್ಬರಿ 20 ಕಿ.ಮೀ ಸೈಕಲ್ ತುಳಿದಿರುವ ಅಮಾನವೀಯ ಘಟನೆಗೆ ಯಾವ ಸರಕಾರವೂ ಏನನ್ನೂ ಹೇಳಿಲ್ಲ! ಬಿಡಿ! ಸರಕಾರದ ವಿರುದ್ಧವೇ ಆಕ್ರೋಶ ತೋರಿದರೆಂಬ ಬಿರುದು ಕೊಟ್ಟು ಬದುಕಲು ಬಿಟ್ಟರೆ ಸಾಕು ಈ ಸಿದ್ಧರಾಮಯ್ಯರವರ ತುಘಲಕ್ ಸರಕಾರ!

ಅಂದಾಜು 20 ಕಿ.ಮೀಗಿಂತಲೂ ಹೆಚ್ಚು ಸೈಕಲ್ ತುಳಿದೇ ಕಛೇರಿಗೆ ಬರುತ್ತಿರುವ ಮಥಾಯಿ ತಮ್ಮ ಸೈಕಲ್ ಗೆ ಭದ್ರತೆ ಒದಗಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲು ಮುಂದಾಗಿದ್ದಾರೆ! ಕರ್ತವ್ಯಕ್ಕೆ ಹಾಜರಾಗಿ 11 ತಿಂಗಳುಗಳಾದ್ರೂ ನನಗೆ ವಾಹನ ನೀಡಿಲ್ಲ, ಪ್ರಾಮಾಣಿಕವಾಗಿ ಕೆಲಸವನ್ನೂ ಮಾಡಿದ್ದೇನೆ! ಈ ಪ್ರಾಮಾಣಿಕತೆಗೆ ನನಗೀ ಗತಿ ಎಂದು ಅಳಲು ತೋಡಿಕೊಂಡಿದ್ದಾರೆ!

“ಇದು ನನ್ನ ಮೇಲಾಗುತ್ತಿರುವ ದೌರ್ಜನ್ಯ! ಆಯೋಗ ಬೇಕಂತಲೇ ಬಿಲ್ ಕಟ್ಟಿಲ್ಲವೆಂದು ಸಬೂಬು ಹೇಳಿ ವಾಹನ ಸೌಲಭ್ಯವನ್ನು ಕಡಿತಗೊಳಿಸಿದೆ. ಆದರೆ, ನಾನು ಕೆಲಸಕ್ಕೆ ಸೇರಿದಾಗಲೇ ಬಿಲ್ ಕಟ್ಟಿದೆ, ಆದರೂ ಕೂಡ, ನನಗೆ ಯಾವುದೇ ವಾಹನ ಸೌಲಭ್ಯ ಒದಗಿಸಿಲ್ಲ.”

” ನಾನು ಈ ಹಿಂದೆ ಹೆಚ್ಚುವರಿ ಮುಖ್ಯ ಅಧಿಕಾರಿಯಾದ (ಡಿಪಿಎಆರ್) ರಾಜೀವ್ ಚಾವ್ಲಾಗೂ ಈ ದೌರ್ಜನ್ಯದ ವಿರುದ್ಧ ತಿಳಿಸಿ ಪತ್ರ ಬರೆದಿದ್ದೇನೆ, ಮನವಿಯನ್ನೂ ಮಾಡಿದ್ದೇನೆ. ನನ್ನ ಸೈಕಲ್ ಗೆ ರಕ್ಷಣೆ ಒದಗಿಸುವಂತೆ ಕೇಳಿದ್ದೇನೆ. ಆದರೂ, ಯಾವುದೇ ಉತ್ತರ ಬಂದಿಲ್ಲ. ಅದಕ್ಕೇ, ನನ್ನ ಕಛೇರಿಗೇ ನನ್ನ ಸೈಕಲ್ ನನ್ನು ತೆಗೆದುಕೊಂಡು ಹೋಗುತ್ತಿದ್ದೇನೆ.”

