ಅಂಕಣ

26/11 ನ ಹಾಗೆ ಯಾವ ಉಗ್ರಗಾಮಿ ಸಂಘಟನೆಗಳೂ ಕೂಡ 2014 ಮೇ ತಿಂಗಳ ನಂತರ ಭಾರತದೊಳ ನುಸುಳಿ ದಾಳಿ ಮಾಡಲಿಲ್ಲವೇಕೆ?!

ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ದೇಶದಲ್ಲಿ ಶತ್ರುರಾಷ್ಟ್ರ ಪಾಕಿಸ್ತಾನ, ಚೀನಾದಿಂದ ಅನೇಕ ವಿಧ್ವಂಸಕ ಕೃತ್ಯಗಳು ನಡೆದಿವೆ, ಪಾಕಿಸ್ತಾನ ಪ್ರೇರಿತ ಇಸ್ಲಾಮಿ ಭಯೋತ್ಪಾದಕರು ಭಾರತದಲ್ಲಿ ಟೆರಿರಸಂ ಮಾಡಿದರೆ ಅತ್ತ ಕಮ್ಯುನಿಸ್ಟ್ ಚೀನಾ ತನ್ನ ವಿಚಾರಧಾರೆಯ ಭಾರತದಲ್ಲಿನ ನಕ್ಸಲರಿಗೆ ಫಂಡಿಂಗ್ ಮಾಡಿಸಿ ನಕ್ಸಲ್ ಭಯೋತ್ಪಾದನೆಯನ್ನ ನಡೆಸುತ್ತಿತ್ತು.

ದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಸರ್ಕಾರ ಆಡಳಿತದಲ್ಲಿದ್ದ ಸಮಯ, ಅಂದರೆ 2004 ರಿಂದ 2014 ರವರೆಗೆ ನಡೆದ ಭಯೋತ್ಪಾದನಾ ಕೃತ್ಯಗಳು ಹಾಗು ಈಗ ಮೋದಿ ಪ್ರಧಾನಿಯಾದ ನಂತರದ ಘಟನೆಗಳನ್ನ ತುಲನೆ ಮಾಡಿ ನೋಡಿದರೆ ಮೋದಿ ಸರ್ಕಾರ ದೇಶವನ್ನ ಆಂತರಿಕವಾಗಿ ರಕ್ಷಸುತ್ತಿದೆಯೋ ಅಥವ ಹಾಳು ಮಾಡುತ್ತಿದೆಯೋ ಅನ್ನೋದನ್ನ ನೀವು ಅರ್ಥ ಮಾಡಿಕೊಳ್ಳಬಹುದು.

ಇದಕ್ಕೆ 2004 ರಿಂದ 2014 ರವರೆಗೆ ದೇಶ ಹೇಗಿತ್ತು ಅನ್ನೋದರ ಸಣ್ಣ ವಿಶ್ಲೇಷಣೆ ಮಾಡಲೇಬೇಕಾಗುತ್ತೆ.

2005 : ಜುಲೈ 5, 2005 ರಲ್ಲಿ ರಾಮಜನ್ಮಭೂಮಿಯಾದ ಆಯೋಧ್ಯೆಲ್ಲಿ ಪಾಕಿಸ್ತಾನದ ಭಯೋತ್ಪಾದನಾ ಸಂಘಟನೆ ಲಷ್ಕರೆ ತೊಯ್ಬಾ ನೇಪಾಳದ ಮೂಲಕ
ಭಾರತಕ್ಕೆ ಬಂದು ಆಯೋಧ್ಯೆಯಲ್ಲಿ ತಾವು ಕೂಡ ರಾಮಭಕ್ತರಂತೆಯೆ ಫೈಜಾಬಾದ್ ನಲ್ಲಿ ಗ್ರೇನೆಡ್ ದಾಳಿ ನಡೆಸಿದ್ದರು. ನಂತರ CRPF ಯೋಧರು ಭಯೋತ್ಪಾದಕರ ಕೃತ್ಯವನ್ನ ತೆಡೆದು 5 ಜನ ಭಯೋತ್ಪಾದಕರನ್ನ ಹೊಡೆದುರುಳಿಸಿದ್ದರು.

