ಪ್ರಚಲಿತ

ಅಬುದಾಬಿಯ ಹಿಂದೂ ದೇವಾಲಯಕ್ಕೆ ಹೋಗುವವರು ಹೇಗಿರಬೇಕು ಗೊತ್ತಾ!

ಭಾರತದಲ್ಲಿ ದೇವಾಲಯಗಳಿಗೆ, ಹಿಂದೂಗಳ ಶ್ರದ್ಧಾ ಕೇಂದ್ರಗಳಿಗೆ ಅದರದ್ದೇ ಆದ ಪಾವಿತ್ರ್ಯತೆ ಮಹತ್ವ ಇದೆ. ಅಂತಹ ಪವಿತ್ರ ಸ್ಥಳಗಳಿಗೆ ಬೇಕಾಬಿಟ್ಟಿ ಬಟ್ಟೆಗಳನ್ನು ಹಾಕಿದ ಹಾಗೆ, ಅಲ್ಲಿನ ಸಂಪ್ರದಾಯ, ಸಂಸ್ಕೃತಿಗೆ ಬೆಲೆ ನೀಡುವ ಹಾಗೆ ಸಂಪ್ರದಾಯಬದ್ಧ ವಸ್ತ್ರಗಳನ್ನು ಧರಿಸುವಂತೆ ಯಾತ್ರಿಗಳಿಗೆ, ಭಕ್ತಾದಿಗಳಿಗೆ ಮನವಿ ಮಾಡಲಾಗುತ್ತದೆ. ಇದು ಎಲ್ಲರಿಗೂ ತಿಳಿದ ವಿಷಯ.‌

ಆದರೆ ಸೋ ಕಾಲ್ಡ್ ಸಮಾಜವಾದಿಗಳು ಬಟ್ಟೆ ನಮಗೆ ಇಷ್ಟ ಬಂದ ಹಾಗೆ ನಾವು ಧರಿಸುತ್ತೇವೆ. ನಾವು ಏನನ್ನು ಧರಿಸಬೇಕು, ಏನನ್ನು ಧರಿಸಬಾರದು ಎಂದು ಯಾರ ಅಪ್ಪಣೆಯನ್ನೂ ಪಡೆಯುವ ಅವಶ್ಯಕತೆ ಇಲ್ಲ ಎಂದೆಲ್ಲಾ ಹೇಳಿ ತುಂಡು ಬಟ್ಟೆಗಳನ್ನು ಧರಿಸಿ, ಫ್ಯಾಶನ್ ಸೋಗಿನಲ್ಲಿ ಬೇಕಾಬಿಟ್ಟಿ ವಸ್ತ್ರ ಧರಿಸಿ ದೇವಾಲಯಗಳಿಗೆ ತೆರಳುವ ಹಲವರು ನಮ್ಮ ನಡುವೆ ಇದ್ದಾರೆ. ನಮ್ಮ ಆಚಾರ ವಿಚಾರಗಳಿಗೆ, ನಿಯಮಗಳಿಗೆ ನಾವೆಷ್ಟು ಬೆಲೆ ನೀಡುತ್ತೇವೋ ಗೊತ್ತಿಲ್ಲ. ಆದರೆ ಮೊನ್ನೆಯಷ್ಟೇ ಪ್ರಧಾನಿ ಮೋದಿ ಅವರಿಂದ ಲೋಕಾರ್ಪಣೆಯಾದ ಅಬುದಾಬಿಯ ಹಿಂದೂ ದೇವಾಲಯಕ್ಕೆ ತೆರಳುವ ಭಕ್ತರಿಗೆ ವಸ್ತ್ರ ಸಂಹಿತೆ ಕಡ್ಡಾಯ.