“ನನಗೆ ಇನ್ಯಾವ ರೀತಿಯಿಂದಲೂ ಹೋರಾಡಲು ತಿಳಿಯುತ್ತಿಲ್ಲ. ಆದ್ದರಿಂದ ಈ ಸಾತ್ವಿಕ ಹೋರಾಟವೊಂದೇ ನನಗುಳಿದಿರುವುದು.!” ಎಂದ ಮಥಾಯ್ ಒಬ್ಬ ದಕ್ಷ ಅಧಿಕಾರಿ!

 

ಬಿಬಿಎಂಪಿ ಅಕ್ರಮ ಬಯಲಿಗೆಳೆದಿದ್ದು ಇವರೇ ಸ್ವಾಮಿ!!

ಈ ಹಿಂದೆ ಬಿಬಿಎಂಪಿ ಜಾಹೀರಾತು ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ, ಜಾಹೀರಾತಿನ ಅಕ್ರಮದ ಕುರಿತು ಅಂದಿನ ಬಿಬಿಎಂಪಿ ಆಯುಕ್ತ ಲಕ್ಷ್ಮೀ ನಾರಾಯಣ ವಿರುದ್ಧ ವರದಿ ನೀಡಿದ್ದರು. ಇದೇ, ದ್ವೇಷಕ್ಕೆ ತಮಗೆ ಈ ರೀತಿ ತೊಂದರೆ ಕೊಡಲಾಗುತ್ತಿದೆ ಎಂದು ಆರೋಪಿಸಿರುವ ಮಥಾಯಿಯವರ ದಕ್ಷತೆಗೆ ಸಂದ ಶ್ರೇಷ್ಠ ಪ್ರತಿಫಲವಿದು!!!

ಬಿಡಿ! ಮಥಾಯಿಯವರನ್ನು ಬದುಕಲು ಬಿಟ್ಟಿದ್ದೇ ಹೆಚ್ಚು ಎನ್ನುವ ಪರಿಸ್ಥಿತಿ ಇದೆ!! ಸಿದ್ಧರಾಮಯ್ಯನ ಸರಕಾರದಲ್ಲಿ, ಡಿವೈಎಸ್ಪಿ ಗಣಪತಿ, ಡಿಕೆ ರವಿ, ಡಿಜಿ ರೂಪಾ ಹಾಗೂ ಇನ್ನೆಷ್ಟು ಜಜ ಅಧಿಕಾರಿಗಳ ಬದುಕು ನರಕವಾಗಬೇಕೋ, ಇನ್ನೆಷ್ಟು ಜನ ಪ್ರಾಣ ಕಳೆದುಕೊಳ್ಳಬೇಕೋ ಯಾರಿಗೆ ಗೊತ್ತು ಸ್ವಾಮಿ! ಅದಲ್ಲದೇ, ಇರೋದಿನ್ನೆಂಟು ತಿಂಗಳು! ಮಾಡೋದಿಕ್ಕಾಗುವಷ್ಟು ಭ್ರಷ್ಟಾಚಾರ, ಅಕ್ರಮಗಳನ್ನೆಲ್ಲ ಮಾಡಲು ತುದಿಗಾಲಲ್ಲಿ ನಿಂತಿರುವ ಸಿದ್ಧರಾಮಯ್ಯನಿಗೆ ಸಲಹೆ ಸಹಕಾರ ನೀಡಲು ತನ್ವೀರ್ ಸೇಠ್ ಬೇರೆ! ಅಹಾಹಾ! ಎಂತಹ ಶ್ರೇಷ್ಠ ಸರಕಾರ ಅಂತೀರಿ!

ಮುಂದೊಂದು ದಿನ, ಇದೇ ಕೆಎಎಸ್ ಮಥಾಯಿ ಅವರ ಮೇಲೂ ಹಲ್ಲೆ ನಡೆಸಿ, ತದನಂತರ ‘ಸೈಕಲ್’ ಹೊಡಿಯಕ್ಕೆ ನಾವು ಹೇಳಿರಲಿಲ್ಲ ಅಂತ ಪುಂಗಿ ಊದಿ, ಇವರ ಬದುಕನ್ನೂ ಇನ್ನೇನು ಮಾಡುತ್ತೋ ಯಾರಿಗೆ ಗೊತ್ತು?!

– ಪೃಥ

Tags

Related Articles

Close