2005: ಜುಲೈ 28, 2005, ಉತ್ತರಪ್ರದೇಶದ ಜೌನ್ ಪುರ ದಿಂದ ದೆಹಲಿಗೆ ಹೊರಟಿದ್ದ ‘ಶ್ರಮಜೀವಿ’ ಪ್ಯಾಸೆಂಜರ್ ಟ್ರೇನ್ ಉಗ್ರರ ಟಾರ್ಗೇಟ್ ಆಗಿತ್ತು. RDX ಬಾಂಬ್ ಗಳಿಂದ ಶ್ರಮಜೀವಿ ಟ್ರೇನ್ ಬ್ಯಾಸ್ಟ್ ಮಾಡಲಾಗಿತ್ತು. ಇದರಲ್ಲಿ 13 ಪ್ರಯಾಣಿಕರ ಸಾವು ಹಾಗು 50 ಜನ ಗಂಭೀರ ಗಾಯಗಳಿಂದ ಆಸ್ಪತ್ರೆ ಸೇರಿದ್ದರು

2005: ಅಕ್ಟೋಬರ್ 29, 2005, ದೀಪಾವಳಿಯ ಹಬ್ಬದ ಸಂದರ್ಭದಲ್ಲಿ ಹಿಂದೂ, ಜೈನ್, ಸಿಖ್ಖರನ್ನ ಟಾರ್ಗೇಟ್ ಮಾಡಿ ದೆಹಲಿಯಲ್ಲಿ ಭಯೋತ್ಪಾದಕರ ಟಾರ್ಗೇಟ್ ಆಗಿದ್ದರು.

ಭಯೋತ್ಪಾದಕರು ದೆಹಲಿಯ ಮೂರು ಸ್ಥಳಗಳಲ್ಲಿ ಬಾಂಬ್ ಸ್ಫೋಟಿಸಿದ್ದರು. ಈ ಸ್ಫೋಟಗಳಲ್ಲಿ 62 ಜನ ಪ್ರಾಣ ಕಳೆದುಕೊಂಡು ಸುಮಾರು 210 ಜನ ಗಂಭೀರವಾಗಿ ಗಾಯಗೊಂಡಿದ್ದರು.

2006: ಮಾರ್ಚ್ 7, 2007, ಉತ್ತರಪ್ರದೇಶದ ವಾರಣಾಸಿಯಲ್ಲಿ ಹಿಂದುಗಳನ್ನ ಟಾರ್ಗೇಟ್ ಮಾಡಿ ಸಂಕಟವಿಮೋಚನ ಮಂದಿರ ಹಾಗು ವಾರಣಾಸಿ ಕಂಟೋನ್ಮೆಂಟ್ ಸಮೇತ ನೀರು ಸ್ಥಳಗಳಲ್ಲಿ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯಿಂದ ಬ್ಲ್ಯಾಸ್ಟ್ ಮಾಡಲಾಗಿತ್ತು.

ಈ ಭಯೋತ್ಪಾದನಾ ಕೃತ್ಯದಲ್ಲಿ 28 ಜನರ ದುರ್ಮರಣ ಹಾಗು 110 ಜನ ಗಂಭೀರ ಗಾಯಗಳಾಗಿದ್ದವು.

2006: ಸೆಪ್ಟೆಂಬರ್ 8, 2006, ಮಹಾರಾಷ್ಟ್ರದ ಮಾಲೇಗಾಂವ್ ನಲ್ಲಿ ನಿಷೇಧಿತ ಭಯೋತ್ಪಾದನಾ ಸಂಘಟನೆ ಸಿಮಿ ಯಿಂದ ಬಾಂಬ್ ಬ್ಯಾಸ್ಟ್
ಮಾಡಲಾಗಿತ್ತು. ಈ ಭಯೋತ್ಪಾದನಾ ಕೃತ್ಯದಲ್ಲಿ 37 ಜನ ಪ್ರಾಣ ಕಳೆದುಕೊಂಡು 125 ಕ್ಕೂ ಹೆಚ್ಚು ಜನ ಗಂಭೀರ ಗಾಯಾಳುಗಳಾಗಿದ್ದರು.