ಈ ದೇವಾಲಯಕ್ಕೆ ತೆರಳಲು ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಗಿದ್ದು, ಇಲ್ಲಿಗೆ ಬರುವ ಭಕ್ತರು ಎಂತಹ ಬಟ್ಟೆಗಳನ್ನು ಧರಿಸಬೇಕು ಎಂದು ದೇವಾಲಯದ ವೆಬ್‌ಸೈಟ್ ‌ನಲ್ಲಿ ಅಧಿಕೃತವಾಗಿ ಮಾಹಿತಿ ನೀಡಿದೆ. ಜೊತೆಗೆ ಫೋಟೋಗ್ರಫಿ ಮಾಡುವುದಕ್ಕೆ ಸಂಬಂಧಿಸಿದ ಹಾಗೆಯೂ ನಿರ್ದೇಶನಗಳನ್ನು ನೀಡಲಾಗಿದೆ.

ಕುತ್ತಿಗೆ, ಮೊಣಕಾಲು, ಮೊಣ ಕೈಗಳನ್ನು ಮತ್ತು ದೇಹದ ಇತರ ಭಾಗಗಳನ್ನು ಪ್ರದರ್ಶಿಸಿದ ವಸ್ತ್ರಗಳು, ವಿವಿಧ ವಿನ್ಯಾಸದ ಕಾಪ್ಸ್, ಟಿ ಶರ್ಟ್‌ಗಳನ್ನು ಧರಿಸಿ ದೇವಾಲಯಕ್ಕೆ ಪ್ರವೇಶಿಸುವ ಹಾಗಿಲ್ಲ. ಅರೆಪಾರದರ್ಶಕ ಮತ್ತು ಬಿಗಿಯಾದ ವಸ್ತ್ರಗಳನ್ನು ಧರಿಸಿ ದೇವಾಲಯ ಪ್ರವೇಶಿಸಲು ಅನುಮತಿ ಇಲ್ಲ. ಜೊತೆಗೆ ಆಭರಣ, ಆಲಂಕಾರಿಕ ವಸ್ತುಗಸಳನ್ನು ಧರಿಸುವುದಕ್ಕೂ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.

ದೇವಾಲಯದ ಒಳಗೆ ಸಾಕುಪ್ರಾಣಿಗಳನ್ನು ಕೊಂಡೊಯ್ಯುವ ಹಾಗಿಲ್ಲ. ಹೊರಗಿನ ಆಹಾರ ಪಾನೀಯಗಳನ್ನು ಕೊಂಡೊಯ್ಯುವ ಹಾಗಿಲ್ಲ. ದೇವಾಲಯದ ಆವರಣದಲ್ಲಿ ಡ್ರೋಣ್‌ ಬಳಕೆಗೂ ನಿಷೇಧ ಹೇರಲಾಗಿದೆ.

ಭಾರತದಲ್ಲಿ ಹಿಂದೂ ಧಾರ್ಮಿಕ ಕ್ಷೇತ್ರಗಳಲ್ಲಿ ಇಂತಹ ನಿಯಮಗಳನ್ನು ತರುವಾಗ ಬೊಬ್ಬೆ ಹೊಡೆಯುವ ಸೋ ಕಾಲ್ಡ್ ಜನರು, ಅಪ್ಪಟ ಮುಸ್ಲಿಂ ರಾಷ್ಟ್ರವೊಂದರಲ್ಲಿ ಹಿಂದೂ ಧಾರ್ಮಿಕತೆಗೆ ಧಕ್ಕೆ ಬಾರದ ಹಾಗೆ ಕೈಗೊಂಡ ಕ್ರಮಗಳನ್ನು, ನಿಯಮಗಳನ್ನು ನೋಡಿ ಕಲಿಯಬೇಕಾದ ಅಂಶಗಳು ಬಹಳಷ್ಟಿವೆ‌. ಹಿಂದೂ ಧಾರ್ಮಿಕತೆಗೆ ಬೆಲೆ ನೀಡಲು ಬಾರದ ನಮ್ಮ ದೇಶದ ಕೆಲ ಸೋ ಕಾಲ್ಡ್‌ಗಳು ಅಬುದಾಬಿಯ ಈ ನೀತಿಯನ್ನು ನೋಡಿಯಾದರೂ ಬದಲಾದಲ್ಲಿ ಉತ್ತಮ.

Tags

Related Articles

Close