ಅಂಕಣಪ್ರಚಲಿತ

ಹಿಂದೂಗಳಿಗೇ ಭೂಮಿಯನ್ನು ಕೊಡುತ್ತೇವೆಂದ ಶಿಯಾ ಮಂಡಳಿ! ಕಟ್ಟರ್ ಹಿಂದೂವಿರೋಧಿ ಅಸಾದುದ್ದೀನ್ ಓವೈಸಿ ಹೇಳಿದ್ದೇನು ಗೊತ್ತೇ?!

ದಿನೇ ದಿನೇ ಕುತೂಹಲ ಹೆಚ್ಚಿಸುತ್ತಿರುವ ಅಯೋಧ್ಯಾದ ರಾಮ ಮಂದಿರ ಮತ್ತು ಬಾಬರಿ ಮಸೀದಿ ಮತ್ತೊಂದು ತಿರುವು ಪಡೆದುಕೊಂಡಿದೆ.

ಸುಪ್ರೀಮ್ ಕೋರ್ಟಿನ ಹಿರಿಯ ಸದಸ್ಯರಾದ ಶಿಯಾ ಮೌಲ್ವಿಯೊಬ್ಬರು “ರಾಮ ಮಂದಿರ ಹಾಗೂ ಬಾಬರಿಯ ವಿವಾದವನ್ನು ಸುಪ್ರೀಮ್ ಕೋರ್ಟು ಮುಸ್ಲಿಮರಿಗೋಸ್ಕರ ನಿರ್ಧರಿಸುತ್ತದೆ” ಎಂದು ಶುಕ್ರವಾರ ಹೇಳಿದ್ದಾರೆ.

ಅಂತರಾಷ್ಟ್ರೀಯ ಶಾಂತಿ ಹಾಗೂ ಸಮನ್ವಯ ಸಮ್ಮೇಳನದ ಹಿರಿಯ ವಕ್ತಾರರಾದ ಮೌಲಾನಾ ಕಲ್ಬೆ ಸಾದಿಕ್ ಸುಪ್ರೀಮ್ ಕೋರ್ಟಿನ ತೀರ್ಪನ್ನು ಸ್ವಾಗತಿಸಿದ್ದಾರೆ!
“ನಮಗೆ ಸುಪ್ರೀಮ್ ಕೋರ್ಟಿನ ತೀರ್ಪಿನ ಮೇಲೆ ಸಂಪೂರ್ಣ ನಂಬಿಕೆಯಿದ್ದು, ಅದಾವುದೇ ತೀರ್ಪು ನೀಡಿದರೂ ಸಹೃದಯದಿಂದ ಸ್ವಾಗತಿಸುತ್ತೇವೆ. ಅಯೋಧ್ಯಾ ತೀರ್ಪನ್ನು ನ್ಯಾಯಾಲಯವೇ ನಿರ್ಧರಿಸಲಿದೆ.”

“ನ್ಯಾಯಾಲಯ ಭೂಮಿಯನ್ನು ನಮಗೇ ಕೊಟ್ಟರೂ ನಾವದನ್ನು ಹಿಂದೂಗಳಿಗೆ ಸಂತೋಷದಿಂದ ಕೊಡುತ್ತೇವೆ.”
ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು ಅಸಾದುದ್ದಿನ್ ಓವೈಸಿ ತೀವ್ರವಾಗಿ ಖಂಡಿಸಿದ್ದಾರೆ. ಮುಂಚೆಯಿಂದಲೂ ಹಿಂದೂಗಳನ್ನು ಕಡಿಯುತ್ತೇವೆಂದೆಲ್ಲ ಮುಕ್ತವಾಗಿ ಹೇಳಿಕೆ ಕೊಡುತ್ತಿದ್ದ ಓವೈಸಿಯ ವಿರೋಧಕ್ಕೆ ಈಗ ಪಾರವಿಲ್ಲದಂತಾಗಿದೆ!
“ಮಸೀದಿಯ ಮೇಲೆ ಶಿಯಾ, ಸುನ್ನಿ, ಸೂಫಿ,ಬರೇಲ್ವಿ ಮುಂತಾದ ಮುಸ್ಲಿಮರಿಗೆಲ್ಲ ಹಕ್ಕಿದೆ. ಅವರು ಹಕ್ಕುದಾರರೇ ಹೊರತು ಯಜಮಾನರಲ್ಲ. ಅಲ್ಲಾಹ್ ಮಾತ್ರ ಯಜಮಾನ. ಅದವನ ಸ್ವತ್ತು.” ಎಂಬುದಾಗಿ ಹೇಳಿದ ಓವೈಸಿ ಈ ಹಿಂದೆಯೂ ರಾಮ ಮಂದಿರದ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಲೇ ಇದ್ದರೂ, ಧಾರ್ಮಿಕವಾಗಿ ಅದೆಷ್ಟೇ ಹಿಂದೂಗಳ ವಿರುದ್ಧವಾಗಿ ಬೆದರಿಕೆ ಒಡ್ಡಿದ್ದರೂ ಸಹ ಯಾವ ನ್ಯಾಯಾಲಯವೂ ಕೂಡ ಕ್ರಮ ತೆಗೆದುಕೊಂಡಿಲ್ಲ.