ಸಿಮಿ ಸಂಘಟನೆಯಂತ ಮೊದಲು ಚಾರ್ಜಶೀಟ್ ಹಾಕಿದ್ದ ಭಯೋತ್ಪಾದನಾ ನಿಗ್ರಹ ದಳ ನಂತರ ಕಾಂಗ್ರೆಸ್ಸಿನ ಒತ್ತಡಕ್ಕೆ ಮಣಿದು ದೇಶದಲ್ಲಿ ಬರೋ ಇಸ್ಲಾಮಿಕ್ ಭಯೋತ್ಪಾದನೆಯಷ್ಟೇ ಅಲ್ಲ ಹಿಂದೂ ಭಯೋತ್ಪಾದನೆಯೂ ಇದೆ ಅಂತ ಜಗತ್ತಿಗೆ ತೋರಿಸೋಕೆ ಹಿಂದೂ ಸಂಘಟನೆಯಾದ ಅಭಿನವ್ ಭಾರತ್ ನ್ನ ಈ ಪ್ರಕರಣದಲ್ಲಿ ಎಳೆದು ತಂದಿತ್ತು

2007: ಫೆಬ್ರುವರಿ 18, 2007, ದೆಹಲಿಯಿಂದ ಪಾಕಿಸ್ತಾನದ ಲಾಹೋರ್ ಗೆ ವಾರಕ್ಕೆ ಎರಡು ಬಾರಿ ಪ್ರಯಾಣಿಸುವ ಸಂಝೌತಾ ಟ್ರೇನ್ ನ್ನ ಗುರಿಯಾಗಿಸಿದ
ಲಷ್ಕರ್-ಎ-ತೊಯ್ಬಾ ಸಂಘಟನೆ ನಡೆಸಿದ್ದ ಟ್ರೇನ್ ಬ್ಲ್ಯಾಸ್ಟ್ ನಲ್ಲಿ 68 ಪ್ರಯಾಣಿಕರು ಪ್ರಾಣ ಕಳೆದುಕೊಂಡು 50 ಜನ ಗಾಯಾಳುಗಳಾಗಿದ್ದರು.

2007: ಆಗಷ್ಟ್ 25, 2007, ಹೈದ್ರಾಬಾದಿನ ಲುಂಬಿಣಿ ಪಾರ್ಕ್ ಹಾಗು ಗೋಕುಲ್ ಚಾಟ್ ಭಂಡಾರ್ ಈಗ ಉಗ್ರರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಎರಡೂ ಸ್ಥಳಗಳಲ್ಲಿ ಹರ್ಕತ್-ಉಲ್-ಜಿಹಾದಿ ಭಯೋತ್ಪಾದಕ ಸಂಘಟನೆ ಬಾಂಬ್ ಬ್ಲ್ಯಾಸ್ಟ್ ನಡೆಸಿ 42 ಅಮಾಯಕ ಜೀವಗಳ ಬಲಿತೆಗೆದುಕೊಂಡಿದ್ದರು. ಈ ಘಟನೆಯಲ್ಲಿ 50 ಜನ ಗಂಭೀರ ಗಾಯಗಳುಗಳಾಗಿದ್ದರು.

2007: ಅಕ್ಟೋಬರ್ 11, 2007, ರಾಜಸ್ಥಾನದ ಪ್ರಸಿದ್ಧ ಅಜ್ಮೇರ್ ಶರೀಫ ದರ್ಗಾ ಉಗ್ರರ ಟಾರ್ಗೇಟ್ ಆಗಿತ್ತು. ಅಜ್ಮೇರ್ ಶರೀಫ್ ದರ್ಗಾದ ಹೊರಭಾಗದದಲ್ಲಿ ಬಾಂಬ್ ಸ್ಫೋಟಿಸಿದ್ದರ ಪರಿಣಾಮ 2 ಸಾವು, 17 ಜನ ಗಾಯಾಳುಗಳಾಗಿದ್ದರು.

2007: ಮೇ 18, 2007, ಹೈದ್ರಾಬಾದಿನ ಚಾರಮಿನಾರ್ ಹತ್ತಿರವಿರುವ ಮೆಕ್ಕಾ ಮಸೀದಿಯಲ್ಲಿ ಹರ್ಕತ್-ಉಲ್-ಜಿಹಾದ್ ಉಗ್ರಸಂಘಟನೆಯಿಂದ ಬಾಂಬ್ ಸ್ಫೋಟಿಸಲಾಗಿತ್ತು. ಈ ಭಯೋತ್ಪಾದನಾ ಕೃತ್ಯದಲ್ಲಿ 15 ಜನರ ಸಾವು ಹಾಗು 100 ಜನ ಗಾಯಾಳುಗಳಾಗಿದ್ದರು.

2007: ನವೆಂಬರ್ 24, 2007, ಉತ್ತರಪ್ರದೇಶದ ಲಕ್ನೌ, ವಾರಣಾಸಿ, ಫೈಜಾಬಾದ್ ನಲ್ಲಿ ಸರಣಿ ಬಾಂಬ್ ಸ್ಫೋಟಿಸದ್ದ ಹರ್ಕತ್-ಉಲ್-ಜಿಹಾದಿ & ಇಂಡಿಯನ್ ಮುಜಾಹಿದ್ದಿನ್ ಉಗ್ರ ಸಂಘಟನೆಗಳು 18 ಜನರ ಬಲಿ ತೆಗೆದುಕೊಂಡು 80 ಜನರನ್ನ ಗಾಯಾಳುಗೊಳಿಸಿದ್ದರು

2008: ಉತ್ತರಪ್ರದೇಶದ ರಾಮಪುರ CRPF ಕ್ಯಾಂಪ್ ನ ಮೇಲೆ ದಾಳಿ ನಡೆಸಿದ್ದ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಇಸ್ಲಾಮಿಕ್ ಉಗ್ರರು

2008: ಮೇ 13, 2008, ರಾಜಸ್ಥಾನದ ಜೈಪುರನಲ್ಲಿ ಇಸ್ಲಾಂ ಒಪ್ಪದ ಕಾಫಿರ್ ಹಿಂದುಗಳನ್ನ ಕೊಲ್ಲಬೇಕಂತ 10 ಬಾಂಬುಗಳನ್ನ ಸ್ಫೋಟಿಸಿ 80 ಅಮಾಯಕ ಜೀವಗಳನ್ನ ಲಷ್ಕರ್-ಎ-ತೊಯ್ಬಾ ಹಾಗು ಹರ್ಕತ್-ಉಲ್-ಜಿಹಾದ್ ಸಂಘಟನೆಗಳು ತೆಗೆದಿದ್ದವು.

2008: ಜುಲೈ 25, 2008, ಕರ್ನಾಟಕದ ರಾಜಧಾನಿ ಬೆಂಗಳೂರಿನ 9 ಕಡೆ ಲೋ ಇಂಟೆನ್ಸಿಟಿ ಬಾಂಬ್ ಸ್ಫೋಟಿಸಿದ್ದ ನಿಷೇಧಿತ ಸಿಮಿ ಸಂಘಟನೆ, ಈ ಭಯೋತ್ಪಾದನಾ ಕೃತ್ಯದಲ್ಲಿ 2 ಸಾವು ಹಾಗು 20 ಜನ ಗಾಯಾಳುಗಳಾಗಿದ್ದರು.

2008: ಜುಲೈ 28, 2008, ಗುಜರಾತಿನ ಅಹಮದಾಬಾದ್ ನಲ್ಲಿ 21 ಕಡೆ ನಡೆದ ಬಾಂಬ್ ಬ್ಲ್ಯಾಸ್ಟ್ ಗಳಲ್ಲಿ 56 ಅಮಾಯಕ ಜೀವಗಳು ಬಲಿಯಾಗಿ ಸುಮಾರು 200 ಜನ ಗಂಭೀರ ಗಾಯಾಳುಗಳಾಗಿದ್ದರು.

ಈ ಕೃತ್ಯದ ಹೊಣೆಯನ್ನ ಲಷ್ಕರ್-ಎ-ತೊಯ್ಬಾ ಹಾಗು ಹರ್ಕತ್ ಉಲ್ ಜಿಹಾದಿ ಉಗ್ರ ಸಂಘನೆಗಳು ಹೊತ್ತುಕೊಂಡಿದ್ದವು.