ಇದಕ್ಕೂ ಮುಂಚೆ ಶಿಯಾ ವಕ್ಫ್ ಮಂಡಳಿ ಅಯೋಧ್ಯಾದ ರಾಮ ಮಂದಿರವನ್ನು ಅದರ ಜಾಗದಲ್ಲೇ ಕಟ್ಟಲಿ, ಮಸೀದಿಯನ್ನು ತೆರವುಗೊಳಿಸಿ ಮಂದಿರದ ಹತ್ತಿರದಲ್ಲೆಲ್ಲಾದರೂ ಕಟ್ಟಬಹುದು. ಆದರೆ, ರಾಮ ಮಂದಿರ ಅಲ್ಲೇ ಕಟ್ಟಬೇಕು. ಮಸೀದಿಯ ಜಾಗದ ಹಕ್ಕು ಶಿಯಾ ದವರಿಗೆ ಸೇರಿರುವುದರಿಂದ ಶಿಯಾದವರೇ ನಿರ್ಧಿರಿಸುತ್ತಾರೆ ಎಂದಿತ್ತು.

ಅಲ್ಲದೇ ಶಿಯಾ ಪಂಗಡದವನೇ ಆದ ಅಬ್ದುಲ್-ಮೀರ್-ಭಾಕಿ ಎನ್ನುವ ಬಾಬರನ ಸಚಿವ ರಾಮ ಮಂದಿರವನ್ನು ಕೆಡಗಿ ಬಾಬರಿ ಮಸೀದಿಯನ್ನು ತನ್ನ ಸ್ವಂತ ಹಣದಲ್ಲಿ ಕಟ್ಟಿಸಿದ್ದ ಎಂಬ ಸ್ಫೋಟಕ ಹೇಳಿಕೆ ನೀಡಿತ್ತು.

ತೀವ್ರ ವಿರೋಧ ವ್ಯಕ್ತವಾದರೂ ಶಿಯಾ ಮಂಡಳಿ, “ನಾವು ನಮ್ಮ ಪೂರ್ವಜರ ತಪ್ಪುಗಳನ್ನು ಒಪ್ಪುತ್ತೇವೆ. ಸತ್ಯ ಹೇಳಲು ನಮಗ್ಯಾವುದೇ ಹಿಂಜರಿಕೆಯೂ ಇಲ್ಲ. ಮಸೀದಿಯನ್ನು ಬೇಕಾದರೆ ಮಂದಿರದ ಹತ್ತಿರದಲ್ಲೆಲ್ಲಾದರೂ ಕಟ್ಟಲಿ, ಆದರೆ, ರಾಮ ಮಂದಿರ ಮಾತ್ರ ಅಲ್ಲೇ ಕಟ್ಟುತ್ತೇವೆ” ಎಂಬುದಾಗಿ ತಿರುಗೇಟು ನೀಡಿದ ಶಿಯಾ ಮಂಡಳಿ ಮಂದಿರದ ನಿರ್ಮಾಣಕ್ಕೆ ಪೂರ್ಣ ಬೆಂಬಲ ನೀಡಿದೆ.

ಶಿಯಾ ಮಂಡಳಿಯ ನಿರ್ಧಾರಕೆ ತೀವ್ರ ವಿರೋಧ ವ್ಯಕ್ತವಾಗಿದ್ದು ಹಾಜಿ ಮೆಹಬೂಬ್ ಎಂಬುವವರು ‘ಅಯೋಧ್ಯಾದಲ್ಲಿ ರಾಮ ಮಂದಿರ ನಿರ್ಮಾಣವಾದರೆ ಬಾಂಬು ಹಾಕುತ್ತೇನೆ’ ಎಂದು ಬೆದರಿಕೆಯಿತ್ತಿದ್ದಾರೆ.

ಏನಾದರಾಗಲಿ, ರಾಮ ಮಂದಿರದ ಕನಸುಗಳು ಇನ್ನು ನನಸಾಗಲು ಬಹಳ ದಿನ ಉಳಿದಿಲ್ಲವೆಂದೇ ಹೇಳಬಹುದು. ತೀವ್ರ ಪರ – ವಿರೋಧ ದ ನಡುವೆಯೂ ಶಿಯಾ ಮಂಡಳಿ ರಾಮ ಮಂದಿರದ ಪರ ನಿಲ್ಲುವುದು ನಿಜಕ್ಕೂ ಸ್ವಾಗತಾರ್ಹವಾಗಿದೆ.

‘ಬನಾಯೇಂಗೆ ಮಂದಿರ್’ ಎಂದು ಹಾಡುವುದನ್ನೂ ನಿಷೇಧಿಸಿದ್ದ ಕೆಲವು ಕಾಂಗಿಗಳು ಇನ್ನು ರಾಮ ಮಂದಿರ ನಿರ್ಮಾಣವಾದ ಮೇಲೆ ಏನು ಮಾಡಬಹುದೆಂಬುದೇ ಯಕ್ಷ ಪ್ರಶ್ನೆ!

– ಪೃಥ ಅಗ್ನಿಹೋತ್ರಿ

Tags

Related Articles

Close