2008 ರಲ್ಲಿ ದೆಹಲಿ ಬಾಂಬ್ ಸ್ಫೋಟ, ವೆಸ್ಟರ್ನ್ ಇಂಡಿಯಾ ಬಾಂಬಿಗ್ಸ್, ಅಗರ್ತಲಾ, ಇಂಫಾಲ್, ಗುವಾಹಾಟಿ, ಅಸ್ಸಾಂ ಸ್ಪೋಟಗಳು, 26/11 ಮಂಬೈ ಭಯೋತ್ಪಾದನಾ ದಾಳಿ

2009: ಗುವಾಹಾಟಿ, ಅಸ್ಸಾಂ ಬಾಂಬ್ ಸ್ಫೋಟ,

2010: ಪುಣೆ, ವಾರಣಾಸಿ ಸ್ಫೋಟಗಳು,

2011: ಮುಂಬೈ, ದೆಹಲಿ ಭಯೋತ್ಪಾದಕ ದಾಳಿಗಳು,

2012: ಭಾರತದಲ್ಲಿನ ಇಸ್ರೇಲಿ ರಾಜತಾಂತ್ರಿಕರ ಮೇಲಿನ ಭಯೋತ್ಪಾದನಾ ದಾಳಿ, ಪುಣೆ ಬಾಂಬ್ ಸ್ಫೋಟ,

2013: ಹೈದ್ರಾಬಾದ್, ಬೆಂಗಳೂರು, ದರ್ಭಾ ಬಾಂಬ್ ಸ್ಪೋಟಗಳು, ಡುಮ್ಕಾ ದಲ್ಲಿ ನಕ್ಸಲಿಯ ದಾಳಿ, ಬಿಹಾರದ ಬೋಧಗಯಾ ಬ್ಲ್ಯಾಸ್ಟ್, ಪಟ್ನಾ ಬಾಂಬ್ ಸ್ಫೋಟ,

2014 ಮೋದಿ ಅಧಿಕಾರ ಸ್ವೀಕರಿಸುವ ಮುನ್ನ: ಜಾರ್ಖಂಡ್ ಸ್ಫೋಟ, ಬುದ್ಗಾಮ್ ಸ್ಫೋಟ, ಚೆನ್ನೈ ಸ್ಫೋಟ

ಹೀಗೆ ಸರ್ಕಾರದ ಅಂಕಿಅಂಶಗಳ ಪ್ರಕಾರ 2004 ರಿಂದ 2014 ರವರೆಗೆ ದೇಶದೊಳಗೆ ನಡೆದ ಭಯೋತ್ಪಾದನಾ ಕೃತ್ಯಗಳ ಸಂಖ್ಯೆ 4566 (108+145+167+149+516+673+643+611+694+860) ಕ್ಕೆ ಮುಟ್ಟುತ್ತೆ.

ಈ ಭಯೋತ್ಪಾದನಾ ದಾಳಿಗಳಲ್ಲಿ ಪ್ರಾಣ ಕಳೆದುಕೊಂಡ ಅಮಾಯಕರ ಸಂಖ್ಯೆ ಸರಿಸುಮಾರು 10 ಸಾವಿರದಷ್ಟಿದೆ.

ಆದರೆ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ದೇಶದೊಳಗಿನ ಭಯೋತ್ಪಾದನಾ ಕೃತ್ಯಗಳು ಸಂಪೂರ್ಣವಾಗಿ ನಿಂತು ಹೋಗಿದ್ದು ಛತ್ತಿಸಗಢ ನಲ್ಲಿ ಹಾಗು ಕಾಶ್ಮೀರದಲ್ಲಿ ಇಂತಹ ಘಟನೆಗಳು ನಡೆದಿವೆ.

ಮೋದಿ ಸರ್ಕಾರ ಭಯೋತ್ಪಾದಕರನ್ನ ದೇಶದ ಒಳಗೆ ನುಸುಳಲು ಬಿಡದೆ ಗಡಿಯಲ್ಲಿಯೇ ಅವರನ್ನ ಹೊಡೆದುರುಳಿಸಿ ದೇಶವನ್ನ ಆಂತರಿಕವಾಗಿ ಸುರಕ್ಷಿತಗೊಳಿಸುವಲ್ಲಿ ಸಫಲವಾಗಿದೆ.

ನಾವು ನೀವು ಕೇಳಿರುವ ಭೀಕರ ಭಯೋತ್ಪಾದಕ ದಾಳಿಗಳಾದ ಸಂಸತ್ ದಾಳಿ, 26/11 ಮುಂಬೈ ದಾಳಿಗಳಂತಹ ದಾಳಿಗಳು ಮೋದಿ ಸರ್ಕಾರ ಬಂದನಂತರ ಸಂಪೂರ್ಣವಾಗಿ ತಹಬಂದಿಗೆ ಬಂದಿವೆ.

ಗಡಿಯಲ್ಲಿ ಉಗ್ರರು ವಾಮಮಾರ್ಗದಿಂದ ಕಾಶ್ಮೀರಕ್ಕೆ ನುಸುಳೋಕೆ ಪ್ರಯತ್ನ ಪಟ್ಟು ಭಾರತೀಯ ಸೇನೆಯ ಜವಾನರಿಂದ ಸ್ಥಳದಲ್ಲೇ ಎನಕೌಂಟರ್ ಗೆ ಬಲಿಯಾಗಿ ಜನ್ನತ್ ಸೇರುತ್ತಿದ್ದಾರೆ ಹೊರತು ಅವರನ್ನ ದೇಶದೊಳಗೆ ಬರಲು ಭಾರತದ ಸೈನ್ಯ ಬಿಡುತ್ತಿಲ್ಲ.

ಮೋದಿ ವಿದೇಶಕ್ಕೆ ಯಾಕೆ ಹೋಗ್ತಾರೆ ಅಂತ ಪ್ರಶ್ನಿಸುವ ಹಲಾಲ್ಕೋರರಿಗೆ ಈ ಮೇಲೆ ಉಲ್ಲೇಖಿಸಿರುವ ಭಯೋತ್ಪಾದನಾ ಕೃತ್ಯಗಳ ಲಿಸ್ಟ್ ಒಮ್ಮೆ ನೋಡಿ ಮೋದಿ ಯಾಕೆ ವಿದೇಶಗಳಿಗೆ ಹೋಗಿ ಅಲ್ಲಿನ ನಾಯಕರನ್ನ ಭೇಟಿಯಾಗಿ ಬರುತ್ತಾರೆ ಅನ್ನೋದನ್ನ ವಿಮರ್ಶಿಸಬೇಕಾಗದ ಅಗತ್ಯವಿದೆ.

ಮೋದಿ ಸುಖಾ ಸುಮ್ಮನೆ ವಿದೇಶಗಳಿಗೆ ಹೋಗದೆ ಅಲ್ಲಿನ ನಾಯಕರನ್ನ, ಸೇನಾ ಮುಖ್ಯಸ್ಥರನ್ನ, ಇಂಟೆಲಿಜೆನ್ಸ್ ಸಂಸ್ಥೆಗಳನ್ನ ಭೇಟಿಯಾಗಿ ಭಾರತವನ್ನ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಹಾಗು ಭಯೋತ್ಪಾದನಾ ಕೃತ್ಯಗಳನ್ನ ತಹಬಂದಿಗೆ ತರುವುದರ ಕುರಿತು ಹಲವಾರು ಒಪ್ಪಂದಗಳನ್ನ ಮಾಡಿಕೊಂಡು ಬಂದಿದ್ದಾರೆ.

ಅದರ ಫಲವಾಗಿ ಪಾಕಿಸ್ತಾನ ವಿಶ್ವದೆದುರು ನಗ್ನವಾಗಿ ನಿಂತಿದೆ, ಚೀನಾ ಬಾಯಿ ಬಾಯಿ ಬಡ್ಕೊಳ್ತಿದೆ. ಯುಪಿಎ ಸರ್ಕಾರದಲ್ಲಿ ಭಾರತವೆಂದರೆ ಭಯೋತ್ಪಾದಕರ ಸ್ವರ್ಗವೆಂತಿದ್ದ ಸ್ಥಿತಿಯನ್ನ ಮೋದಿ ಬದಲಿಸಿ ಭಾರತವೆಂದರೆ ಭಯೋತ್ಪಾದಕರ ಪಾಲಿಗೆ ನರಕ ಎನ್ನುವ ಸನ್ನಿವೇಶವನ್ನ ಸೃಷ್ಟಿಸಿಬಿಟ್ಟಿದ್ದಾರೆ.

ನೋಟು ಅಮಾನ್ಯೀಕರಣದಿಂದ ಅಷ್ಟು ಸಾವಾಯ್ತು, ಜನ ಕ್ಯೂನಲ್ಲಿ ನಿಲ್ಲೋಂಗಾಯ್ತು ಅಂತ ಬೊಬ್ಬೆಯಿಡುವ ಜನರಿಗೆ ಬಹುಶಃ ಮೋದಿಯವರ ಈ
ನಿರ್ಧಾರದಿಂದ ಕಾಶ್ಮೀರದಲ್ಲಿ ಕಲ್ಲುತೂರಾಟಗಾರರ, ಭಯೋತ್ಪಾದಕರ ಹಾವಳಿ ಕಡಿಮೆಯಾಗಿದೆ ಅನ್ನೋದು ಗೊತ್ತಿಲ್ಲ ಅನ್ಸತ್ತೆ.

ನೋಟು ಅಮಾನ್ಯೀಕರಣದ ನಂತರ ಶಸ್ತ್ರ ತ್ಯಜಿಸಿ ಅದೆಷ್ಟೋ ನಕ್ಸಲರು ಶರಣಾಗತರಾಗಿದ್ದಾರೆ ಅನ್ನೋದೂ ಕೂಡ ಮೋದಿ ವಿರೋಧಿಗಳಿಗೆ ಪಾಪ ಗೊತ್ತೆ ಇಲ್ಲ ಅನ್ಸತ್ತೆ.

ಒಟ್ಟಿನಲ್ಲಿ ಮೋದಿ ಈ ದೇಶದ ಭದ್ರತೆಯ ಆಶಾಕಿರಣವಾಗಿ ನಿಂತಿದ್ದಾರೆ. ದಿನಬೆಳಗಾದರೆ ಅಲ್ಲಿ ಬಾಂಬ್ ಸ್ಫೋಟ ಇಲ್ಲಿ ಬಾಂಬ್ ಸ್ಫೋಟ ಅಂತ ಸುದ್ದಿ ಓದುತ್ತಿದ್ದ ನಮಗೆ,

ಈಗ ಭಾರತದಲ್ಲಿ ಮೇಕ್ ಇನ್ ಇಂಡಿಯಾ, ಸ್ವಚ್ಛ ಭಾರತ್, ಬುಲೆಟ್ ಟ್ರೈನ್, ಜಿಡಿಪಿ, ಕಾಳಧನಿಕರ ಭರ್ಜರಿ ಬೇಟೆ, ಭ್ರಷ್ಟರ ಮೇಲೆ ಐಡಿ ದಾಳಿ, ಮಹಿಳೆಯರಿಗೆ ಸ್ವಉದ್ಯೋಗ ಮಾಡಲು ಸರ್ಕಾರದ ಸಹಾಯ, ಸ್ವಾತಂತ್ರ್ಯ ಬಂದಾಗಿನಿಂದ ಕರೆಂಟೇ ಕಾಣದ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ, ಕೋಟ್ಯಾಂತರ ಬಡ ಕುಟುಂಬಗಳಿಗೆ ಗ್ಯಾಸ್ ಕನೆಕ್ಷನ್, ಕ್ಯಾಶಲೆಸ್ ಎಕಾನಾಮಿ ಅನ್ನೋ ಸುದ್ದಿಗಳನ್ನು ಕೇಳುವಂತಾಗಿದೆ.

ಇವುಗಳು ಅಚ್ಛೇದಿನ್ ಅಲ್ಲದೆ ದಿನಬೆಳಗಾದರೆ ಭಯೋತ್ಪಾದನಾ ಕೃತ್ಯಗಳನ್ನ ನೋಡಿ, ತಮ್ಮ ಕುಟುಂಬಸ್ಥರನ್ನ ಭಯೋತ್ಪಾದನಾ ದಾಳಿಗಳಲ್ಲಿ ಕಳೆದುಕೊಂಡು ನೋವುಣ್ಣೋದು ಅಚ್ಛೇದಿನ್ ಗಳಾಗಲು ಸಾಧ್ಯವೇ?

ಭಾರತಕ್ಕೆ ಸಮರ್ಥ ನಾಯಕನೊಬ್ಬ ಸಿಕ್ಕಿದ್ದಾನೆ, ಆತನನ್ನ ದೂಷಿಸುವ ಮುನ್ನ ಕನಿಷ್ಠಪಕ್ಷ ಮೋದಿ ಈ ದೇಶಕ್ಕಾಗಿ 4 ವರ್ಷಗಳಲ್ಲಿ ಏನು ಮಾಡಿದ್ದಾರೆ ಅನ್ನೋದರ ಕುರಿತು ಗೂಗ್ಲಿಂಗ್ ಮಾಡಿಯಾದರೂ ವಿಮರ್ಶಿಸಬೇಕಾದ ಅವಶ್ಯಕತೆಯಿದೆ.

– Vinod Hindu Nationalist

Tags

Related Articles

Close